ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಕ್ರಶ್ ಇರುವುದು ಕಾಮನ್. ದೊಡ್ಡವರಾಗುತ್ತಾ ಹೋದಂತೆ ಇದು ಬದಲಾಗುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ತನ್ನ ಹೈಸ್ಕೂಲ್ ಟೀಚರ್ ಮೇಲೆ ಅದೆಷ್ಟು ಕ್ರಶ್ ಇತ್ತು ಅಂದ್ರೆ ಸ್ಕೂಲ್ ಬಿಟ್ಟು 16 ವರ್ಷಗಳ ನಂತರ ಆ ಶಿಕ್ಷಕಿ ಜೊತೆಯೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಮ್ಮ ಶಿಕ್ಷಕರ ಮೇಲೆ ಪ್ರೀತಿ ಮೂಡುವುದು ಸಾಮಾನ್ಯ. ಹಲವಾರು ಬಾರಿ ಈ ಪ್ರೀತಿ ಸೀರಿಯಸ್ ಆಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವರೆಗೂ ಹೋಗುತ್ತದೆ. ಕೆಲ ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಮೇಲೆ ಈ ರೀತಿಯ ಭಾವನೆ ಇಟ್ಟುಕೊಳ್ಳುವುದು ತಪ್ಪೆಂದು ತಿಳಿ ಹೇಳುತ್ತಾರೆ. ಇನ್ನು ಕೆಲ ಶಿಕ್ಷಕರು ತಾವೇ ವಿದ್ಯಾರ್ಥನಿಯರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಟೀಚರ್-ಸ್ಟೂಡೆಂಟ್ ಲವ್ ಸ್ಟೋರಿಯ ಬಗ್ಗೆ ನಾವು ಈಗಾಗಲೇ ಹಲವಾರು ಬಾರಿ ಕೇಳಿದ್ದೇವೆ. ಶಾಲೆ, ಹೈಸ್ಕೂಲ್ ಮಟ್ಟದಲ್ಲಿದ್ದಾಗ ಮೂಡುವ ಈ ಪ್ರೀತಿ ಆ ನಂತರದ ದಿನಗಳಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಇಂಥಾ ಪ್ರೀತಿಯನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬಾಕೆ ಪ್ರೌಢಶಾಲೆಯಲ್ಲಿ ತೇರ್ಗಡೆಯಾದ 16 ವರ್ಷಗಳ ನಂತರ ಪ್ರೀತಿಸಿದ್ದ ತನ್ನ ಶಿಕ್ಷಕಿಯನ್ನೇ ಹುಡುಕಿಕೊಂಡು ಬಂದಿದ್ದಾಳೆ.
ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಮಾಜಿ ವಿದ್ಯಾರ್ಥಿನಿಯೊಬ್ಬಳು (Student) ಶಾಲೆಯಿಂದ ತೇರ್ಗಡೆಯಾದ 16 ವರ್ಷಗಳ ನಂತರ ತನ್ನ ಹಿಂದಿನ ನೆಚ್ಚಿನ ಪ್ರೌಢಶಾಲಾ ಶಿಕ್ಷಕಿಯೊಂದಿಗೆ (Teacher) ನಿಶ್ಚಿತಾರ್ಥ (Engagement) ಮಾಡಿಕೊಳ್ಳುವ ಮೂಲಕ ಈ ಕನಸಿನ ವ್ಯಾಮೋಹವನ್ನು ನಿಜವಾದ ಪ್ರೇಮಕಥೆಯಾಗಿ (Love story) ಪರಿವರ್ತಿಸಿದ್ದಾಳೆ.
ವಿಧಿಯೇ ಎಷ್ಟು ಕ್ರೂರ..ಕಾಲಿಲ್ಲದವನ ಬಾಳಿಗೆ ಕಣ್ಣಾದಳು, ಕೈ ಬಿಟ್ಟು ಹೊರಟೇ ಹೋದ!
ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಶಿಕ್ಷಕನನ್ನು ಪ್ರೀತಿಸಿದ್ದ ಮೋನಿಕಾ
31 ವರ್ಷದ ಮೋನಿಕಾ ಕೆಚುಮ್ ಅಮೆರಿಕದ ಮಿಚಿಗನ್ ನಿವಾಸಿ. ಹೈಸ್ಕೂಲ್‌ಗೆ ಕಲಿಯುತ್ತಿದ್ದ ಸಂದರ್ಭದಲ್ಲಿ ಆಕೆ ತನ್ನ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದಳು. ಶಾಲೆ ಬಿಟ್ಟು 16 ವರ್ಷಗಳ ನಂತರವೂ ಶಿಕ್ಷಕಿಯ ಕುರಿತಾಗಿ ಆಕೆಯ ಪ್ರೀತಿ (Love) ಹಾಗೆಯೇ ಇತ್ತು. ಹಾಗಾಗಿ ಮಿಚೆಲ್ ತನ್ನ ಮೆಚ್ಚಿನ ಶಿಕ್ಷಕಿಯನ್ನು ಹುಡುಕಲು ನಿರ್ಧರಿಸಿದಳು.
ಫೇಸ್‌ಬುಕ್‌ನಲ್ಲಿ ಮಿಚೆಲ್, 56 ವರ್ಷದ ತನ್ನ ನೆಚ್ಚಿನ ಶಿಕ್ಷಕಿ ಫೋಸ್ಟರ್‌ನನ್ನು ಹುಡುಕಾಡಲು ಆರಂಭಿಸಿದಳು. 2004ರಲ್ಲಿ ಫೋಸ್ಟರ್ ಮಿಚೆಲ್‌ಗೆ 13 ವರ್ಷವಿದ್ದಾಗ ಕೆಚಮ್ ಅವರ ವಿಜ್ಞಾನ ಶಿಕ್ಷಕಿಯಾಗಿದ್ದರು. ಹೈಸ್ಕೂಲ್ ಕಳೆದ ಬಳಿಕ ಮಿಚೆಲ್ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡರು. ಆ ನಂತರ ಉದ್ಯೋಗದಲ್ಲಿ (Work) ತೊಡಗಿಸಿಕೊಂಡರು. ಫೋರ್ಕ್‌ಲಿಫ್ಟ್ ಡ್ರೈವರ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಮೋನಿಕಾ, ಲಿಸ್ಬಿಯಿನ್ ಆಗಿರುವ ಕುಟುಂಬದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. 16 ವರ್ಷಗಳ ನಂತರ ಫೋಸ್ಟರ್‌ನ್ನು ಫೇಸ್‌ಬುಕ್‌ನಲ್ಲಿ ಮೀಟ್ ಆಗುವ ವರೆಗೆ ವಿದ್ಯಾರ್ಥಿ-ಶಿಕ್ಷಕಿಯರಿಗಿಂತ ಬೇರೆ ಯಾವುದೇ ಸಂಬಂಧವನ್ನು (Relationship) ಹೊಂದಿರಲಿಲ್ಲ ಎಂದು ಬಹಿರಂಗಪಡಿಸಿದರು.
Valentines Day: ಟ್ವಿಟರ್‌ನಲ್ಲಿ ಹುಟ್ಟಿಕೊಂಡ ಪತ್ರಕರ್ತೆಯ ಪ್ರೇಮಕಥೆ ವೈರಲ್
2021ರಲ್ಲಿ ಪರಸ್ಪರ ಭೇಟಿಯಾದ ಮಿಚೆಲ್ ಹಾಗೂ ಫೋಸ್ಟರ್
ಆಗಸ್ಟ್ 2021ರಲ್ಲಿ ಮಿಚೆಲ್ ಹಾಗೂ ಫೋಸ್ಟರ್ ಪರಸ್ಪರ ಭೇಟಿಯಾದರು. ಡಿನ್ನರ್ ಡೇಟ್ ನಂತರ ಇಬ್ಬರ ನಡುವೆ ಬಾಂಧವ್ಯ ಬೆಳೆಯಿತು. ಮತ್ತು ಶೀಘ್ರದಲ್ಲೇ ಆಪ್ತರಾದರು. 'ಇಬ್ಬರೂ ಹೆಚ್ಚು ಆಪ್ತತೆಯನ್ನು ಬೆಳೆಸಿಕೊಂಡೆವು, ನಾವಿಬ್ಬರೂ ಯಾವ ವಿಷಯವನ್ನಾದರೂ ಚರ್ಚಿಸಬಹುದು. ಇಬ್ಬರೂ ಪರಸ್ಪರ ಸುರಕ್ಷಿತ ಭಾವನೆಯನ್ನು ಅನುಭವಿಸುತ್ತೇವೆ' ಎಂದು ಮಿಚೆಲ್ ಹೇಳಿದ್ದಾರೆ.
ಮೋನಿಕಾ ಮತ್ತು ಮಿಚೆಲ್ ಅವರ ಸ್ನೇಹವು ಹತ್ತಿರವಾಗುತ್ತಿದ್ದಂತೆ, ಅವರು ಹಂಚಿಕೊಂಡದ್ದು ಪ್ರಣಯ ಸಂಬಂಧ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡರು. ಮಿಚೆಲ್ ನಂತರ ಫೋಸ್ಟರ್ ನನಗೆ ಹೇಗೆ ಪ್ರಪೋಸ್ ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು; ಮತ್ತು ನಂತರ 2022 ರಲ್ಲಿ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು.
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಪ್ರತಿಮೆಗಳಿಗೆ ಮದುವೆ ಮಾಡಿದ ಕುಟುಂಬಸ್ಥರು..!