ಅದೇನ್ ಚಟವೋ, ಯಾವ ಪೌಷ್ಟಿಕಾಂಶದ ಕೊರತೆಯೋ? ಡಬ್ಬ ಡಬ್ಬ ಜಾನ್ಸನ್ ಪೌಡರ್ ತಿಂತಾಳೆ ಇವಳು!

By Suvarna NewsFirst Published Dec 8, 2023, 2:50 PM IST
Highlights

ಮದ್ಯಪಾನ, ಧುಮಪಾನ ಚಟ ಸಾಮಾನ್ಯ. ನಮ್ಮಲ್ಲಿ ಇದಕ್ಕಿಂತ ಭಿನ್ನವಾದ ಚಟ ಹೊಂದಿರುವ ಜನರಿದ್ದಾರೆ. ಈ ಮಹಿಳೆ ಕೂಡ ಅದ್ರಲ್ಲಿ ಸೇರುತ್ತಾಳೆ. ಆಕೆ ತಿನ್ನೋ ವಸ್ತು ಮತ್ತೆ ಅದಕ್ಕೆ ಆಕೆ ಖರ್ಚು ಮಾಡುವ ಹಣ ಕೇಳಿದ್ರೆ ದಂಗಾಗ್ತಿರಿ.
 

ನಮಗೆಲ್ಲ ಹೊಟ್ಟೆ ತುಂಬಾ ಆಹಾರ ಬೇಕು. ಅನ್ನ, ಚಪಾತಿ, ರೊಟ್ಟಿ ಅಂತಾ ಮೂರು ಹೊತ್ತು ಆಹಾರ ಸೇವನೆ ಮಾಡ್ತೇವೆ. ನಮ್ಮ ಜಗತ್ತಿನಲ್ಲಿ ಕೆಲ ಜನರು ವಿಚಿತ್ರವಾಗಿದ್ದಾರೆ. ಬರೀ ನೀರು ಕುಡಿದು ಬದುಕಿರುವ ಜನರಿದ್ದಾರೆ. ಘನ ಆಹಾರ ತೆಗೆದುಕೊಳ್ಳದೆ ಜೀವಂತವಾಗಿರುವ ಜನರಿದ್ದಾರೆ. ಮತ್ತೆ ಕೆಲವರ ಆಹಾರ ಚಟ ಬಹಳ ಅಚ್ಚರಿ ಹುಟ್ಟಿಸುತ್ತದೆ. ಮಣ್ಣು ತಿನ್ನೋರು, ಚಾಕ್ ಪೀಸ್ ತಿನ್ನೋರು, ಹುಲ್ಲು ತಿನ್ನೋರು, ಕೂದಲು ತಿನ್ನುವವರ ಸುದ್ದಿಗಳು ಆಗಾಗ ಬರ್ತಿರುತ್ತವೆ. ಈಗ ಮಹಿಳೆಯೊಬ್ಬಳ ವಿಚಿತ್ರ ಚಟ ಚರ್ಚೆಯಲ್ಲಿದೆ. ಆಕೆ ಮಣ್ಣು ತಿನ್ನೋದಿಲ್ಲ ಬದಲಿಗೆ ಪೌಡರ್ ತಿನ್ನುತ್ತಾಳೆ. ಅಲ್ಪಸ್ವಲ್ಪ ಪೌಡರ್ ತಿನ್ನುವ ಹವ್ಯಾಸವೂ ಆಕೆಗಿಲ್ಲ. ಬರೋಬ್ಬರಿ ಒಂದು ಪೌಡರ್ ಡಬ್ಬವನ್ನೇ ಆಕೆ ಖಾಲಿ ಮಾಡ್ತಾಳೆ. ಅವಳ ವಿಚಿತ್ರ ಹವ್ಯಾಸದ ಬಗ್ಗೆ ಮಾಹಿತಿ ಇಲ್ಲಿದೆ.

ಜಾನ್ಸನ್ (Johnson) ಬೇಬಿ ಪೌಡರ್ ತಿನ್ನುತ್ತಾಳೆ ಈಕೆ : ಆಕೆ ಹೆಸರು ಡ್ರೆಕಾ ಮಾರ್ಟಿನ್. ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿ ಈಕೆ ವಾಸವಾಗಿದ್ದಾಳೆ. ಚಿಕ್ಕ ಮಕ್ಕಳಿಗೆ ಸ್ನಾನ ಆದ್ಮೇಲೆ ಜಾನ್ಸನ್  ಬೇಬಿ ಪೌಡರ್ ಹಾಕೋದನ್ನು ನೀವು ನೋಡಿರಬಹುದು. ಅದರ ಪರಿಮಳ ಸಾಮಾನ್ಯವಾಗಿ ಎಲ್ಲರನ್ನು ಸೆಳೆಯುತ್ತದೆ. ಆದ್ರೆ ಈ ಮಹಿಳೆ ತನ್ನ ಮಕ್ಕಳಿಗೆ ಜಾನ್ಸನ್ ಬೇಬಿ ಪೌಡರ್ (powder) ಹಾಕುವ ವೇಳೆ ಸ್ವಲ್ಪ ಪೌಡರನ್ನು ನೆಕ್ಕಿ ರುಚಿ ನೋಡ್ತಿದ್ದಳು. ನಂತ್ರ ಅದೇ ಆಕೆಗೆ ಚಟವಾಯ್ತು. ಈಗ ಪ್ರತಿ ದಿನ ಜಾನ್ಸನ್ ಬೇಬಿ ಪೌಡರ್ ತಿನ್ನುತ್ತಾಳೆ ಮಾರ್ಟಿನ್.  ಆಕೆ ಪ್ರಕಾರ, ಪ್ರತಿದಿನ 623 ಗ್ರಾಂ ಬಾಟಲ್ ಜಾನ್ಸನ್ ಅಲೋ ಮತ್ತು ವಿಟಮಿನ್ ಇ (vitamin e ) ಪುಡಿಯನ್ನು ಸೇವಿಸುತ್ತಾಳೆ. ಮಾರ್ಟಿನ್ ಬೇರೆ ಆಹಾರವಿಲ್ಲದೆ ದಿನವನ್ನು ಕಳೆಯುತ್ತಾಳೆ. ಆದ್ರೆ ಇದಿಲ್ಲದೆ ಆಕೆಗೆ ಇರಲು ಸಾಧ್ಯವಾಗೋದಿಲ್ಲ. ಇದು ಬಾಯಿಗೆ ಹೋಗ್ತಿದ್ದಂತೆ ಕರಗೋದ್ರಿಂದ ಪೌಡರ್ ತಿನ್ನೋದು ಮಾರ್ಟಿನ್ ಗೆ ಬಹಳ ಇಷ್ಟವಂತೆ.

Latest Videos

ಪೌಡರ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಮಾರ್ಟಿಗ್ ಗೆ ತಿಳಿದಿದೆ. ಆದ್ರೆ ಅದು ಈವರೆಗೆ ನನ್ನ ಆರೋಗ್ಯ ಹಾಳು ಮಾಡಿಲ್ಲ. ಈ ಚಟದಿಂದ ಹೊರಬರಲು ನಾನು ಪ್ರಯತ್ನಿಸಿದ್ದೇನೆ. ಆದ್ರೆ ಪೌಡರ್ ವಾಸನೆ ಹಾಗೂ ಅದರ ರುಚಿ ನೆನಪಾಗ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ನನ್ನ ಚಟ ನೋಡಿ ನನ್ನ ಮಕ್ಕಳೂ ಇದನ್ನು ಕಲಿತ್ರೆ ಎನ್ನುವ ಭಯವಿದೆ. ನಾನು ತಿನ್ನುವಾಗ ಮಕ್ಕಳು ಅದನ್ನು ಕೇಳುತ್ತಾರೆ ಎಂದು ಮಾರ್ಟಿನ್ ಹೇಳಿದ್ದಾಳೆ. 

ಆಹಾರ ಮತ್ತು ಪೌಡರ್ ನಲ್ಲಿ ಆಯ್ಕೆ ನೀಡಿದ್ರೆ ನಾನು ಪೌಡರ್ ಆಯ್ದುಕೊಳ್ಳುತ್ತೇನೆ ಎನ್ನುವ ಮಾರ್ಟಿನ್ ತನ್ನ ಕೊನೆ ಡಾಲರನ್ನು ಅದಕ್ಕೆ ಖರ್ಚು ಮಾಡಲು ಬಯಸುತ್ತಾಳೆ. ಚಟ ಶುರುವಾಗಿ ಎರಡು ತಿಂಗಳು ತಾಯಿಯಿಂದ ಇದನ್ನು ಮಾರ್ಟಿನ್ ಮುಚ್ಚಿಟ್ಟಿದ್ದಳು. ಪೌಡರ್ ಅಷ್ಟು ವೇಗವಾಗಿ ಖರ್ಚಾಗಲು ಹೇಗೆ ಸಾಧ್ಯ ಎಂದು ತಾಯಿ ಕೇಳಿದ್ದರು. ಸಾಮಾನ್ಯವಾಗಿ ಎರಡು ತಿಂಗಳು ಬರುತ್ತಿದ್ದ ಪೌಡರ್ ಒಂದೇ ವಾರದಲ್ಲಿ ಖರ್ಚಾಗೋದನ್ನು ನೋಡಿ ತಾಯಿ ಈ ಪ್ರಶ್ನೆ ಕೇಳಿದ್ದರು. 

ಸೋಡಾ ಕುಡಿಯೋಕೆ ಹೋದವಳು 83 ಲಕ್ಷ ರೂಪಾಯಿ ಗೆದ್ಲು!

ಪೌಡರ್ ಗೆ ಇಷ್ಟು ಖರ್ಚು ಮಾಡ್ತಾಳೆ ಮಾರ್ಟಿನ್ : ಮಾರ್ಟಿನ್ ಗರ್ಭಾವಸ್ಥೆಯಲ್ಲಿದ್ದಾಗ ಡ್ರಗ್ಸ್ ಸೇವನೆ ಮಾಡ್ತಿರಲಿಲ್ಲವಂತೆ. ಹೆರಿಗೆ ಆದ್ಮೇಲೆ ಪೌಡರ್ ಸೇವನೆ ಚಟವಾಗಿದೆ ಎನ್ನುತ್ತಾಳೆ. ಈ ಪೌಡರ್ ಗೆ ಆಕೆ ಬಹಳ ಹಣ ಖರ್ಚು ಮಾಡ್ತಿದ್ದಾಳೆ. ಪ್ರತಿದಿನ ಪೌಡರ್ ಬಾಟಲಿಗೆ  14 ಡಾಲರ್ ಖರ್ಚು ಮಾಡುತ್ತಾಳೆ. ಈ ವರ್ಷ ಮಾರ್ಟಿನ್, ಪೌಡರ್ ಖರೀದಿ ಮಾಡಲು 4000 ಡಾಲರ್ ಅಂದರೆ 3.33 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಹೇಳೋದೇನು? : ಮಾರ್ಟಿನ್ ಸುದ್ದಿ ವೈರಲ್ ಆಗ್ತಿದ್ದಂತೆ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಪ್ರತಿಕ್ರಿಯೆ ನೀಡಿದೆ. ಇದು ಮಕ್ಕಳ ಚರ್ಮಕ್ಕೆ ಬಳಸುವ ಪೌಡರ್. ಇದನ್ನು ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ಎಚ್ಚರಿಕೆ ನೀಡಿದೆ. 

ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ SAIL ಮಾಜಿ ಮುಖ್ಯಸ್ಥೆ;ಈಕೆ ಸಾಧನೆ ಹಲವರಿಗೆ ಸ್ಫೂರ್ತಿ

click me!