ಬೆಳಗಿನ ಬ್ರೇಕ್ ಫಾಸ್ಟ್ : ಅಮ್ಮಂದಿರ ನಿತ್ಯದ ಗೋಳು!

By Suvarna News  |  First Published Mar 15, 2020, 1:31 PM IST

ದಿನದಲ್ಲಿ ಅತಿ ಒತ್ತಡದ, ತಮಗೆ ಬೇಡವಾದ ಸಮಯ ಎಂದರೆ ಅದು ಬೆಳಗಿನ ಬ್ರೇಕ್‌ಫಾಸ್ಟ್ ತಯಾರಿಸುವ ಸಮಯ ಎನ್ನುತ್ತಾರೆ ಶೇ.84ರಷ್ಟು ಭಾರತೀಯ ಮಹಿಳೆಯರು... ಯಾರೂ ಕೇಳುವವರಿಲ್ಲವೇ ಇವರ ಗೋಳು?


ಬೆಳಗ್ಗಿಂದ ರಾತ್ರಿವರೆಗೆ ನಿಮಗೆ ಇಷ್ಟವಿಲ್ಲದ ಸಮಯ ಯಾವುದು ಅಂತ ಯಾವ ಮಹಿಳೆಯನ್ನು ಬೇಕಾದರೂ ಕೇಳಿ ನೋಡಿ, ಅವರೆಲ್ಲ ತಿಂಡಿ ತಯಾರಿಸುವ ಸಮಯ ಅಂತಾರೆ ಅಂತಿದೆ ಹೊಸ ಸರ್ವೆಯ ವರದಿಯೊಂದು. ಹೌದು, ಶೇ.84ರಷ್ಟು ಭಾರತೀಯ ಮಹಿಳೆಯರಿಗೆ ಬೆಳಗಿನ ತಿಂಡಿ ತಯಾರಿಸುವ ಸಮಯವೆಂದರೆ ತಲೆನೋವಂತೆ. 

ಬಹುತೇಕ ಮನೆಗಳಲ್ಲಿ ಮಹಿಳೆಯರಿಗೆ ಬೆಳಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ರೆಡಿ ಮಾಡಿ, ತನ್ನ ಸ್ನಾನ, ಮನೆಗೆಲಸ ಇತ್ಯಾದಿ ಪೂರೈಸಿ, ಗಂಟೆ ಎಂಟೋ ಒಂಬತ್ತೋ ಆಗೋದರೊಳಗೆ ತಿಂಡಿಯನ್ನೂ ತಯಾರಿಸಿ, ಮಕ್ಕಳಿಗೆ ತಿನ್ನಿಸಿ, ಬಾಕ್ಸ್‌ಗೆ ಹಾಕಿ ರೆಡಿ ಮಾಡುವ ಮಧ್ಯೆಯಲ್ಲಿ ಧೀರ್ಘವಾದೊಂದು ಉಸಿರು ತೆಗೆದುಕೊಳ್ಳಲೂ ಪುರುಸೊತ್ತು ಸಿಗೋದಿಲ್ಲ. ಇಂಥ ಒತ್ತಡ ಹಾಗೂ ಎನರ್ಜಿ ಬೇಡುವ ಕೆಲಸ ಯಾರಿಗಾದರೂ ಹೇಗೆ ಇಷ್ಟವಾದೀತು ಅಲ್ಲವೇ?
ಹಾಗಾಗಿ, ಆನ್‌ಲೈನ್ ಪೋರ್ಟಲ್ ಮಾಮ್‌ಪ್ರೆಸ್ಸೋ ಡಾಟ್ ಕಾಮ್ ವಿ ಗಾರ್ಡ್ ಜೊತೆ ಸೇರಿ ದೇಶಾದ್ಯಂತ ನಡೆಸಿದ ಸರ್ವೆಯಲ್ಲಿ ಶೇ.84ರಷ್ಟು ಮಹಿಳೆಯರು ತಿಂಡಿ ತಯಾರಿಸೋ ಟೈಂ ಅಂದ್ರೆ ನಂಗಾಗದು ಎಂದಿದ್ದಾರೆಂದರೆ ಆಶ್ಚರ್ಯವಾಗದು. 

Tap to resize

Latest Videos

ರೆಸ್ಟೋರೆಂಟ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಏಕಿರುತ್ತೆ ಗೊತ್ತಾ?...
 

ಭಾರತೀಯ ತಾಯಂದಿರ ಬ್ರೇಕ್‌ಫಾಸ್ಟ್ ರೂಟಿನ್ ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ಸರ್ವೆ ಕೈಗೊಳ್ಳಲಾಗಿತ್ತು ಎಂದು  ಮಾಮ್‌ಪ್ರೆಸ್ಸೋ ತಿಳಿಸಿದೆ. 

undefined

ನಾಳೆ ಏನಪ್ಪಾ ತಿಂಡಿ ಮಾಡೋದು?
ನಾಳೆ ಏನಪ್ಪಾ ತಿಂಡಿ ಮಾಡೋದು ಎಂಬುದು ತಾಯಂದಿರನ್ನು ಪ್ರತಿದಿನ ಕಾಡೋ ಪ್ರಶ್ನೆ. ಈ ಪ್ರಶ್ನೆಗೊಂದು ಅಂತ್ಯವೆಂಬುದೇ ಇಲ್ಲ. ಏನೋ ವಾರದಲ್ಲಿ ಒಂದೊಂದು ದಿನಕ್ಕೊಂದು ತಿಂಡಿಯಂತೆ ಪಟ್ಟಿ ಹಾಕಿಕೊಂಡು ಮಾಡುವ ಉಪಾಯ ಅಷ್ಟೊಂದು ಪರಿಣಾಮಕಾರಿಯಾಗದು. ಏಕೆಂದರೆ, ಭಾರತೀಯ ಅಮ್ಮಂದಿರು ಕೇವಲ ತಿಂಡಿ ಮಾಡುವುದಲ್ಲ, ಕಿಚನ್ ಮ್ಯಾನೇಜ್ ಮಾಡಬೇಕಾಗಿರುತ್ತದೆ. ಹಿಂದಿನ ದಿನ ಏನು ಉಳಿದಿದೆ, ಅದನ್ನು ಖಾಲಿ ಮಾಡೋದು ಹೇಗೆ, ಮನೆಯಲ್ಲಿ ಯಾವ ದಿನಸಿ ಇದೆ, ಅದಕ್ಕೆ ಸರಿಯಾಗಿ ಏನು ಮಾಡಬಹುದು, ಮಗುವಿನ ಪೋಷಣೆಗೆ ಯಾವುದನ್ನು ಹೆಚ್ಚು ಕೊಡಬೇಕು, ತರಕಾರಿ, ಹಣ್ಣು ಯಾವುದಿದೆ, ಅದನ್ನು ಹೇಗೆಲ್ಲ ಬಳಸುವುದು, ಸಧ್ಯ ಮಾರುಕಟ್ಟೆಯಲ್ಲಿ ಯಾವುದರ ಬೆಲೆ ಕಡಿಮೆಯಿದೆ- ಹೀಗೆ ಪ್ರತಿಯೊಂದನ್ನೂ ನೋಡಿಕೊಂಡು ಆಯಾ ದಿನದ ಅಡುಗೆ ಯೋಜಿಸಬೇಕಾಗಿರುತ್ತದೆ. 

ಇಷ್ಟೆಲ್ಲ ಪ್ಲ್ಯಾನ್ ಮಾಡಿ ತಿಂಡಿ ತಯಾರಿಸಿದರೂ, ಮಾಡಿದ್ದೇ ಮಾಡ್ತಿ ಎಂಬ ಗಂಡಮಕ್ಕಳ ಗಲಾಟೆ, ದೂರು ತಪ್ಪದು. ಹಾಗಾಗಿ, 10ರಲ್ಲಿ 8 ಮಹಿಳೆಯರಿಗೆ ತಿಂಡಿಗೆ ಹೆಚ್ಚು ಆಯ್ಕೆಗಳೇ ಇಲ್ಲ ಎನಿಸುತ್ತದೆಯಂತೆ. ಹೆಚ್ಚು ವೆರೈಟಿಯಿಲ್ಲದ ತಿಂಡಿಯಿಂದಾಗಿ ಮನೆಯಲ್ಲಿ ಎಲ್ಲರಿಗೂ ಬೋರಾಗುತ್ತದೆ ಎನ್ನುತ್ತಾರೆ ಅವರು. ಹಾಗಾಗಿ, ಬಹುತೇಕ ಮಹಿಳೆಯರಿಗೆ ತಾವು ತಯಾರಿಸುವ ತಿಂಡಿ ಬಗ್ಗೆ ಸಮಾಧಾನ ಸಿಗದು. ಇನ್ನು ಶೇ.30ರಷ್ಟು ಮಹಿಳೆಯರು ಏನು ತಿಂಡಿ ಮಾಡುವುದೆಂಬ ಯೋಚನೆಯೇ ಅತಿ ದೊಡ್ಡ ಟಾಸ್ಕ್ ಎಂದಿದ್ದಾರೆ. 

ಲೇಡೀಸ್ ಹಾಸ್ಟೆಲ್ ಹುಡುಗಿ ಅದ್ಯಾಕೆ ಅಷ್ಟೊಂದು ಜಾಣೆ ಗೊತ್ತಾ?...
ಸಹಾಯ ಸಿಗೋದಿಲ್ಲ
ಹೀಗೆ ಬೆಳಗ್ಗೆದ್ದು ಎಡೆಬಿಡದೆ ಒದ್ದಾಡುವಾಗ ಪತಿಯೋ, ಮಕ್ಕಳೋ, ಮಗದೊಬ್ಬರೋ ಸ್ವಲ್ಪವಾದರೂ ಸಹಾಯ ಮಾಡಿದರೆ ಎಂದು ಶೇ.8ರಷ್ಟು ಮಹಿಳೆಯರು ಕನಸು ಕಾಣುತ್ತಾರಾದರೆ, 10ರಲ್ಲಿ 7 ಮಹಿಳೆಯರು ಹೀಗೆ ಸ್ವಲ್ಪವೂ ಸಹಾಯ ಸಿಗದೆ ಇಡೀ ದಿನದ ಅಡುಗೆಯ ಭಾರ ಹೊರುತ್ತಾರೆ. ಅಷ್ಟೇ ಅಲ್ಲ, ಆ 10ರಲ್ಲಿ ಏಳೂ ಮಹಿಳೆಯರು ಪತಿಯ ಸಹಾಯದ ನಿರೀಕ್ಷೆ ಹುಸಿಯಾಗಿ ಖೇದ ಅನುಭವಿಸುತ್ತಾರೆ. 

ಸರ್ವೆಯ ಫಲಿತಾಂಶವು ಕುಟುಂಬವು ಅರ್ಥ ಮಾಡಿಕೊಳ್ಳಲೇಬೇಕಾದ, ಮನೆಯ ಮಹಿಳೆಯ ಮೇಲಿರುವ ಅತಿ ಒತ್ತಡದ ಸಂಗತಿಯ ಕುರಿತು ಬೆಳಕು ಚೆಲ್ಲಿದೆ. ಈ ನಿಟ್ಟಿನಲ್ಲಿ ಕುಟುಂಬ ಸದಸ್ಯರು ಸಹಾಯ ಹಸ್ತ ಚಾಚಿದರೆ ಮಹಿಳೆಯ ಮೇಲಿನ ಒತ್ತಡ ಕೊಂಚ ಮಟ್ಟಿಗೆ ಸಡಿಲಾಗುತ್ತದೆ. 

click me!