ಗೃಹಿಣಿ ಕೆಲಸ ಸುಲಭವಲ್ಲ; ವಿದೇಶದಲ್ಲೂ ಶುರುವಾಗಿದೆ ಟ್ರೆಂಡ್!

Published : Feb 08, 2024, 05:54 PM IST
ಗೃಹಿಣಿ ಕೆಲಸ ಸುಲಭವಲ್ಲ; ವಿದೇಶದಲ್ಲೂ ಶುರುವಾಗಿದೆ ಟ್ರೆಂಡ್!

ಸಾರಾಂಶ

ಕೆಲ ದೇಶಗಳ ಪದ್ಧತಿ ಭಿನ್ನವಾಗಿದೆ. ಅಲ್ಲಿ ನಮ್ಮ ದೇಶದಂತೆ ಮಹಿಳೆಯರು ಮನೆ ಕೆಲಸ ಮಾಡಿಕೊಂಡು ಮನೆಯಲ್ಲಿದ್ದರೆ ವಿಚಿತ್ರವಾಗಿ ನೋಡ್ತಾರೆ. ವೃತ್ತಿ ಬಿಟ್ಟು ಇಂಥ ಕೆಲಸ ಆಯ್ದುಕೊಂಡರೆ ಜನರ ದೃಷ್ಟಿಯೇ ಬದಲಾಗುತ್ತೆ. ಆದ್ರೂ ಅಲ್ಲಿನ ಜನ ಚೇಂಜ್ ಆಗ್ತಿದ್ದಾರೆ.

ಮದುವೆ ಆದ್ಮೇಲೆ ಗಂಡ – ಮಕ್ಕಳ ಜವಾಬ್ದಾರಿ ಹೊರುವ ಭಾರತೀಯ ಮಹಿಳೆಯರು ಗೃಹಿಣಿಯರಾಗ್ತಾರೆ. ಇಡೀ ದಿನ ಮನೆ ಸ್ವಚ್ಛತೆ, ಅಡುಗೆ, ಮಕ್ಕಳ ಆರೈಕೆ, ಪತಿಯ ಕೆಲಸದಲ್ಲಿ ಅವರು ನಿರತರಾಗಿರುತ್ತಾರೆ. ವಾರದ ಎಲ್ಲ ದಿನ ಅವರಿಗೆ ಕೆಲಸವಿರುತ್ತೆ. ಒಳ್ಳೆ ವಿದ್ಯೆಪಡೆದು, ಹಿಂದೆ ಕೆಲಸಕ್ಕೆ ಹೋಗ್ತಿದ್ದ ಕೆಲ ಹುಡುಗಿಯರು ಕೂಡ ಮದುವೆ ಆಗ್ತಿದ್ದಂತೆ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ. ಮನೆಯನ್ನು ನೋಡಿಕೊಳ್ಳೋದು ಅವರಿಗೆ ಅತಿ ಮುಖ್ಯ ಹಾಗೂ ಅವಶ್ಯಕ ಕೆಲಸವಾಗುತ್ತದೆ. ಭಾರತದಲ್ಲಿ ವಿದ್ಯಾವಂತ ಮಹಿಳೆಯರು ಮನೆಯಲ್ಲಿರೋದು ಸಾಮಾನ್ಯ ಸಂಗತಿ. ಕೆಲ ಮಹಿಳೆಯರಿಗೆ ಇದು ಮುಜುಗರ ಎನ್ನಿಸುವುದಿದೆ. ಆದ್ರೆ ಅನಿವಾರ್ಯ ಕಾರಣಕ್ಕೆ ಅವರು ಕೆಲಸ ಬಿಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರು ಓದಿಗೆ ತಕ್ಕಂತೆ ಕೆಲಸ ಪಡೆದು, ಎಷ್ಟೇ ಕಷ್ಟವೆನ್ನಿಸಿದ್ರೂ ವೃತ್ತಿಗೆ ಗುಡ್ ಬೈ ಹೇಳದೆ, ಎರಡನ್ನೂ ನಿಭಾಯಿಸುತ್ತಾರೆ. ಮತ್ತೆ ಕೆಲವರು ಮನೆಯಲ್ಲಿದ್ದು, ವ್ಯಾಪಾರ ಅಥವಾ ಸಣ್ಣಪುಟ್ಟ ಕೆಲಸ ಮಾಡ್ತಾ ಎಲ್ಲವನ್ನು, ಎಲ್ಲರನ್ನು ನೋಡಿಕೊಳ್ತಾರೆ.

ವಿದೇಶ (Abroad) ದ ಸಂಸ್ಕೃತಿ ಬಹಳ ಭಿನ್ನವಾಗಿದೆ. ಅಲ್ಲಿ ಬಹುತೇಕ ಎಲ್ಲ ಮಹಿಳೆಯರು ವಿದ್ಯೆ ಕಲಿಯೋದು ಮಾತ್ರವಲ್ಲದೆ ಕೆಲಸಕ್ಕೆ ಹೋಗ್ತಾರೆ. ಪತಿ – ಪತ್ನಿ ಇಬ್ಬರು ದುಡಿಯೋದು ಅಗತ್ಯ ಎಂದು ಅವರು ಭಾವಿಸ್ತಾರೆ. ಒಳ್ಳೆ ಕೆಲಸದಲ್ಲಿರುವ ಮಹಿಳೆಯರು, ಕುಟುಂಬಕ್ಕಾಗಿ ವೃತ್ತಿ (Career) ಜೀವನ ತ್ಯಾಗ ಮಾಡೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವರೆಲ್ಲರಿಗಿಂತ ಭಿನ್ನವಾಗಿರುವ, ಭಾರತೀಯ ಪದ್ಧತಿಯನ್ನು ಅಳವಡಿಸಿಕೊಂಡಿರುವ ಮಹಿಳೆಯೊಬ್ಬಳು ಗಮನ ಸೆಳೆದಿದ್ದಾಳೆ.

ನಾಲ್ಕು ವರ್ಷ ಪತಿ ಶವದ ಜೊತೆ ಮಲಗಿದ ಪತ್ನಿ!

ಆಕೆ ಹೆಸರು ಬೆಲ್ಲೆ. 25 ವರ್ಷ ವಯಸ್ಸು. ಬೆಲ್ಲ ಅವಿದ್ಯಾವಂತೆ ಅಲ್ಲ. ಬೆಲ್ಲ ಮೊದಲು ಒಳ್ಳೆ ಕೆಲಸದಲ್ಲಿದ್ದಳು. ನಂತ್ರ ಬೆಲ್ಲೆ, ಜಕಾರಿಯನ್ನು ಮದುವೆ ಆಗಿದ್ದಾಳೆ. ಆತನಿಗೆ 32  ವರ್ಷ ವಯಸ್ಸು. ಇಬ್ಬರಿಗೂ ಮುದ್ದಾದ ಒಂದು ಮಗುವಿದೆ. ಅದಕ್ಕೆ ಆರು ವರ್ಷ. ಬೆಲ್ಲೆ, ಮಗು ಹುಟ್ಟಿದ ಮೇಲೆ ಕೆಲಸಕ್ಕೆ ಹೋಗೋದನ್ನು ಬಿಟ್ಟಿದ್ದಾಳೆ. ಆಕೆ ಮನೆಯಲ್ಲಿ ಪಾತ್ರೆ ತೊಳೆಯುವುದು, ಮನೆ ಕ್ಲೀನಿಂಗ್, ಮಗುವಿನ ಆರೈಕೆ ಜೊತೆ ಗಂಡನಿಗೆ ಅಗತ್ಯವಿರುವ ಸಹಾಯ ಮಾಡುತ್ತಾಳೆ. ಗಂಡ ಕೆಲಸಕ್ಕೆ ಹೋದ ನಂತ್ರ ಮನೆಯ ಸಂಪೂರ್ಣ ಜವಾಬ್ದಾರಿ ನನ್ನದಾಗಿರುತ್ತದೆ ಎಂದು ಬೆಲ್ಲೆ ಹೇಳ್ತಾಳೆ. 

ಬರೋಬ್ಬರಿ 7000 ಕೋಟಿ ಮೌಲ್ಯದ ಸಂಸ್ಥೆ ಸ್ಥಾಪಿಸಿ, ತನ್ನದೇ ಕಂಪನಿಯಿಂದ ವಜಾಗೊಂಡ ಮಹಿಳೆ!

ಬೆಲ್ಲೆ ಸಾಂಪ್ರದಾಯಿಕ ಮಹಿಳೆ ಆಗಿದ್ದಾಳೆ. ಆಕೆಗೆ ಮನೆ ಕೆಲಸ ಹಾಗೂ ಪತಿಯ ಸೇವೆ ಮಾಡುವುದು ಬಹಳ ಖುಷಿ ನೀಡುತ್ತಿದೆ. ಬೆಲ್ಲೆ ಮೊದಲು ಸ್ವಾವಲಂಭಿಯಾಗಿದ್ದಳು. ತನ್ನದೇ ಆದ ಕನಸನ್ನು ಹೊಂದಿದ್ದಳು. ಅದನ್ನು ಈಡೇರಿಸುವ ಪ್ರಯತ್ನದಲ್ಲಿದ್ದಳು. ಆದ್ರೆ ಜಕಾರಿ ಮದುವೆ ಆದ್ಮೇಲೆ ಆಕೆಯ ಮನಸ್ಸು ಬದಲಾಯಿತು. ಕೆಲಸಕ್ಕೆ ಹೋಗೋದನ್ನು ಬೆಲ್ಲೆ ಸಂಪೂರ್ಣ ನಿಲ್ಲಿಸಿದಳು. ತನ್ನ ಕನಸನ್ನು ಕಟ್ಟಿ ಮೂಲೆಯಲ್ಲಿಟ್ಟಳು. ಇಡೀ ದಿನ ತನ್ನ ಕುಟುಂಬಕ್ಕಾಗಿ ಕೆಲಸ ಮಾಡುತ್ತಾಳೆ. ಹಿಂದೆ ಕಚೇರಿಗೆ ಹೋಗಿ ಮಾಡ್ತಿದ್ದ ಕೆಲಸಕ್ಕಿಂತ ಇದು ನೆಮ್ಮದಿ ನೀಡಿದೆ. ಇದ್ರಲ್ಲಿ ಖುಷಿ ಇದೆ ಎಂದು ಬೆಲ್ಲೆ ಹೇಳುತ್ತಾಳೆ. 

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಬೆಲ್ಲೆ, ಯಾವ ದಿನ ಯಾವ ಕೆಲಸ ಮಾಡುತ್ತಾಳೆ ಎಂಬುದನ್ನು ಅದ್ರಲ್ಲಿ ಹೇಳಿದ್ದಾಳೆ. ಈ ವಿಡಿಯೋಕ್ಕೆ ಜನರು ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬೆಲ್ಲೆಯನ್ನು ಪತಿಯ ಗುಲಾಮ ಎಂದು ಕರೆದಿದ್ದಾರೆ. ಮತ್ತೆ ಕೆಲವರು, ಜೀವನ ಪರ್ಯಂತ ಇಂಥ ಕೆಲಸವನ್ನು ಹೇಗೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಬಳಕೆದಾರರಲ್ಲಿ ಅನೇಕರು ಬೆಲ್ಲೆ ಕೆಲಸವನ್ನು ಮೆಚ್ಚಿಕೊಂಡಿದ್ದಲ್ಲದೆ ಇದು ನಿಮ್ಮ ಜೀವನ, ನಿಮ್ಮ ಆಯ್ಕೆ ಎಂದಿದ್ದಾರೆ. ಮನೆ ಕೆಲಸ ಮಾಡಿಕೊಂಡಿರುವ ಮಹಿಳೆಯರ ಸಂಖ್ಯೆ ವಿದೇಶದಲ್ಲಿ ಇತ್ತೀಚಿಗೆ ಹೆಚ್ಚಿಗೆ ಆಗ್ತಿದೆ. ಕೆಲ ಮಹಿಳೆಯರು ಈ ಕೆಲಸಕ್ಕೆ ಪತಿಯಿಂದ ಹಣ ಪಡೆಯುತ್ತಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!