ಮದ್ಯಪಾನದ ಜೊತೆ ಮರ್ಲಿನ್ ಮೇಲೆ ಪ್ರೀತಿ! ಮೋಸಗಾರ ದೆವ್ವಕ್ಕೆ ಡಿವೋರ್ಸ್ ಕೊಟ್ಟ ಪತ್ನಿ

By Suvarna News  |  First Published Jul 31, 2023, 2:58 PM IST

ದೆವ್ವದ ಜೊತೆ ಮಾತನಾಡ್ದೆ, ಭೂತ ಕಂಡೆ ಎನ್ನುವ ಜನರ ಮಧ್ಯೆ ದೆವ್ವವನ್ನೇ ಮದುವೆಯಾದ ಗಾಯಕಿ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾಳೆ. ಆಗಾಗ ತನ್ನ ದೆವ್ವದ ಪತಿ ಬಗ್ಗೆ ಹೇಳ್ತಿದ್ದ ಗಾಯಕಿ ಈಗ ಶಾಕಿಂಗ್ ಸುದ್ದಿ ನೀಡಿದ್ದಾಳೆ. 
 


ತಮ್ಮನ್ನು ತಾವು ಎಲ್ಲರಂತೆ ಭಿನ್ನ ಎಂದು ತೋರಿಸಿಕೊಳ್ಳುವ ಹುಚ್ಚು ಅನೇಕರಿಗಿರುತ್ತದೆ. ಏನೋ ಸಾಧನೆ ಮಾಡಲು ಹೋಗಿ ಅಥವಾ ದಾಖಲೆ ಸೃಷ್ಠಿಸಲು ಹೋಗಿ ತಮ್ಮನ್ನು ತಾವು ಪೇಚಿಗೆ ಸಿಲುಕಿಸಿಕೊಂಡ ಅಥವಾ ಜೀವಕ್ಕೆ ಹಾನಿಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಆದರೂ ಕೆಲವು ವ್ಯಕ್ತಿಗಳು ತಮ್ಮ ಚಿತ್ರ ವಿಚಿತ್ರ ನಡವಳಿಕೆಗಳಿಂದ ಆಗಾಗ ಫೇಮಸ್ ಆಗುತ್ತಲೇ ಇರುತ್ತಾರೆ.

ಇಂದು ಕೂಡ ನಾವು ಅಂತಹುದೇ ಒಂದು ವಿಚಿತ್ರ ಸಂಗತಿಯ ಕುರಿತು ಹೇಳಲಿದ್ದೇವೆ. ಇಲ್ಲಿನ ಮಹಿಳೆಯೊಬ್ಬಳು ತನ್ನ ವಿಚಿತ್ರ ಚೇಷ್ಠೆಗಳಿಂದ ಆಗಾಗ ಸುದ್ದಿಯಾಗುತ್ತಿದ್ದಾಳೆ. ಕೆಲವು ತಿಂಗಳ ಹಿಂದೆ ಈಕೆ ದೆವ್ವ (Devil) ವೊಂದನ್ನು ಮದುವೆ (Marriage) ಯಾಗುವುದಾಗಿ ಘೋಷಿಸಿದ್ದಳು. ದೆವ್ವದ ಜೊತೆ ಮದುವೆಯಾದ ಈಕೆ ಈಗ ದೆವ್ವದ ಕಾಟ ತಾಳಲಾರದೇ ದೆವ್ವದಿಂದ ವಿಚ್ಛೇದನ ಪಡೆದುಕೊಂಡೆ ಅನ್ನುತ್ತಿದ್ದಾಳೆ.

Tap to resize

Latest Videos

 

ಭೂತ ಪ್ರೇತಗಳನ್ನು ಓಡಿಸಲು ಭಾರತದ ಈ ಸ್ಥಳ ಫೇಮಸ್!

ಭೂತದೊಂದಿಗೆ ವಿವಾಹ: ಮನುಷ್ಯರು ದೆವ್ವ ಭೂತದೊಂದಿಗೆ ಮಾತನಾಡುವುದನ್ನು ಹಾಗೂ ಸಂಬಂಧ ಇಟ್ಟುಕೊಳ್ಳುವದನ್ನು ನಾವು ಸಿನೆಮಾಗಳಲ್ಲಿ ಮಾತ್ರ ನೋಡುತ್ತೇವೆ. ಆದರೆ ಬ್ರಿಟೀಷ್ ಗಾಯಕಿ ರಾಕರ್ ಬ್ರೊಕಾರ್ಡೆ (Rocker Brocarde) ಎನ್ನುವ ಮಹಿಳೆ ಇದನ್ನು ಸ್ವತಃ ಅನುಭವಿಸಿದ್ದಾಳಂತೆ. ಆಕೆ ತನ್ನ ಹಾಗೂ ಭೂತದ ಲವ್ ಸ್ಟೋರಿಯ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾಳೆ.

40 ವರ್ಷದ ಈ ಗಾಯಕಿ ಹಾಗೂ ದೆವ್ವದ ನಡುವೆ ಪ್ರೀತಿ ಆರಂಭವಾಗಿ ಬಹಳ ದಿನಗಳೇ ಕಳೆದಿವೆ. 'ಒಂದು ದಿನ ಹೊರಗಡೆ ತುಂಬ ಬಿರುಗಾಳಿ ಇತ್ತು. ಆದಿನ ರಾತ್ರಿ ಎಡ್ವರ್ಡೋ ಎಂಬ ಸೈನಿಕ ದೆವ್ವದ ರೂಪದಲ್ಲಿ ತನ್ನ ಕೋಣೆಗೆ ಬಂದ. ಅಂದಿನಿಂದ ಐದು ತಿಂಗಳ ಕಾಲ ನಮ್ಮಿಬ್ಬರ ನಡುವೆ ಸಾಕಷ್ಟು ಮಾತುಕತೆಗಳು ನಡೆದ್ವು. ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡೆವು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡ ನಂತರ ಹ್ಯಾಲೋವೀನ್ ದಿನದಂದು ನಾವಿಬ್ಬರೂ ಮದುವೆಯಾದ್ವಿ,' ಎಂದು ರಾಕರ್ ಬ್ರೊಕಾರ್ಡೆ ತಮ್ಮ ಭಯಾನಕ ಲವ್ ಸ್ಟೋರಿ ಬಗ್ಗೆ ಹೇಳಿದ್ದಳು. ಎಡ್ವರ್ಡೋ ಮತ್ತು ರಾಕರ್ ಬ್ರೊಕಾರ್ಡೆ ಅವರ ಮದುವೆಯ ವಿಡಿಯೋ ಇನ್ಸಟಾಗ್ರಾಂ ನಲ್ಲಿ ವೈರಲ್ ಆಗಿತ್ತು. ಇನ್ಸ್ಟಾಗ್ರಾಂನ ವಿಡಿಯೋದಲ್ಲಿ ಗಾಯಕಿ ರಾಕರ್ ಅವರು ವಧವಿನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಳು. ಹಾಗೇ ವರನಾಗಿರುವ ದೆವ್ವವು ಮುಂದೆ ನಿಂತಿದೆ ಎಂದು ಹೇಳಿದ್ದಳು. 

Travel : ಭೂತ ನೋಡ್ಬೇಕಂದ್ರೆ ರಾಜಸ್ಥಾನದ ಈ ಸ್ಥಳಕ್ಕೆ ಹೋಗಿ

ಬೇಸತ್ತು ಭೂತದೊಂದಿಗೆ ವಿಚ್ಛೇದನ:  ಈಗ ಗಾಯಕಿ ರಾಕರ್ ಬ್ರೊಕಾರ್ಡೆ, “ಭೂತವಾದ ಎಡ್ವರ್ಡೋ ಜೊತೆ ನಾನು ವಿಚ್ಛೇದನ ತೆಗೆದುಕೊಂಡಿದ್ದೇನೆ” ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಗಾಯಕಿ ರಾಕರ್, “ಮದುವೆಯ ನಂತರ ನಾವು ಹನಿಮೂನ್ ಗೆಂದು ವೇಲ್ಸ್ ನ ಬ್ಯಾರಿ ದ್ವೀಪಕ್ಕೆ ಹೋದೆವು. ಅಲ್ಲಿ ಎಡ್ವರ್ಡೋ ಕುಡಿದು ನಶೆಯಲ್ಲೇ ಇದ್ದ. ಅವನ ನಡವಳಿಕೆಗಳೆಲ್ಲವೂ ಬದಲಾಗಿತ್ತು, ಯಾವುದೂ ಸರಿ ಇರಲಿಲ್ಲ. ಮದುವೆಯ ನಂತರ ಎಡ್ವರ್ಡೋ ಹೆಚ್ಚು ಪೊಸೆಸಿವ್ ಆಗಿದ್ದ. ಅಷ್ಟೇ ಅಲ್ಲದೇ ಆತ ಅಮೇರಿಕದ ನಟಿ ಮರ್ಲಿನ್ ಮನ್ರೋ ಮೇಲೆ ಅತಿಯಾದ ವ್ಯಾಮೋಹ ಹೊಂದಿದ್ದ. ಅವನ ಈ ನಡವಳಿಕೆಯನ್ನು ನೋಡಿ ನನಗೆ ನನ್ನ ತಪ್ಪಿನ ಅರಿವಾಯ್ತು. ನಾನು ಭೂತದ ಜೊತೆ ಮದುವೆ ಮಾಡಿಕೊಂಡು ದೊಡ್ಡ ತಪ್ಪು ಮಾಡಿದೆ ಎಂದು ನನಗೆ ಅನಿಸಿತು” ಎಂದು ಬೇಸರದಿಂದ ಹೇಳ್ತಾರೆ ರಾಕರ್  ಬ್ರೊಕಾರ್ಡೆ. ದೆವ್ವದೊಂದಿಗೆ ಮದುವೆಯಾದ ರಾಕರ್ ಅವರ ಸಂಸಾರ ಚೆನ್ನಾಗಿ ಇರದೇ ಇದ್ರು ಅವರು ತಮ್ಮ ವಿಚಿತ್ರ ನಡವಳಿಕೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಅವರ ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿ ರಾಕರ್ ಅವರ ಧೈರ್ಯವನ್ನು ಮೆಚ್ಚಿದ್ದಾರೆ. ಇನ್ಕೆಲವರು ಅವರ ಕಾಲೆಳೆದಿದ್ದಾರೆ.

click me!