
ಚಪಾತಿ ಹಲವರ ಫೇವರಿಟ್ ಆಹಾರ. ತೂಕ ಹೆಚ್ಚಳವಾಗುವ ಭಯವಿಲ್ಲ. ಹೆಲ್ದೀ ಫುಡ್ ಅನ್ನೋ ಕಾರಣಕ್ಕೆ ಹೆಚ್ಚಿನವರು ಚಪಾತಿ, ಕರಿ ತಿನ್ನೋದನ್ನು ಇಷ್ಟಪಡುತ್ತಾರೆ. ಆದರೆ ಎಲ್ಲರೂ ಚಪಾತಿ ಮಾಡುವ ರೀತಿ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಚಪಾತಿ ಸಿದ್ಧಪಡಿಸುತ್ತಾರೆ. ಕೆಲವೊಬ್ಬರು ಮಾಡೋ ಚಪಾತಿ ಉಬ್ಬುತ್ತೆ, ಇನ್ನು ಕೆಲವರು ಮಾಡೋವಾಗ ರೊಟ್ಟೆಯಂತೆ ಗಟ್ಟಿಯಾಗಿ ಬಿಡುತ್ತದೆ. ಟೆಸ್ಟ್‌ನಲ್ಲಿಯೂ ಹೀಗೆ ವ್ಯತ್ಯಾಸಗಳಾಗುತ್ತವೆ. ಹೀಗಾಗಿ ಚಪಾತಿ ಸರಿಯಾಗಿರಬೇಕು ಅಂದ್ರೆ ಚಪಾತಿ ಮಾಡೋ ಮಣೆ, ಲಟ್ಟಣಿಗೂ ಸರಿಯಾಗಿರಬೇಕು.
ಚಪಾತಿ ಮಣೆ ಹಾಗೂ ಲಟ್ಟಣಿಗೆ ಭಾರತೀಯ ಅಡುಗೆ ಮನೆ (Kitchen)ಯಲ್ಲಿ ಮುಖ್ಯವಾದ ಪರಿಕರವಾಗಿದೆ. ಏಕೆಂದರೆ ಇದನ್ನು ನಮ್ಮ ಭಾರತೀಯ ಆಹಾರದ (Food) ಪ್ರಮುಖ ಭಾಗವಾಗಿರುವ ಚಪಾತಿ, ಪೂರಿ, ಪರಾಠಗಳನ್ನು ತಯಾರಿಸಲು ಬಳಸಲಾಗುತ್ತದೆ. ಬೆಳಗಿನ ಉಪಾಹಾರಕ್ಕಾಗಿ (Breakfast) ಪರಾಠಗಳು ಮತ್ತು ಮಧ್ಯಾಹ್ನದ ಊಟಕ್ಕೆ ಪೂರಿಗಳಿಂದ ಹಿಡಿದು ರಾತ್ರಿಯ ಊಟಕ್ಕೆ ಚಪಾತಿ ತಯಾರಿಯನ್ನು ಹೆಚ್ಚು ಸುಲಭಗೊಳಿಸುವ ಒಂದು ಸೂಕ್ತ ಅಡುಗೆ ಸಲಕರಣೆಯಾಗಿದೆ. ಮರದಿಂದ ಹಿಡಿದು ಮಾರ್ಬಲ್ ವರೆಗೆ ಹಲವು ರೀತಿಯ ಚಪಾತಿ ಮಣೆಗಳು ಲಭ್ಯವಿವೆ. ಆದರೆ ಇದರಲ್ಲಿ ಯಾವ ಚಪಾತಿ ಮಣೆ ಬಳಸೋಕೆ ತುಂಬಾ ಒಳ್ಳೆಯದು.
ಅನ್ನ ಬಿಟ್ಟು ಚಪಾತಿ ತಿನ್ತಿದ್ರೂ ಸಣ್ಣಗಾಗ್ತಿಲ್ವಾ ? ಹಿಟ್ಟನ್ನು ಹೀಗೆ ತಯಾರಿಸಿ, ಒಂದೇ ವಾರದಲ್ಲಿ ತೂಕ ಇಳಿಯುತ್ತೆ
ಮಾರ್ಬಲ್
ಮಾರ್ಬಲ್‌ನಿಂದ ಮಾಡಿರೋ ಮಣೆ ಅದರ ನಯವಾದ ಮತ್ತು ಹೊಳಪಿನ ಫಿನಿಶ್‌ನಿಂದಾಗಿ ಸಾಕಷ್ಟು ಸುಂದರವಾಗಿ ಕಾಣುತ್ತದೆ. ಇದು ವಿವಿಧ ಬಣ್ಣಗಳು ಮತ್ತು ಪ್ರಿಂಟ್‌ಗಳಲ್ಲಿಯೂ ಲಭ್ಯವಿದೆ. ಅನೇಕ ಅಮೃತಶಿಲೆಯ ಮಣೆಗಳು ಉಬ್ಬಿರುವ ಮಾದರಿಗಳನ್ನು ಹೊಂದಿದ್ದು ಅವುಗಳು ಸಾಕಷ್ಟು ಅಲಂಕಾರಿಕವಾಗಿ ಕಾಣುವಂತೆ ಮಾಡುತ್ತವೆ. ಮಾರ್ಬಲ್ ಮಣೆಯ ಏಕೈಕ ಅನಾನುಕೂಲವೆಂದರೆ ಅದು ಸಾಕಷ್ಟು ಭಾರವಾಗಿರುತ್ತದೆ ಮತ್ತು ಅಸಮರ್ಪಕ ನಿರ್ವಹಣೆಯಿಂದಾಗಿ ಯಾವಾಗ ಬೇಕಾದರೂ ಒಡೆಯಬಹುದು.
ಗಾಜಿನ ಮಣೆ
ನಿಸ್ಸಂದೇಹವಾಗಿ ಗಾಜಿನ ಮಣೆ ಅತ್ಯಂತ ಶ್ರೇಷ್ಠವಾದ ಚಪಾತಿ ಮಣೆಗಳಲ್ಲಿ ಒಂದಾಗಿದೆ. ಗ್ಲಾಸ್ ಮಣೆ ಹೆಚ್ಚಾಗಿ ಗ್ಲಾಸ್ ಲಟ್ಟಣಿಯೊಂದಿಗೆ ಬರುತ್ತದೆ ಅದು ಚಪಾತಿ ಮಣೆಯನ್ನು ಒಟ್ಟಾರೆಯಾಗಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಗ್ಲಾಸ್ ಮಣೆಯನ್ನು ಸ್ವಚ್ಛಗೊಳಿಸಲು ಸುಲಭವಾಗಿದೆ ಮತ್ತು ಹಿಟ್ಟನ್ನು ಹೊರತೆಗೆಯಲು ಮೃದುವಾದ ಮೇಲ್ಮೈಯನ್ನು ಒದಗಿಸುತ್ತದೆ. ಆದರೆ ಗಾಜಿನ ಮಣೆಯನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕು (Careful) ಏಕೆಂದರೆ ಅದು ಒಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಗ್ರಾನೈಟ್
ವಿನ್ಯಾಸ ಮತ್ತು ತೂಕದ ವಿಷಯದಲ್ಲಿ ಗ್ರಾನೈಟ್ ಮಣೆ ಮಾರ್ಬಲ್ ಮಣೆಯನ್ನು ಹೋಲುತ್ತದೆ. ಆದರೆ ಗ್ರಾನೈಟ್ ತೂಕದಲ್ಲಿ ಭಾರವಾಗಿರುವ ಕಾರಣ ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಭಾರವಾದ ಗ್ರಾನೈಟ್ ಮಣೆಯ ಪ್ರಯೋಜನವೆಂದರೆ ಅದು ಚಪಾತಿಗಳನ್ನು ಲಟ್ಟಿಸುವಾಗ ಜಾರುವುದಿಲ್ಲ, ಆದರೆ ಅನಾನುಕೂಲವೆಂದರೆ ಅದನ್ನು ನಿರ್ವಹಿಸಲು ಮತ್ತು ಒಂದು ಸ್ಥಳದಿಂದ ಇನ್ನೊಂದಕ್ಕೆ ವರ್ಗಾಯಿಸಲು ಸ್ವಲ್ಪ ಕಷ್ಟವಾಗುತ್ತದೆ.
Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ
ಮರ
ಮರದ ಚಕ್ಲಾ ಸಾಕಷ್ಟು ಸೂಕ್ತವಾಗಿದೆ. ಏಕೆಂದರೆ ಇದು ಹಗುರವಾಗಿರುತ್ತದೆ ಮತ್ತು ಬಿದ್ದ ನಂತರವೂ ಒಡೆಯುವುದಿಲ್ಲ. ವುಡನ್ ಮಣೆ, ಅಡುಗೆಮನೆಗೆ ಕ್ಲಾಸಿಕ್ ಮಣ್ಣಿನ ನೋಟವನ್ನು ನೀಡುತ್ತದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಮಣೆ ಬಳಕೆಯ ನಂತರ ಸಂಪೂರ್ಣವಾಗಿ ಒಣಗಬೇಕು, ಇಲ್ಲದಿದ್ದರೆ ಅದು ಬ್ಯಾಕ್ಟಿರೀಯಾ ಮತ್ತು ಶಿಲೀಂಧ್ರವನ್ನು ಅಭಿವೃದ್ಧಿಪಡಿಸಬಹುದು.
ಸ್ಟೀಲ್
ಹಗುರವಾದ, ಕಡಿಮೆ ನಿರ್ವಹಣೆ ಮತ್ತು ಸ್ವಚ್ಛಗೊಳಿಸಲು ಸುಲಭವಾದ ಚಪಾತಿ ಮಣೆ ಬೇಕೇ? ಹಾಕಿದ್ರೆ ಸ್ಟೀಲ್ ಮಣೆಯನ್ನು ಆರಿಸಿಕೊಳ್ಳಿ. ಪ್ಲೇಟ್‌ಗಳು, ಸ್ಪೂನ್‌ಗಳು, ಬಟ್ಟಲುಗಳು ಮತ್ತು ಕಂಟೈನರ್‌ಗಳಂತಹ ಅಡಿಗೆ ವಸ್ತುಗಳನ್ನು ತಯಾರಿಸಲು ಸ್ಟೀಲ್ ಅತ್ಯಂತ ಸಾಮಾನ್ಯವಾದ ಲೋಹವಾಗಿದೆ. ನೀವು ಇದನ್ನು ಇತರ ಪಾತ್ರೆಗಳೊಂದಿಗೆ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.