
ಟೋಕಿಯೋ: ಮಹಿಳೆಯೊಬ್ಬಳು ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ಕೆಲವು ವಸ್ತುಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಬಂದವಳಿಗೆ ಆಘಾತಕ್ಕೊಳಗಾಗಿದ್ದಳು. ಕೂಡಲೇ ಆಕೆ ಮನೆಗೆ ಹೊರಗಿನಿಂದಲೇ ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾಳೆ. ನಂತರ ಪೊಲೀಸರು ಬಂದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಾಗಿದ್ರೆ ಆಕೆಯ ಬೆಡ್ ಮೇಲೆ ಇದ್ದಿದ್ದೇನು ಮುಂದೆ ಓದಿ.
ಜಪಾನ್ ಮಹಿಳೆಯೊಬ್ಬಳು ಮಧ್ಯಾಹ್ನ ಊಟದ ಸಮಯದ ವೇಳೆ ಮನೆಯಲ್ಲಿದ್ದ ಏನನ್ನೋ ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಬಂದಿದ್ದಳು. ಆದರೆ ಬಾಗಿಲು ತೆರೆದ ಆಕೆಗೆ ಆಘಾತ ಕಾದಿತ್ತು. ಆಕೆಯ ಬೆಡ್ರೂಮ್‌ನಲ್ಲಿ ಕೇವಲ ಒಳ ಉಡುಪು ಮಾತ್ರ ಧರಿಸಿದ್ದ ಬಾಸ್ ಮಲಗಿದ್ದು, ಆತ ಆಕ್ಷೇಪಾರ್ಹವಾದ ಸ್ಥಿತಿಯಲ್ಲಿದ್ದ. ಇದನ್ನು ಕಂಡ ಆಕೆಗೆ ಶಾಕ್ ಆಗಿದ್ದು, ಕೂಡಲೇ ಸಮಯಪ್ರಜ್ಞೆ ಮೆರೆದ ಶಾಂತವಾಗಿ ಮನೆಯಿಂದ ಹೊರಗೆ ಬಂದು ಬಾಗಿಲು ಹಾಕಿ ಬೀಗ ಹಾಕಿದ್ದು, ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಬಂದು ಆಕೆಯ ಬಾಸನ್ನು ಬಂಧಿಸಿದ್ದಾರೆ. ಇತ್ತ ಆತ ಆಕೆಯ ಮನೆಯ ಒಳಗೆ ಹೋಗಿದ್ದು ಹೇಗೆ ಎಂಬುದೇ ಅನೇಕರಿಗೆ ಆಶ್ಚರ್ಯವಾಗಿದೆ.
ವಿಚಾರಣೆಯ ಸಮಯದಲ್ಲಿ ಆರೋಪಿ 47 ವರ್ಷದ ಆಕೆಯ ಬಾಸ್ ಪೊಲೀಸರಿಗೆ ಆ ಮಹಿಳೆಯನ್ನು ತಾನು ಇಷ್ಟಪಟ್ಟಿದ್ದು, ಆಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾನೆ. ಆದರೆ ಆತ ಹೀಗೆ ಆಕೆಯ ಕೋಣೆಯ ಒಳಗೆ ನುಸುಳಿ ಬಂದಿದ್ದು, ಇದೇ ಮೊದಲಲ್ಲವಂತೆ. ಅವನು ತನ್ನ ಮನೆಗೆ ಹೇಗೆ ಪ್ರವೇಶಿಸಿದ್ದಾನೆ. ಆತ ಇಲ್ಲಿ ಏನಾದರೂ ಗುಪ್ತ ಕ್ಯಾಮರಾ ಅಳವಿಡಿಸಿರಬಹುದೇ ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಈಗ ಜಪಾನಿನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಈ ಮಹಿಳೆಯ ಬಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯ ಬಳಿಕ ಆತ ಏನೂ ನಡೆದೇ ಇಲ್ಲ ಎಂಬಂತೆ ಆತ ಕೆಲಸಕ್ಕೆ ಹಿಂತಿರುಗಲಾರ ಎಂದು ನಾನು ಭಾವಿಸುತ್ತೇನೆ ಹಾಗೂ ಮಹಿಳೆ ಆಕೆಯ ಕೆಲಸ ಬಿಡುವಂತೆ ಆಗದಿರಲಿ ಎಂದು ನಾನು ಬಯಸುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.
ಅವಳು ಮನೆಗೆ ಹೋಗಿದ್ದು ಒಳ್ಳೆದಾಯ್ತು ಇಲ್ಲದಿದ್ದರೆ ಅವಳ ವಿಕೃತ ಬಾಸ್‌ನ ಹಿಂದಿನ ಮನಸ್ಥಿತಿಯ ಬಗ್ಗೆ ಆಕೆಗೆ ಗೊತ್ತೇ ಆಗುತ್ತಿರಲಿಲ್ಲ ಮತ್ತು ಅವನ ನಡವಳಿಕೆಯು ಹೆಚ್ಚು ಅಪಾಯಕಾರಿಯಾಗುತ್ತಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಪಾನ್‌ನಲ್ಲಿ ಕೆಲಸದ ಸ್ಥಳದಲ್ಲಿ ಕಿರುಕುಳವು ಹೆಚ್ಚು ಚರ್ಚೆಯ ವಿಚಾರವಾಗಿದೆ. ಫೆಬ್ರವರಿಯಲ್ಲಿ, ಮಸಾಹಿರೋ ನಕೈ ಎಂಬಾಕೆ ತನ್ನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಹಿರಂಗಪಡಿಸಿದ ನಂತರ ಜಪಾನಿನ ಮಹಿಳೆಯರು ತಮ್ಮ ಕೆಲಸದ ಸ್ಥಳದಲ್ಲಿನ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ.
ಮಸಾಹಿರೋ ನಕೈ ಅತ್ಯಂತ ಜನಪ್ರಿಯ ಬಾಯ್ ಬ್ಯಾಂಡ್ SMAPನ ಮಾಜಿ ಸದಸ್ಯರಾಗಿದ್ದು, ಜಪಾನ್‌ನ ಅತಿದೊಡ್ಡ ಪ್ರಸಾರಕರಲ್ಲಿ ಒಂದಾದ ಫ್ಯೂಜಿ ಟಿವಿಯ ಹಿರಿಯ ಸಿಬ್ಬಂದಿಯೊಬ್ಬರು ಏರ್ಪಡಿಸಿದ್ದ ಖಾಸಗಿ ಭೋಜನ ಕೂಟದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಇಲ್ಲಿ ಪ್ರಸಿದ್ಧ ಪುರುಷ ಸೆಲೆಬ್ರಿಟಿಗಳನ್ನು ಮನರಂಜಿಸಲು ಮಹಿಳಾ ಉದ್ಯೋಗಿಗಳ ಮೇಲೆ ನಿಯಮಿತವಾಗಿ ಒತ್ತಡ ಹೇರಲಾಗುತ್ತಿದೆ ಎಂದು ಅವರು ಹೇಳಿದ್ದರು.
ಭಾರತದಲ್ಲಿ #MeToo ಗೆ ಸರಿ ಸಮಾನವಾದ ಜಪಾನೀಸ್ ಭಾಷೆಯ 'ವಾಟಾಶಿ ಗ ಟೈಶೋಕು ಶಿಟಾ ಹೊಂಟೌ ನೋ ರಿಯು' (ನಾನು ನನ್ನ ಕೆಲಸವನ್ನು ತ್ಯಜಿಸಲು ನಿಜವಾದ ಕಾರಣ)ಎಂಬ ಹ್ಯಾಶ್‌ಟ್ಯಾಗ್ ನಂತರ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಲು ಶುರುವಾಗಿತ್ತು. ಈ ಮೂಲಕ ಮಹಿಳೆಯರು ತಮ್ಮ ಬದುಕಿನಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.