IVF ಹೇಗೆಲ್ಲಾ ನಡೆಯತ್ತೆ? ಕರ್ನಾಟಕದಲ್ಲಿ ಎಷ್ಟು ಖರ್ಚಾಗತ್ತೆ? 5 ಹಂತಗಳ ಸಂಪೂರ್ಣ ಮಾಹಿತಿ ಕೊಟ್ಟ ವೈದ್ಯೆ

Published : Jul 16, 2025, 06:42 PM IST
IVF Procedure

ಸಾರಾಂಶ

 ನಟಿ ಭಾವನಾ ಐವಿಎಫ್​ ಮೂಲಕ ಮಗುವನ್ನು ಪಡೆಯುತ್ತಿದ್ದಂತೆಯೇ ಇದಕ್ಕೆ ಕರ್ನಾಟಕದಲ್ಲಿ ಆಗುವ ಖರ್ಚೆಷ್ಟು? ಹೇಗೆಲ್ಲಾ ಪ್ರಕ್ರಿಯೆ ನಡೆಯುತ್ತದೆ ಎನ್ನುವ ಬಗ್ಗೆ ಹಂತಹಂತದ ಮಾಹಿತಿ ನೀಡಿದ್ದಾರೆ ಖ್ಯಾತ ಸ್ತ್ರೀರೋಗ ತಜ್ಞೆ 

ಸದ್ಯ ಎಲ್ಲೆಲ್ಲೂ ನಟಿ ಭಾವನಾರದ್ದೇ ಚರ್ಚೆ. ಅವಿವಾಹಿತೆಯಾಗಿರೋ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ. ಹಾಗೆಂದು ಈ ರೀತಿ ಮಗುವನ್ನು ಪಡೆದುಕೊಳ್ಳುತ್ತಿರುವವರು ಭಾವನಾ ಮೊದಲೇನಲ್ಲ. ಇದಾಗಲೇ ಕೆಲವು ನಟಿಯರು ಸೇರಿದಂತೆ ಹಲವು ಸಾಮಾನ್ಯ ಜನರೂ ಇದೇ ರೀತಿ ಮಗುವನ್ನು ಪಡೆದುಕೊಂಡಿದ್ದಾರೆ. ಆದರೆ ಭಾವನಾ ಸುದ್ದಿ ಮಾತ್ರ ಸಕತ್​ ಸದ್ದು ಮಾಡುತ್ತಿದೆ. ಈ ಬಗ್ಗೆ ಇದಾಗಲೇ ನಟಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಮಾಡಿದ್ಯಾಕೆ ಎನ್ನುವ ಬಗ್ಗೆಯೂ ಹೇಳಿದ್ದಾರೆ.

ಹಾಗಿದ್ದರೆ, ನಿಜವಾಗಿಯೂ ಐವಿಎಫ್​ ಪ್ರಕ್ರಿಯೆ ಹೇಗೆ ನಡೆಯುತ್ತೆ? ಅದಕ್ಕೆ ಎಷ್ಟು ಖರ್ಚಾಗತ್ತೆ ಎನ್ನುವುದು ಹಲವರಲ್ಲಿ ಪ್ರಶ್ನೆ ಇದೆ. ಈ ಬಗ್ಗೆ ಭಾವನಾ ಅವರು ಮಾತನಾಡಿದ್ದರೂ, ನಿಖರವಾಗಿ ಇಂತಿಷ್ಟೇ ಎನ್ನುವ ಮಾಹಿತಿ ಕೊಟ್ಟಿಲ್ಲ. ಅದು ಸ್ವಲ್ಪ ದುಬಾರಿಯಾಗಿರುವ ಕಾರಣ, ಸರ್ಕಾರದ ವತಿಯಿಂದ ಐವಿಎಫ್​ ಕೇಂದ್ರಗಳ ಸ್ಥಾಪನೆ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ ಯಾವ ಹಂತದಲ್ಲಿ ಎಷ್ಟು ಖರ್ಚಾಗುತ್ತದೆ? ಇದಕ್ಕೆ ಏನೆಲ್ಲಾ ಪ್ರಕ್ರಿಯೆಗಳು ಇವೆ ಎಂಬ ಬಗ್ಗೆ ಸ್ತ್ರೀರೋಗ ಸ್ತ್ರೀರೋಗ ತಜ್ಞೆ ಡಾ.ಗೀತಾ ಎಸ್​.ಕೆ ಇಲ್ಲಿ ಮಾಹಿತಿ ನೀಡಿದ್ದಾರೆ.

-ಮೊದಲನೆಯದ್ದಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಅದಕ್ಕೆ 5-10 ಸಾವಿರ ರೂ. ಖರ್ಚಾಗುತ್ತದೆ.

- 2ನೇ ಸ್ಟೆಪ್​ ಹಾರ್ಮೋನಲ್​ ಇಂಜೆಕ್ಷನ್​. ಇದನ್ನು ಅಂಡಾಣು ದೊಡ್ಡದಾಗಿ ಮಾಡಲು ನೀಡುವ ಚುಚ್ಚುಮದ್ದು. ಇದಕ್ಕೆ ಒಂದು ಲಕ್ಷದ ವರೆಗೆ ಖರ್ಚಾಗುತ್ತದೆ.

- 3ನೇ ಹಂತ ಅಂಡಾಣುಗಳನ್ನು ಹೊರಗೆ ತೆಗೆಯುವ ಕ್ರಿಯೆ. ಇದಕ್ಕೆ PVum Pick Up ಎಂದು ಕರೆಯಲಾಗುತ್ತದೆ. ಇದಕ್ಕೆ 10 ರಿಂದ 15 ಸಾವಿರ ರೂ. ಖರ್ಚಾಗುತ್ತದೆ.

- 4ನೇ ಹಂತ ಪ್ರಯೋಗಾಲಯದಲ್ಲಿ ಮಗುವನ್ನು ಮಾಡುವ ಪ್ರಕ್ರಿಯೆ ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ICSI ಎನ್ನಲಾಗುತ್ತದೆ. ಇದಕ್ಕೆ 35 ರಿಂದ 50 ಸಾವಿರ ರೂ. ಖರ್ಚಾಗುತ್ತದೆ.

- 5ನೇ ಪ್ರಕ್ರಿಯೆ ಮಗುವನ್ನು ಗರ್ಭಕೋಶಕ್ಕೆ ವರ್ಗಾಯಿಸುವುದು. ಇದಕ್ಕೂ ಮುಂಚೆ ಹಿಸ್ಟ್ರೋಸ್ಕೋಪಿ ಎನ್ನುವ ಚಿಕಿತ್ಸೆ ನಡೆಯುತ್ತದೆ. ಅದಕ್ಕೆ 10 ರಿಂದ 15 ಸಾವಿರ ರೂ. ಖರ್ಚಾಗುತ್ತದೆ.

- ಮಗುವನ್ನು ಗರ್ಭಕೋಶಕ್ಕೆ ವರ್ಗಾಯಿಸುವ ಕ್ರಿಯೆಗೆ (Embryo Transfer) 5 ಸಾವಿರ ರೂ. ಖರ್ಚಾಗುತ್ತದೆ.

ಆದ್ದರಿಂದ ಸಂಪೂರ್ಣ ಖರ್ಚು 2.5 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿ ಆಗುವುದಾಗಿ ವೈದ್ಯೆ ಹೇಳಿದ್ದಾರೆ.

ಇನ್ನು ಈ ಚಿಕಿತ್ಸೆ ಕುರಿತು ಹೇಳುವುದಾದರೆ, ಐವಿಎಫ್ ಪ್ರಕ್ರಿಯೆಯು ಸಾಮಾನ್ಯವಾಗಿ ಅಂಡಾಶಯದ ಪ್ರಚೋದನೆಯಿಂದ ಭ್ರೂಣ ವರ್ಗಾವಣೆಯವರೆಗೆ ಸುಮಾರು 4-6 ವಾರಗಳನ್ನು ತೆಗೆದುಕೊಳ್ಳುತ್ತದೆ. IVF ಪ್ರಕ್ರಿಯೆಯಲ್ಲಿ, ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಉತ್ತೇಜಿಸಲು ಮಹಿಳೆಗೆ ಆರಂಭದಲ್ಲಿ ಕೆಲವಷ್ಟು ಔಷಧಿಗಳನ್ನು ನೀಡಲಾಗುತ್ತದೆ. ಮೊಟ್ಟೆಗಳು ಪಕ್ವವಾದ ನಂತರ, ಅವುಗಳನ್ನು ಅಂಡಾಶಯಗಳಿಂದ ಹೊರತೆಗೆಯಲಾಗುತ್ತದೆ. ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ. ಫಲವತ್ತಾದ ಮೊಟ್ಟೆಗಳು ಭ್ರೂಣಗಳಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 10-14 ದಿನಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗುತ್ತದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!