Vineeta Agarwal: ಟ್ವಿಟ್ಟರ್ ಸಿಇಒ ಪರಾಗ್ ಪತ್ನಿ ವಿನೀತಾ ಅಗರ್ವಾಲ್ ಯಾರು ಗೊತ್ತಾ?

By Suvarna News  |  First Published Dec 1, 2021, 1:03 PM IST

ಟ್ವಿಟ್ಟರ್‌ನ ಹೊಸ ಸಿಇಒ ಪರಾಗ್ ಅಗರ್ವಾಲ್ ಸಧ್ಯ ಸುದ್ದಿಯಲ್ಲಿದ್ದಾರೆ. ಅವರೊಂದಿಗೆ ನೆಟ್ಟಿಗರ ಗಮನ ಸೆಳೆಯುತ್ತಿರುವುದು ಪತ್ನಿ ವಿನೀತಾ ಅಗರ್ವಾಲ್. ಅವರೇನು ಮಾಡಿಕೊಂಡಿದ್ದಾರೆ ಗೊತ್ತಾ?


ಮೈಕ್ರೋ ಬ್ಲಾಗಿಂಗ್‌ನ ದೈತ್ಯ ಸಂಸ್ಥೆ ಟ್ವಿಟ್ಟರ್‌(twitter)ಗೆ ಭಾರತ ಮೂಲದ ಪರಾಗ್ ಅಗರ್‌ವಾಲ್(Parag Agarwal) ಸಿಇಒ ಆಗಿ ಸೋಮವಾರ ನೇಮಕವಾದಂದಿನಿಂದಲೂ ಅವರು ಸೋಷ್ಯಲ್ ಮೀಡಿಯಾಗಳಲ್ಲಿ ಟ್ರೆಂಡ್‌ನಲ್ಲಿಯೇ ಇದ್ದಾರೆ. ಅವರ ಕುರಿತು ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ನೆಟ್ಟಿಗರು ಪ್ರಯತ್ನಿಸುತ್ತಿದ್ದಾರೆ. ಈಗ ನೆಟ್ಟಿಗರ ಕುತೂಹಲ ಪರಾಗ್ ಅವರ ಕುಟುಂಬದ ಹಿನ್ನೆಲೆ, ಪತ್ನಿ, ಮಕ್ಕಳು ಎಲ್ಲ ಕಡೆಯೂ ಹಬ್ಬಿದೆ. ಹೀಗೆ ಪತಿಯ ಕಾರಣಕ್ಕೆ ನೆಟ್ಟಿಗರ ಕಣ್ಣಿಗೆ ಬೀಳುತ್ತಿರುವುದು ವಿನೀತಾ ಅಗರ್ವಾಲ್ ಆದರೂ, ಸ್ವಂತ ಸಾಧನೆಯ ಕಾರಣಕ್ಕೆ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಹೆಣ್ಣುಮಗಳೀಕೆ. 

ಸಾಮಾನ್ಯವಾಗಿ ದೊಡ್ಡ ಸ್ಥಾನದಲ್ಲಿರುವವರ ಪತ್ನಿ ಎಂದರೆ ಪತಿಯ ದುಡ್ಡಿನಲ್ಲಿ ಮೆರೆಯುತ್ತಾ ಆರಾಮಾಗಿ ಕಾಲ ಕಳೆವವರು ಎಂಬ ಯೋಚನೆ ಜನಸಾಮಾನ್ಯರಲ್ಲಿರುತ್ತದೆ. ಆದರೆ, ವಿನೀತಾರ ಬಗ್ಗೆ ಕಡಿಮೆ ವಿಷಯಗಳು ತಿಳಿದರೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವುದಂತೂ ಖಂಡಿತಾ. 

Twitter CEO ಪರಾಗ್ ಅಗರ್ವಾಲ್ ಸ್ಯಾಲರಿ ಎಷ್ಟು?, ಸಖತ್ ಟ್ರೆಂಡಿಂಗ್‌ನಲ್ಲಿ ಟ್ವಿಟರ್ CEO

Tap to resize

Latest Videos

undefined

ಪರಾಗ್ ಸಿಇಒ ಎಂದು ಘೋಷಣೆಯಾಗುವವರೆಗೆ ಅವರ ಹೆಸರನ್ನೇ ಯಾರೂ ಕೇಳಿರಲಿಲ್ಲ. ಅಂಥದರಲ್ಲಿ 37 ವರ್ಷದ ಪರಾಗ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ವಿಷಯಗಳು ಬಾಹ್ಯ ಜಗತ್ತಿಗೆ ತಿಳಿದಿರುವುದು ದೂರದ ಮಾತು.  ಆದರೆ, ಅವರ ಟ್ವಿಟ್ಟರ್, ಇನ್ಸ್ಟಾಗ್ರಾಂ ಖಾತೆಗಳನ್ನು ತಡಕಾಡಿದಾಗ ಒಂದಿಷ್ಟು ಕೌಟುಂಬಿಕ ವಿವರಗಳು ದೊರೆಯುತ್ತವೆ. ಅದರಲ್ಲಿ ನೆಟ್ಟಿಗರು ಹೆಚ್ಚು ಹುಡುಕಾಡುತ್ತಿರುವುದು ಪರಾಗ್ ಪತ್ನಿ ಹಾಗೂ ಮಕ್ಕಳ ಬಗ್ಗೆ. 
ಐಐಟಿ ಬಾಂಬೆಯಲ್ಲಿ ಬಿಟೆಕ್ ಇನ್ ಕಂಪ್ಯೂಟರ್ ಸೈನ್ಸ್(BTech in Computer Science) ಹಾಗೂ ಎಂಜಿನಿಯರಿಂಗ್ (Engineering) ಮುಗಿಸಿರುವ ಪರಾಗ್, ನಂತರ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿಯಿಂದ ಪಿಎಚ್‌ಡಿ ಮಾಡಿದ್ದಾರೆ. 

Winter Wedding : ಚಳಿಗಾಲದಲ್ಲಿ ಹಸೆಮಣೆ ಏರುತ್ತಿರುವ ವಧುವಿಗಾಗಿ fitness ಟಿಪ್ಸ್

ಪತಿಗೆ ತಕ್ಕ ಪತ್ನಿ
ಇವರ ಪತ್ನಿ ವಿನೀತಾ(vineeta) ಕೂಡಾ ಪತಿಗೆ ಸರಿಸಾಟಿಯಾಗಿಯೇ ಶಿಕ್ಷಣ ಗಳಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಬಿಎಸ್ ಇನ್ ಬಯೋಫಿಸಿಕ್ಸ್ (BS in biophysics) ಮಾಡಿರುವ ವಿನೀತಾ, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌(Harvard Medical School)ನಿಂದ ಎಂಡಿ ಹಾಗೂ ಪಿಎಚ್‌ಡಿ ಪದವಿ ಗಳಿಸಿದ್ದಾರೆ. ಈ ದಂಪತಿಗೆ ಅನ್ಶ್ ಎಂಬ ಪುತ್ರನೂ ಇದ್ದಾನೆ. ಕುಟುಂಬವು ಸಧ್ಯ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿದೆ. 
ವಿನೀತಾ ಟ್ವಿಟ್ಟರ್ ಪ್ರೊಫೈಲ್ ತಿಳಿಸುವಂತೆ ಆಕೆ ಸಧ್ಯ ವೈದ್ಯೆಯಾಗಿ, ಸ್ಟ್ಯಾನ್‌ಪೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಕ್ಲಿನಿಕಲ್ ಪ್ರೊಫೆಸರ್(proffessor) ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 
ಇದಿಷ್ಟೇ ಅಲ್ಲ, ವೆಂಚರ್ ಕ್ಯಾಪಿಟಲ್ ಕಂಪನಿ ಆ್ಯಂಡ್ರೀಸೆನ್ ಹೋರೋವಿಟ್ಜ್‌ಗೆ ಬರೆಯುವ ಅಭ್ಯಾಸವನ್ನೂ ಇಟ್ಟುಕೊಂಡಿದ್ದಾರೆ. ಈ ಕ್ಯಾಪಿಟಲ್‌ ಫರ್ಮ್‌ಗೆ ಅವರು ಪಾಲುದಾರರಾಗಿದ್ದಾರೆ. 

ಪರಾಗ್ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆ(Instagram account)ಯಲ್ಲಿ ಕುಟುಂಬದ ಫೋಟೋ(photo)ಗಳನ್ನು ಶೇರ್(share) ಮಾಡಿಕೊಳ್ಳುತ್ತಿರುತ್ತಾರೆ. ಆದರೆ ವಿನೀತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರಿಗೆ ಟ್ವಿಟ್ಟರ್‌ನಲ್ಲಿ 12000 ಬೆಂಬಲಿಗರಿದ್ದಾರೆ.

ಅವರು ಪತಿಯ ಸಾಧನೆ ಬಗ್ಗೆ ಇನ್ನಷ್ಟೇ ಹಂಚಿಕೊಳ್ಳಬೇಕಿದ್ದು, ಪರಾಗ್ ಮಾತ್ರ ತಮ್ಮ ಸಾಮಾಜಿಕ ಖಾತೆಗಳಲ್ಲಿ ಈ ಸ್ಥಾನಕ್ಕಾಗಿ ಟ್ವಿಟ್ಟ್ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ. ಈ ಹಿಂದೆ ಮೈಕ್ರೋಸಾಫ್ಟ್, ಎಟಿ ಆ್ಯಂಡ್ ಟಿ ಹಾಗೂ ಯಾಹೂಗಳಲ್ಲಿ ಉದ್ಯೋಗ ನಿರ್ವಹಿಸಿರುವ ಪರಾಗ್, 2011ರಲ್ಲಿ ಟ್ವಿಟ್ಟರ್‌ಗೆ ಸೇರಿದರು. ಅಗರ್ವಾಲ್‌ 2017ರ ವೇಳೆಗೆ ಅದರ ಸಿಟಿಒ ಹುದ್ದೆಗೇರಿದರು. ಸಂಸ್ಥೆಯೊಂದರ ತಂತ್ರಜ್ಞಾನದ ಮುಖ್ಯಸ್ಥರಾಗಿ ಅವರು, ಮೆಷಿನ್‌ ಲರ್ನಿಂಗ್‌(Machine Learning) ಹಾಗೂ ಕೃತಕ ಇಂಟೆಲಿಜೆನ್ಸ್‌ (Artificial Intelligence) ಹಾಗೂ ಸಂಸ್ಥೆಯ ವಿಶಾಲವಾದ ತಾಂತ್ರಿಕ ಕಾರ್ಯತಂತ್ರಗಳ ಮೇಲ್ವಿಚಾರಣೆ ನಡೆಸಿದ್ದಾರೆ.
2006ರಲ್ಲಿ ಆರಂಭವಾದ ಟ್ವಿಟರ್‌ 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ವಾರ್ಷಿಕ 28,000 ಕೋಟಿ ರು. ಆದಾಯ ಹೊಂದಿದೆ.

click me!