ನಾಪತ್ತೆಯಾಗಿದ್ದ ಆಟಿಸಂ ಮಗು ಹುಡುಕಲು ಸ್ಪೆಷಲ್ ಮ್ಯೂಸಿಕ್ ಬಳಸಿದ ಪೊಲೀಸ್!

By Suvarna NewsFirst Published Mar 2, 2024, 1:02 PM IST
Highlights

ಒಂದೊಂದು ಮಕ್ಕಳು ಒಂದೊಂದು ರೀತಿ. ಮಕ್ಕಳ ಸ್ವಭಾವ ನೋಡಿ ಅವರನ್ನು ಪಳಗಿಸಬೇಕು. ಅವರಿಗೆ ಇಷ್ಟವಾದ ವಸ್ತು ನೀಡಿ ಅವರನ್ನು ಸಂತೈಸಬೇಕು. ಈಗ ಕಾಣೆಯಾಗಿದ್ದ ಮಗು ಪತ್ತೆ ಮಾಡಲು ಪೊಲೀಸರು ಅದೇ ಟ್ರಿಕ್ ಬಳಸಿದ್ದಾರೆ. 
 

ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪಾಲಕರು ಸಾಕಿರ್ತಾರೆ. ಮಕ್ಕಳ ಬಗ್ಗೆ ಅತಿಯಾದ ಕಾಳಜಿ ತೆಗೆದುಕೊಂಡಿರ್ತಾರೆ. ಒಂದು ಸ್ವಲ್ಪ ಹೊತ್ತು ಮಕ್ಕಳು ಕಣ್ಣ ಮುಂದಿಲ್ಲ ಎಂದಾಗ ಚಡಪಡಿಕೆ ಆಗೋದು ಸಹಜ. ಕೆಲವೊಮ್ಮೆ ಮಕ್ಕಳು ಪಾಲಕರಿಗೆ ತಿಳಿಸದೆ ಮನೆಯಿಂದ ಹೊರಗೆ ಹೋಗಿರ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಪಾಲಕರ ಕೈ ತಪ್ಪಿ ಮಗು ಕಳೆಯೋದಿದೆ. ಹೀಗೆ ನಾಪತ್ತೆಯಾದ ಎಷ್ಟೋ ಮಕ್ಕಳು ಹೆಣವಾಗಿ ಸಿಗ್ತಾರೆ ಇಲ್ಲವೆ ಪತ್ತೆ ಆಗೋದೇ ಇಲ್ಲ. ಇದೇ ಕಾರಣಕ್ಕೆ ಮಕ್ಕಳು ಕಾಣಿಸ್ತಿಲ್ಲ ಎಂಬುದು ತಿಳಿದ ತಕ್ಷಣ ಪಾಲಕರು, ಸಂಬಂಧಿಕರು, ಪೊಲೀಸರು ಕಾರ್ಯಪ್ರವೃತ್ತರಾಗ್ತಾರೆ. 

ಜನನಿಬಿಡ ಪ್ರದೇಶ, ಜಾತ್ರೆಯಂತ ಜಾಗದಲ್ಲಿ ಮಾತ್ರವಲ್ಲ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ನಲ್ಲಿ ಕೂಡ ಮಕ್ಕಳನ್ನು ಪತ್ತೆ ಮಾಡೋದು ದೊಡ್ಡ ಕೆಲಸ. ಮಕ್ಕಳು ದೊಡ್ಡವರಾಗಿದ್ದು, ತಿಳುವಳಿಕೆ ಬಂದಿದ್ದರೆ ಅವರಿಗೆ ಪಾಲಕರ ಫೋನ್ ನಂಬರ್, ಮನೆ ವಿಳಾಸ ತಿಳಿದಿರುತ್ತದೆ. ಅದೇ ಮಾತುಬಾರದ ಅಥವಾ ಅತಿ ಚಿಕ್ಕ ವಯಸ್ಸಿನ ಮಕ್ಕಳಾದ್ರೆ ಅವರನ್ನು ಪತ್ತೆ ಮಾಡೋದು ಬಹಳ ಕಷ್ಟ. ಆಟಿಸಂ ಕಾಯಿಲೆಯಿಂದ ಬಳಲುತ್ತಿತ್ತ ಮಕ್ಕಳು ಮತ್ತಷ್ಟು ಸವಾಲು. ಅವರಿಗೆ ತಮ್ಮ ಪಾಲಕರು, ಮನೆ ವಿಳಾಸವಷ್ಟೇ ಅಲ್ಲ ತಾವು ಯಾರು ಎಂಬುದೂ ಕೆಲವೊಮ್ಮೆ ತಿಳಿದಿರೋದಿಲ್ಲ. ಇಂಥ ಮಕ್ಕಳು ಕಳೆದಾಗ ಪೊಲೀಸರು ನಾನಾ ತಂತ್ರ ಬಳಸ್ತಾರೆ. ಚೀನಾದಲ್ಲಿ ಆಟಿಸಂನಿಂದ ಬಳಲುತ್ತಿದ್ದ ಮಗುವನ್ನು ಹುಡುಕಲು ಪೊಲೀಸರು ಭಿನ್ನ ತಂತ್ರ ಬಳಸಿದ್ದಾರೆ. ಅದು ಯಶಸ್ವಿಯಾಗಿದೆ.

ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಮದ್ವೆ ನಿಜನಾ? ನಟಿ ಹೇಳಿದ್ದೇನು?

ಲು ಎಂಬ ಈ ಮಗು ಮನೆಯಿಂದ ಕಾಣೆಯಾಗಿದ್ದ. ಆಗ್ನೇಯ ಚೀನಾ (China) ದ ಜಿಯಾಂಗ್ಕ್ಸಿ ಪ್ರಾಂತ್ಯದ ಪೊಲೀಸರಿಗೆ ಎಂಟು ವರ್ಷದ ಮಗುವಿನ ತಾಯಿ ಕರೆ ಮಾಡಿದ್ದರು. ಆಟಿಸಂ (Autism) ನಿಂದ ಬಳಲುತ್ತಿದ್ದ ಮಗು ಕಾಣೆಯಾಗಿದೆ ಎಂದು ಆಕೆ ಪೊಲೀಸ (Police) ರಿಗೆ ಹೇಳಿದ್ದಳು. 

ಝು ಜುವೋಜಾನ್ ಹೆಸರಿನ ಪೊಲೀಸ್ ಅಧಿಕಾರಿ ಮಗುವನ್ನು ಹುಡುಕಲು ಸ್ಥಳಕ್ಕೆ ಬಂದ್ರು. ಮಗು ಆಟಿಸಂ ಹಾಗೂ ಬುದ್ಧಿಮಾಂದ್ಯವಾಗಿರುವ ಕಾರಣ ನಾವು ಎಚ್ಚರಿಕೆಯಿಂದ ಹಾಗೂ ಚುರುಕಾಗಿ ಹುಡುಕಾಟ ನಡೆಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. 

ದುರದೃಷ್ಟವಶಾತ್ ಆ ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಲಿಫ್ಟ್‌ನಲ್ಲಿದ್ದ ಕ್ಯಾಮೆರಾಗಳು ಒಡೆದು ಹೋಗಿದ್ದವು.  ಹಾಗಾಗಿ ಮಗು ಹೊರಗೆ ಹೋಗಿದ್ದಾನೋ ಅಥವಾ ಒಳಗೆ ಇದ್ದಾನೋ ಎಂಬುದು ಗೊತ್ತಾಗಿರಲಿಲ್ಲ. ಮನೆಗೆ ಬಂದ ಮಗು ಟೆರೆಸ್ ಗೆ ಹೋಗಿರಬಹುದು ಎಂಬ ಅನುಮಾನ ಪೊಲೀಸರಿಗೆ ಬಂದಿತ್ತು. ಆಟಿಸಂಗೆ ಒಳಗಾಗಿದ್ದ ಮಗು ಯಾರಾದ್ರೂ ಕರೆದ್ರೆ ಪ್ರತಿಕ್ರಿಯೆ ನೀಡ್ತಿರಲಿಲ್ಲ. ಹಾಗಾಗಿ ಮಗುವನ್ನು ಬುದ್ಧಿವಂತಿಕೆಯಿಂದ ಪತ್ತೆ ಮಾಡಬೇಕಾಗಿತ್ತು. ಲುಗೆ ಪೆಪ್ಪಾ ಪಿಗ್ ವೀಕ್ಷಿಸೋದು ಬಹಳ ಇಷ್ಟ ಎಂಬುದು ಝು ತಾಯಿಯಿಂದ ತಿಳಿದ್ರು. ಹುಡುಗನ ಗಮನವನ್ನು ಸೆಳೆಯಲು ಕಟ್ಟಡದ ಮೇಲ್ಛಾವಣಿಯ ಮೇಲೆ ಕಾರ್ಟೂನ್‌ನ ಥೀಮ್ ಟ್ಯೂನ್ ಅನ್ನು ಪ್ಲೇ ಮಾಡಲು ಮುಂದಾದ್ರು. ಇಷ್ಟೆಲ್ಲ ಮಾಡುವಾಗ ಕತ್ತಲಾಗಲು ಶುರುವಾಗಿತ್ತು. ಲುವನ್ನು ಆದಷ್ಟು ಬೇಗ ಹುಡುಕಬೇಕಾಗಿತ್ತು. ಹಾಗಾಗಿ ಸ್ವಲ್ಪ ದೊಡ್ಡ ದ್ವನಿಯಲ್ಲಿ ಪೆಪಾ ಪಿಗ್ ಟ್ಯೂನ್ ಪ್ಲೇ ಮಾಡಲಾಯ್ತು. ಸ್ವಲ್ಪ ಸಮಯದಲ್ಲೇ ಲುವಿನ ಸಣ್ಣ ದನಿಯೊಂದು ಪೊಲೀಸರಿಗೆ ಕೇಳಿಸಿತು. 

ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ, 40 ಲಕ್ಷದಷ್ಟು ಭಾರೀ ಏರಿಕೆ!

ಲು ಒಬ್ಬಂಟಿಯಾಗಿ ಟೆರೆಸ್ ಗೆ ಹೋಗಿದ್ದ. ಮೆಟ್ಟಿಲುಗಳನ್ನು ಹತ್ತಿ ಸುತ್ತಲಿನ ಮೂರು ಮೀಟರ್ ಎತ್ತರದ ಗೋಡೆಯ ಹಿಂದೆ ಸಿಕ್ಕಿಬಿದ್ದಿದ್ದ. ಆತನ ದ್ವನಿ ಬರ್ತಿದ್ದ ಜಾಗಕ್ಕೆ ಪೊಲೀಸರು ಹೋದಾಗ ಅಲ್ಲಿ ಲು ಇರೋದು ಕಾಣಿಸಿದೆ. ಪೊಲೀಸರು ಎಚ್ಚರಿಕೆಯಿಂದ ಲುವನ್ನು ರಕ್ಷಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿಗೆ ಯಾವುದೇ ಹಾನಿ ಇಲ್ಲ ಎಂದು ತಿಳಿದುಬಂದಿದೆ.  

click me!