Women Fashion : ಹುಡುಗೀರ ಚೆಂದದ ಹ್ಯಾಂಡ್ ಬ್ಯಾಗಲ್ಲೇನಿದ್ದರೆ ಸೇಫ್?

By Suvarna NewsFirst Published May 31, 2022, 5:30 PM IST
Highlights

ಮುಖವೆಲ್ಲ ಬೆವರಿರುತ್ತೆ, ಹುಡುಕಿದ್ರೆ ದೊಡ್ಡ ಬ್ಯಾಗ್ ನಲ್ಲಿ ಒಂದು ಕರ್ಚೀಪ್ ಸಿಗೋದಿಲ್ಲ. ಸ್ಯಾನಿಟೈಜರ್ ಹುಡುಕೋ ಆತುರದಲ್ಲಿ ಲಿಪ್ಸ್ಟಿಕ್ ಬ್ಯಾಗಿಗೆಲ್ಲ ಮೆತ್ತಿರುತ್ತೆ. ದೊಡ್ಡ ಬ್ಯಾಗ್ ನಲ್ಲಿ ಬೇಕಾಗಿದ್ದು ಸಿಗೋದೇ ಇಲ್ಲ. 
 

ಹುಡುಗಿ (Girl) ಬಂದ್ಮೇಲೆ ಅವಳ ಬ್ಯಾಗ್ (Bag) ಬರಲ್ವಾ? ಬಂದೇ ಬರುತ್ತೆ. ಬಹುತೇಕ ಎಲ್ಲ ಹುಡುಗಿಯರು ಸುಂದರವಾದ ಬ್ಯಾಗ್ ಕ್ಯಾರಿ ಮಾಡ್ತಾರೆ. ಹುಡುಗಿಯರ ಕೈಚೀಲ ಅಂದ್ರೆ ಅದೊಂದು ದೊಡ್ಡ ಸಮುದ್ರ (sea) ಅಂತಾ ಗೇಲಿ ಮಾಡೋರು ಸಾಕಷ್ಟು ಜನರಿದ್ದಾರೆ. ಹುಡುಗೀರು ಬ್ಯಾಗ್ ತೆಗೆದುಕೊಂಡು ಬರೋದು ನಿಜ. ಅದ್ರಲ್ಲಿ ಒಂದಿಷ್ಟು ವಸ್ತುಗಳು ಇರೋದೂ ನಿಜ. ಆದ್ರೆ ಬೇಕಾದ ವಸ್ತು ಕೈಗೆ ಸಿಗೋದಿಲ್ಲ. ಯಾಕೆಂದ್ರೆ ಬೇಕಾದ್ದು, ಬೇಡದ್ದು ಎಲ್ಲ ವಸ್ತುಗಳು ಅಲ್ಲಿ ಸೇರಿ, ಕಲಸುಮೇಲೋಗರಾಗಿರುತ್ತದೆ. ಸುಂದರವಾದ ಬ್ಯಾಗ್ ನಲ್ಲಿ ಒಂದಿಷ್ಟು ಅವಶ್ಯಕ ವಸ್ತುಗಳನ್ನು ಹುಡುಗಿಯರು ಇಡ್ಲೇಬೇಕು. ಹುಡುಗಿಯರು ಬ್ಯಾಗ್ ನಲ್ಲಿ ಏನೆಲ್ಲ ವಸ್ತುಗಳನ್ನು ಇಟ್ಟಿರಬೇಕು ಎಂಬುದು ನಿಮಗೆ ತಿಳಿದಿದ್ಯಾ? ಯಾವುದನ್ನು ಬ್ಯಾಗ್ ಗೆ ಹಾಕ್ಬೇಕು, ಯಾವುದು ಬೇಡ ಎಂಬ ಗೊಂದಲವಿದೆ ಎನ್ನುವವರು ಈ ಸ್ಟೋರಿ ಓದಿ. 

ಹುಡುಗಿಯರ ಬ್ಯಾಗ್ ನಲ್ಲಿ ಅವಶ್ಯಕವಾಗಿರಲಿ ಈ ವಸ್ತು : 
ಸನ್‌ಸ್ಕ್ರೀನ್ ಲೋಷನ್ :
ನೀವು ದೀರ್ಘಕಾಲದವರೆಗೆ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಪರ್ಸ್‌ನಲ್ಲಿ ಸನ್‌ಸ್ಕ್ರೀನ್ ಲೋಷನ್ ಅಥವಾ ಸನ್‌ಸ್ಕ್ರೀನ್ ಕಾಂಪ್ಯಾಕ್ಟ್ ಪೌಡರ್ ಇಟ್ಟುಕೊಳ್ಳಿ. ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ನೆರವಾಗುತ್ತದೆ. ಸೂರ್ಯನ ಕಿರಣಕ್ಕೆ ಣೇರವಾಗಿ ಮೈ ಒಡ್ಡುವ ಪರಿಸ್ಥಿತಿ ಬಂದ್ರೆ ನೀವು ಅದನ್ನು ಹಚ್ಚಬಹುದು. ಇದ್ರಿಂದ ಚರ್ಮ ಕಪ್ಪಾಗುವ ಸಮಸ್ಯೆ ಕಾಡುವುದಿಲ್ಲ.  

40ರ ನಂತರ ಸಾರಿ ಸ್ಟೈಲಿಂಗ್ ಹೇಗಿರಬೇಕು ? ಬಾಲಿವುಡ್ ನಟಿ ವಿದ್ಯಾ ಬಾಲನ್ ಟಿಪ್ಸ್

ವೈಪ್ಸ್ : ಸೌಂದರ್ಯ ವರ್ದಕಗಳ ಜೊತೆ ವೈಯಕ್ತಿಕ ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾಗಿ ನಿಮ್ಮ ಬ್ಯಾಗ್ ನಲ್ಲಿ  ವೈಪ್ಸ್ ಇಟ್ಟುಕೊಳ್ಳಬೇಕು.  ಅಗತ್ಯವಿದ್ದರೆ ನೀವು ನಿಮ್ಮನ್ನು ರಿಫ್ರೆಶ್ ಮಾಡಲು ಇದು ನೆರವಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿದ್ರೆ ಮತ್ತೆ ಬಾಡಿದ ಮುಖ ಕಾಂತಿ ಪಡೆಯುತ್ತದೆ. ಮುಖದ ಜೊತೆಗೆ ಕೂದಲನ್ನು ರಿಫ್ರೆಶ್ ಮಾಡಲು ಡ್ರೈ ಶಾಂಪೂವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಸುಗಂಧ ದ್ರವ್ಯ : ನೀವು ಕಚೇರಿಗೆ ಹೋಗುವುದಾದರೆ, ಚಿಕ್ಕ ಗಾತ್ರದ ಸೆಂಟ್ ಬಾಟಲನ್ನು ನೀವು ನಿಮ್ಮೊಂದಿಗೆ ಕೊಂಡೊಯ್ಯಿರಿ. ಕಚೇರಿಗೆ ಹೋಗುವ ಮೊದಲೇ ಮೈ ಬೆವತಿರುತ್ತದೆ. ಇದ್ರಿಂದ ಗಬ್ಬು ವಾಸನೆ ಬರ್ತಿರುತ್ತದೆ. ಇದು ಕಚೇರಿಯಲ್ಲಿರುವ ಸಹೋದ್ಯೋಗಿಗಳಿಗೆ ಕಿರಿಕಿರಿ ಎನ್ನಿಸಬಹುದು. ಹಾಗೆಯ  ಮೀಟಿಂಗ್ ಗೆ ಹೋಗುವ ವೇಳೆ ಸೆಂಟ್ ಹಾಕಿಕೊಂಡು ಹೋಗ್ಬಹುದು. ಇದ್ರಿಂದ ನಿಮಗೂ ತಾಜಾ ಅನುಭವವಾಗುತ್ತದೆ. 

Skin Care: ಸನ್‌ಸ್ಕ್ರೀನ್ ಬಳಸಿ ತ್ವಚೆ ಕಾಯ್ದುಕೊಳ್ಳಿ!

ಬ್ಲಾಟಿಂಗ್ ಪೇಪರ್ : ನಿಮ್ಮ ಮುಖದ ಮೇಕ್ಅಪ್ ಅನ್ನು ಹಾಗೆ ಇಟ್ಟುಕೊಂಡು  ರಿಫ್ರೆಶ್ ಆಗಲು ಬಯಸಿದ್ದರೆ ಖಂಡಿತವಾಗಿಯೂ ನಿಮ್ಮ ಬ್ಯಾಗ್ ನಲ್ಲಿ ಬ್ಲಾಟಿಂಗ್ ಪೇಪರ್  ಇಟ್ಕೊಳ್ಳಿ. ಇದು ನಿಮ್ಮ ಮುಖದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ನೀವು ಮತ್ತೆ ರಿಫ್ರೆಶ್ ಆಗಲು ನೆರವಾಗುತ್ತದೆ.  ಬ್ಲಾಟಿಂಗ್ ಪೇಪರ್ ಅನ್ನು ಮೇಕ್ಅಪ್ನೊಂದಿಗೆ ಅಥವಾ ಮೇಕ್ಅಪ್ ಇಲ್ಲದೆ ಬಳಸಬಹುದು. 

ಟಿಂಟ್ : ನಿಮ್ಮ  ಬ್ಯಾಗ್ ನಲ್ಲಿ ಟಿಂಟ್ ಇಟ್ಟುಕೊಳ್ಳಿ. ತಕ್ಷಣಕ್ಕೆ ತುಟಿಗಳ ಜೊತೆಗೆ ಕೆನ್ನೆಗಳ ಮೇಲೆ ಮತ್ತು ಕಣ್ಣುಗಳ ಮೇಲೆ ಅನ್ವಯಿಸುವ ಮೂಲಕ ನೀವು ತಾಜಾ ಆಗಿ ಕಾಣ್ಬಹುದು. ಹಾಗೆ ನಿಮಗೆ ಇದು ಮೇಕ್ಅಪ್ ನೋಟವನ್ನು ನೀಡುತ್ತದೆ. ಇದರೊಂದಿಗೆ ಮಿನಿ ಲಿಪ್‌ಸ್ಟಿಕ್ ಕೂಡ ನಿಮ್ಮ ಬ್ಯಾಗ್‌ನ ಒಂದು ಭಾಗವಾಗಿರಲಿ. 

ಲೋಷನ್  : ಅನೇಕರ ಕೈ ಚರ್ಮ ಶುಷ್ಕವಾಗಿರುತ್ತದೆ. ಮನೆಯಲ್ಲಿ ಲೋಷನ್ ಹಚ್ಚಿಕೊಂಡಿದ್ರೂ ಕೆಲ ಸಮಯದ ನಂತ್ರ ಕೈ ಮೇಲೆಲ್ಲ ಬಿಳಿ ಹೊಟ್ಟು ಕಾಣಿಸಲು ಶುರುವಾಗುತ್ತದೆ. ಅಂಥವರು ಲೋಷನ್ ಅವಶ್ಯಕವಾಗಿ ಇಟ್ಟುಕೊಳ್ಳಬೇಕು. ಚರ್ಮ ಶುಷ್ಕವೆನಿಸಿದ್ರೆ ಅದನ್ನು ಅನ್ವಯಿಸಬಹುದು. 

ಸ್ಯಾನಿಟರಿ ಪ್ಯಾಡ್ : ಇದು ಪ್ರತಿಯೊಬ್ಬ ಹುಡುಗಿಯರ ಬ್ಯಾಗ್ ನಲ್ಲಿ ಅತ್ಯವಶ್ಯಕವಾಗಿ ಇರಬೇಕು. ಮುಟ್ಟಿನ ದಿನಗಳು ಹತ್ತಿರ ಬರ್ತಿದ್ದಂತೆ ಇದನ್ನು ಮರೆಯದೇ ಇಟ್ಟುಕೊಳ್ಳಬೇಕು. ಕಪ್ಸ್ ಅಥವಾ ಟ್ಯಾಂಪೂನ್ ಬಳಸುತ್ತಿದ್ದರೆ ಅದನ್ನು ಇಟ್ಟುಕೊಳ್ಳಬಹುದು. ಇವೆಲ್ಲದರ ಜೊತೆ ಈಗ ಸ್ಯಾನಿಟೈಜರ್ ಕೂಡ ಅನಿವಾರ್ಯವಾಗಿದೆ. 

 


 

click me!