ಕಲೆ ಮೂಲಕ ಗ್ರಾಮದ ಬಣ್ಣವನ್ನೇ ಬದಲಾಯಿಸಿದ ಹಳ್ಳಿ ಹುಡುಗಿಗೊಂದು ಸಲಾಂ!

By Suvarna News  |  First Published Feb 24, 2023, 2:30 PM IST

ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲಸ ಮಾಡೋರೇ ಹೆಚ್ಚು. ನಾವು, ನಮ್ಮ ಮನೆ ಅಂತಾ ಸುಮ್ಮನಾಗ್ತಾರೆ. ಸಮಾಜ, ಗ್ರಾಮದ ಅಭಿವೃದ್ಧಿಗೆ ದುಡಿಯೋರು ಬೆರಳೆಣಿಕೆಯಷ್ಟು. ಇವರಲ್ಲಿ ಗೀತಾ ಕೂಡ ಒಬ್ಬಳು. ತನ್ನ ಬಣ್ಣದಿಂದ ಗ್ರಾಮದ ಅಂದ ಹೆಚ್ಚಿಸಿದ್ದಾಳೆ.
 


ಸ್ವಚ್ಛ, ಸುಂದರ ಗ್ರಾಮ ಎಲ್ಲರ ಗಮನ ಸೆಳೆಯುತ್ತದೆ. ನಾವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಷ್ಟೇ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನಸ್ಸಿದ್ರೆ ಮಾರ್ಗ. ಹಿಂದಿನ ಕಾಲದಲ್ಲಿ ಮಣ್ಣಿನ ಮನೆಗಳ ಸಂಖ್ಯೆ ಹೆಚ್ಚಿರುತ್ತಿತ್ತು. ಆ ಮನೆಗಳ ಹೊರ ಗೋಡೆಗೆ ಬಣ್ಣ ಬಳಿದು, ಗೋಡೆಗಳಿಗೆ ರಂಗೋಲಿ ಬಿಡಿಸಿ ಸಿಂಗರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮನೆಗಳನ್ನು ನೋಡೋದೆ ಅಪರೂಪವಾಗಿದೆ. ಹಳ್ಳಿಗಳಲ್ಲಿ ಕೂಡ ಟಾರಸಿ ಮನೆಗಳು ಲಗ್ಗೆಯಿಟ್ಟಿವೆ. ಹಾಗಾಗಿ ಗೋಡೆಗೆ ರಂಗೋಲಿ ಇರಲಿ ಮನೆ ಹೊರಗೆ ಕೂಡ ರಂಗೋಲಿ ಹಾಕೋರಿಲ್ಲ ಎನ್ನುವಂತಾಗಿದೆ. ಅದೇನೇ ಇರಲಿ, ಮಣ್ಣಿನ ಗೋಡೆಯ ಮನೆಗಳು ಕೂಡ ಎಲ್ಲರ ಗಮನ ಸೆಳೆಯುವಂತೆ ಮಾಡ್ಬಹುದು ಎಂಬುದನ್ನು ಆದಿವಾಸಿ ಹುಡುಗಿಯೊಬ್ಬಳು ತೋರಿಸಿದ್ದಾಳೆ.  

ಮನೆ ಮನೆಗೆ ಬಣ್ಣ (Color) ಬಳಿಯುವ ಮೂಲಕ ಆದಿವಾಸಿ ಹುಡುಗಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ತನ್ನ ಮನೆಯನ್ನು ಮಾತ್ರವಲ್ಲ ಗ್ರಾಮದ ಪ್ರತಿ ಮನೆಗೆ ಸುಂದರ ಪೇಟಿಂಗ್ (Painting) ಮಾಡುವ ಮೂಲಕ ಆಕೆ ಸೈ ಎನ್ನಿಸಿಕೊಂಡಿದ್ದಾಳೆ. ಆಕೆ ಯಾರು, ಆ ಗ್ರಾಮ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

Tap to resize

Latest Videos

ಮನೆ ಮನೆಗೆ ಪೇಟಿಂಗ್ ಮಾಡಿದ ಹುಡುಗಿ ಯಾರು ? : ಜಾರ್ಖಂಡ (Jharkhand) ದ ಧುಮಕಾ ಜಿಲ್ಲೆಯಿಂದ 35 ಕಿಲೋಮೀಟರ್ ದೂರದಲ್ಲಿ ಮಸಲಿಯಾ (Masalia) ಗ್ರಾಮವಿದೆ. ಇಲ್ಲಿ ಜನಿಸಿದ ಗೀತಾ ಈಗ ಸುದ್ದಿ ಮಾಡಿದ್ದಾರೆ. 

ಗರ್ಭಾವಸ್ಥೆ, ಹೆರಿಗೆ ಸಮಯದಲ್ಲಿ ಪ್ರತಿ 2 ನಿಮಿಷಕ್ಕೊಂದು ಮಹಿಳೆ ಸಾವು: ವಿಶ್ವಸಂಸ್ಥೆ

ಗೀತಾ (Gita) ಪೇಟಿಂಗ್ ಹಿಂದಿದೆ ಒಂದು ಕಥೆ : ಗೀತಾಗೆ ಅವರ ತಂದೆ ಮಾದರಿ. ತಂದೆ ಫೋಟೋ (Photo) ಒಂದನ್ನು ತಂದು ನೀನು ಹೀಗೆ ಮಾಡ್ಬಹುದಾ ಎಂದು ಕೇಳಿದ್ದರಂತೆ. ಅದಕ್ಕೆ ಗೀತಾ ಓಕೆ ಎಂದಿದ್ದಳಂತೆ. ಸುಮಾರು 15 ದಿನಗಳ ನಂತ್ರ ಗೀತಾ ಮನೆಯ ಗೋಡೆಯನ್ನು ಅಲಂಕರಿಸಿದ್ದಳಂತೆ. ಸುಂದರ ಪೇಟಿಂಗ್ ಗೀತಾ ಮನೆಯ ಗೋಡೆ ಮೇಲೆ ಕಾಣಿಸಿಕೊಂಡಿತ್ತಂತೆ.

ಗೀತಾ ಜೊತೆ ನಿಂತ ಸ್ನೇಹಿತೆಯರು : ಇದಾದ ನಂತ್ರ ಗೀತಾ ಇಡೀ ಹಳ್ಳಿಯ ಸೌಂದರ್ಯ (Beauty)  ಹೆಚ್ಚಿಸುವ ನಿರ್ಧಾರಕ್ಕೆ ಬಂದಳಂತೆ. ಗೀತಾ, ಪೂಜಾ, ಸೋನಿ ಸೇರಿದಂತೆ ತನ್ನ ಇನ್ನೂ ನಾಲ್ಕೈದು ಸ್ನೇಹಿತರ ಜೊತೆ ಸೇರಿ ಪೇಟಿಂಗ್ ಮಾಡಿದ್ದಾಳೆ. 

ಪ್ರತಿ ಮನೆಗೂ ಭಿನ್ನ ಪೇಟಿಂಗ್ : ಮಸಲಿಯಾ ಗ್ರಾಮದ ಪ್ರತಿಯೊಂದು ಮನೆಗೂ ವಿಭಿನ್ನವಾಗಿ ಪೇಟಿಂಗ್ ಮಾಡಲಾಗಿದೆ. ಒಂದು ಮನೆಯಲ್ಲಿ ಗುಲಾಬಿ ಹೂಗಳು ಅರಳಿ ನಿಂತಿದ್ರೆ ಇನ್ನೊಂದು ಮನೆಯಲ್ಲಿ ಜಾರ್ಖಂಡದ ಸಾಂಪ್ರದಾಯಿಕ ಕಲೆಯನ್ನು ನೀವು ನೋಡ್ಬಹುದು. ಮತ್ತೊಂದು ಮನೆಯಲ್ಲಿ ಹೂದೋಟ ಕಣ್ಮನ ಸೆಳೆಯುತ್ತದೆ. 

ಪ್ರವಾಸಿಗರ ಗಮನ ಸೆಳೆಯುತ್ತಿದೆ ಗ್ರಾಮ : ಈ ಗ್ರಾಮ ಈಗ ದೇಶದ ಜನರನ್ನು ಸೆಳೆಯುತ್ತಿದೆ. ಗೀತಾ ಹಾಗೂ ಆಕೆ ಸ್ನೇಹಿತರ ಪೇಟಿಂಗ್ ನೋಡಲು ಪ್ರವಾಸಿಗರು ಇಲ್ಲಿಗೆ ಬರ್ತಾರೆ. ರಸ್ತೆಯಲ್ಲಿ ಹಾದು ಹೋಗುವ ಜನರು ಕೂಡ ಗೀತಾ ಪೇಟಿಂಗ್ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾರೆ. 

ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್‌ ಸಂಸ್ಥೆ ವತಿಯಿಂದ ಉಚಿತ ತರಬೇತಿ

ಆದಿವಾಸಿಗಳ ಜಾಗ ಮಸಲಿಯಾ : ಮಸಲಿಯಾದಲ್ಲಿ ಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಇಲ್ಲಿನ ಜನರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಕೆಲವರು ಕೂಲಿ ಮಾಡಿ ಜೀವನ ನಡೆಸ್ತಿದ್ದಾರೆ. ನೀವು ಧಮಕಾಕ್ಕೆ ಹೋದ್ರೆ ಮಸಲಿಯಾಕ್ಕೆ ಒಮ್ಮೆ ಭೇಟಿ ನೀಡಿ. ಶ್ರೀಮಂತ ಮತ್ತು ವೈವಿಧ್ಯಮಯ ದೇವಾಲಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದು ಶ್ರೀಮಂತ ಸಂಪ್ರದಾಯ, ಪರಂಪರೆ ಮತ್ತು ಐತಿಹಾಸಿಕ ಮಹತ್ವದ ಸ್ಥಳವಾಗಿದೆ. 2011 ರ ಭಾರತದ ಜನಗಣತಿಯ ಪ್ರಕಾರ ಮಸಾಲಿಯಾ ಸಿಡಿ ಬ್ಲಾಕ್ ಒಟ್ಟು 124,554 ಜನಸಂಖ್ಯೆಯನ್ನು ಹೊಂದಿತ್ತು. ಸಂತಾಲಿ ಇಲ್ಲಿನ ಜನರ ಮಾತೃಭಾಷೆಯಾಗಿದೆ. 
 

click me!