ಭಾರತದ ಗಂಡಸರು ಹೆಂಗಸರನ್ನು ದಿಟ್ಟಿಸೋದರಲ್ಲಿ ನಟೋರಿಯಸ್‌!

By Suvarna NewsFirst Published Mar 16, 2020, 3:09 PM IST
Highlights

ಸ್ಟೇರಿಂಗ್‌ ಅಂತಾರೆ ಅದನ್ನು ಇಂಗ್ಲಿಷ್‌ನಲ್ಲಿ. ಅಂದರೆ ದಿಟ್ಟಿಸಿ ನೋಡುವುದು. ಹರೆಯದ ಹೆಣ್ಣು ಮಕ್ಕಳು ಈ ಸಮಸ್ಯೆಯನ್ನು ಅನುಭವಿಸಿಯೇ ಇರುತ್ತಾರೆ. ಬೀದಿಯಲ್ಲಾಗಲಿ, ಮಾಲ್‌ಗಳಲ್ಲಾಗಲಿ, ಸಾರ್ವಜನಕರು ಸೇರುವ ಸಮಾರಂಭಗಳಲ್ಲಿಯೇ ಆಗಲಿ, ಹೆಚ್ಚಿನ ಸಂಖ್ಯೆಯ ಗಂಡಸರು, ತಮಗೆ ಚೆನ್ನಾಗಿ ಕಂಡ ಹೆಂಗಸರನ್ನು ದಿಟ್ಟಿಸಿ ನೋಡುತ್ತಿರುತ್ತಾರೆ.

ಸ್ಟೇರಿಂಗ್‌ ಅಂತಾರೆ ಅದನ್ನು ಇಂಗ್ಲಿಷ್‌ನಲ್ಲಿ. ಅಂದರೆ ದಿಟ್ಟಿಸಿ ನೋಡುವುದು. ಹರೆಯದ ಹೆಣ್ಣು ಮಕ್ಕಳು ಈ ಸಮಸ್ಯೆಯನ್ನು ಅನುಭವಿಸಿಯೇ ಇರುತ್ತಾರೆ. ಬೀದಿಯಲ್ಲಾಗಲಿ, ಮಾಲ್‌ಗಳಲ್ಲಾಗಲಿ, ಸಾರ್ವಜನಕರು ಸೇರುವ ಸಮಾರಂಭಗಳಲ್ಲಿಯೇ ಆಗಲಿ, ಹೆಚ್ಚಿನ ಸಂಖ್ಯೆಯ ಗಂಡಸರು, ತಮಗೆ ಚೆನ್ನಾಗಿ ಕಂಡ ಹೆಂಗಸರನ್ನು ದಿಟ್ಟಿಸಿ ನೋಡುತ್ತಿರುತ್ತಾರೆ. ಆ ದೃಷ್ಟಿಯೋ ಸಾಮಾನ್ಯವಾದ್ದಲ್ಲ. ಹೆಂಗಸರ ಎದೆ ಸೀಳುವಂಥ ನೋಟ ಅದು! ಹಸಿದ ಹೆಬ್ಬುಲಿಗಳಂತೆ ನೋಡುತ್ತಿರುತ್ತಾರೆ ಕೆಲವರು. ಸಾಮಾನ್ಯವಾಗಿ ಈ ನೋಟಕ್ಕೆ ತುತ್ತಾಗುವುದು ಹೆಂಗಸರ ಎದೆಯ ಭಾಗ. ಹಿಂದಿನಿಂದ ನೋಡುತ್ತಿದ್ದರೆ, ಪೃಷ್ಟ ಭಾಗ. ಇದೊಂದು ಮಾನಸಿಕ ಸಮಸ್ಯೆಯಾ? ಎಲ್ಲ ಗಂಡಸರಿಗೂ ಈ ಸಮಸ್ಯೆ ಇರುತ್ತಾ?

ಇದೊಂದು ಸಮಸ್ಯೆ ಹೌದು.

 

ಭಾರತೀಯ ಹೆಣ್ಣು ಮಕ್ಕಳು ಶತ ಶತಮಾನಗಳಿಂದ ಇದನ್ನು ಅನುಭವಿಸುತ್ತಿದ್ದಾರೆ! ಆದರೆ ಫಾರಿನರ್‌ಗಳಿಗೆ ಮಾತ್ರ ಇದು ಹೆಚ್ಚು ವಿಚಿತ್ರವಾಗಿ ಕಾಣಿಸುತ್ತದೆ. ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ಕೊಟ್ಟು ತಮ್ಮ ದೇಶಗಳಿಗೆ ಮರಳಿದ ಬಳಿಕ ಹೇಳಿಕೊಳ್ಳುವುದು ಹೀಗಂತೆ- ಅಲ್ಲಿ ಎಲ್ಲ ಚೆನ್ನಾಗಿದೆ. ಆದರೆ ಅಲ್ಲಿನ ಪುರುಷರು ನಮ್ಮನ್ನೇ ಸ್ಟೇರ್‌ ಮಾಡುತ್ತಾ ಇರುತ್ತಾರೆ. ಅವರ ಉದ್ದೇಶ ಏನು ಅಂತಲೇ ಅರ್ಥ ಆಗುವುದಿಲ್ಲ. ವಿದೇಶಿ ಪ್ರವಾಸಿಗರ ಇಂಥ ಅಭಿಪ್ರಾಯಗಳ ಜೊತೆಗೆ, ಇಲ್ಲಿ ಆಗಾಗ ವಿದೇಶಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳೂ ಸೇರಿಕೊಂಡು, ಭಾರತಕ್ಕೆ ಕೆಟ್ಟ ಹೆಸರು ತಂದಿದೆ. ಹಾಗೆಂದು ಭಾರತ ಅಪಾಯಕಾರಿ ದೇಶವೇನೂ ಅಲ್ಲ. ಇಲ್ಲಿನ ಗೋವಾ, ಗೋಕರ್ಣ ಮೊದಲಾದ ಜಾಗಗಳನ್ನು ನೀಡುವ ನೋಡಿದರೆ, ಅಲ್ಲಿ ಒಬ್ಬಂಟಿ ವಿದೇಶಿ ಹೆಣ್ಣು ಮಕ್ಕಳು ಹಾಯಾಗಿ ತಿರುಗಾಡುತ್ತಾ ಇರುವುದನ್ನು ಗಮನಿಸಬಹುದು.

 

ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!

 

ಇದಕ್ಕೇನು ಕಾರಣ ಇರಬಹುದು? ಸಾಮಾನ್ಯವಾಗಿ ಹೀಗೆ ನೋಡುವವರು ಯಾರು ಎಂಬುದನ್ನು ಗಮನಿಸಬೇಕು. ಕಚೇರಿಗಳಲ್ಲೂ ಹೀಗೆ ನೋಡುವವರು ಇರುತ್ತಾರೆ. ಇಂಥವರು ಪಕ್ಕದಲ್ಲಿದ್ದರೆ ಮಹಿಳಾ ಸಹೋದ್ಯೋಗಿಗಳು ನಿತ್ಯ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಮಹಿಳೆಯರ ಮುಖ ಹೊರತುಪಡಿಸಿ, ದೇಹದ ಇತರ ಭಾಗಗಳನ್ನು ನಿಮಿಷಗಟ್ಟಲೆ ದಿಟ್ಟಿಸಿ ನೋಡುವುದು ಲೈಂಗಿಕ ದೌರ್ಜನ್ಯಕ್ಕೇ ಸಮಾನ. ಯಾಕೆಂದರೆ ಇದರಿಂದ ಸ್ತ್ರೀಯರು ಅನುಭವಿಸುವ ಕಿರಿಕಿರಿ ಅಂತಿಂಥದ್ದಲ್ಲ. ಬೀದಿಯಲ್ಲಿ ಹೋಗುವಾಗ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಯಾರಾದರೂ ಈ ಭಾವನೆಯಿಂದ ದಿಟ್ಟಿಸಿ ನೋಡ್ತಾ ಇದ್ದರೆ ನಮಗೆ ಮೈ ಎಷ್ಟು ಉರಿದುಹೋಗುತ್ತದೆ ಅಲ್ಲವೇ? ಆದರೆ ನಾವೇ ಬೇರೆ ಹೆಣ್ಣು ಮಕ್ಕಳನ್ನು ಸರಿಯಾದ ದೃಷ್ಟಿಯಿಂದ ನೋಡುತ್ತೀವಾ? ಈ ಪ್ರಶ್ನೆಯನ್ನು ಎಲ್ಲರೂ ಮನಸ್ಸಿನಲ್ಲಿ ಒಮ್ಮೆ ಕೇಳಿಕೊಂಡರೆ ಇಂಥ ಸಮಸ್ಯೆ ಇರೋಲ್ಲ.

 

ಕರುವಿನ ಜೊತೆ ಸಂಭೋಗ ನಡೆಸಿದ ಆ ಮೃಗಕಾಮಿ ಎಂಥವನು?

 

ಹೀಗೆ ದಿಟ್ಟಿಸಿ ನೋಡುವವರು ಅಥವಾ ಸ್ಟೇರ್‌ ಮಾಡುವವರು ಇದರಿಂದ ಏನು ಪಡೆಯುತ್ತಾರೆ? ಇಂಥವರಿಗೆ ಅದರಿಂಧ ಒಂದು ಬಗೆಯ ಲೈಂಗಿಕ ಸುಖ ಸಿಗುತ್ತದೆ ಅನ್ನುತ್ತಾರೆ ಲೈಂಗಿಕ ತಜ್ಞರು. ಸಾಮಾನ್ಯವಾಗಿ ಹೀಗೆ ನೋಡುವವರು ಆ ಭಾಗವನ್ನು ನಗ್ನವಾಗಿ ಕಲ್ಪಿಸಿಕೊಳ್ಳುತ್ತಿರುತ್ತಾರೆ. ಇದು ಅವರಲ್ಲಿ ಒಂದು ಬಗೆಯ ಲೈಂಗಿಕಾನುಭವವನ್ನು ಪ್ರಚೋದಿಸುತ್ತದೆ. ಇವರಲ್ಲಿ ಎರಡು ಬಗೆ. ಒಂದು, ಸಮಾಜದ ಭಯ ಇರುವವರು. ಇವರು ಕೆಲವು ಸೆಕೆಂಡ್‌ ಕಾಲ ದೇಹಭಾಗವನ್ನು ದಿಟ್ಟಿಸಿದರೂ, ನಂತರ ಯಾರಾದರೂ ನೋಡಿದರೆ ತಮ್ಮ ಮರ್ಯಾದೆ ಹರಾಜಾದೀತೆಂದು ಹೆದರಿ ಕಣ್ಣು ಹೊರಳಿಸುತ್ತಾರೆ. ಇನ್ನೊಂದು ವರ್ಗವಿದೆ, ಇವರಿಗೆ ಸಮಾಜದ ಭಯವಿಲ್ಲ. ಇವರು ನಿಮಿಷಗಟ್ಟಲೆ ಯಾರದೇ ಭಯವಿಲ್ಲದೆ ಹೆಣ್ಣು ಮಕ್ಕಳ ಅಂಗಗಳನ್ನು ಸ್ಟೇರ್‌ ಮಾಡುತ್ತಾರೆ. ಇಂಥವರಲ್ಲಿ ಸಾಮಾನ್ಯವಾಗಿ ಸಮಾಜವಿರೋಧಿ ಪ್ರವೃತ್ತಿ ಹೆಚ್ಚು ಕಂಡುಬರುತ್ತದೆ, ಹೆಣ್ಣುಮಕ್ಕಳ ಮೇಲೆ ಸಂದರ್ಭ ಸಿಕ್ಕಿದರೆ ಲೈಂಗಿಕ ದೌರ್ಜನ್ಯ ನಡೆಸಲು ಇವರು ಹೇಸಲಾರರು.

 

ಹಾಂ, ಅಂದ ಹಾಗೆ ಇದು ಭಾರತಕ್ಕೆ ಸೀಮಿತವಾದ ಸಮಸ್ಯೆಯೇನೂ ಅಲ್ಲ. ನಮ್ಮ ಅಕ್ಕಪಕ್ಕದ ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನ ಮುಂತಾದ ದೇಶಗಳಲ್ಲೂ ಈ ಪ್ರಾಬ್ಲೆಂ ಇದೆ. ಆದರೆ ಯುರೋಪ್‌, ಆಫ್ರಿಕಾ, ಅಮೆರಿಕದ ದೇಶಗಳಲ್ಲಿ ಇಲ್ಲ.

click me!