Travel : ಭೂತ ನೋಡ್ಬೇಕಂದ್ರೆ ರಾಜಸ್ಥಾನದ ಈ ಸ್ಥಳಕ್ಕೆ ಹೋಗಿ
ಐತಿಹಾಸಿಕ ಸ್ಥಳಗಳು ಆಕರ್ಷಕವಾಗಿರುವುದು ಮಾತ್ರವಲ್ಲದೆ ನಿಗೂಢವಾಗಿರುತ್ತದೆ. ಕೆಲ ಪ್ರದೇಶಗಳು ಹಗಲಿನಲ್ಲಿ ಸುಂದರವಾಗಿ ಕಂಡ್ರೂ ರಾತ್ರಿ ಭಯಾನಕವಾಗಿರುತ್ತದೆ. ಅಪ್ಪಿತಪ್ಪಿ ರಾಜಸ್ಥಾನದ ಕೆಲ ಪ್ರದೇಶದಲ್ಲಿ ರಾತ್ರಿ ಸಿಕ್ಕಿಬಿದ್ರೆ ಕಥೆ ಮುಗಿದಂತೆ.
ಭಾರತದ ಪ್ರವಾಸಿ ಕೇಂದ್ರಗಳು ಎಂದಾಗ ರಾಜಸ್ಥಾನದ ಹೆಸರು ಮನಃಪಟಲದಲ್ಲಿ ಬಂದು ಹೋಗುತ್ತದೆ. ರಾಜಸ್ಥಾನ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳ. ರಾಜಸ್ಥಾನದಲ್ಲಿರುವ ಕೋಟೆಗಳು, ಅರಮನೆ, ರಾಜ, ರಾಣಿಯರು ಬಳಸ್ತಿದ್ದ ವಸ್ತು, ಸುಂದರ ಪರಿಸರ, ಮರಳು ಎಲ್ಲವೂ ಪ್ರವಾಸಿಗರನ್ನು ಸೆಳೆಯುತ್ತದೆ. ರಾಜಸ್ಥಾನ ಭಾರತದ ಇತಿಹಾಸಕ್ಕೆ ಕನ್ನಡಿಯಾಗಿದೆ. ರಾಜಸ್ಥಾನದಲ್ಲಿರುವಷ್ಟು ಕೋಟೆಗಳನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ರಾಜಸ್ಥಾನಕ್ಕೆ ಬಂದವರು ಕುಂಬಲ್ ಗಢ್, ಮೆಹ್ರಾನ್ ಗಢ್, ಜೈಸಲ್ಮೇರ್ ಕೋಟೆ, ಚಿತ್ತೋರ್ಗಢ್, ಹವಾ ಮಹಲ್, ಜಲ್ ಮಹಲ್ ಮತ್ತು ಸಿಟಿ ಪ್ಯಾಲೇಸ್ ನೋಡದೇ ವಾಪಸ್ ಹೋಗಲ್ಲ.
ರಾಜಸ್ಥಾನ (Rajasthan) ಕ್ಕೆ ಭೇಟಿ ನೀಡಲು ನೀವು ಪ್ಲಾನ್ ಮಾಡಿದ್ದರೆ ಅಲ್ಲಿನ ಕೆಲ ಕುತೂಹಲಕಾರಿ ವಿಷ್ಯವನ್ನು ಗಮನದಲ್ಲಿಡಬೇಕು. ಇಲ್ಲಿನ ಕೆಲ ಪ್ರದೇಶಗಳಿಗೆ ನೀವು ಸಂಜೆ 6 ಗಂಟೆ ನಂತ್ರ ಹೋಗುವಂತಿಲ್ಲ. ನಕಾರಾತ್ಮಕ (Negative) ಶಕ್ತಿ ಆ ಸ್ಥಳದಲ್ಲಿ ಹೆಚ್ಚಿರುವ ಕಾರಣ ಅವುಗಳನ್ನು ಅಪಾಯಕಾರಿ ಸ್ಥಳ ಎಂದೇ ಗುರುತಿಸಲಾಗಿದೆ. ನಾವಿಂದು ರಾಜಸ್ಥಾನದ ಯಾವ ಪ್ರದೇಶಕ್ಕೆ ನೀವು ಸಂಜೆ 6 ಗಂಟೆ ನಂತ್ರ ಹೋಗ್ಬಾರದು ಎಂಬುದನ್ನು ಹೇಳ್ತೇವೆ.
ಮಹಿಳೆಯರೇ ರಾಜ್ಯಭಾರ ಮಾಡೋ ಈ ಹಳ್ಳಿಯಲ್ಲಿ ಪುರುಷರಿಗೆ ಪ್ರವೇಶವೇ ಇರಲ್ಲ…
ರಾಜಸ್ಥಾನದ ಅಪಾಯಕಾರಿ ಸ್ಥಳ ಇವು:
ಭಂಗಾರ್ (Bhangar) : ದೆವ್ವಗಳ ಜಾಗದ ಪಟ್ಟಿಯಲ್ಲಿ ಭಂಗಾರ್ ಸೇರಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ನೀವು ಓಡಾಡಬಹುದು. ನಂತ್ರ ಕೋಟೆ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕೋಟೆಯಲ್ಲಿ ರಾತ್ರಿ ನಮ್ಮ ಊಹೆಗೆ ನಿಲುಕದ ಘಟನೆಗಳು ನಡೆದಿವೆ. ರಾತ್ರಿಯಾಗ್ತಿದ್ದಂತೆ ಕೋಟೆಯಲ್ಲಿ ಅಳು, ನಗು, ಬಳೆಗಳ ಸದ್ದು, ನೆರಳು ಕಾಣಿಸುತ್ತದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೂಡ ಇಲ್ಲಿ ರಾತ್ರಿ ಪ್ರವೇಶವನ್ನು ನಿಷೇಧಿಸಿದೆ.
ರಾಣಾ ಕುಂಭ ಅರಮನೆ (Rana Kumbha Palace) : ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ರಾಣಾ ಕುಂಭ ಅರಮನೆ ಇದೆ. ದೆಹಲಿಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಈ ಅರಮನೆಯ ಮೇಲೆ ದಾಳಿ ನಡೆಸಿದ್ದ. ಖಿಲ್ಜಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ರಾಣಿ ಪದ್ಮಿನಿ 700 ಮಹಿಳೆಯರೊಂದಿಗೆ ಆತ್ಮಾಹುತಿ ಮಾಡಿಕೊಂಡಿದ್ದರು. ರಾಜಸ್ಥಾನದ ಅತ್ಯಂತ ಭಯಹುಟ್ಟಿಸುವ ಸ್ಥಳ ಇದಾಗಿದೆ. ದೆವ್ವಗಳನ್ನು ಭೇಟಿಯಾಗ್ಬೇಕು ಎನ್ನುವವರು ಇಲ್ಲಿಗೆ ಹೋಗ್ಬಹುದು. ಯಾಕೆಂದ್ರೆ ಇಲ್ಲಿ ದೆವ್ವಗಳ ಕಾಟ ಹೆಚ್ಚಿದೆ.
ಹನಿಮೂನ್ ಹೋಗೋಕೆ ಭಾರತದಲ್ಲಿರೋ ಸೇಫ್ ಜಾಗಗಳಿವು
ಕುಲಧಾರ ಗ್ರಾಮ : ರಾಜಸ್ಥಾನದ ಜೈಸಲ್ಮೇರ್‌ನಿಂದ 14 ಕಿಮೀ ದೂರದಲ್ಲಿ ಕುಲಧಾರ ಗ್ರಾಮವಿದೆ. ಇದು ಕಳೆದ 200 ವರ್ಷಗಳಿಂದ ನಿರ್ಜನವಾಗಿದೆ. ಇದನ್ನು ಭೂತಗಳ ಸ್ಥಳವೆಂದು ಹೇಳಲಾಗುತ್ತದೆ. ಈ ಗ್ರಾಮವು 1300 ರಲ್ಲಿ ಪಾಲಿವಾಲ್ ಬ್ರಾಹ್ಮಣ ಸಮುದಾಯದಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬುತ್ತಾರೆ. ಸರಸ್ವತಿ ನದಿಯ ದಡದಲ್ಲಿರುವ ಈ ಕುಲಧಾರ ಗ್ರಾಮದಲ್ಲಿ, ಒಂದಾನೊಂದು ಕಾಲದಲ್ಲಿ ಜನ ಸಂಚಾರ ಇತ್ತಂತೆ. ಆದರೆ ಇಂದಿನ ಯುಗದಲ್ಲಿ ಜನರು ಇಲ್ಲಿ ಓಡಾಡಲು ಹೆದರುತ್ತಾರೆ. ಈ ಗ್ರಾಮಕ್ಕೆ ಶಾಪವಿದೆ. ಈ ಗ್ರಾಮದಲ್ಲಿ ನೆಲೆಸುವ ಯಾರೂ ಹೆಚ್ಚು ದಿನ ನೆಲೆಯೂರಲಾರರು ಎಂಬ ಶಾಪವಿರುವ ಕಾರಣ ಜನರು ಇಲ್ಲಿಗೆ ಬರೋದಿಲ್ಲ. ಕುಲಧಾರ ಗ್ರಾಮವು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ರಕ್ಷಿಸಲ್ಪಟ್ಟ ಐತಿಹಾಸಿಕ ಸ್ಥಳವಾಗಿದೆ. ಪ್ರವಾಸಿಗರು ಕುಲಧಾರ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಬಹುದು. ಪ್ರವಾಸಿಗರು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯರವರೆಗೆ ಗ್ರಾಮದ ಸುತ್ತಲೂ ತಿರುಗಬಹುದು. ಸಂಜೆ ಆರು ಗಂಟೆ ನಂತ್ರ ಪ್ರವಾಸಿಗರು ಪ್ರವೇಶವನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ನಂತರ ಇಲ್ಲಿನ ಗೇಟ್ ಮುಚ್ಚಲಾಗುತ್ತದೆ. ಇದನ್ನು ಭೂತಗಳ ಸ್ಥಳವೆಂದು ಕರೆಯಲಾಗುತ್ತದೆ.