ಕೆಲವೊಬ್ಬರು ಹಣ ಮಾಡುವ ವಿಧಾನ ಕೇಳಿದ್ರೆ ಅಚ್ಚರಿಯಾಗುತ್ತೆ. ಅವರು ಏನೇ ಮಾಡಿದ್ರೂ ಜನ ಖರೀದಿ ಮಾಡ್ತಾರಲ್ಲ.. ಅದು ಹೇಗೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತೆ. ಈ ಹುಡುಗಿ ಕೂಡ ಏನೆಲ್ಲ ಮಾರಿ ಹಣ ಮಾಡಿದ್ದಾಳೆ ಗೊತ್ತಾ?
ಜಗತ್ತಿನಲ್ಲಿ ಹಣ ಮಾಡೋಕೆ ನಾನಾ ವಿಧಗಳಿವೆ. ಜನರ ಭಾವನೆ ಸಂಪೂರ್ಣ ಭಿನ್ನವಾಗಿದೆ. ಅವರಿಗೆ ಇಷ್ಟವಾದವರು ಏನು ನೀಡಿದ್ರೂ ಹಣಕೊಟ್ಟ ಖರೀದಿ ಮಾಡಲು ಸಿದ್ಧವಾಗ್ತಾರೆ. ಹಾಗಾಗಿಯೇ ಕೆಲವರು ಚಿತ್ರವಿಚಿತ್ರ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ಗಳಿಸ್ತಾರೆ. ಅಸಹ್ಯವೆನ್ನುವ ವಸ್ತುಗಳನ್ನು ಮಾರಾಟ ಮಾಡಲು ಒಂದು ಹೆಸರು ಬೇಕು ಇನ್ನೊಂದು ಧೈರ್ಯಬೇಕು. ಸಾಮಾಜಿಕ ಜಾಲತಾಣ, ರಿಯಾಲಿಟಿ ಶೋ ಅಥವಾ ಸಿನಿಮಾಗಳಲ್ಲಿ ಪ್ರಸಿದ್ಧಿ ಪಡೆದ ವ್ಯಕ್ತಿಗಳು ಧೈರ್ಯವಾಗಿ ಯಾವ ವಸ್ತು ಮಾರಾಟ ಮಾಡಿದ್ರೂ ಅಭಿಮಾನಿಗಳು ಅದನ್ನು ಖರೀದಿ ಮಾಡ್ತಾರೆ. ಬಳಸಿದ ಹಳೆ ಸಾಕ್ಸ್ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ ಮಹಿಳೆಯೊಬ್ಬಳ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಈಗ ಇನ್ನೊಂದು ಮಹಿಳೆ ಚರ್ಚೆಯಲ್ಲಿದ್ದಾಳೆ. ಆಕೆ ಮಾರಾಟ ಮಾಡುವ ವಸ್ತು ಕೇಳಿದ್ರೆ ನೀವು ದಂಗಾಗ್ತೀರಾ. ಅಸಹ್ಯದ ವಸ್ತು ಮಾರಾಟ ಮಾಡಿ ಆಕೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾಳೆ ಅಂದ್ರೆ ನಂಬೋದು ಕಷ್ಟ.
ಅಮೆರಿಕ (America) ದ ರಿಯಾಲಿಟಿ ಶೋ 90 ಡೇ ಫಿಯನ್ಸ್ನಲ್ಲಿ ಸ್ಟೆಫನಿ ಮ್ಯಾಟೊ ಪಾಲ್ಗೊಂಡಿದ್ದಳು. ಅಲ್ಲಿ ಜನರಿಗೆ ಪರಿಚಯವಾದ ಆಕೆ ಪ್ರಸಿದ್ಧಿ ಅಲ್ಲಿಂದ ಹೆಚ್ಚಾಯ್ತು. ಸಾಮಾಜಿಕ ಜಾಲತಾಣ (Social Network) ಪ್ರಭಾವಿ ಹಾಗೂ ಉದ್ಯಮಿ ಸ್ಟೆಫನಿ 2021ರಲ್ಲಿ ಹೊಸ ಉದ್ಯಮ ಶುರು ಮಾಡಿದ್ಲು. ಅದೇನೆಂದ್ರ ತನ್ನ ಗ್ಯಾಸ (Gas) ನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡೋದು. ಚಿಕ್ಕ ಗ್ಲಾಸಿನ ಜಾರಿನಲ್ಲಿ ಅದನ್ನು ತುಂಬಿ ಆಕೆ ಮಾರಿದಳು.
Weird Jobs: ಹಿಂಗೂ ಇರುತ್ತೆ ಕೆಲಸ….ಹಣ ಕೊಟ್ಟು ಮಕ್ಕಳನ್ನು ನೋಡಿಕೊಳ್ಬೇಕು!
ಸ್ಟೆಫಿನ್ ಮ್ಯಾಟೊ ಬರಿ ಗ್ಯಾಸ್ ಮಾರಾಟ ಮಾಡೋದು ಮಾತ್ರವಲ್ಲ, ಅದನ್ನು ಹೇಗೆ ಗಾಜಿನ ಜಾರಿಗೆ ತುಂಬಬೇಕು ಎನ್ನುವ ಸಂಪೂರ್ಣ ವಿಧಾನವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಒಳ್ಳೆಯ ಗ್ಯಾಸ್ ಗಾಗಿ ಸ್ಟೆಫಿನ್ ಮ್ಯಾಟೋ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಬೀನ್ಸ್, ಪ್ರೋಟೀನ್, ಬೇಯಿಸಿದ ಮೊಟ್ಟೆ (Boiled Egg), ಪ್ರೋಟೀನ್ ಶೇಕ್ ಮತ್ತು ಮೊಸರನ್ನು (Curd) ಬೆಳಗಿನ ಉಪಾಹಾರಕ್ಕಾಗಿ ಸ್ಟೆಫಿನ್ ತಿನ್ನುತ್ತಿದ್ದಳು. ಯಾವಾಗ ಗ್ಯಾಸ್ ಹೊರ ಬರಲು ಶುರುವಾಗುತ್ತೋ ಆಗ ಅದನ್ನು ಬಾಟಲಿಯಲ್ಲಿ ತುಂಬುತ್ತಿದ್ದಳು. ಮೊದಲೇ ಬಾಟಲಿಗೆ ಕೆಲ ಹೂ, ಎಲೆಗಳನ್ನು ಹಾಕಿರುವ ಕಾರಣ ಗ್ಯಾಸ್ ವಾಸನೆ ಬರ್ತಿರಲಿಲ್ಲ. ನಿಮಗೆ ಅಚ್ಚರಿ ಆಗ್ಬಹುದು, ಸ್ಟೆಫಿನ್ ಒಂದು ಸಣ್ಣ ಜಾರ್ ಗ್ಯಾಸನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆಕೆ ಒಂದೇ ವಾರದಲ್ಲಿ ಗ್ಯಾಸ್ ಮಾರಾಟ ಮಾಡಿ 37 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಳು.
ಆದ್ರೆ ಸ್ಟೆಫಿನ್ ಈ ಬ್ಯುಸಿನೆಸ್ ತುಂಬಾ ದಿನ ನಡೆಯಲಿಲ್ಲ. ಆಕೆ ಗ್ಯಾಸ್ ಆಗ್ತಿದ್ದ ಆಹಾರವನ್ನು ಹೆಚ್ಚು ಸೇವನೆ ಮಾಡಿದ ಕಾರಣ ಅದು ಹೃದಯದ ಆರೋಗ್ಯ ಹಾಳುಮಾಡಿತ್ತು. ಸ್ಟೆಫಿನ್ ಹೃದಯಾಘಾತಕ್ಕೆ ಒಳಗಾಗಿದ್ದಳು. ಇದಾದ್ಮೇಲೆ ಗ್ಯಾಸ್ ಮಾರಾಟ ಬಿಟ್ಟಿದ್ದ ಸ್ಟೆಫಿನ್, ಬೆವರಿನ ಮಾರಾಟ ಶುರು ಮಾಡಿದ್ದಳು. ಆಕೆ ತನ್ನ ಎದೆಯ ಮೇಲಿನ ಬೆವರನ್ನು ಜಾರ್ ನಲ್ಲಿ ತುಂಬಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಅನ್‌ಫಿಲ್ಟರ್ಡ್ ಹೆಸರಿನ ವೆಬ್ಸೈಟ್ ಕೂಡ ತೆರೆದಿದ್ದಾಳೆ. ಅದ್ರಲ್ಲಿ ಮಾಡೆಲ್ ಗಳು ಖಾಸಗಿ ಫೋಟೋ, ವಿಡಿಯೋ ಹಂಚಿಕೊಂಡು ಹಣ ಸಂಪಾದನೆ ಮಾಡ್ತಾರೆ.
ಅನಂತ್ ಅಂಬಾನಿ-ರಾಧಿಕಾ ಗ್ರ್ಯಾಂಡ್ ವೆಡ್ಡಿಂಗ್, ಬಾರ್ಬಿ ಗೊಂಬೆಯಂತೆ ಮಿಂಚಿದ ಅಂಬಾನಿ ಭಾವೀ ಸೊಸೆ
ಇಷ್ಟೇ ಅಲ್ಲ ಸ್ಟೆಫಿನ್ ಕೆಲ ದಿನಗಳ ಹಿಂದೆ ಪ್ರೀತಿ ವಿಷ್ಯಕ್ಕೆ ಚರ್ಚೆಗೆ ಬಂದಿದ್ದಾಳೆ. ಆಕೆ ತನಗಿಂತ 57 ವರ್ಷ ದೊಡ್ಡ ವ್ಯಕ್ತಿ ಜೊತೆ ಪ್ರೀತಿ ಸಂಬಂಧ ಶುರು ಮಾಡಿದ್ದಳು. ಸ್ಟೆಫಿನ್ ಗೆ 23 ವರ್ಷವಾದ್ರೆ ಆತನಿಗೆ 80 ವರ್ಷ. ವಯಸ್ಸಾದವರು, ಯುವಕರಂತೆ ಮೋಸ ಮಾಡೋದಿಲ್ಲ ಎಂದು ಸ್ಟೆಫಿನ್ ನಂಬಿದ್ದಳು. ಆದ್ರೆ ವೃದ್ಧ ಕೂಡ ಆಕೆಗೆ ಮೋಸ ಮಾಡಿದ್ದಾನೆ. ಈ ವಿಷ್ಯವನ್ನು ಸ್ಟೆಫಿನ್ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾಳೆ.