ಗರ್ಭಿಣಿಯಾಗಿದ್ದಾಗ ವಾಂತಿ ತಡೆಯಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ- ವೈದ್ಯೆ ಹೇಳಿದ್ದೇನು ಕೇಳಿ

Published : Mar 08, 2026, 07:50 PM IST
Pregnancy

ಸಾರಾಂಶ

ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ವಾಕರಿಕೆ ಮತ್ತು ವಾಂತಿ ಹಾರ್ಮೋನುಗಳ ಬದಲಾವಣೆಯಿಂದ ಸಾಮಾನ್ಯವಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಿಲ್ಪ. ಜಿ. ಬಿ. ಅವರು, ಔಷಧಿಗಳ ಬದಲು ಏನು ಮಾಡಬೇಕು ಎಂದು ಹೇಳಿದ್ದಾರೆ ಕೇಳಿ. 

ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಮೊದ ಮೂರರಿಂದ ನಾಲ್ಕು ತಿಂಗಳು ವಾಕರಿಕೆ ಮತ್ತು ವಾಂತಿ (ಬೆಳಗಿನ ಬೇನೆ) ಅತ್ಯಂತ ಸಾಮಾನ್ಯ. ಹಲವರಲ್ಲಿ ಇದು ಆಗುವುದು ಉಂಟು. ತುಂಬಾ ಇಷ್ಟದ ಪದಾರ್ಥಗಳ ವಾಸನೆ ಮೂಗಿಗೆ ಹೋದ ತಕ್ಷಣ ವಾಕರಿಗೆ ಬರುವಂತೆ ಅನ್ನಿಸುವುದು ಉಂಟು. ಅನ್ನ, ಬೇಳೆ, ಸಾಂಬಾರು... ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಮಳವೂ ಕೆಟ್ಟದ್ದು ಎನ್ನಿಸುವುದು ಇದೆ. ಇದು ಹಾರ್ಮೋನ್ ಬದಲಾವಣೆಗಳಿಂದ ಸಂಭವಿಸುತ್ತದೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

ಕೆಲವೊಂದು ಬದಲಾವಣೆ ಮಾಡಿಕೊಳ್ಳಿ

ಆದರೆ ದಿನನಿತ್ಯ ಗರ್ಭಿಣಿಯರು ಮಾಡಿಕೊಳ್ಳುವ ಸ್ವಲ್ಪ ಬದಲಾವಣೆಯಿಂದ ಇದನ್ನು ಹೋಗಲಾಡಿಸಬಹುದು ಎಂದಿದ್ದಾರೆ ಖ್ಯಾತ ವೈದ್ಯೆ ಸ್ತ್ರೀರೋಗ ತಜ್ಞರಾಗಿರುವ ಡಾ. ಶಿಲ್ಪ. ಜಿ. ಬಿ. ಮೆಡಿಸಿನ್​ ಮೂಲಕ ಇದನ್ನು ಕಂಟ್ರೋಲ್​ ಮಾಡಬಹುದು. ಆದರೆ ಇದು ಕೊನೆಯ ಹಂತ. ಇದರ ಬದಲು ಮನೆಯಲ್ಲಿಯೇ ಕೆಲವೊಂದು ಬದಲಾವಣೆ ಮಾಡಿಕೊಂಡರೆ ವಾಂತಿಯನ್ನು ತಡೆಗಟ್ಟಲು ಸಾಧ್ಯ ಎಂದಿದ್ದಾರೆ ಡಾ. ಶಿಲ್ಪ.

ವೈದ್ಯೆ ಹೇಳಿರುವ ಟಿಪ್ಸ್​ ಇಲ್ಲಿದೆ:

  • ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಬಾರದು.
  • ಒಂದು ಬಿಸ್ಕೆಟ್​ ಅಥವಾ ರಸ್ಕ್​ ಪೀಸ್​ ಬೆಳಿಗ್ಗೆ ಎದ್ದ ತಕ್ಷಣ ತಿನ್ನಬೇಕು. ಇದರಿಂದ ಬಾಡಿಯಲ್ಲಿ ಶುಗರ್​ ಜಾಸ್ತಿಯಾಗುತ್ತದೆ. ಇದು ಈ ಹಂತದಲ್ಲಿ ವಾಂತಿ ತಡೆಯಲು ಒಳ್ಳೆಯದು.
  • ಬೆಳಿಗ್ಗೆ ಎದ್ದ ತಕ್ಷಣ ಅಡುಗೆ ಮನೆಗೆ ಹೋಗಬೇಡಿ. ಅಲ್ಲಿ ಹೋಗಿ ಒಗ್ಗರಣೆ ಹಾಕುವುದು ಸೇರಿದಂತೆ ಎಣ್ಣೆಯ ಸ್ಮೆಲ್​ ಎಲ್ಲಾ ಅವಾಯ್ಡ್​ ಮಾಡಬೇಕು.
  • ಎದ್ದ ತಕ್ಷಣ ಒಂದು ಗಂಟೆಯಾದರೂ ರೆಸ್ಟ್​ ತೆಗೆದುಕೊಂಡು ಆಮೇಲೆ ಅಡುಗೆ ಮನೆಗೆ ಹೋಗಲೇಬೇಕಿದ್ದರೆ ಹೋಗಬಹುದು.
  • ಯಾವುದಾದರೂ ಸ್ಮೆಲ್​ ಟ್ರಿಗರ್​ ಮಾಡುತ್ತಿದ್ದರೆ ಅದನ್ನು ಅವಾಯ್ಡ್​ ಮಾಡಿ.
  • ನೇರವಾಗಿ ನೀರನ್ನು ಹೆಚ್ಚು ಸೇವನೆ ಮಾಡಬಾರದು. ಅದರ ಬದಲು ಅದಕ್ಕೆ ಏನಾದರೂ ಮಿಕ್ಸ್ ಮಾಡಿ ಕುಡಿದರೆ ಒಳ್ಳೆಯದು.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆಯಾಗುವಂತೆ ಒತ್ತಡ ತಡೆಯಲಾಗದೇ ತಲೆ ಬೋಳಿಸಿಕೊಂಡ ಯುವತಿ ಹೇಳಿದ್ದೇನು?
ಮಹಿಳಾ ಆಟೋ ಡ್ರೈವರ್ಸ್‌ ಜೊತೆ ಮಹಿಳಾ ದಿನಾಚರಣೆ ಆಚರಿಸಿದ ಸ್ಟಾರ್‌ ಸುವರ್ಣ ವಾಹಿನಿ!