ಗಂಡ ಸತ್ತು ಎರಡು ವರ್ಷದ ಬಳಿಕ ಆತನ ಮಗುವಿಗೆ ಜನ್ಮ ನೀಡಿದ ಪತ್ನಿ, ಸಾಧ್ಯವಾಗಿದ್ಹೇಗೆ ?

By Suvarna NewsFirst Published Jun 22, 2022, 3:49 PM IST
Highlights

ಪುರುಷ (Men) ಮತ್ತು ಮಹಿಳೆಯ (Woman) ಮಧ್ಯೆ ಲೈಂಗಿಕ ಸಂಪರ್ಕ (Sex)ದಿಂದ ಮಹಿಳೆ ಗರ್ಭ (Pregnannt) ಧರಿಸುತ್ತಾಳೆ. ಮಗುವಿಗೆ ಜನ್ಮ ನೀಡುತ್ತಾಳೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಇಲ್ಲಿ ಗಂಡ ಸತ್ತೋದ ಎರಡು ವರ್ಷಗಳ ನಂತರ ಮಹಿಳೆ ಆರೋಗ್ಯವಂತ ಮಗು (Baby)ವನ್ನು ಹೆತ್ತಿದ್ದಾಳೆ. ಮಾತ್ರವಲ್ಲ ಇದು ತನ್ನ ಗಂಡನದ್ದೇ ಮಗು ಅಂತಿದ್ದಾಳೆ. ಆದ್ರೆ ಇದು ಸಾಧ್ಯವಾಗಿದ್ದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ.

ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಪ್ರೀತಿ, ನಂಬಿಕೆ, ವಿಶ್ವಾಸ ಮೊದಲಾದ ಭಾವನೆಗಳನ್ನು ಹೊಂದಿರುವ ಬಾಂಧವ್ಯ. ಆದರೆ ಕೆಲವೊಬ್ಬರು ಈ ಸಂಬಂಧಕ್ಕೆ ಅಷ್ಟೊಂದು ಪ್ರಾಧಾನ್ಯತೆ ನೀಡುವುದಿಲ್ಲ. ಮದುವೆಯಾದ ಬಳಿಕವೂ ಅನೈತಿಕ ಸಂಬಂಧ (Relationship)ಗಳನ್ನು ಇಟ್ಟುಕೊಂಡು ಮದುವೆಯೆಂದು ಬಾಂಧವ್ಯವನ್ನು ಮುರಿದು ಬಿಡುತ್ತಾರೆ. ಆದ್ರೆ ಇನ್ನೂ ಕೆಲವೊಬ್ಬರು ಕೇವಲ ಈ ಜನ್ಮದ ಜೋಡಿಗಳಂತೆ ಅಲ್ಲ ನೂರಾರು ಜನ್ಮದ ಬಾಂಧವ್ಯವಿರುವಂತೆ ಬಾಳು ಬದುಕಿ ತೋರಿಸುತ್ತಾರೆ. ನಿನಗೆ ನಾನು, ನನಗೆ ನೀನು ಎಂದು ಪರಸ್ಪರ ಹೊಂದಾಣಿಕೆಯಿಂದ ಬಾಳುತ್ತಾರೆ. ಇದು ಅಂಥಹದ್ದೇ ಜೋಡಿಯ ಕಥೆ.

ಲಾರೆನ್ ಮೆಕ್ಗ್ರೆಗರ್ ಮತ್ತು ಪತಿ ಕ್ರಿಸ್ ಮದುವೆಯಾದ ದಿನದಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇಬ್ಬರ ನಡುವಿನ ಬಾಂಧವ್ಯ ಸುತ್ತಲಿರುವವರಿಗೆ ಹೊಟ್ಟೆಕಿಚ್ಚು ಮೂಡಿಸುವಂತಿತ್ತು. ಖುಷಿಯಿಂದ ಜೀವನ ನಡೆಸುತ್ತಿದ್ದ ದಂಪತಿ, ಮಗು (Baby)ವನ್ನು ಪಡೆಯಬೇಕೆಂದು ಪ್ಲಾನ್ ಸಹ ಮಾಡ್ತಿದ್ರು. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಇತ್ತು. ಲಾರೆನ್ ಮೆಕ್ಗ್ರೆಗರ್ ತನ್ನ ಪತಿ ಕ್ರಿಸ್ ಅನ್ನು ಜುಲೈ 2020 ರಲ್ಲಿ ಟರ್ಮಿನಲ್ ಬ್ರೈನ್ ಟ್ಯೂಮರ್‌ ನಲ್ಲಿ ಕಳೆದುಕೊಂಡರು. ಅಲ್ಲಿಗೆ ದಂಪತಿ ಕಂಡಿದ್ದ ಕನಸೆಲ್ಲಾ ಅಲ್ಲೇ ಕಮರಿ ಹೋಯಿತು.

ಅಪಘಾತದಲ್ಲಿ ಬಾಯ್‌ಫ್ರೆಂಡ್‌ ಸಾವು: ಶವದಿಂದ ವೀರ್ಯ, ಪ್ರೆಗ್ನೆಂಟ್‌ ಆದ ಯುವತಿ!

ಗಂಡ ಸತ್ತ ಎರಡು ವರ್ಷದ ನಂತರ ಮಗುವಿಗೆ ಜನ್ಮ ನೀಡಿದ ಪತ್ನಿ
ದಂಪತಿಗಳು ಯಾವಾಗಲೂ ಒಟ್ಟಿಗೆ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ಕ್ರಿಸ್‌ನ ಸಾವು ಪತ್ನಿಗೆ ಆಘಾತವನ್ನು ಉಂಟು ಮಾಡಿತು. ಮಗುವನ್ನು ಪಡೆಯಬೇಕೆಂಬ ಕನಸನ್ನು ನನಸಾಗಿಸಲು ಸಾಧ್ಯವಾಗಲ್ಲಿಲ್ಲವಲ್ಲ ಅನ್ನೋ ದುಃಖ ಮನಸ್ಸಲ್ಲಿ ಉಳಿಯಿರು. ಆದ್ರೆ ಕ್ರಿಸ್ ಪತ್ನಿ ಲಾರೆನ್‌ ಧೈರ್ಯಗುಂದಲ್ಲಿಲ್ಲ. ಗಂಡ ಕ್ರಿಸ್‌ನೊಂದಿಗಿನ ತನ್ನ ಮಗುವನ್ನು ಹೇಗಾದರೂ ಪಡೆಯಬಹುದೇ ಎಂದು ಯತ್ನಿಸಿದಳು. ಆಗ ಕಂಡುಕೊಂಡ ದಾರಿಯೇ ಐವಿಎಫ್‌. ಇನ್ ವಿಟ್ರೋ ಫರ್ಟಿಲೈಸೇಶನ್‌ನ ಮೂಲಕ ಗಂಡನ ವೀರ್ಯಗಳ ಮೂಲಕವೇ ಮಗುವನ್ನು ಪಡೆಯಲು ಲಾರೆನ್ ನಿರ್ಧರಿಸಿದರು. ಈ ಮೂಲಕ ನಡೆದ ಚಿಕಿತ್ಸೆಯಲ್ಲಿ  ಕ್ರಿಸ್ ಸಾವಿನ ಸುಮಾರು ಎರಡು ವರ್ಷಗಳ ನಂತರ, ಲಾರೆನ್ ಈಗ ತನ್ನ ದಿವಂಗತ ಗಂಡನ ಮಗುವಿಗೆ ಜನ್ಮ ನೀಡಿದ್ದಾಳೆ.

ಸತ್ತ ಗಂಡನ ವೀರ್ಯವನ್ನು ಫ್ರೀಜ್ ಮಾಡಿಟ್ಟು ಬಳಕೆ
ಜುಲೈ 2020 ರಲ್ಲಿ ನಿಧನರಾದ ಕ್ರಿಸ್‌ನ ವೀರ್ಯವನ್ನು ಫ್ರೀಜ್ ಮಾಡಿಟ್ಟುಕೊಂಡ ನಂತರ 33 ವರ್ಷ ವಯಸ್ಸಿನ ಲಾರೆನ್‌ ಗರ್ಭಿಣಿಯಾಗಲು ಸಾಧ್ಯವಾಯಿತು. ವರದಿಗಳ ಪ್ರಕಾರ, ಅವರು ಐವಿಎಫ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅವರು ಮರಣಹೊಂದಿದ ಒಂಬತ್ತು ತಿಂಗಳ ನಂತರ ಕಾಯುತ್ತಿದ್ದರು. ಲಾರೆನ್ ತನ್ನ ಮಗ ಸೆಬ್‌ಗೆ ಮೇ 17ರಂದು ಸಿಸೇರಿಯನ್ ಮೂಲಕ ಜನ್ಮ ನೀಡಿದರು.

ಬೆಂಗಳೂರು ವೈದ್ಯರ ರೋಚಕ ಸಾಧನೆ : ಅಣ್ಣನ ಉಳಿಸಲು ಐವಿಎಫ್‌ನಲ್ಲಿ ತಂಗಿಯ ಸೃಷ್ಟಿ!

ನಾನು ಸೆಬ್ ಅವರನ್ನು ಅವರ ತಂದೆಯ ಫೋಟೋಗೆ ಪರಿಚಯಿಸಬೇಕೆಂದು ನನಗೆ ಅನಿಸಲಿಲ್ಲ - ಅವರು ಈಗಾಗಲೇ ಒಬ್ಬರಿಗೊಬ್ಬರು ತಿಳಿದಿದ್ದಾರೆಂದು ನಾನು ಭಾವಿಸಿದ್ದೇನೆ ಎಂದು ಲಾರೆನ್ ಹೇಳಿದರು. ಸೆಬ್ ಪ್ರತಿದಿನ ಅವನ ತಂದೆಯಂತೆ ಕಾಣುತ್ತಾನೆ. ಅವನು ಜನಿಸಿದಾಗ ಅವನು ಕ್ರಿಸ್‌ನಂತೆಯೇ ದಪ್ಪ ಕೂದಲು ಹೊಂದಿದ್ದನು, ಕ್ರಿಸ್‌ನಂತೆಯೇ ಅವನ ತುಟಿಗಳು ತುಂಬಿವೆ - ಆದರೆ ನನ್ನ ತುಟಿಗಳು ಸಾಕಷ್ಟು ತೆಳುವಾಗಿವೆ, ಹೀಗೆ ಕ್ರಿಸ್‌ನ ಹಲವು ಹೋಲಿಕೆಗಳು ಮಗನಲ್ಲಿರುವುದು ಖುಷಿ ತಂದಿದೆ ಎಂದು ಲಾರೆನ್ ಹೇಳುತ್ತಾರೆ.

ಈ ಹಿಂದೆ ಮಹಿಳೆಯೊಬ್ಬರು ಆಕ್ಸಿಡೆಂಟ್‌ನಲ್ಲಿ ತೀರಿಕೊಂಡ ಪತಿಯ ವೀರ್ಯವನ್ನು ಬಳಸಿಕೊಂಡು ಆತನದ್ದೇ ಮಗುವಿಗೆ ಜನ್ಮ ನೀಡಿದ್ದರು. ಅದೇನೆ ಇರ್ಲಿ, ಪತಿ ಬದುಕಿರುವಾಗ್ಲೇ ಹಲವು ಪುರುಷರ ಜೊತೆ ಸಂಬಂಧ ಇಟ್ಟುಕೊಳ್ಳುವ ಕೆಲವೊಬ್ಬರ ಮಧ್ಯೆ, ಗಂಡ ಸತ್ತರೂ ಅವನದ್ದೇ ಮಗು ಪಡೆದಿರುವ ಇಂಥಾ ಮಹಿಳೆಯರ ಕಾರ್ಯ ಅಚ್ಚರಿ ಮೂಡಿಸೋದಂತೂ ನಿಜ.

click me!