Momo Twins : ಒಂದಾದ್ಮೇಲೆ ಒಂದರಂತೆ ಎರಡು ಜೋಡಿ ಅವಳಿಗೆ ಜನ್ಮ ನೀಡಿದ ಮಹಾ ತಾಯಿ

By Suvarna News  |  First Published Feb 24, 2023, 1:23 PM IST

ಅವಳಿ ಭ್ರೂಣ ಹೊಟ್ಟೆಯಲ್ಲಿದೆ ಎಂದಾಗ ತಾಯಿಗೆ ಟೆನ್ಷನ್ ಆಗುತ್ತೆ. ಅದ್ರಲ್ಲೂ ಭ್ರೂಣದ ಬೆಳವಣಿಗೆ ಅಪಾಯಕಾರಿ ಸ್ಥಳದಲ್ಲಿದೆ ಎಂದಾಗ ಮತ್ತಷ್ಟು ಎಚ್ಚರಿಕೆವಹಿಸಬೇಕು. ಇದ್ರ ಮಧ್ಯೆ ಒಂದಾದ್ಮೇಲೆ ಒಂದರಂತೆ ಎರಡು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡೋದು ಸವಾಲು.
 


ಅವಳಿ  ಮಕ್ಕಳು ಜನಿಸೋದು ಬಹಳ ಅಪರೂಪ. ಅನೇಕ ಬಾರಿ ಹೊಟ್ಟೆಯಲ್ಲಿಯೇ ಒಂದು ಮಗು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇಬ್ಬರು ಆರೋಗ್ಯವಾಗಿ ಜನಿಸಿದ್ರೆ ಅದು ಅದೃಷ್ಟ ಎನ್ನಬಹುದು. ಒಂದೇ ತಾಯಿಗೆ ಎರಡೆರಡು ಬಾರಿ ಅವಳಿ ಮಕ್ಕಳು ಜನಿಸೋದು ಅಪರೂಪದಲ್ಲಿ ಅಪರೂಪ. ಆರೋಗ್ಯಕರವಾದ ಎರಡು ಜೋಡಿ ಅವಳಿ ಮಕ್ಕಳನ್ನು ಪಡೆದ ತಾಯಿ ಯಾರು ಗೊತ್ತಾ?

ಅಮೆರಿಕ (America) ದ ಮಹಿಳೆಯೊಬ್ಬಳು ಎರಡು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬ್ರಿಟ್ನಿ ಆಲ್ಬಾ (Britney Alba) ಗೆ ಈಗ ನಾಲ್ಕು ಮಕ್ಕಳು. ಅವಳಿ ಮಕ್ಕಳು ಜನಿಸಿದ ಆರು ತಿಂಗಳ ನಂತ್ರ ಬ್ರಿಟ್ನಿ ಆಲ್ಬಾಗೆ ಮತ್ತೆ ತಾನು ಗರ್ಭಿಣಿ (Pregnant) ಎಂಬುದು ತಿಳಿದಿದೆ. ಆಗ್ಲೂ ಅವಳಿ ಭ್ರೂಣವಿರೋದು ಗೊತ್ತಾಗಿದೆ. ಮತ್ತೊಮ್ಮೆ ಬ್ರಿಟ್ನಿ ಆಲ್ಬಾ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊದಲು ಜನಿಸಿದ ಮಕ್ಕಳ ಹೆಸರು ಲುಕಾ ಮತ್ತು ಲೆವಿ ಆದ್ರೆ ಎರಡನೇ ಬಾರಿ ಜನಿಸಿದ ಮಕ್ಕಳ ಹೆಸರು ಲಿಡಿಯಾ ಮತ್ತು ಲಿನ್ಲೀ. ಇವರನ್ನು ಮೊಮೊ ಟ್ವಿನ್ಸ್ ಎಂದು ಕರೆಯಲಾಗುತ್ತದೆ. 

Tap to resize

Latest Videos

ಮೊಮೊ ಟ್ವಿನ್ಸ್ ಅಂದ್ರೇನು? : ಮೊಮೊ ಅಂದ್ರೆ ಅವಳಿಗಳು ಗರ್ಭದಲ್ಲಿ ಒಂದೇ ಜರಾಯು ಮತ್ತು ಅಮಿಟೋಟಿಕ್ ಚೀಲವನ್ನು ಹಂಚಿಕೊಳ್ಳುತ್ತವೆ. ಮೊದಲ ಅವಳಿ ಮಕ್ಕಳು ಕೂಡ ಒಂದೇ ಜರಾಯುವಿನಲ್ಲಿದ್ದರು. ಜರಾಯು ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ. ಇದು ತಾಯಿಯಿಂದ ಬರುವ ರಕ್ತದಿಂದ ಮಗು ಪೌಷ್ಠಿಕಾಂಶ ಪಡೆಯಲು, ದೇಹದ ಕೊಳಕನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಇದು ಗರ್ಭಾಶಯವನ್ನು ಹೊಕ್ಕುಳಬಳ್ಳಿಗೆ ಸಂಪರ್ಕಿಸುತ್ತದೆ. ಭ್ರೂಣಕ್ಕೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನೂ ಜರಾಯು ಮಾಡುತ್ತದೆ.

WOMEN HEALTH: ಗರ್ಭ ಧರಿಸುವ ಮುನ್ನ ಈ ಚೆಕ್ ಅಪ್ ಮಾಡಿಸಲೇಬೇಕು

ಅಪಾಯಕಾರಿ ಈ ಗರ್ಭಧಾರಣೆ : ಇಂಥ ಗರ್ಭಧಾರಣೆಯಲ್ಲಿ ಅಪಾಯ ಹೆಚ್ಚು. ಗರ್ಭಪಾತ, ಸತ್ತ ಮಗು ಜನನ ಮತ್ತು ಭ್ರೂಣದ ವೈಪರೀತ್ಯಗಳಂತಹ ತೊಡಕುಗಳು ಕಾಡುವ ಸಾಧ್ಯತೆಯಿರುತ್ತದೆ. ಅಮೆರಿಕಾದಲ್ಲಿ 35 ಸಾವಿರ ಪ್ರಕರಣಗಳಲ್ಲಿ ಅಥವಾ 60 ಸಾವಿರ ಪ್ರಕರಣಗಳಲ್ಲಿ ಒಂದು ಇಂಥ ಪ್ರಕರಣ ಪತ್ತೆಯಾಗುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಕಾರ, ಇಂಥ ಪ್ರಕರಣದಲ್ಲಿ ಜೀವಂತವಾಗಿ ಮಗು ಜನಿಸೋದು ಬಹಳ ಕಷ್ಟ. 1,000ರಲ್ಲಿ ಶೇಕಡಾ 3ರಷ್ಟು ಸಾಧ್ಯತೆಯಿರುತ್ತದೆ. 

ಮೊದಲ ಅವಳಿ ಮೊನೊಕೊರಿಯಾನಿಕ್-ಡೈಮ್ನಿಯೋಟಿಕ್ ವಿಧಾನದಲ್ಲಿ ಜನಿಸಿದ್ರು. ಈ ಅವಳಿಗಳಿಗೆ ಟ್ರಾನ್ಸ್ ಫ್ಯೂಷನ್ ಸಿಂಡ್ರೋಮ್‌ ಅಪಾಯವಿರುತ್ತವೆ. ಅಲ್ಲಿ ಒಂದು ಭ್ರೂಣ ಇನ್ನೊಂದಕ್ಕಿಂತ ಗಮನಾರ್ಹವಾಗಿ ಹೆಚ್ಚು ರಕ್ತ ಮತ್ತು ಪೌಷ್ಟಿಕಾಂಶವನ್ನು ಪಡೆಯುತ್ತದೆ. ಇದ್ರಿಂದ ಇನ್ನೊಂದಕ್ಕೆ ತೊಂದರೆಯಾಗುತ್ತದೆ. ಆದ್ರೆ ಲುಕಾ ಮತ್ತು ಲೆವಿಗೆ ಅದ್ಯಾವುದೇ  ತೊಂದರೆಯಾಗ್ಲಿಲ್ಲ. ಅವರು ಆರೋಗ್ಯವಾಗಿ ಜನಿಸಿದ್ರು. ಇನ್ನು ಅಕ್ಟೋಬರ್ 2022 ರಲ್ಲಿ ಜನಿಸಿದ ಲಿಡಿಯಾ ಮತ್ತು ಲಿನ್ಲೀ ಎಂಬ ಆಲ್ಬಾ ಅವರ ಎರಡನೇ ಜೋಡಿ ಅವಳಿಗಳು ಮೊದಲನೆಯದಕ್ಕಿಂತ ಭಿನ್ನವಾಗಿತ್ತು. ಅವರು ಜರಾಯು ಮತ್ತು ಆಮ್ನಿಯೋಟಿಕ್ ಚೀಲವನ್ನು ಹಂಚಿಕೊಂಡಿದ್ದಾರೆ. ಬ್ರಿಟ್ನಿಯನ್ನು ಆಕೆಯ ಗರ್ಭಧಾರಣೆಯ 24 ನೇ ವಾರದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಿ-ಸೆಕ್ಷನ್ ಮೂಲಕ ಮಕ್ಕಳಿಗೆ ಜನ್ಮ ನೀಡಲಾಯಿತು.  

ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್‌ ಸಂಸ್ಥೆ ವತಿಯಿಂದ ಉಚಿತ ತರಬೇತಿ

ಮತ್ತೊಂದು ಅವಳಿ ಎಂಬ ವಿಷ್ಯ ಕೇಳಿ ಟೆನ್ಷನ್ ಜಾಸ್ತಿಯಾಗಿತ್ತು ಎನ್ನುತ್ತಾರೆ ತಾಯಿ : ಮೊದಲ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಆರು ತಿಂಗಳ ನಂತ್ರ ಗರ್ಭಿಣಿ ಎಂಬ ಸುದ್ದಿ ಕೇಳಿಯೇ ಸ್ವಲ್ಪ ಟೆನ್ಷನ್ ಆಗಿತ್ತು. ಅದ್ರಲ್ಲೂ ಮತ್ತೊಮ್ಮೆ ಅವಳಿ ಭ್ರೂಣವಿದೆ ಅದು ಮೊಮೊ ಅಂದಾಗ ಮತ್ತಷ್ಟು ಭಯವಾಯ್ತು. ಇದು ಅಪಾಯದ ಗರ್ಭಧಾರಣೆ ಎಂದು ನಾವು ಅರಿತುಕೊಂಡಿದ್ದೆವು ಎಂದು ತಾಯಿ ಮಾಧ್ಯಮದ ಮುಂದೆ ಹೇಳಿದ್ದಾಳೆ. ಇದು ಖಂಡಿತವಾಗಿಯೂ ನಮ್ಮ ಜೀವನದಲ್ಲಿ ಸವಾಲಿನ ಸಮಯವಾಗಿತ್ತು. ಆದ್ರೆ ಎಲ್ಲವೂ ಸರಿಯಾಗಿ ನಡೆದಿದೆ. ನಾವು ಇದನ್ನು ಪ್ರೀತಿಸ್ತೇವೆ. ನಾಲ್ಕು ಮಕ್ಕಳ ಜೊತೆ ನಾವು ಆನಂದವಾಗಿದ್ದೇವೆ ಎನ್ನುತ್ತಾರೆ ತಾಯಿ. 
 

click me!