ಹಾಲಿನ ಪ್ಯಾಕೆಟ್‌ಗಳಿಂದ ಬ್ಯಾಗ್, ವಾರ್ಡ್ರೋಬ್ ತಯಾರಿಸೋ ಲೀಲಮ್ಮ; ಕಸದಿಂದ ರಸ ತೆಗೆವ ಕಲೆ
ಪ್ಯಾಸ್ಟಿಕ್ ವಸ್ತುಗಳನ್ನು ಹೇಗೆಲ್ಲ ಅಪ್‌ಸೈಕಲ್ ಮಾಡಬಹುದು ಅನ್ನೋದನ್ನು ಈ 67 ವರ್ಷದ ಮಹಿಳೆ ನೋಡಿ ಕಲಿಯಬೇಕು. ನಾವು ಪ್ರತಿಯೊಬ್ಬರೂ ಲೀಲಮ್ಮನಂತೆ ಯೋಚಿಸಿದರೆ, ಭೂಮಿ ಖಂಡಿತಾ ನಮ್ಮ ಬಗ್ಗೆ ಯೋಚಿಸಲಾರಂಭಿಸುತ್ತದೆ.
ಮೂರು ವರ್ಷಗಳ ಹಿಂದಿನವರೆಗೂ ಕೇರಳದ ಅಡೂರಿನ ನಿವಾಸಿ ಲೀಲಮ್ಮ ಮ್ಯಾಥ್ಯೂ ಅವರು ಬಳಸಿದ ಹಾಲಿನ ಪ್ಯಾಕೆಟ್‌ಗಳನ್ನು ಇತರ ಮನೆಯವರಂತೆ ಎಸೆಯುತ್ತಿದ್ದರು ಅಥವಾ ಸುಡುತ್ತಿದ್ದರು. ಆದರೆ ಒಂದು ಸಂದರ್ಭದಲ್ಲಿ, ನೆರೆಯಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳು ಅವರ ಬಳಿ ಮಾತಾಡುವಾಗ ಪ್ಲಾಸ್ಟಿಕ್ ಅನ್ನು ಸುಡುವುದು ಪರಿಸರಕ್ಕೆ ಎಷ್ಟು ಕೆಟ್ಟದು ಎಂಬುದನ್ನು ವಿವರಿಸಿದಳು. ಅಂದಿನಿಂದ ಲೀಲಮ್ಮ ಪ್ಲ್ಯಾಸ್ಟಿಕ್‌ಗಳನ್ನು ಹೊಸ ಹೊಸ ವಿಧಾನದಲ್ಲಿ ಅಪ್‌ಸೈಕಲ್ ಮಾಡುತ್ತಾರೆ.
ಪ್ಲ್ಯಾಸ್ಟಿಕ್ ಸುಡುವುದರಿಂದ ಅದು ಕಣ್ಣಿಗೆ ಕಾಣದಿರಬಹುದು. ಆದರೆ, ಇದು ಆರೋಗ್ಯ, ಪರಿಸರ ಮತ್ತು ಹೆಚ್ಚಿನದರ ಮೇಲೆ ಪರಿಣಾಮ ಬೀರುವ ವಿಷಕಾರಿ ಅನಿಲವಾಗಿ ಪರಿವರ್ತಿತವಾಗುತ್ತದೆ. ಈ ವಿಷಯ ತಿಳಿದ ಬಳಿಕ ಲೀಲಮ್ಮ, ಪತ್ರಿಕೆಗಳಲ್ಲಿ ರಾಷ್ಟ್ರದ ಪ್ಲಾಸ್ಟಿಕ್ ಹೊರೆಯ ಬಗ್ಗೆ ಹೆಚ್ಚು ಓದಲು ಪ್ರಾರಂಭಿಸಿದರು. ನಂತರದಲ್ಲಿ ತಮ್ಮ ಮನೆಯ ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ಬಳಸಲು ಇನ್ನೊಂದು ಮಾರ್ಗವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಮತ್ತು ಹಾಲಿನ ಪ್ಯಾಕೆಟ್‌ಗಳಿಂದ ಅಲಂಕಾರಿಕ ವಸ್ತುಗಳು ಮತ್ತು ಪೀಠೋಪಕರಣಗಳು, ಬ್ಯಾಗ್‌ಗಳು, ಪರ್ಸ್‌ಗಳು ಮತ್ತು ಹೆಚ್ಚಿನವುಗಳಂತಹ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾರಂಭಿಸಿದರು.
ಪ್ರತಿ ದಿನ ಪುಷ್-ಅಪ್ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಈ ಬದಲಾವಣೆ ಕಾಣ್ಬೋದು..
67 ವರ್ಷ ವಯಸ್ಸಿನ ಲೀಲಮ್ಮ ಹಾಲಿನ ಪ್ಯಾಕೆಟ್‌ಗಳನ್ನು ಸಂಗ್ರಹಿಸಲು ತಮ್ಮ ನೆರೆಹೊರೆಯ ಸುತ್ತಲೂ ಹೋಗುತ್ತಾರೆ ಮತ್ತು ಅವುಗಳನ್ನು ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಮತ್ತು ಹೆಚ್ಚಿನವುಗಳಾಗಿ ಮರುಬಳಕೆ ಮಾಡುತ್ತಾರೆ.
ತಿರಸ್ಕರಿಸುವ ಮತ್ತು ತ್ಯಾಜ್ಯ ವಸ್ತುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವ ಮೂಲಕ, ಅವರು ತನ್ನ ಪ್ರದೇಶದಲ್ಲಿ ಒಂದು ಪ್ಯಾಕೆಟ್ ಅನ್ನು ಸಹ ಎಸೆಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ದೂರದಲ್ಲಿರುವ ಸ್ನೇಹಿತರಿಂದಲೂ ಪ್ಯಾಕೆಟ್‌ಗಳನ್ನು ಸ್ವೀಕರಿಸುತ್ತಾರೆ, ಅವರು ಆಕೆಗೆ ಒಂದು ತಿಂಗಳ ಸಂಗ್ರಹವನ್ನು ಕಳುಹಿಸುತ್ತಾರೆ.
ಲೀಲಮ್ಮ ಅವರು ಯಾವಾಗಲೂ ಕೈಯಿಂದ ಸಣ್ಣ ವಸ್ತುಗಳ ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದ್ದರಿಂದ ತನ್ನ ಸೃಜನಶೀಲತೆಯನ್ನು ಬಳಸಿಕೊಂಡ ಅವರು ಈ ವಸ್ತುಗಳಿಂದ ಸಣ್ಣ ಪರ್ಸ್ ಮಾಡಲು ನಿರ್ಧರಿಸಿದಳು. ಇದು ಅವರ ಮನೆಯಲ್ಲಿ ಬಟ್ಟೆ, ಮ್ಯಾಟ್ಸ್ ಮತ್ತು ಕಾರ್ಪೆಟ್‌ಗಳಿಗೆ ವಿಸ್ತರಿಸಿತು.
'ನಾನು ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು ಎಂಬ ಆಲೋಚನೆಯೊಂದಿಗೆ ಪ್ರಾರಂಭಿಸಿದೆ. ಮೊದಲು ಸಣ್ಣ ಪರ್ಸ್ ತಯಾರಿಸಿದೆ, ನಂತರ ದೊಡ್ಡ ಬ್ಯಾಗ್‌ಗೆ ತೆರಳಿದೆ ಮತ್ತು ಈಗ ಹಾಲಿನ ಪ್ಯಾಕೆಟ್‌ಗಳಿಂದ ಸಂಪೂರ್ಣ ವಾರ್ಡ್ರೋಬ್ ಮಾಡಿದ್ದೇನೆ. ನಾನು ಮೊದಲು ಪ್ಯಾಕೆಟ್‌ನಿಂದ ಅನಗತ್ಯ ಪ್ರದೇಶಗಳನ್ನು ಟ್ರಿಮ್ ಮಾಡುತ್ತೇನೆ. ನಂತರ ವಾಸನೆ ಹೋಗುವಂತೆ ತೊಳೆದು ಒಣಗಿಸುತ್ತೇನೆ’ ಎನ್ನುತ್ತಾರೆ ಲೀಲಮ್ಮ.
ಅವರು ವಾರ್ಡ್ರೋಬ್ ಅನ್ನು 4,150 ಹಾಲಿನ ಪ್ಯಾಕೆಟ್ಗಳನ್ನು ಬಳಸಿ ತಯಾರಿಸಿದ್ದಾರೆ ಮತ್ತು 1,000 ಪ್ಯಾಕೆಟ್ ಬಳಸಿ ಲಾಂಡ್ರಿ ಬ್ಯಾಗ್ ಅನ್ನು ತಯಾರಿಸಿದ್ದಾರೆ.
ಆಹಾರ ನುಂಗೋಕೆ ಕಷ್ಟವಾಗೋದು ಈ ಕ್ಯಾನ್ಸರ್‌ನ ಲಕ್ಷಣ
ಆದರೆ ಅವರು ಇವುಗಳನ್ನು ಮಾರಾಟ ಮಾಡುವುದಿಲ್ಲ. ಇದನ್ನೊಂದು ಉದ್ಯಮವಾಗಿಸಲು ಅವರಿಗೆ ಸಹಾಯದ ಅಗತ್ಯವಿದೆ ಮತ್ತು ಕಲಿಸಲು ಮತ್ತು ಉದ್ಯೋಗಕ್ಕಾಗಿ ಜನರನ್ನು ಹುಡುಕುತ್ತಿದ್ದಾರೆ.
'ಸಾಧ್ಯವಾದಷ್ಟು ವಸ್ತುಗಳನ್ನು ತಯಾರಿಸುವ ಮನಸ್ಸು ನನಗಿದೆ. ಆದರೆ, ದೈಹಿಕವಾಗಿ ಅದು ಸಾಧ್ಯವಿಲ್ಲ. ನಾನು ಕೆಲವು ಜನರನ್ನು ನೇಮಿಸಿಕೊಳ್ಳಲು ಬಯಸುತ್ತೇನೆ, ಈ ವಸ್ತುಗಳನ್ನು ಹೇಗೆ ತಯಾರಿಸಬೇಕೆಂದು ಅವರಿಗೆ ಕಲಿಸಲು ಮತ್ತು ನಂತರ ಅವುಗಳನ್ನು ಮಾರಾಟ ಮಾಡಲು ಬಯಸುತ್ತೇನೆ,' ಎಂದು ಅವರು ಹೇಳುತ್ತಾರೆ.
ಅವರ ಕಾರ್ಯದಿಂದ ಪ್ರಭಾವಿತರಾದ ಕೇರಳ ಸಹಕಾರಿ ಹಾಲು ಮಾರಾಟ ಮಹಾಮಂಡಳ (ಮಿಲ್ಮಾ) ಸಹ ಲೀಲಮ್ಮ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿದೆ.