ಪಿರಿಯಡ್ಸ್‌ ಟೈಂನಲ್ಲಿ ಆಫೀಸ್‌ ಅಸಾಧ್ಯ ಅನ್ನೋರಿಗೆ ಈ ಕಂಪನಿ ಬೆಸ್ಟ್‌, ಇಲ್ಲಿ ಸಿಗುತ್ತೆ ಮುಟ್ಟಿನ ರಜೆ

Published : Mar 07, 2025, 11:25 PM ISTUpdated : Mar 08, 2025, 08:02 AM IST
ಪಿರಿಯಡ್ಸ್‌ ಟೈಂನಲ್ಲಿ ಆಫೀಸ್‌ ಅಸಾಧ್ಯ ಅನ್ನೋರಿಗೆ ಈ ಕಂಪನಿ ಬೆಸ್ಟ್‌, ಇಲ್ಲಿ  ಸಿಗುತ್ತೆ ಮುಟ್ಟಿನ ರಜೆ

ಸಾರಾಂಶ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ತೊಂದರೆಗಳನ್ನು ಅರಿತು ಕೆಲವು ಕಂಪನಿಗಳು ರಜೆ ನೀಡುತ್ತಿವೆ. ಲಾರ್ಸೆನ್ & ಟೂಬ್ರೊ 5,000 ಮಹಿಳಾ ಉದ್ಯೋಗಿಗಳಿಗೆ ಈ ಸೌಲಭ್ಯ ನೀಡಲಿದೆ. ಜೊಮಾಟೊ, ಸ್ವಿಗ್ಗಿ, ಬೈಜೂಸ್ ಮುಂತಾದ ಕಂಪನಿಗಳು ಈಗಾಗಲೇ ರಜೆ ನೀಡುತ್ತಿವೆ. ಬಿಹಾರ, ಕೇರಳ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳು ಸಹ ಮುಟ್ಟಿನ ರಜೆ ನೀತಿಯನ್ನು ಜಾರಿಗೆ ತಂದಿವೆ.

ಪಿರಿಯಡ್ಸ್ (periods) ಟೈಂನಲ್ಲಿ ಮಹಿಳೆಯರಿಗೆ ನೋವು ಸಾಮಾನ್ಯವಾದ್ರೂ ಅನೇಕ ಮಹಿಳೆಯರು ವಿಪರೀತ ನೋವು ತಿನ್ನುತ್ತಾರೆ. ಹೊಟ್ಟೆ ನೋವು, ಕಾಲು ನೋವು ಅಂತ ನಿತ್ಯದ ಕೆಲಸ ಮಾಡೋದೇ ಅವರಿಗೆ ಕಷ್ಟವಾಗುತ್ತೆ. ಪಿರಿಯಡ್ಸ್ ಮೊದಲ ದಿನ ಹೊಟ್ಟೆ ನೋವು, ಅಸ್ವಸ್ಥತೆ ಹೆಚ್ಚು ಕಾಡುತ್ತದೆ. ಈ ಟೈಂನಲ್ಲಿ ಕಚೇರಿಗೆ ಹೋಗೋದು ಬಹಳ ಕಷ್ಟ. ಹಾಗಂತ ಪ್ರತಿ ತಿಂಗಳು ಪಿರಿಯಡ್ಸ್ ಸಮಸ್ಯೆ ಅಂತ ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಕಂಪನಿಗಳು ಮಹಿಳೆಯರ ನೋವನ್ನು ಅರಿತಿವೆ. ಮುಟ್ಟಿನ ದಿನದಲ್ಲಿ ಮಹಿಳೆಯರು ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಎನ್ನುವ ಕಾರಣಕ್ಕೆ ಒಂದು ಅಥವಾ ಎರಡು ದಿನ ರಜೆ ನೀಡುತ್ವೆ. ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಇನ್ನೊಂದು ಕಂಪನಿ ತನ್ನ ಮಹಿಳಾ ಉದ್ಯೋಗಿ (female employee)ಗಳಿಗೆ ಪಿರಿಯಡ್ಸ್ ಟೈಂನಲ್ಲಿ ರಜೆ ನೀಡುವ ಘೋಷಣೆ ಮಾಡಿದೆ. 

ಭಾರತದ ಬಹುರಾಷ್ಟ್ರೀಯ ಕಂಪನಿ ಲಾರ್ಸೆನ್ & ಟೂಬ್ರೊ (Larsen & Toubro) ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿಯ 5,000 ಮಹಿಳಾ ಉದ್ಯೋಗಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್ ಎನ್ ಸುಬ್ರಹ್ಮಣ್ಯನ್ ಈ ಖುಷಿ ಸುದ್ದಿ ನೀಡಿದ್ದಾರೆ.  ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಿಕ್ಕ ದೊಡ್ಡ ಗಿಫ್ಟ್ ಇದು. ಅದನ್ನು ಹೇಗೆ ಜಾರಿಗೆ ತರಬೇಕು ಎನ್ನುವ ಬಗ್ಗೆ ಕಂಪನಿ ಪ್ಲಾನ್ ರೂಪಿಸುತ್ತಿದೆ.  ಪಿರಿಯಡ್ಸ್ ಟೈಂನಲ್ಲಿ ರಜೆ ನೀಡುತ್ವೆ ಈ ಕಂಪನಿಗಳು : ಪಿರಿಯಡ್ಸ್ ಟೈಂನಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡುತ್ತದೆ, ಕೆಲಸಕ್ಕೆ ಹೋಗೋದು ಕಷ್ಟ ಎನ್ನುವ ಮಹಿಳೆಯರು, ಪಿರಿಯಡ್ಸ್ ಟೈಂನಲ್ಲಿ ರಜೆ ನೀಡುವ ಕಂಪನಿಯಲ್ಲಿ ಕೆಲಸಕ್ಕೆ ಸೇರ್ಬಹುದು. ನೀವೂ ಅಂಥ ಕಂಪನಿ ಹುಡುಕುತ್ತಿದ್ದರೆ ಇಲ್ಲಿ ಆ ಕಂಪನಿಗಳ ಪಟ್ಟಿ ಇದೆ. 

Women's Day : ಮಹಿಳಾ ದಿನದಂದು ಪತ್ನಿ, ತಾಯಿ, ಸಹೋದರಿಗೆ ನೀಡಿ ಈ ಆರೋಗ್ಯಯುತ

• ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮಾಟೊ 2020 ರಿಂದ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುತ್ತಿದೆ.
• ಇನ್ನು ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ 2021 ರಲ್ಲಿ ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ಮುಟ್ಟಿನ ರಜೆಯನ್ನು ಪ್ರಾರಂಭಿಸಿದೆ. 
• BYJU'S 2021 ರಿಂದ  ಪ್ರತಿ ತಿಂಗಳು ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡ್ತಾ ಬಂದಿದೆ. 
• ಎಯು, ಸಣ್ಣ ಹಣಕಾಸು ಬ್ಯಾಂಕ್ 2023 ರಿಂದ ಈ ನೀತಿಯನ್ನು ಜಾರಿಗೆ ತಂದಿದೆ. ಈ ಪ್ಲಾನ್ ಅಡಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ರಜೆ ಸಿಗುತ್ತದೆ. 
• ಸಿಕೆ ಬಿರ್ಲಾ ಗ್ರೂಪ್‌ನ ಒಂದು ಘಟಕವಾದ ಓರಿಯಂಟ್ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ ಪಿರಿಯಡ್ಸ್ ರಜೆ ನೀತಿಯನ್ನು ಜಾರಿಗೆ ತಂದಿದೆ. 

ಮಹಿಳೆಯರ ದಿನದಂದು ಸುಧಾ ಮೂರ್ತಿಯವರ 10 ಯಶಸ್ವಿ ಮಂತ್ರಗಳು, ತಪ್ಪದೇ ತಿಳ್ಕೊಳ್ಳಿ!

ಭಾರತದ ಯಾವ ರಾಜ್ಯಗಳು ಪಿರಿಯಡ್ಸ್ ರಜೆ ನೀಡುತ್ವೆ? : ಬಿಹಾರದಲ್ಲಿ ಅನೇಕ ವರ್ಷಗಳ ಹಿಂದೆಯೇ ಈ ನೀತಿಯನ್ನು ಜಾರಿಗೆ ತರಲಾಗಿದೆ. 1992 ರಲ್ಲಿ ಬಿಹಾರದಲ್ಲಿ ಈ ನೀತಿಯನ್ನು ರೂಪಿಸಲಾಯಿತು. ಇದರ ಅಡಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ಪಿರಿಯಡ್ಸ್ ರಜೆ ಸಿಗುತ್ತದೆ. ಇನ್ನು ಕೇರಳ 2023 ರಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ.  ಇದರ ಅಡಿಯಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ರಜೆ ನೀಡಲಾಗುತ್ತದೆ. ಮೂರನೇ ಸ್ಥಾನದಲ್ಲಿ ಸಿಕ್ಕಿಂ ಇದೆ. ಇಲ್ಲಿ 2024 ರಿಂದ ಮುಟ್ಟಿನ ರಜೆ ನಿಯಮ ಜಾರಿಗೆ ಬಂದಿದೆ. ಒಡಿಶಾ ಆಗಸ್ಟ್ 2024 ರಲ್ಲಿ, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆ ನೀಡುವ ನೀತಿಯನ್ನು ಜಾರಿಗೆ ತಂದಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!