ಜಗತ್ತಿನ ಅತಿ ಚಿಕ್ಕ ಮಹಿಳೆಯನ್ನು ಅಂಗೈಯಗಲ ಹಿಡಿದೆತ್ತಿದ ಕಲಿ; ಅದು ಬ್ಯಾಡ್ ಟಚ್ ಎಂದು ಕ್ಲಾಸ್ ತಗೊಂಡ ನೆಟ್ಟಿಗರು!

By Reshma Rao  |  First Published May 18, 2024, 4:02 PM IST

7.2 ಅಡಿ ಎತ್ತರದ ದಿ ಗ್ರೇಟ್ ಕಲಿ ಜಗತ್ತಿನ ಅತಿ ಕುಳ್ಳಗಿನ ಮಹಿಳೆ ಜ್ಯೋತಿ ಆಮ್ಗೆಯನ್ನು ಒಂದೇ ಕೈಲಿ ಹಿಡಿದೆತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ, ನೆಟ್ಟಿಗರು ಈ ವಿಡಿಯೋ ನೋಡಿ ಗರಂ ಆಗಿದ್ದಾರೆ. 


ಭಾರತೀಯ ವ್ರೆಶ್ಲರ್, 7 ಅಡಿ 2 ಇಂಚಿನ 'ದಿ ಗ್ರೇಟ್ ಕಲಿ' ಜಗತ್ತಿನ ಅತ್ಯಂತ ಕುಳ್ಳ ಮಹಿಳೆ, 2 ಅಡಿಯ ಜ್ಯೋತಿ ಆಮ್ಗೆಯನ್ನು ಒಂದೇ ಕೈಲಿ ಹಿಡಿದೆತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಆದರೆ, ನೆಟ್ಟಿಗರು ಈ ವಿಡಿಯೋ ನೋಡಿ ಕಲಿಗೆ- ಅದು ಬ್ಯಾಡ್ ಟಚ್, ಆಕೆ ಮಗುವಲ್ಲ ಮಹಿಳೆ ಎಂದು ತಿಳಿದಿಲ್ವಾ ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. 

ಸ್ವತಃ ಕಲಿಯೇ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ತಕ್ಷಣಕ್ಕೆ ವೀಡಿಯೊವನ್ನು ನೋಡಿದರೆ, ಕಲಿಯ ಮಡಿಲಲ್ಲಿ ಮಗುವಿದೆ ಎಂದು ನಿಮಗೆ ಅನಿಸುತ್ತದೆ. ಕಲಿ ಎದುರು ಅಷ್ಟು ಪುಟ್ಟಗೆ ಕಾಣುತ್ತಾರೆ ಜ್ಯೋತಿ.

ರಾಮ್‌ಚರಣ್ ತನ್ನ ಅತ್ತೆ ಮಾವನೊಂದಿಗೆ ಪತ್ನಿಯ ತವರಲ್ಲಿರೋದೇಕೆ?
 

Tap to resize

Latest Videos

ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಖಲಿಯ ಒಂದಿಡೀ ಅಂಗೈಯೊಳಗೆ ಜ್ಯೋತಿಯ ಸಂಪೂರ್ಣ ದೇಹವಿದೆ. ಕಲಿ ಆಕೆಯನ್ನು ಸರಾಗವಾಗಿ ಮೇಲೆತ್ತಿ ಇಳಿಸುತ್ತಿದ್ದಾರೆ. 'ನಿಮ್ಮನ್ನು ಪುಣೆಗೆ ಕರೆದೊಯ್ಯುತ್ತೇವೆ' ಎನ್ನುತ್ತಿದ್ದಾರೆ. ಇದಕ್ಕೆ ಜ್ಯೋತಿ ನಾಚುತ್ತಾ ನಗುತ್ತಿದ್ದಾರೆ. ವಿಡಿಯೋ ಶೇರ್ ಮಾಡಿ ಕೆಲವೇ ಸಮಯದಲ್ಲಿ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ 17 ಲಕ್ಷಕ್ಕೂ ಅಧಿಕ ಲೈಕ್ ಪಡೆದಿದ್ದು, 44 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ಮುಂದೆ ಸಾಗಿದೆ. ಆದರೆ, ಸಾಕಷ್ಟು ಬಳಕೆದಾರರು ಈ ವಿಡಿಯೋ ವಿರುದ್ಧ ಗರಂ ಆಗಿದ್ದಾರೆ. 

ತಿಂಗಳಿಗೆ 1.5 ಲಕ್ಷ ರೂ.ಗೆ ಮನೆ ಬಾಡಿಗೆಗೆ ಕೊಟ್ಟ ಮಲೈಕಾ; ಮನೆಯೊಳಗೆ ಹೇಗಿದೆ?
 

'ಕಲಿಗೆ ಗುಡ್ ಟಚ್, ಬ್ಯಾಡ್ ಟಚ್ ಗೊತ್ತಿಲ್ವಾ, ಆಕೆ ಸಣ್ಣ ಮಗುವಲ್ಲ' ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. 
ಮತ್ತೊಬ್ಬರು ಕಾಮೆಂಟ್ ಮಾಡಿ, 'ಜ್ಯೋತಿ ಆಮ್ಗೆ ಕುಳ್ಳಗೆ ಇರಬಹುದು. ಆದರೆ, ಆಕೆ 31 ವರ್ಷದ ಮಹಿಳೆ. ಆಕೆಯನ್ನು ಇತರೆಲ್ಲ ಮಹಿಳೆಯಂತೆಯೇ ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಲಿಯ ಕೈಗಳು ಆಕೆಯನ್ನು ಕೆಟ್ಟ ರೀತಿಯಲ್ಲಿ ಹಿಡಿದಿವೆ. ಅಲ್ಲದೆ, ಆತ ಆಕೆಯನ್ನು ತನ್ನ ತೊಡೆಯ ಮೇಲಿರಿಸಿಕೊಳ್ಳುತ್ತಾನೆ. ಇದು ತುಂಬಾ ಅಸಹ್ಯಕರ' ಎಂದು ಕೋಪ ವ್ಯಕ್ತಪಡಿಸಿದ್ದಾರೆ. 

ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, 'ಆಕೆ ಮಗುವೂ ಅಲ್ಲ, ಗೊಂಬೆಯೂ ಅಲ್ಲ, ಸರಿಯಾಗಿ ವರ್ತಿಸಿ' ಎಂದಿದ್ದಾರೆ. 

 

ಮತ್ತೆ ಕೆಲವರು, 'ಆಕೆಯನ್ನು ತಿಂದು ಬಿಡಬೇಡ ಕಲಿ' ಎಂದಿದ್ದಾರೆ. 

click me!