Woman sues doctor: ನನ್ನ ಹುಟ್ಟಿಸಿದ್ಯಾಕೆ ? ತಾಯಿಯ ವೈದ್ಯರ ವಿರುದ್ಧ ಕೇಸ್ ಹಾಕಿದ ಯುವತಿ

Published : Dec 03, 2021, 01:47 AM IST
Woman sues doctor: ನನ್ನ ಹುಟ್ಟಿಸಿದ್ಯಾಕೆ ? ತಾಯಿಯ ವೈದ್ಯರ ವಿರುದ್ಧ ಕೇಸ್ ಹಾಕಿದ ಯುವತಿ

ಸಾರಾಂಶ

ಹೀಗೂ ಇರುತ್ತಾರೆ ನೋಡಿ.. ತನ್ನ ಹುಟ್ಟಿಗೆ ಅವಕಾಶ ಕೊಟ್ಟ ತನ್ನ ತಾಯಿಯ(Mother) ವೈದ್ಯರ(Doctor) ವಿರುದ್ಧ ಈಕೆ ಕೇಸ್ ಕೊಟ್ಟಿದ್ದಾಳೆ. ತೀರ್ಪು ಕೂಡಾ ಆಕೆಯ ಪರ ಬಂದಿದೆ. ಆಗಿದ್ದೇನು ?

ಲಂಡನ್‌(ಡಿ.03): ತನ್ನ ಆರೋಗ್ಯ ಸಮಸ್ಯೆಗೆ ತನ್ನ ತಾಯಿಯ ವೈದ್ಯರೇ ಕಾರಣ ಎಂದು ಯುವತಿಯೊಬ್ಬರು ಪ್ರಕರಣ ದಾಖಲಿಸಿ ಗೆದ್ದ ಅಪರೂಪದ ಘಟನೆ ಲಂಡನ್‌ನಲ್ಲಿ ನಡೆದಿದೆ. ಮೆದುಳು ಬಳ್ಳಿ ಮತ್ತು ಬೆನ್ನು ಮೂಳೆ ಸರಿಯಾಗಿ ಜೋಡಣೆಯಾಗದಿರುವಂತಹ ‘ಸ್ಪೈನಾ ಬಿಫಿಡಾ’ ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್‌ ಎಂಬ ಮಹಿಳೆ ತನ್ನ ತಾಯಿಯ ವೈದ್ಯರಾದ ಡಾ.ಫಿಲಿಪ್‌ ಮಿಚೆಲ್‌ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ತನ್ನ ತಾಯಿ ಗರ್ಭಿಣಿಯಾಗಿದ್ದಾಗ ವೈದ್ಯರು ಸರಿಯಾದ ಮಾರ್ಗದರ್ಶನ ನೀಡಿದ್ದರೆ, ಅವರು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರು. ಹಾಗಾಗಿ ಈ ಸಮಸ್ಯೆ ತನ್ನನ್ನು ಕಾಡುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಕಾಯಿಲೆಯಿಂದಾಗಿ ಕೆಲವೊಮ್ಮೆ ದಿನಗಟ್ಟಲೇ ಆಸ್ಪತ್ರೆಯಲ್ಲೇ ಕಳೆಯುವಂತಾಗಿದೆ. ‘ನನ್ನ ತಾಯಿಗೆ ನಿಮ್ಮ ಮಗು ಫೋಲಿಕ್‌ ಆ್ಯಸಿಡ್‌ ಅಂಶವಿರುವ ಔಷಧಿಯನ್ನು ಸೇವಿಸಬೇಕಾಗುತ್ತದೆ ಎಂದು ಹೇಳಿದ್ದರೆ, ನನ್ನ ತಾಯಿ ಗರ್ಭವತಿಯಾಗುವುದನ್ನು ಮುಂದೂಡುತ್ತಿದ್ದರು. ಆದರೆ ವೈದ್ಯರು ಸರಿಯಾದ ಮಾರ್ಗರ್ದನ ನೀಡದೇ ಇದ್ದುದರಿಂದ ನನಗೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಬ್ಲೌಸ್ ಇಲ್ಲದೆ ಸೀರೆಯುಟ್ಟ ಸುಂದರಿ, ಎದೆ ಬೆನ್ನು ಮುಚ್ಚಿದ್ದು ಮೆಹಂದಿಯಿಂದ

20 ವರ್ಷದ ಇವಿ ದಾಖಲಿಸಿರುವ ಮೊಕದ್ದಮೆಯನ್ನು ಆಲಿಸಿರುವ ಲಂಡನ್‌ ಹೈಕೋರ್ಟ್‌, ಇವಿಯ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪು ನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಯುಕೆಯಲ್ಲಿ 20 ವರ್ಷದ ಯುವತಿ, ತಾನು ಎಂದಿಗೂ ಹುಟ್ಟಬಾರದಿತ್ತು ಎಂದು ವಾದಿಸಿ ತನ್ನ ತಾಯಿಯ ವೈದ್ಯರ ವಿರುದ್ಧ ಲಕ್ಷಾಂತರ ರೂ ಮೊಕದ್ದಮೆ ಹೂಡಿದ್ದಾರೆ. ಮಹತ್ವದ ತೀರ್ಪಿನಲ್ಲಿ, ಎಚ್‌ಸಿ ಮಹಿಳೆಯ ಪರವಾಗಿ ತೀರ್ಪು ನೀಡಿದ್ದು, ಪರಿಹಾರ ನೀಡುವಂತೆಯೂ ತಿಳಿಸಿದೆ. ಶೋಜಂಪಿಂಗ್ ತಾರೆ, ಎವಿ ಟೂಂಬ್ಸ್ ಸ್ಪೈನಾ ಬೈಫಿಡಾದೊಂದಿಗೆ ಜನಿಸಿದರು. ಅಂದರೆ ಅವರು ಕೆಲವೊಮ್ಮೆ ಟ್ಯೂಬ್‌ಗಳಿಗೆ ಜೋಡಿಸಿಕೊಂಡೇ ದಿನದಲ್ಲಿ 24 ಗಂಟೆಗಳ ಕಾಲ ಕಳೆಯುತ್ತಾರೆ.

ಡೈಲಿಮೇಲ್‌ನಲ್ಲಿನ ವರದಿಯ ಪ್ರಕಾರ, ಸ್ಕೆಗ್ನೆಸ್‌ನಿಂದ ಬಂದ ಟೂಂಬೆಸ್, ನವೆಂಬರ್, 2021 ರಲ್ಲಿ ಡಾ ಫಿಲಿಪ್ ಮಿಚೆಲ್ ಗರ್ಭಿಣಿಯಾಗುವ ಮೊದಲು ತನ್ನ ತಾಯಿಗೆ ಪ್ರಮುಖ ಪೂರಕಗಳನ್ನು ಸೂಚಿಸಲು ವಿಫಲವಾದ ಆರೋಪದಲ್ಲಿ ಮೊಕದ್ದಮೆ ಹೂಡಿದ್ದಾರೆ. ತನ್ನ ಮಗುವಿನ ಮೇಲೆ ಪರಿಣಾಮ ಬೀರುವ ಸ್ಪೈನಾ ಬೈಫಿಡಾ ಅಪಾಯವನ್ನು ನಿವಾರಿಸಲು ಫೋಲಿಕ್ ಆಸಿಡ್ ಪೂರಕಗಳನ್ನು ತೆಗೆದುಕೊಳ್ಳಬೇಕೆಂದು ವೈದ್ಯರು ತನ್ನ ತಾಯಿಗೆ ಹೇಳಿದ್ದರೆ, ಅವಳು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದಳು ಎಂದು ಯುವತಿ ಹೇಳಿದ್ದಾರೆ. ಇದರರ್ಥ ಟೂಂಬ್ಸ್ ಎಂದಿಗೂ ಹುಟ್ಟುತ್ತಿರಲಿಲ್ಲ. ಅಬ್ಬಾ ಕೇಸ್ ಹಾಕೋಕೆ ಎಂಥೆಂಥಾ ವಿಷಯ ಇದೆ ಅಲ್ವಾ ?

ಎವಿಯ ತಾಯಿಗೆ ಸರಿಯಾದ ಡಿಸ್ಕ್ರಿಪ್ಶನ್ ಮಾಡಲಾದ ಸಲಹೆಯನ್ನು ನೀಡಿದ್ದರೆ, ಅವರು ಗರ್ಭಧರಿಸುವ ಪ್ರಯತ್ನಗಳನ್ನು ವಿಳಂಬಗೊಳಿಸುತ್ತಿದ್ದರು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ಈ ತೀರ್ಪನ್ನು ಗ್ರೌಂಡ್ ಬ್ರೇಕಿಂಗ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಗಂಭೀರವಾದ ಆರೋಗ್ಯ ಸಮಸ್ಯೆಯಿರುವ ಮಗುವಿನ ಜನನಕ್ಕೆ ಕಾರಣವಾಗುವ ಪೂರ್ವ-ಕಲ್ಪನಾ ಸಲಹೆಗಳಿಗೆ ವೈದ್ಯರು ಜವಾಬ್ದಾರರಾಗಿರುತ್ತಾರೆ.

ಅವರ ಅನಾರೋಗ್ಯದ ಸ್ಥಿತಿಯ ಹೊರತಾಗಿಯೂ, ಟೂಂಬ್ಸ್ ಶೋಜಂಪಿಂಗ್‌ನಲ್ಲಿ ವೃತ್ತಿಜೀವನವನ್ನು ಕಂಡುಕೊಂಡಿದ್ದಾರೆ. ಅವರು Instagram ನಲ್ಲಿ 21K ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ದೈನಂದಿನ ಜೀವನ ಮತ್ತು ವೃತ್ತಿಪರ ಕೆಲಸದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?