Women Health: ಮುಟ್ಟಿನ ಮೂರು ದಿನ ತಲೆಸ್ನಾನ ಮಾಡಬಾರದಾ?

By Suvarna NewsFirst Published Jan 12, 2023, 5:02 PM IST
Highlights

ಹಿಂದೆ ನಮ್ಮ ಹಿರಿಯರು ಮಾಡಿರುವ ಎಲ್ಲ ಪದ್ಧತಿ ಮೂಢನಂಬಿಕೆಯಿಂದ ಕೂಡಿಲ್ಲ. ಅನೇಕ ಪದ್ಧತಿಗೆ ವೈಜ್ಞಾನಿಕ ಕಾರಣವಿದೆ. ಅದ್ರಲ್ಲಿ ಮುಟ್ಟಿನ ಸಮಯದಲ್ಲಿ ತಲೆ ಸ್ನಾನ ಮಾಡುವುದು ಸೇರಿದೆ. ಇದ್ರಿಂದ ಏನಾಗುತ್ತೆ ಗೊತ್ತಾ?
 

ಪ್ರತಿಯೊಬ್ಬ ಹೆಣ್ಣುಮಕ್ಕಳೂ ಋತುಮತಿಯಾಗುವುದು ಸಹಜ. ಇದು ಸೃಷ್ಠಿಯಲ್ಲಿ ನಡೆಯುವ ಒಂದು ಸಹಜ ಕ್ರಿಯೆ. ಆದರೆ ಈ ಪಿರಿಯಡ್  ಒಬ್ಬೊಬ್ಬರ ಮೇಲೆ ಒಂದೊಂದು ರೀತಿಯ ಪ್ರಭಾವ ಬೀರುತ್ತೆ. ಹಿಂದಿನ ಕಾಲದಲ್ಲಿ ಹೆಣ್ಣು ಮುಟ್ಟಾದಾಗ ದೇವಸ್ಥಾನಗಳಿಗೆ ಹೋಗಬಾರದು, ಕೂದಲನ್ನು ಕತ್ತರಿಸಿಕೊಳ್ಳಬಾರದು ಹೀಗೆ ಅನೇಕ ಶರತ್ತುಗಳನ್ನು ಹಾಕುತ್ತಿದ್ದರು. ಹಾಗೆಯೇ ಆಕೆ ತಲೆ ಸ್ನಾನ ಮಾಡಬಾರದು ಎಂಬ ನಿಯಮ ಕೂಡ ಇತ್ತು. ಮುಟ್ಟಾದ ಮಹಿಳೆ ಮೂರು ದಿನ ತಲೆ ಸ್ನಾನ ಮಾಡಬಾರದು ಎಂದು ಹಿರಿಯರು ಹೇಳ್ತಾರೆ. ಆದ್ರೆ ಈ ಮಾಡರ್ನ್ ಯುಗದಲ್ಲಿ ಮಹಿಳೆಯರು ಈ ವಿಷ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪಿರಿಯಡ್ಸ್ ಆದ ಮೊದಲ ದಿನವೇ ಅನೇಕರು ತಲೆ ಸ್ನಾನ ಮಾಡ್ತಾರೆ. 

ಹಿಂದೆ ಹಿರಿಯರು (Seniors) ಜಾರಿಗೆ ತಂದ ಕೆಲ ಪದ್ಧತಿಗಳ ಹಿಂದೆ ವೈಜ್ಞಾನಿಕ (Scientific) ಕಾರಣ ಕೂಡ ಇದೆ. ಮಹಿಳೆ (Woman) ಮುಟ್ಟಿನ ಸಮಯದಲ್ಲಿ ತಲೆ ಸ್ನಾನ (Headbath) ಮಾಡಬಾರದು ಎಂಬುದಕ್ಕೆ ಕೂಡ ಕಾರಣವಿದೆ. ನಾವಿಂದು ಮುಟ್ಟಾದ ಸಂದರ್ಭದಲ್ಲಿ ಏಕೆ ತಲೆ ಸ್ನಾನ ಮಾಡಬಾರದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 

ಸಿಸೇರಿಯನ್ ಹೆರಿಗೆ ನಂತ್ರ ಸೀನುವಾಗ ಎಚ್ಚರವಿರಲಿ ಅಂತಾರಲ್ಲ, ಏಕೆ?

ಮುಟ್ಟಿನ ಸಮಯದಲ್ಲಿ ಏಕೆ ತಲೆ ಸ್ನಾನ ಮಾಡಬಾರದು? : 
ಅನಾರೋಗ್ಯಕ್ಕೆ ಕಾರಣವಾಗುತ್ತೆ ತಲೆ ಸ್ನಾನ :  
ಮುಟ್ಟಾದ ಸಂದರ್ಭದಲ್ಲಿ ಬ್ಲೀಡಿಂಗ್ ಸರಿಯಾಗಿ ಆಗ್ಬೇಕು. ದೇಹದಲ್ಲಿರುವ ಕೊಳಕು ಹೊರಗೆ ಹೋಗ್ಬೇಕು. ದೇಹ ಬೆಚ್ಚಗಿದ್ದಾಗ ಮಾತ್ರ ಬ್ಲೀಡಿಂಗ್ ಸರಿಯಾಗಿ ಆಗುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಶರೀರದ ತಾಪಮಾನ ಬೆಚ್ಚಗಿದ್ದರೆ ಒಳ್ಳೆಯದು. ಈ ಸಮಯದಲ್ಲಿ ತಲೆ ಸ್ನಾನ ಮಾಡುವುದರಿಂದ ಶರೀರ ತಣ್ಣಗಾಗುತ್ತದೆ. ಕೆಲ ಮಹಿಳೆಯರಿಗೆ ಮೂರು ದಿನ ಬ್ಲೀಡಿಂಗ್ ಆದ್ರೆ ಮತ್ತೆ ಕೆಲವರಿಗೆ ಐದು ದಿನ ಬ್ಲೀಡಿಂಗ್ ಆಗುತ್ತದೆ. ಮುಟ್ಟಿನ ಮೂರು ದಿನ ಬಹಳ ಮುಖ್ಯವಾಗಿರುತ್ತದೆ. ತಲೆ ಸ್ನಾನ ಮಾಡಿ ಶರೀರ ತಣ್ಣಗಾದ್ರೆ ಬ್ಲೀಡಿಂಗ್ ಸರಿಯಾಗಿ ಆಗದೆ ಇರಬಹುದು. ಇದ್ರಿಂದ ಅನಾರೋಗ್ಯ ಕಾಡುವ ಅಪಾಯವಿರುತ್ತದೆ. 

ಮುಟ್ಟಿನ ಸಮಯದಲ್ಲಿ ಸರಿಯಾಗಿ ಬ್ಲೀಡಿಂಗ್ ಆಗದೆ ಹೋದ್ರೆ ಉಳಿದ ರಕ್ತವು ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ಇದ್ರಿಂದ ಸೋಂಕಿನ ಸಮಸ್ಯೆ, ಹೊಟ್ಟೆ ನೋವು ಬರಬಹುದು. ಅನೇಕ ಬಾರಿ ಔಷಧದ ಮೂಲಕ ಗಡ್ಡೆಯನ್ನು ತೆಗೆಯಲಾಗುತ್ತದೆ. ಕೆಲ ಸಂದರ್ಭದಲ್ಲಿ ಡಿಎನ್ ಸಿ ಅಗತ್ಯವಿರುತ್ತದೆ. ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಈ ಗಡ್ಡೆಗಳು ಕ್ಯಾನ್ಸರ್ ರೂಪವನ್ನು ಸಹ ಪಡೆಯಬಹುದು. 
ಇದೇ ಕಾರಣಕ್ಕೆ ಮುಟ್ಟಿನ ಸಮಯದಲ್ಲಿ ಆದಷ್ಟು ತಲೆ ಸ್ನಾನ ಮಾಡದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಕನಿಷ್ಠ ಮೂರು ದಿನ ತಲೆ ಸ್ನಾನದಿಂದ ದೂರವಿರಿ. ಒಂದ್ವೇಳೆ ಅನಿವಾರ್ಯ ಎನ್ನುವವರು ಮೂರನೇ ದಿನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಸಾಮಾನ್ಯವಾಗಿ ಮೂರನೇ ದಿನ ಫ್ಲೋ ಕಡಿಮೆಯಾಗಿರುವ ಕಾರಣ ನಿಮಗೆ ಸಮಸ್ಯೆ ಎನ್ನಿಸುವುದಿಲ್ಲ. ತಲೆ ಸ್ನಾನ ಮಾಡ್ಲೇ ಬೇಕು ಎನ್ನುವವರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ. 

ಚಪಾತಿ ಸ್ಪಂಜಿನಂತೆ ಮೆದುವಾಗ್ಬೇಕು ಅಂದ್ರೆ ಇಂಥಾ ಮಣೆ ಯೂಸ್ ಮಾಡಿ

ಹಿಂದಿನವರು ಈ ಕಾರಣಕ್ಕೂ ರೂಪಿಸಿದ್ದರು ನಿಯಮ : ಮುಟ್ಟಿನ ಸಮಯದಲ್ಲಿ ತಲೆಸ್ನಾನ ಮಾಡಿದರೆ ಹೆಣ್ಣಿಗೆ ಬಂಜೆತನ ಬರಬಹುದು ಎಂದು ಹಿರಿಯರು ನಂಬಿದ್ದರು. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಸ್ನಾನಕ್ಕಾಗಿ ನದಿ - ಹೊಳೆಗಳಿಗೆ ಹೋಗಬೇಕಾದ ಪ್ರಸಂಗ ಇರುತ್ತಿತ್ತು. ಮುಟ್ಟಿನ ಸಮಯದಲ್ಲಿ ಬಹಳ ತಣ್ಣನೆಯ ನೀರಿನಿಂದ ಸ್ನಾನ ಮಾಡಿದ್ರೆ ಅದು ರಕ್ತ ಚಲನೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ನದಿಯ ನೀರು ಬಹಳ ತಣ್ಣಗಿರುತ್ತದೆ ಎಂಬ ಕಾರಣಕ್ಕಾಗಿಯೇ ಹಿಂದಿನವರು ಮುಟ್ಟಿನ ದಿನಗಳಲ್ಲಿ ತಲೆ ಸ್ನಾನ ಮಾಡಬಾರದೆಂದು ಹೇಳಿದ್ದರು.
 

click me!