ಮಧ್ಯ ರಾತ್ರಿ ಮಹಿಳೆಗೆ ಯಾರೂ ಬಂದು ಚುಂಬಿಸಿದ ಅನುಭವ, ಖಾಸಗಿ ಅಂಗಗಳನ್ನು ಮುಟ್ಟಿ ಆಲಿಂಗಿಸಿದಂತೆ, ಲಿಂಗಿಕವಾಗಿ ಬಳಸಿಕೊಂಡಂತ ಅನುಭವ. ನಿದ್ದೆಗಣ್ಣಿನಲ್ಲಿ ನೋಡಿದರೆ ನೆರಳು ಮಾತ್ರ ಕಾಣುತ್ತಿದೆ. ಇದು ಪ್ರೇತದ ಕಾಟ ಎಂದೇ ನಂಬಿದ್ದ ಮಹಿಳೆಗೆ ಕೊನೆಗೆ ಸತ್ಯ ಗೊತ್ತಾಗಿದೆ.
ಸಿಂಗಾಪುರ(ಸೆ.02): ವೀಕೆಂಡ್‌ನಲ್ಲಿ ಪಾರ್ಟಿ, ಅಮಲಿನಲ್ಲಿ ಬಂದು ಮಲಗಿದ ಯುವತಿಗೆ ಮಧ್ಯರಾತ್ರಿ ಯಾರೋ ಚುಂಬಿಸಿದ ಅನುಭ. ಕೆಲ ಹೊತ್ತಲ್ಲೇ ಖಾಸಗಿ ಅಂಗಗಳನ್ನು ಮುಟ್ಟಿದ ಅನುಭವ. ಅಮಲು ಹಾಗೂ ನಿದ್ದೆಗಣ್ಣಿನಲ್ಲಿ ಎದ್ದು ನೋಡಿದರೆ ಕೇವಲ ನೆರಳು ಮಾತ್ರ. ಆರಂಭದಲ್ಲಿ ವಿಕೇಂಡ್‌ನಲ್ಲಿ ಮಾತ್ರ ಇದ್ದ ಅನುಬವ ಬಳಿಕ ಬಹುತೇಕ ದಿನಗಳಲ್ಲಿ ಆಗುತ್ತಿತ್ತು. ಬೆಳಗ್ಗೆ ಎದ್ದು ನೋಡಿದರೆ ಡೋರ್ ಲಾಕ್ ಆಗಿದೆ. ಯಾರೂ ತೆಗೆದು ಒಳಗೆ ಬಂದಿಲ್ಲ. ಹಾಗಾದರೆ ಮಧ್ಯ ರಾತ್ರಿ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವುದು ಪ್ರೇತದ ಕಾಟ ಎಂದು ಯುವತಿ ನಂಬಿದ್ದಾಳೆ. ಮೊದಲೇ ಮದ್ಯದ ನಶೆಯಲ್ಲಿರುವ ಕಾರಣ ರಾತ್ರಿ ನಡೆಯುವ ಘಟನೆಗಳು ಸ್ಪಷ್ಟವಾಗಿ ಅರಿವಿಗೆ ಬರುತ್ತಿಲ್ಲ. ಆದರೆ ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಅನ್ನೋದಂತು ಸ್ಪಷ್ಟವಾಗಿತ್ತು. ಈ ಮನೆಯಲ್ಲಿ ಪ್ರೇತದ ಕಾಟ ಇದೆ ಅನ್ನೋ ಕೆಲವರ ಮಾತು ಕೂಡ ಈ ಮಹಿಳೆಯ ನಂಬಿಕೆಗೆ ಪುಷ್ಠಿ ನೀಡಿತ್ತು. ಆದರೆ ಕೊನೆಗೆ ಆಲಿಂಗನ, ಚುಂಬನ ಹೆಚ್ಚಾಗುತ್ತಿದ್ದಂತೆ ನಡೆಯುತ್ತಿರುವ ವಿಚಾರವನ್ನು ಯವತಿ ತನ್ನ ಬಾಯ್‌ಫ್ರೆಂಡ್‌ಗೆ ವಿವರಿಸಿದ್ದಾಳೆ. ಯುವತಿಯ ಪ್ರೇತಕ ಕತೆ ಕೇಳಿ ಬಾಯ್‌ಫ್ರೆಂಡ್ ದಂಗಾಗಿದ್ದಾನೆ. ಆದರೆ ಸತ್ಯ ಅರಿಯಲು ಯುವತಿಯ ಬೆಡ್‌ರೂಂನಲ್ಲಿ ಸಿಸಿಟಿವಿ ಕ್ಯಾಮಾರ ಅಳವಡಿಸಿದ್ದಾನೆ. ಈ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯ ನೋಡಿ ಯುವತಿ ಶಾಕ್ ಆಗಿದ್ದಾಳೆ. ಇಷ್ಟು ದಿನ ಪ್ರೇತದ ಕಾಟ ಎಂದು ನಂಬಿದ್ದ ಯುವತಿಗೆ, ಅದು ಪ್ರೇತ ಅಲ್ಲ. ತನ್ನ ಮನೆಯ ಮಾಲೀಕ ಅನ್ನೋದು ಸಿಸಿಟಿವಿಯಿಂದ ಬಹಿರಂಗಗೊಂಡಿದೆ. ಸಿಂಗಾಪುರದಲ್ಲಿ ಈ ಘಟನೆ ನಡೆದಿದೆ.
ಅಬ್ಬಬ್ಬಾ..ವೀರ್ಯ ಬಳಸಿ ಮುತ್ತಿನ ನೆಕ್ಲೇಸ್ ತಯಾರಿಸ್ತಿದ್ದಾಳೆ ಮಹಿಳೆ !
ಸಿಂಗಾಪೂರದ ಹೌಸಿಂಗ್ ಅಂಡ್ ಡೆವಲಪಿಂಗ್ ಬೋರ್ಡ್(HDB) ನಿರ್ಮಾಣ ಮಾಡಿದ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ. HDB ನಿರ್ಮಾಣ ಮಾಡಿದ ಈ ಮನೆಯನ್ನು ಖರೀದಿಸಿದ ಮಾಲೀಕ(Landlord) ಬಳಿಕ ಅದನ್ನು ಬಾಡಿಗಿಗೆ ನೀಡಿದ್ದಾನೆ. 6 ತಿಂಗಳ ಹಿಂದೆ ಈ ಫ್ಲ್ಯಾಟ್‌ಗೆ ಯುವತಿ ವಾಸಕ್ಕಾಗಿ ಬಂದಿದ್ದಾಳೆ. ಯುವತಿ ತನ್ನ ಬಾಯ್‌ಫ್ರೆಂಡ್ ಜೊತೆ ಬಂದು ಈ ಮನೆಯನ್ನು ಬಾಡಿಗೆ ಪಡೆದಿದ್ದರು. ಈ ಮನೆಯ ಬಾಡಿಗೆಯನ್ನು(Rent) ಯುವತಿಯ ಬಾಯ್‌ಫ್ರೆಂಡ್ ಕಟ್ಟುತ್ತಿದ್ದಾನೆ. ಆದರೆ ಮನೆಯಲ್ಲಿ ಯುವತಿ ಮಾತ್ರ ವಾಸವಾಗಿದ್ದು, ಬಾಯ್‌ಫ್ರೆಂಡ್(Boy Friend) ಬೇರೆ ಮನೆಯಲ್ಲಿ ವಾಸವಾಗಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಮಾಲೀಕ, ವಾರದಲ್ಲಿ 3 ರಿಂದ 4 ದಿನ ರಾತ್ರಿ ಪಾರ್ಟಿಗೆ ಯುವತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ಆಹ್ವಾನಿಸುತ್ತಿದ್ದ. ಬಳಿಕ ಕಂಠಪೂರ್ತಿ ಕುಡಿಸಿ ಬಾಯ್‌ಫ್ರೆಂಡ್‌ನ್ನು ಆತನ ಮನೆಗೆ ಬಿಡುತ್ತಿದ್ದ. ಕುಡಿದ ಅಮಲಿನಲ್ಲಿ ಬಂದು ಮಲಗುತ್ತಿದ್ದ ಯುವತಿ(Women) ಮನೆಗೆ ಆಗಮಿಸುತ್ತಿದ್ದ ಮಾಲೀಕ, ತನ್ನಲ್ಲಿರುವ ಮತ್ತೊಂದು ಕೀ ಬಳಸಿ ಒಳ ನುಗ್ಗುತ್ತಿದ್ದ.
ಹಾರ ಹಾಕುವ ವೇಳೆ ಹಿಂಜರಿದ ವರ: ವಧು ಏನ್ ಮಾಡಿದ್ಲು ನೋಡಿ
ನಶೆಯಲ್ಲಿರುವ ಯುವತಿಗೆ ಚುಂಬಿಸಿ, ಆಲಿಂಗಿಸಿ, ಲೈಂಗಿಕವಾಗಿ(sexually abused) ಬಳಸಿಕೊಳ್ಳುತ್ತಿದ್ದ. ಬಳಿಕ ಅಲ್ಲಿಂದ ತೆರಳುತ್ತಿದ್ದ. ಹೀಗಾಗಿ ಯುವತಿಗೆ ಮಾಲೀಕನ ಮೇಲೆ ಯಾವುದೇ ಅನುಮಾನ ಬಂದಿರಲಿಲ್ಲ. ಇದು ಪ್ರೇತದ(Ghost) ಕೆಲಸ ಎಂದೇ ಭಾವಿಸಿದ್ದಳು. ಆದರೆ ಬಾಯ್‌ಫ್ರೆಂಡ್ ಮಾಲೀಕನಿಗೆ ಗೊತ್ತಿಲ್ಲದಂತೆ ಸಿಸಿಟಿವಿ ಅಳವಡಿಸಿದ ಕಾರಣ ಈ ವಿಚಾರ ಬಯಲಾಗಿದೆ. ಸಿಸಿಟಿವಿಯಲ್ಲಿ 38 ವರ್ಷದ ಮನೆಯ ಮಾಲೀಕನ ಅಸಲಿಯತ್ತ ಬಹಿರಂಗವಾಗಿದೆ. ಯುವತಿ ಹಾಗೂ ಬಾಯ್‌ಫ್ರೆಂಡ್ ಮಾಲೀಕನ ಮನೆಗೆ ತೆರಳಿ ಮಾಲೀಕ ಪತ್ನಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮಾಲೀಕನ ಮನೆಯಲ್ಲಿ ಕೋಲಾಹಲವೇ ಎದ್ದಿದೆ. ಇತ್ತ ಯುವತಿ ಮನೆ ಖಾಲಿ ಮಾಡಿ ಬೇರೋಂದು ಮನೆಗೆ ತೆರಳಿದ್ದಾಳೆ.