ಕೇವಲ ಆರು ತಿಂಗಳು ಕೆಲಸ ಮಾಡಿ ಕೋಟಿ ಗಳಿಸ್ತಾಳೆ ಈಕೆ! ಮಾಡೋದೇನು?

By Suvarna NewsFirst Published Jan 16, 2024, 2:40 PM IST
Highlights

ಹಣ ಸಂಪಾದನೆ ಮಾಡುವ ಸರಿಯಾದ ಮಾರ್ಗ ತಿಳಿದಿರಬೇಕು. ಇಡೀ ದಿನ ಕಷ್ಟಪಟ್ಟು ದುಡಿದ್ರೆ ಹೆಚ್ಚು ಸಂಬಳ ಸಿಗುತ್ತೆ ಅನ್ನೋದು ಸುಳ್ಳು. ನೀವು ಯಾವ ಕೆಲಸವನ್ನು ಆಯ್ದುಕೊಂಡಿದ್ದೀರಿ, ಅದರಲ್ಲಿ ನಿಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದೀರಿ ಎಂಬುದು ಮುಖ್ಯವಾಗುತ್ತದೆ.,
 

ಒಳ್ಳೆ ಸಂಬಳದ ಕೆಲಸ ಬೇಕು. ಇದಕ್ಕಾಗಿ ಒಳ್ಳೆ ಶಿಕ್ಷಣ ಅಗತ್ಯ. ಹೆಚ್ಚೆಚ್ಚು ಕಲಿತ್ರೆ ಉತ್ತಮ ಸಂಬಳ ಬರುವ ಉದ್ಯೋಗ ಸಿಗುತ್ತದೆ. ಇದ್ರಿಂದ ಐಷಾರಾಮಿ ಜೀವನ ನಡೆಸಬಹುದು. ಒಳ್ಳೆ ಮನೆ, ವಾಹನ, ಬಟ್ಟೆ ಖರೀದಿ ಮಾಡ್ಬಹುದು. ಜೀವನದಲ್ಲಿ ಸಂಪೂರ್ಣ ಸೆಟ್ ಆಗಿ ನೆಮ್ಮದಿಯಿಂದ ಇರಬಹುದು. ಹೀಗಂತ ಪ್ರತಿಯೊಬ್ಬರೂ ಆಲೋಚನೆ ಮಾಡ್ತಾರೆ. ಇದೇ ಕಾರಣಕ್ಕೆ ಒಂದಿಷ್ಟು ಹಣ ಸುರಿದು ಒಳ್ಳೆ ಶಾಲೆ – ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಆದ್ರೆ ಎಲ್ಲರಿಗೂ ಒಳ್ಳೊಳ್ಳೆ ಪ್ಯಾಕೇಜ್ ನ ಕೆಲಸ ಸಿಗಲು ಸಾಧ್ಯವಿಲ್ಲ. ಕೆಲಸ, ಸಂಬಳ ಹಾಗೂ ಯಶಸ್ಸಿಗೆ ಶಿಕ್ಷಣದ ಜೊತೆ ಬುದ್ಧಿ ಉಪಯೋಗಿಸಿ ಕೆಲಸ ಮಾಡೋದು ಮುಖ್ಯವಾಗುತ್ತದೆ. ಆದ್ರೆ ಈ ಮಹಿಳೆ ಸ್ವಲ್ಪ ಭಿನ್ನವಾಗಿದ್ದಾಳೆ. ಶಿಕ್ಷಣವಿಲ್ಲದೆ ಹೋದ್ರೂ ಕೈತುಂಬ ಸಂಪಾದನೆ ಮಾಡ್ತಾಳೆ. ತಿಂಗಳಲ್ಲಿ ಎಲ್ಲ ದಿನ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಬೇಕಾಗಿಲ್ಲ. 14 ದಿನಗಳ ಕಾಲ ಕಷ್ಪಪಟ್ಟು ದುಡಿದ್ರೆ ಸಾಕು, ಕೈತುಂಬ ಬರುತ್ತದೆ. ಆಕೆ ಯಾರು, ಮಾಡೋ ಕೆಲಸ ಏನು ಎಂಬ ವಿವರ ಇಲ್ಲಿದೆ.

ನಾವು ಅನೇಕ ಕೆಲಸಗಳನ್ನು ಕೆಳಮಟ್ಟದಲ್ಲಿ ನೋಡ್ತೇವೆ. ಆದ್ರೆ ಎಲ್ಲ ಕೆಲಸಗಳು ಮಹತ್ವದ್ದಾಗಿದೆ ಮತ್ತು ಆ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುತ್ತದೆ. ಆಸ್ಟ್ರೇಲಿಯಾ (Australia) ದ ಆಶ್ಲಿಯಾ ಮಾಡ್ತಿರುವ ಕೆಲಸ ಕೂಡ ಅತ್ಯಗತ್ಯ ಕೆಲಸಗಳಲ್ಲಿ ಒಂದು. ಆಶ್ಲಿಯಾ, ಪಿಲಬಾರಾ ಗಣಿ (Mine) ಯಲ್ಲಿ ಡಂಪ್ ಟ್ರಕ್ (Truck) ಡ್ರೈವರ್ (Driver) ಆಗಿ ಕೆಲಸ ಮಾಡ್ತಾಳೆ. ಆಶ್ಲಿಯಾ ತಿಂಗಳ ಎಲ್ಲ ದಿನ ಕೆಲಸ ಮಾಡೋದಿಲ್ಲ. 14 ದಿನಗಳ ಕಾಲ ಕೆಲಸ ಮಾಡಿ, ಉಳಿದ ದಿನ ವಿಶ್ರಾಂತಿ ತೆಗೆದುಕೊಳ್ತಾಳೆ. ಆದ್ರೆ ಕೆಲಸ ಮಾಡುವ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡ್ತಾಳೆ. ಬೆಳಿಗ್ಗೆ ನಾಲ್ಕು ಗಂಟೆಯಿಂದ ಆಶ್ಲಿಯಾ ಕೆಲಸ ಶುರುವಾಗುತ್ತದೆ. ಹನ್ನೆರಡು ಗಂಟೆಯ ಪಾಳಿಯಲ್ಲಿ ಆಕೆ ಕೆಲಸ ಮಾಡ್ತಾಳೆ.

ಹೆಂಡತಿಗೆ ಅಡುಗೆ ಬರಲ್ಲ ಎಂದು ದೂರುವುದು ಕ್ರೌರ್ಯವಲ್ಲ; ಹೈಕೋರ್ಟ್‌

ನಂತ್ರ ವಿಶ್ರಾಂತಿ ತೆಗೆದುಕೊಳ್ತಾಳೆ ಆಶ್ಲಿಯಾ. ತಿಂಗಳ 14 ದಿನ ಆಶ್ಲಿಯಾ ಸಂಪೂರ್ಣ ವಿಶ್ರಾಂತಿಯಲ್ಲಿರುತ್ತಾಳೆ. ಆಕೆಗೆ ಪ್ರವಾಸವೆಂದ್ರೆ ಇಷ್ಟ. ಹಾಗಾಗಿ ರಜಾ ದಿನಗಳಲ್ಲಿ ಅಲ್ಲಲ್ಲಿ ಸುತ್ತಾಡ್ತಾ, ತನಗಿಷ್ಟದ ಆಹಾರ ಸೇವನೆ ಮಾಡ್ತಾ ರಜೆ ದಿನವನ್ನು ಎಂಜಾಯ್ ಮಾಡ್ತಾಳೆ.

ಆಶ್ಲಿಯಾ ಸಂಬಳ ಎಷ್ಟು? : ಆಶ್ಲಿಯಾ ಸಂಬಳ ಕೇಳಿದ್ರೆ ನೀವು ದಂಗಾಗ್ತಿರ. ಆಶ್ಲಿಯಾ ಎಫ್ ಐಎಫ್ ಒ ( FIFO) ಟ್ರಕ್ ಡ್ರೈವರ್ ಆಗಿದ್ದಾಳೆ. ಆಕೆ ಟ್ರಕ್ ಚಾಲನೆ ಕಲಿತ ನಂತ್ರ ಕೆಲಸಕ್ಕೆ ಸೇರಿದ್ದಳು. ಆರಂಭ ಮೂರು ತಿಂಗಳು ಗಂಟೆಗೆ 3000 ರೂಪಾಯಿಯಂತೆ ಸಿಗ್ತಿತ್ತು. ನಂತ್ರ ಸಂಬಳ ಹೆಚ್ಚಾಯ್ತು. ಗಂಟೆಗೆ 3600 ರೂಪಾಯಿ ಆಯ್ತು. ಆಗ ವರ್ಷಕ್ಕೆ 78 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಗಳಿಸುತ್ತಿದ್ದಳು ಆಶ್ಲಿಯಾ. ಅನುಭವ ಹೆಚ್ಚಾದಂತೆ ಆಶ್ಲಿಯಾ ಒಪ್ಪಂದ ಬದಲಿಸಿದಳು. ಗಂಟೆಗೆ 4200 ರೂಪಾಯಿ ಗಳಿಸಲು ಶುರು ಮಾಡಿದ್ಲು. ಆಶ್ಲಿಯಾಗೆ ಈಗ 112,000 ಡಾಲರ್  ಅಂದರೆ ಭಾರತೀಯ ಕರೆನ್ಸಿಯಲ್ಲಿ 9 3 ಲಕ್ಷ ರೂಪಾಯಿ ಸಿಗುತ್ತದೆ. ಇದಲ್ಲದೆ ಆಕೆಗೆ ಕಂಪನಿ ಹೆಚ್ಚುವರಿ ತಿಂಗಳಿಗೆ 1 ಲಕ್ಷ 65 ಸಾವಿರ ರೂಪಾಯಿ ನೀಡುತ್ತದೆ. ಅಂದ್ರೆ ವರ್ಷಕ್ಕೆ ಆಕೆ 8 ಲಕ್ಷ 28 ಸಾವಿರ ರೂಪಾಯಿ ಹೆಚ್ಚುವರಿಯಾಗಿ ದುಡಿಯುತ್ತಾಳೆ. ಒಟ್ಟಾರೆ ಒಂದು ಕೋಟಿ ರೂಪಾಯಿಯನ್ನು ಆಶ್ಲಿಯಾ ಗಳಿಸುತ್ತಾಳೆ. ಯಾವುದೇ ಪದವಿಪಡೆಯದೆ ಆಶ್ಲಿಯಾ, ಇಷ್ಟೊಂದು ಹಣಗಳಿಸ್ತಿರೋದು ಸಣ್ಣ ಕೆಲಸವಲ್ಲ. ಸಾಮಾಜಿಕ ಜಾಲತಾಣದಲ್ಲೂ ಪ್ರಸಿದ್ಧಿಪಡೆದಿರುವ ಆಶ್ಲಿಯಾ ತನ್ನ ಫೋಟೋ, ವಿಡಿಯೋಗಳನ್ನು ಇದ್ರಲ್ಲಿ ಹಂಚಿಕೊಳ್ತಾಳೆ.   

ರಸ್ತೆ ಬದಿ ಮೊಮೊಸ್ ಮಾರ್ತಿದ್ದ ವ್ಯಕ್ತಿಯೀಗ ಕೋಟ್ಯಾಧಿಪತಿ, ತಿಂಗಳ ಆದಾಯ ಬರೋಬ್ಬರಿ 40 ಕೋಟಿ!

click me!