ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ, ನಟ ದರ್ಶನ್‌ಗೆ ರಾಜ್ಯ ಮಹಿಳಾ ಆಯೋಗ ನೋಟಿಸ್

By Suvarna News  |  First Published Mar 1, 2024, 12:14 PM IST

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದೆ. ಗೌಡತಿಯರ ಸೇನೆ ನೀಡಿದ್ದ ದೂರು ಆಧರಿಸಿ ಈ ನೋಟಿಸ್ ನೀಡಲಾಗಿದೆ.


ಬೆಂಗಳೂರು (ಮಾ.1): ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದೆ. ಗೌಡತಿಯರ ಸೇನೆ ನೀಡಿದ್ದ ದೂರು ಆಧರಿಸಿ ಈ ನೋಟಿಸ್ ನೀಡಲಾಗಿದೆ. ಒಂದು ವಾರದ ಒಳಗಾಗಿ ವಿವರಣೆ ನೀಡುವಂತೆ ದರ್ಶನ್‌ಗೆ ಆಯೋಗ ಸೂಚನೆ ನೀಡಿದೆ.  ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.   

ಶ್ರೀರಂಗಪಟ್ಟಣದಲ್ಲಿ 25ನೇ ವರ್ಷದ ವಾರ್ಷಿಕೋತ್ಸವದ  ಸಾರ್ವಜನಿಕ ಸಭೆಯಲ್ಲಿ ದರ್ಶನ್‌ ಮಹಿಳೆಯರ ಬಗ್ಗೆ  ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆಂದು ಗೌಡತಿಯರ ಸೇನೆ  ಆರೋಪಿಸಿತ್ತು. ಇದನ್ನ ಖಂಡಿಸಿ ಗೌಡತಿಯ ಸೇನೆ ಆಯೋಗಕ್ಕೆ ದೂರು ಸಲ್ಲಿಸಿತ್ತು.

Tap to resize

Latest Videos

ರೈತರಿಗಿಲ್ಲದ ನೀರು ಫಾರ್ಮ್ ಹೌಸ್‌ಗೆ, ಪಂಪ್‌ ಸೆಟ್‌ ಮೂಲಕ ಕಾವೇರಿ ನೀರು ಕದಿಯುತ್ತಿರುವ ಪ್ರಭಾವಿಗಳು!

ಸಾರ್ವಜನಿಕ ಸಭೆಯಲ್ಲಿ  ದರ್ಶನ್, ಇವತ್ತು ಇವಳಿರ್ತಾಳೆ.... ನಾಳೆ ಇನ್ನೊಬ್ಬಳು ಎಂದು ಹೇಳಿಕೆ ನೀಡಿದ್ದರು. ಇದು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಎಂದು  ಗೌಡತಿಯ ಸೇನೆ ದೂರು ನೀಡಿತ್ತು. ಗೌಡತಿಯರ ಸೇನೆ ದೂರಿಗೆ ಸಂಬಂಧಪಟ್ಟಂತೆ ದರ್ಶನ್‌ಗೆ ಆಯೋಗ ನೋಟೀಸ್ ನೀಡಿದೆ. ಪತ್ರ ತಲುಪಿದ ಒಂದು ವಾರದ ಒಳಗೆ ವಿವರಣೆ ನೀಡಬೇಕೆಂದು ಹೇಳಿದೆ.

click me!