ಮಹಿಳಾ ದಿನಾಚರಣೆ ಮಾ.8ಕ್ಕೆ ಆಚರಿಸುವುದೇಕೆ? ವುಮೆನ್ಸ್ ಡೇ ಅಧಿಕೃತ ಬಣ್ಣ ಯಾವುದು?

Published : Mar 08, 2025, 10:55 AM ISTUpdated : Mar 08, 2025, 10:58 AM IST
ಮಹಿಳಾ ದಿನಾಚರಣೆ ಮಾ.8ಕ್ಕೆ ಆಚರಿಸುವುದೇಕೆ? ವುಮೆನ್ಸ್ ಡೇ ಅಧಿಕೃತ ಬಣ್ಣ ಯಾವುದು?

ಸಾರಾಂಶ

ಭಾರತ ಸೇರಿದಂತೆ ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ಕ್ಕೆ ಆಚರಿಸುತ್ತಿರುವುದೇಕೆ? ಮಹಿಳಾ ದಿನಾಚರಣೆಗೆ ಅಧಿಕೃತ ಬಣ್ಣ ಇದೆಯಾ? 

ಬೆಂಗಳೂರು(ಮಾ.08) ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಮಹಿಳೆಯರಿಗೆ ಗೌರವ, ಅವರ ಸಾಧನೆ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸವು ಹಾಗೂ ಮಹಿಳೆಯರಿಗೆ ಮತ್ತಷ್ಟು ಉತ್ತೇಜನ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಮಾರ್ಚ್ 8ಕ್ಕೆ ಮಹಿಳಾ ದಿನಾಚರಣೆ ಆಚರಿಸುತ್ತಿರುವುದೇಕೆ? ಈ ದಿನಾಂಕ ನಿಗದಿಯಾಗಿದ್ದು ಹೇಗೆ? 

 ಮಹಿಳಾ ದಿನಾಚರಣೆಯ ಇತಿಹಾಸ ನೋಡಿದರೆ ಮಾರ್ಚ್ 8ರ ಮಹತ್ವ ಅರಿವಾಗಲಿದೆ. ಮಹಿಳಾ ದಿನಾಚರಣೆ ಅನ್ನೋ ಪರಿಕಲ್ಪನೆಯ ಮೂಲ ರಷ್ಯ. ಫೆಬ್ರವರಿ 23, 1913ರಲ್ಲಿ ರಷ್ಯಾದ ಒಂದಷ್ಟು ಮಹಿಳೆಯರು ಮೊದಲನೇ ವಿಶ್ವಯುದ್ಧದ ವಿರುದ್ಧ ಹೋರಾಟ ಆರಂಭಿಸಿದ್ದರು. ಮೆರವಣಿಗೆ, ಪ್ರತಿಭಟನೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ಸೋವಿಯತ್ ಯೂನಿಯನ್ ರಷ್ಯ ಜುಲಿಯನ್ ಕ್ಯಾಲೆಂಡರ್ ಅನುಸರಿಸಲಾಗುತ್ತಿತ್ತು. ಆದರೆ ಇತರ ಯೂರೋಪಿಯನ್ ಯೂನಿಯನ್ ಜಾರ್ಜಿಯನ್ ಕ್ಯಾಲೆಂಡರ್ ಬಳಕೆ ಮಾಡುತ್ತಿತ್ತು. ಹೀಗಾಗಿ ರಷ್ಯಾದ ಫೆಬ್ರವರಿ 23, ಜಾರ್ಜಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ 8. ಹಾಗಂತ ಇದೇ ಕಾರಣಕ್ಕೆ ಮಾರ್ಚ್ 8ಕ್ಕೆ ಮಹಿಳಾ ದಿನಾಚರಣೆ ಶುರುವಾಗಿದ್ದಲ್ಲ.

ಮಹಿಳಾ ದಿನಾಚರಣೆ ಆಫರ್, ಕೊಮಾಕಿ ಇವಿ ಸ್ಕೂಟರ್ ಒಂದು ಕೊಂಡರೆ ಮತ್ತೊಂದು ಉಚಿತ

ಫೆಬ್ರವರಿ 23, 1917ರಲ್ಲಿ ಮತ್ತೆ ರಷ್ಯಾ ಮಹಿಳೆಯರು ಮೊದಲ ವಿಶ್ವಯುದ್ಧ ನಿಲ್ಲಿಸುಂತೆ ಮೆರವಣಿಗೆ ಕೈಗೊಂಡಿದ್ದರು. ರಷ್ಯಾದ ಕ್ರಾಂತಿಕಾರಿ ಲಿಯೊನ್ ಟ್ರಾಕ್‌ಸ್ಕೈ ಮಹಿಳೆಯರ ಮರೆವಣಿಗೆ ಪ್ರತಿಭಟನೆಯಿಂದ ಆಕ್ರೋಶಗೊಂಡಿದ್ದರು. ಕಾರಣ ಮೇ ದಿನಾಚರಣೆ ಅಥವಾ ಕಾರ್ಮಿಕ ದಿನಾಚರಣೆಗೆ ತಾರಿ ನಡೆಯುತ್ತಿರುವ ವೇಳೆ ಈ ಮೆರವಣಿಗೆ ಆಕ್ರೋಶ ಹೆಚ್ಚಿಸಿತ್ತು. ಈ ತಿಕ್ಕಾಟ ಮತ್ತೊಂದು ಹಂತದ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಯಿತು. ಮಹಿಳೆಯರಿಗೆ ಮತದಾನದ ಹಕ್ಕು ಕುರಿತು ಹೋರಾಟ ಆರಂಭಗೊಂಡಿತು.  ಈ ಎಲ್ಲಾ ಹೋರಾಟಗಳ ಪರಿಣಾಮ ರಷ್ಯಾದ ಕ್ರಾಂತಿಕಾರಿ ವ್ಲಾದಿಮಿರ್ ಲೆನಿನ್ ಮಾರ್ಚ್ 8ಕ್ಕೆ ವಿಶ್ವ ಮಹಿಳಾ ದಿನಾಚರಣೆ ಎಂದು ಘೋಷಿಸಿದ್ದರು.

ಆದರೆ ಮೊದಲ ಮಹಿಳಾ ದಿನಾಚರಣೆ ಆಚರಿಸಿದ್ದು ಮಾರ್ಚ್ 11, 1911ರಂದು. ಜರ್ಮನಿಯಲ್ಲಿ ಮಾರ್ಚ್ 8, 1914ರಂದು ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. 1920ರ ವೇಳೆ ಮಾರ್ಚ್ 8ಕ್ಕೆ ಹಲವು ದೇಶಗಳು ವಿಶ್ವ ಮಹಿಳಾ ದಿನಾಚರಣೆ ಆಚರಿಸಲು ಆರಂಭಿಸಿತ್ತು. ಬಳಿಕ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಗೆ ಮಾನ್ಯತೆ ಸಿಕ್ಕಿತ್ತು. 

ಮಹಿಳಾ ದಿನಾಚರಣೆ ಬಣ್ಣ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಧಿಕೃತ ಬಣ್ಣ ಪರ್ಪಲ್, ಹಸಿರು ಹಾಗೂ ಬಿಳಿ. ಎಲ್ಲರಿಗೂ ಗೊತ್ತಿರುವಂತೆ ಬಿಳಿ ಬಣ್ಣ ಶುದ್ಧತೆಯ ಸಂಕೇತವಾಗಿದೆ. ಇನ್ನು ನೇರಳೆ ಬಣ್ಣ ನ್ಯಾಯ, ಘನತೆ ಹಾಗೂ ನಿಷ್ಠೆಯನ್ನು ಸೂಚಿಸುತ್ತದೆ. ಹಸಿರು ಭರವಸೆ ಹಾಗೂ  ಸಮೃದ್ಧಿಯ ಸೂಚನೆಯಾಗಿದೆ. ಈ ಬಣ್ಣದ ಪರಿಕಲ್ಪನೆ 1908ರಲ್ಲಿ ಬ್ರಿಟನ್‌ನಲ್ಲಿನ ಮಹಳಾ ಸಾಮಾಜಿಕ ಹಾಗೂ ರಾಜಕೀಯ ಒಕ್ಕೂಟವಾಗಿರುವ WSPU ಆರಂಭಿಸಿದೆ. 

ನೇರಳೆ, ಹಸಿರು ಮತ್ತು ಬಿಳಿ ಬಣ್ಣಗಳು ಅಂತರರಾಷ್ಟ್ರೀಯ ಮಹಿಳಾ ದಿನದ ಬಣ್ಣಗಳಾಗಿವೆ. ನೇರಳೆ ಬಣ್ಣವು ನ್ಯಾಯ ಮತ್ತು ಘನತೆಯನ್ನು ಸೂಚಿಸುತ್ತದೆ ಮತ್ತು ಉದ್ದೇಶಕ್ಕೆ ನಿಷ್ಠರಾಗಿರುವುದನ್ನು ಸೂಚಿಸುತ್ತದೆ. ಹಸಿರು ಭರವಸೆಯನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ, ಆದರೂ ಇದು ವಿವಾದಾತ್ಮಕ ಪರಿಕಲ್ಪನೆಯಾಗಿದೆ. ಈ ಬಣ್ಣಗಳು 1908 ರಲ್ಲಿ ಯುಕೆಯಲ್ಲಿ ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟದಿಂದ (WSPU) ಹುಟ್ಟಿಕೊಂಡಿವೆ.

ವಿಶೇಷ ಅಂದರೆ ವಿಶ್ವ ಮಹಿಳಾ ದಿನಾಚರಣೆ ಕಾರಣವಾಗಿದ್ದು, ಮಹಿಳೆಯರ ಪ್ರತಿಭಟನೆ, ಮೆರವಣಿಗೆ. ಆದರೆ ಇದಕ್ಕೆ ಶತ ಶತಮಾನಗಳ ಮುಂಚೆ ಭಾರತದಲ್ಲಿ ಮಹಿಳೆಯರ ಹಲವು ಹೋರಾಟಗಳು, ಮೆರವಣಿಗೆಳು ನಡೆದಿದೆ. ಭಾರತ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತಿತ್ತು. ಆದರೆ ಪರಕೀಯರ ದಾಳಿಯಿಂದ ಪರಿಸ್ಥಿತಿ ಬದಲಾಗಿತ್ತು. ಮಹಿಳೆ ಮನೆಯಿಂದ ಹೊರಬಂದರೆ ಸುರಕ್ಷಿತವವಲ್ಲ ಅನ್ನೋ ವಾತಾವರಣ ನಿರ್ಮಾಣವಾಗಿತ್ತು. ಅಂದಿನ ಕಾಲದಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ರಕ್ಷಣೆಗಾಗಿ ಕೆಲ ಪದ್ದತಿಗಳು ಜಾರಿಗೊಂಡವು. ಆರಂಭದಲ್ಲಿ ಸ್ವಯಂಪ್ರೇರಿತವಾಗಿ ಈ ಪದ್ಧತಿಗಳು ಜಾರಿಯಾಗಿದ್ದರೆ, ಬಳಿಕ ಒತ್ತಾಯ ಪೂರ್ವಕವಾಗಿ ಹೇರಲಾಯಿತು. 

ಅಂತರರಾಷ್ಟ್ರೀಯ ಮಹಿಳಾ ದಿನ 2025 ಮತ್ತಷ್ಟು ವಿಶೇ‍ಷವಾಗಿಸಿದ ಗೂಗಲ್!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!