Women Health : ಕಾಂಡೋಮ್ ಇಲ್ಲದ ಸೆಕ್ಸಿನಿಂದ ಕಾಡುತ್ತೆ HPV

By Suvarna NewsFirst Published Sep 2, 2022, 4:06 PM IST
Highlights

ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತ್ರ ತಾವು ಸುರಕ್ಷಿತ ಎಂದು ಭಾವಿಸುವ ಮಹಿಳೆಯರು ಕಾಂಡೋಮ್ ಬಳಕೆಗೆ ಆದ್ಯತೆ ನೀಡುವುದಿಲ್ಲ. ಇನ್ನು ಕೆಲ ಮಹಿಳೆಯರು ಬೇರೆ ಬೇರೆ ಕಾರಣಕ್ಕೆ ಕಾಂಡೋಮ್ ನಿಂದ ದೂರವಿರ್ತಾರೆ. ಆದ್ರೆ ಕಾಂಡೋಮ್ ಅನಗತ್ಯ ಗರ್ಭಧಾರಣೆಯಿಂದ ಸುರಕ್ಷತೆ ನೀಡುವುದು ಮಾತ್ರವಲ್ಲ ಇನ್ನೂ ಅನೇಕ ಸೋಂಕಿನಿಂದ ರಕ್ಷಿಸುತ್ತದೆ. ಅದ್ರಲ್ಲಿ ಹೆಚ್ ಪಿವಿ ಒಂದು.
 

ಅಸುರಕ್ಷಿತ ಲೈಂಗಿಕ ಕ್ರಿಯೆ ಯಾವಾಗ್ಲೂ ಅಸುರಕ್ಷಿತವೆ. ಬರೀ ಗರ್ಭಧಾರಣೆ ಮಾತ್ರವಲ್ಲ ಇದ್ರಿಂದ ಅನೇಕ ಸೋಂಕು ದೇಹ ಸೇರುತ್ತದೆ. ಗಂಭೀರ ಖಾಯಿಲೆಗಳಿಗೆ ಕಾರಣವಾಗುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಹಿಳೆಯರು ಹೆಚ್ ಪಿವಿ ಸೋಂಕಿಗೆ ಒಳಗಾಗ್ತಾರೆ. ಆದ್ರೆ ಅನೇಕ ಮಹಿಳೆಯರಿಗೆ ಹೆಚ್ ಪಿವಿ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ನಾವಿಂದು ಹೆಚ್ ಪಿವಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡ್ತೇವೆ. ಹೆಚ್ ಪಿವಿ (HPV) ಅಂದ್ರೆ ಹ್ಯೂಮನ್ ಪ್ಯಾಪಿಲೋಮಾ ವೈರಸ್ (Virus) . ಇದು ಒಂದು ರೀತಿಯ ವೈರಲ್ ಸೋಂಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು. ಚರ್ಮ (skin) ದ ಸಂಪರ್ಕದ ಮೂಲಕ ಇದು ಇನ್ನೊಬ್ಬರಿಗೆ ಹರಡುತ್ತದೆ. ಅಂದ್ರೆ ಲೈಂಗಿಕ ಸಂಪರ್ಕ (sexual contact) ದ ಮೂಲಕ ಹರಡುವ ಸೋಂಕು ಇದು ಎಂದು ತಜ್ಞರು ಹೇಳ್ತಾರೆ.  ಅನೇಕ ಮಹಿಳೆಯರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಹಾಗಾಗಿ ಬಹುಬೇಗ ಇದ್ರ ಲಕ್ಷಣ ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗ್ತಿಲ್ಲ ಎಂದು ಅನೇಕ ಸಂಶೋಧನೆಗಳು ಹೇಳಿವೆ. 

ಹೆಚ್ ಪಿವಿ ಗೆ ಮುಖ್ಯ ಕಾರಣವೇನು ಗೊತ್ತಾ? : ಸಂಶೋಧನೆಗಳ ಪ್ರಕಾರ, HPV ಹರಡಲು ಮುಖ್ಯ ಕಾರಣವೇ ಅಸುರಕ್ಷಿತ ಲೈಂಗಿಕ ಕ್ರಿಯೆ (Unsafe Sex). ಇದು ವಜೈನಾ (Vagina), ಓರಲ್ (Oral Sex) ಹಾಗೂ ಗುದ ಸಂಭೋಗದ (Sexual Intercourse) ಮೂಲಕ ಕೂಡ ಹರಡುವ ಸಾಧ್ಯತೆಯಿದೆ. ಲೈಂಗಿಕ ಕ್ರಿಯೆ ಒಂದು ಕಾರಣ ಮಾತ್ರ. ಬೇರೆ ವಿಧಾನಗಳಿಂದಲೂ ಸೋಂಕು ಹರಡುತ್ತದೆ. ಚರ್ಮದ ಸಂಪರ್ಕಕ್ಕೆ ಬಂದ್ರೆ ಈ ಸೋಂಕು (Infection) ಹರಡುತ್ತದೆ ಎಂದು ತಜ್ಞರು ಹೇಳ್ತಾರೆ. ಹೆಚ್ ಪಿವಿಗೆ ಯಾವುದೇ ನಿರ್ದಿಷ್ಟ ಲಕ್ಷಣವಿಲ್ಲ. ಹಾಗಾಗಿ ಅನೇಕ ಮಹಿಳೆಯರಿಗೆ ತಮಗೆ ಹೆಚ್ ಪಿವಿ ಇದೆ ಎನ್ನೋದೇ ಗೊತ್ತಿರೋದಿಲ್ಲ ಎನ್ನುತ್ತಾರೆ ತಜ್ಞರು.

Woman Health: ಬ್ರಾ ಧರಿಸದೇ ಇರೋದ್ರಿಂದ ಏನೇನು ಆಗುತ್ತೆ ಗೊತ್ತಾ?

ತಾಯಿಯಿಂದ ಮಗುವಿಗೂ ಹರಡಬಲ್ಲದು: ಹೌದು, ಗರ್ಭಿಣಿ ಮಹಿಳೆಗೆ ಹೆಚ್ ಪಿವಿ ಇದ್ದರೆ ಅದು ಮಗುವಿಗೂ ಹರಡುವ ಸಾಧ್ಯತೆಯಿದೆ. ಇದ್ರಿಂದ ಮಗುವಿಗೆ ಪುನರಾವರ್ತಿತ ಉಸಿರಾಟದ ಪ್ಯಾಪಿಲೋಮಾಟೋಸಿಸ್ ( Recurrent Respiratory Papillomatosis) ಕಾಡುವ ಸಾಧ್ಯತೆಯಿದೆ. ಗಂಟಲು ಅಥವಾ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯೆಯಿದೆ. ಇದ್ರಿಂದ ಮಗುವಿಗೆ ಗರ್ಭಕಂಠದ ಕ್ಯಾನ್ಸರ್,ಕುತ್ತಿಗೆ ಮತ್ತು ಗಂಟಲಿನ ಕ್ಯಾನ್ಸರ್ ಕಾಡುವ ಸಂಭವವಿದೆ. ಸಾಮಾನ್ಯವಾಗಿ ಎರಡು ವರ್ಷದಲ್ಲಿ ತಾನಾಗಿಯೇ ಹೆಚ್ ಪಿವಿ ಕಡಿಮೆಯಾಗುತ್ತದೆ. ಒಂದ್ವೇಳೆ ಕಡಿಮೆಯಾಗಿಲ್ಲವೆಂದ್ರೆ ಜನನಾಂಗದ ನರಹುಲಿ,ಗಂಟಲಿನ ಸಮಸ್ಯೆ ಕಾಡುತ್ತದೆ. ಹೆಚ್ ಪಿವಿ ಕ್ಯಾನ್ಸರ್ ಆಗಿ ಬದಲಾಗುವುದನ್ನು ಪತ್ತೆ ಹಚ್ಚುವುದು ಕಷ್ಟ. ಮುಂದಿನ ಹಂತಕ್ಕೆ ಹೋದಾಗ ಮಾತ್ರ ಅದ್ರ ಲಕ್ಷಣ ಕಾಣಿಸುತ್ತದೆ. 

ಮುಟ್ಟಿನ ನಂತ್ರ ಕಾಡುವ ಯೋನಿ ತುರಿಕೆಗೆ ಇಲ್ಲಿದೆ ಮನೆ ಮದ್ದು

ಹೆಚ್ ಪಿವಿ ಲಕ್ಷಣ ಪತ್ತೆ ಮಾಡುವುದು ಕಷ್ಟ. ಹಾಗೆಯೇ ಕೊನೆ ಹಂತದಲ್ಲಿ ಇದು ತಿಳಿಯುವ ಕಾರಣ, ಅದು ಬರದಂತೆ ಎಚ್ಚರಿಗೆ ವಹಿಸುವುದು ಬುದ್ಧಿವಂತಿಕೆ ಕೆಲಸ. ಹೆಚ್ ಪಿವಿ ಕಾಡ್ಬಾರದು ಅಂದ್ರೆ ಮಹಿಳೆಯರು ಕೆಲವೊಂದು ವಿಷ್ಯವನ್ನು ನೆನಪಿಟ್ಟುಕೊಳ್ಳಬೇಕು. ಹೆಚ್ ಪಿವಿ ಬರಬಾರದೆಂದ್ರೆ ಕಾಂಡೋಮ್ ಬಳಕೆ ಮಾಡ್ಬೇಕು. ಅಸುರಕ್ಷಿತ ಲೈಂಗಿಕ ಕ್ರಿಯೆಗೆ ಅವಕಾಶ ನೀಡಬಾರದು.ಗಾರ್ಡಸಿಲ್ 9 ಲಸಿಕೆ (Gardasil 9) ಜನನಾಂಗದ ನರಹುಲಿಗಳ ಕ್ಯಾನ್ಸರ್ ಮತ್ತು ಹೆಚ್ ಪಿವಿ ಯನ್ನು ತಡೆಯುತ್ತದೆ. ಈವರೆಗೆ ಲಸಿಕೆ ಪಡೆಯದ 27 ರಿಂದ 45 ವರ್ಷದ ಎಲ್ಲ ಮಹಿಳೆಯರು ಈ ಲಸಿಕೆ ಪಡೆಯಬಹುದು ಎನ್ನುತ್ತಾರೆ ತಜ್ಞರು. ಅಲ್ಲದೆ ಸಮಸ್ಯೆ ಬರದಂತೆ ಕಾಪಾಡಬೇಕೆಂದ್ರೆ ನಿಯಮಿತವಾಗಿ ಆರೋಗ್ಯ ತಪಾಸಣೆ (Health Checkup) ಮಾಡಿಸಿಕೊಳ್ಳಬೇಕಾಗುತ್ತದೆ. ಬರೀ ರಕ್ತ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಪ್ಯಾಪ್ ಸ್ಮೀಯರ್‌ ಮಾಡಿಸಿಕೊಳ್ಳುವ ಮೂಲಕ ಹೆಚ್ ಪಿವಿ ಪತ್ತೆ ಮಾಡಬಹುದು. 
 

click me!