ಸುಂದರ ಹುಡುಗಿ ಮುಂದೆ ಬಂದಾಗ ಸಣ್ಣಗೆ ಬೆವರ್ತಾರೆ ಹುಡುಗ್ರು. ಆಕೆ ಪ್ರೀತಿಯಿಂದ ಏನಾದ್ರೂ ಕೇಳಿ ಬಿಟ್ರೆ ಮುಗಿದೆ ಹೋಯ್ತು. ಜೇಬಿನಲ್ಲಿ ಹಣ ಇಲ್ಲ ಅಂದ್ರೂ ಸಾಲಮಾಡಿ ಕೊಡಿಸುವ ಹುಡುಗ್ರ ವೀಕ್ನೆಸ್ ಈಕೆಗೆ ಗೊತ್ತು.
ಜಗತ್ತಿನಲ್ಲಿ ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇರುತ್ತೆ. ಕೆಲವರು ಸದಾ ಮೌನವಾಗಿರ್ತಾರೆ. ಯಾರ ಜೊತೆಯಲ್ಲಿ ಬೆರೆಯೋದಿಲ್ಲ. ಇನ್ನೊಬ್ಬರ ಜೊತೆ ಸಲುಗೆ ಬೆಳೆಯಲು ಅವರಿಗೆ ತುಂಬಾ ಸಮಯದ ಅವಶ್ಯಕತೆ ಇರುತ್ತದೆ. ಅಪರಿಚಿತರ ಜೊತೆ ಬೆರೆಯೋದಿರಲಿ, ಮಾತನಾಡಲೂ ಅವರು ಹಿಂಜರಿಯುತ್ತಾರೆ. ಮತ್ತೆ ಕೆಲವರು ಅತಿಯಾಗಿ ಮಾತನಾಡುತ್ತಾರೆ. ಅವರಿಗೆ ಯಾವುದರ ಚಿಂತೆ ಇರೋದಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಕೆಲವೇ ನಿಮಿಷದಲ್ಲಿ ಎಲ್ಲರನ್ನು ಆಕರ್ಷಿಸುವ ಅವರು, ಎಲ್ಲರ ಅಚ್ಚುಮೆಚ್ಚಾಗುತ್ತಾರೆ. ಸ್ನೇಹಿತರ ಗುಂಪಿನಲ್ಲಿ ಅವರಿಲ್ಲ ಎಂದಾಗ ಅಲ್ಲೊಂದು ಮೌನವಿರುತ್ತದೆ. ಅದೇ ಅವರಿದ್ದಾಗ ತಮಾಷೆ, ಗಲಾಟೆ, ನಗು ತುಂಬಿರುತ್ತದೆ. ಎಷ್ಟೇ ಸೋಶಿಯಲ್ ಆಗಿದ್ದರು ಸ್ನೇಹಿತರ ಬಳಿ ವಸ್ತುಗಳ ಬೇಡಿಕೆ ಇಡೋದು ಕಷ್ಟ. ನಮಗಾಗಿ ಬೇರೆಯವರ ಹಣ ಖರ್ಚು ಮಾಡಿಸಲು ಎಲ್ಲರೂ ಮನಸ್ಸು ಮಾಡೋದಿಲ್ಲ. ಹಾಗಿರುವಾಗ ಅಪರಿಚಿತರಿಗೆ ಡಿಮ್ಯಾಂಡ್ ಮಾಡಲು ಸಾಧ್ಯವೇ ಇಲ್ಲ. ಅಪರಿಚಿತರ ಬಳಿ ಹೋಗಿ ನನಗೆ ಆ ವಸ್ತು ಕೊಡಿಸಿ, ನನಗೆ ಇದನ್ನು ನೀಡಿ ಅಂತ ಕೇಳೋದೆ ಕಷ್ಟ. ಕೇಳಿದ ಮೇಲೆ ಅವರು ನಮ್ಮ ಜೊತೆ ಹೇಗೆ ವರ್ತಿಸಬಹುದು ಎಂಬ ಭಯ ಇದ್ದೇ ಇರುತ್ತದೆ. ಮಹಿಳೆಯರು ಈ ಕೆಲಸ ಮಾಡಲು ಹೆದರುತ್ತಾರೆ. ಆದ್ರೆ ಈ ಯುವತಿ ಹಾಗಲ್ಲ. ಆಕೆ ಅತೀ ಬಿಂದಾಸ್. ಮುಂದಿರೋರು ಯಾರು ಎಂಬುದು ಆಕೆಗೆ ಬೇಕಾಗಿಲ್ಲ. ತನಗೆ ಏನು ಬೇಕು ಎಂಬುದನ್ನು ಅವರಿಗೆ ಹೇಳಿ ಪಡೆಯುತ್ತಾಳೆ.
ಚೆಂದದ ಹುಡುಗಿಯೊಬ್ಬಳು ಎದುರಿಗೆ ಬಂದು ಅದನ್ನು ಕೊಡಿಸ್ತೀರಾ ಅಂತಾ ನಿಮ್ಮನ್ನು ಕೇಳಿದ್ರೆ ನೀವು ನೋ ಅನ್ನೋಕೆ ಚಾನ್ಸೆ ಇಲ್ಲ. ಇದನ್ನೇ ಕೆರೊಲಿನಾ ಗೀಟ್ಸ್ ಬಂಡವಾಳ ಮಾಡಿಕೊಂಡಿದ್ದಾಳೆ. 29 ವರ್ಷದ ಕೆರೊಲಿನಾ ಅಪರಿಚಿತ (Stranger) ರ ಜೊತೆ ಹೋಗಲೂ ಭಯಪಡೋದಿಲ್ಲ.
ಹಾಲಿನ ಪ್ಯಾಕೆಟ್‌ಗಳಿಂದ ಬ್ಯಾಗ್, ವಾರ್ಡ್ರೋಬ್ ತಯಾರಿಸೋ ಲೀಲಮ್ಮ; ಕಸದಿಂದ ರಸ ತೆಗೆವ ಕಲೆ
ಕೆಲ ದಿನಗಳ ಹಿಂದೆ ಯಾರಾದರೂ ನನ್ನನ್ನು ಮಿಯಾಮಿಗೆ ಕರೆದುಕೊಂಡು ಹೋಗ್ತೀರಾ ಎಂಬ ಬೋರ್ಡ್ (Board) ಹಿಡಿದು ನಿಂತಿದ್ದಳು. ಇದನ್ನು ನೋಡಿದ ವ್ಯಕ್ತಿಯೊಬ್ಬ ಕೆರೊಲಿನಾ ಗೀಟ್ಸ್ ಳನ್ನು ಖಾಸಗಿ ಜೆಟ್ (Jet)ನಲ್ಲಿ ಮಿಯಾಮಿಗೆ ಕರೆದುಕೊಂಡು ಹೋಗಿದ್ದ. ಆತನ ಜೊತೆ ಯಾವುದೇ ಭಯ, ಮುಜುಗರವಿಲ್ಲದೆ ಹೋದ ಕೆರೊಲಿನಾ ಗೀಟ್ಸ್, ಆತ ಸದಾ ನನ್ನ ಸ್ನೇಹಿತನಾಗಿ ಇರ್ತಾನೆ ಎಂದಿದ್ದಾಳೆ.
ಮಿಯಾಮಿಗೆ ಹೋದ್ಮೇಲೆ ಇನ್ನೊಬ್ಬನ ಬಳಿ ಹೊಟೇಲ್ ಬುಕ್ ಮಾಡಿಕೊಡುವಂತೆ ಕೇಳಿದ್ದಾಳೆ. ಅಪರಿಚತ ವ್ಯಕ್ತಿ ಒಂದು ರಾತ್ರಿಗೆ 50 ಸಾವಿರ ರೂಪಾಯಿಯಂತೆ ಎರಡು ದಿನಕ್ಕೆ ಹೊಟೇಲ್ ಬುಕ್ ಮಾಡಿ ನೀಡಿದ್ದಾನೆ. ಸುಂದರ ಹುಡುಗಿ ಕೇಳಿದ್ರೆ ಅದನ್ನು ಮಾಡದಿರಲು ಸಾಧ್ಯವಿಲ್ಲ ಎಂದು ಆ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾನೆ.
ಕೆರೊಲಿನಾ ಗೀಟ್ಸ್ ಬೇಡಿಕೆ ಇಲ್ಲಿಗೆ ನಿಂತಿಲ್ಲ. ಆಕೆ ಹೋದಲ್ಲೆಲ್ಲ ಇಂಥ ಡಿಮ್ಯಾಂಡ್ ಇಡ್ತಾನೆ ಇರ್ತಾಳೆ. ಅಪರಿಚಿತರ ಜೊತೆ ಭರ್ಜರಿ ಶಾಪಿಂಗ್ (Shopping) ಕೂಡ ಮಾಡ್ತಾಳೆ. ಈವರೆಗೆ ಕೆರೊಲಿನಾ ಗೀಟ್ಸ್, ಅಪರಿಚಿತರಿಂದ 82 ಸಾವಿರ ರೂಪಾಯಿ ಚಿನ್ನಾಭರಣ ಸೇರಿದಂತೆ 4 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಪಡೆದಿದ್ದಾಳೆ.
ಬಿಎಂಟಿಸಿ ಬಸ್ ಮೊದಲ ಚಾಲಕಿ ಪ್ರೇಮಾ ಬದುಕಿನ ಕಥೆ ಗೊತ್ತಾ?
ಮದುವೆಯಾಗುವವನಿಗಾಗಿ ಹುಡುಕಾಟ ನಡೆಸುತ್ತಿರುವ ಕೆರೊಲಿನಾ ಗೀಟ್ಸ್ : ಕಳೆದ ಮೂರು ವರ್ಷಗಳಿಂದ ಕೆರೊಲಿನಾ ಗೀಟ್ಸ್ ಮದುವೆಯಾಗಲು ವರನ ಹುಡುಕಾಟ ನಡೆಸುತ್ತಿದ್ದಾಳೆ. ಇದೇ ಕಾರಣಕ್ಕೆ ಅನೇಕ ಅಪರಿಚಿತರನ್ನು ಆಕೆ ಭೇಟಿಯಾಗ್ತಿದ್ದಾಳೆ. ಆದ್ರೆ ಈವರೆಗೂ ಆಕೆಗೆ ಇಷ್ಟವಾದ ವ್ಯಕ್ತಿ ಸಿಕ್ಕಿಲ್ಲ. ವಿವಿಧ ಜನರನ್ನು ಭೇಟಿಯಾಗಿ ಅವರ ಮುಂದೆ ಬೇಡಿಕೆ ಇಡುವ ಕೆರೊಲಿನಾ ಗೀಟ್ಸ್, ನಾನು ಮಹಿಳೆ. ನಾನು ಪುರುಷರ ಮುಂದೆ ಏನು ಬೇಕಾದ್ರೂ ಕೇಳಬಹುದು. ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪುರುಷರದ್ದು ಎನ್ನುತ್ತಾಳೆ ಕೆರೊಲಿನಾ ಗೀಟ್ಸ್.