ಕೆಲಸದಲ್ಲಿರೋ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡೋ ಸರಕಾರಿ ಯೋಜನೆಗಳಿವು!

Published : Mar 09, 2023, 03:41 PM IST
ಕೆಲಸದಲ್ಲಿರೋ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡೋ ಸರಕಾರಿ ಯೋಜನೆಗಳಿವು!

ಸಾರಾಂಶ

ಕೆಲಸದ ಕಾರಣಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು ಮಹಿಳೆಯರು ಹಿಂದೇಟು ಹಾಕ್ತಾರೆ. ಅದ್ರಲ್ಲೂ ವಿವಾಹಿತ ಮಹಿಳೆಯರಿಗೆ ಮಕ್ಕಳ ಚಿಂತೆಯಿರುತ್ತದೆ. ಆದ್ರೆ ಸರ್ಕಾರ ಅನೇಕ ವರ್ಷಗಳಿಂದ ಮಹಿಳೆಯರ ಸಮಸ್ಯೆಗೆ ಸ್ಪಂದಿಸುತ್ತ ಬಂದಿದೆ. ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿಗೆ ತಂದಿದೆ.   

ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ನಿಧಾನವಾಗಿ ಏರಿಕೆಯಾಗ್ತಿದೆ. ವೃತ್ತಿಗಾಗಿ ಅನೇಕ ಮಹಿಳೆಯರು ತಮ್ಮ ಕುಟುಂಬದಿಂದ ದೂರವಿರ್ತಾರೆ. ಬೇರೆ ಜಿಲ್ಲೆ, ರಾಜ್ಯ, ದೇಶಗಳಲ್ಲಿ ವಾಸಿಸುವವರ ಸಂಖ್ಯೆ ಸಾಕಷ್ಟಿದೆ. ಒಂದು ಕಡೆಯಿಂದ ಇನ್ನೊಂದು ಕಡೆ ಕೆಲಸಕ್ಕೆ ಹೋದಾಗ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಸ ಜಾಗದಲ್ಲಿ ವಸತಿ ವ್ಯವಸ್ಥೆ ಹೇಗೆ ಎಂಬುದು ಮೊದಲು ಅವರನ್ನು ಕಾಡುವ ಪ್ರಶ್ನೆ. 

ಭಾರತ (India) ಸರ್ಕಾರ, ವೃತ್ತಿನಿರತ (Professional) ಮಹಿಳೆಯರ ನೆರವಿಗೆ ನಿಂತಿದೆ. ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಸಖಿ ನಿವಾಸ್ (Sakhi Niwas) ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುತ್ತದೆ.  ಈ ಯೋಜನೆಯಡಿಯಲ್ಲಿ ಹಾಸ್ಟೆಲ್ ಸೌಲಭ್ಯವನ್ನು ಯಾರು ಪಡೆಯಬಹುದು ಮತ್ತು ನೋಂದಣಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.  

ದುಡಿಯೋಕೂ ಸೈ ಹೂಡಿಕೆಗೂ ರೆಡಿ; ದೇಶದಲ್ಲಿ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಏರಿಕೆ

ಸಖಿ ನಿವಾಸ ಯೋಜನೆ ಅಂದ್ರೇನು? : 1972-1973 ರಲ್ಲೇ ಭಾರತ ಸರ್ಕಾರ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಿ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲು ಬಾಡಿಗೆ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಿಸಲು, ಹಾಸ್ಟೆಲ್‌ಗಳನ್ನು ನಡೆಸಲು ಅನುದಾನವನ್ನು ಒದಗಿಸುವ ಯೋಜನೆ ಜಾರಿಗೆ ತಂದಿದೆ. 2022 ಏಪ್ರಿಲ್ ಒಂದರಿಂದ ಈ ಯೋಜನೆಯನ್ನು ಸ್ವಲ್ಪ ತಿದ್ದುಪಡಿ ಮಾಡಲಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ  ಸಖಿ ನಿವಾಸ್ ಯೋಜನೆ ಅಡಿಯಲ್ಲಿ ಬಾಡಿಗೆಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಹಾಸ್ಟೆಲ್‌ನಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಮಾತ್ರ ಉಳಿಯಲು ಅವಕಾಶವಿದೆ. ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮೊದಲು ಈ ಯೋಜನೆಯನ್ನು ವರ್ಕಿಂಗ್ ವುಮೆನ್ ಹಾಸ್ಟೆಲ್ ಎಂದು ಕರೆಯಲಾಗುತ್ತಿತ್ತು.   

ಸಖಿ ನಿವಾಸ್ ಯೋಜನೆ ಯಾವ ರಾಜ್ಯಗಳಲ್ಲಿ ಜಾರಿಯಲ್ಲಿದೆ? : ಮಹಿಳಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ದೇಶದಲ್ಲಿ 494 ಕ್ರಿಯಾತ್ಮಕ ಮಹಿಳಾ ಹಾಸ್ಟೆಲ್‌ಗಳು ಲಭ್ಯವಿದೆ. ಮಕ್ಕಳಿಗಾಗಿ ಡೇ ಕೇರ್ ಸೌಲಭ್ಯವನ್ನು ಕೂಡ ನೀಡಲಾಗಿದೆ. ಗೋವಾ, ದೆಹಲಿ, ನಾಗಾಲ್ಯಾಂಡ್, ಆಂಧ್ರಪ್ರದೇಶ, ಬಿಹಾರ ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಸ್ವಂತ ಉದ್ಯೋಗ ಶುರು ಮಾಡ್ಬೇಕಾ? ಸಹಾಯಕ್ಕೆ ಬರುತ್ತೆ Stand Up India ಯೋಜನೆ

ಸಖಿ ನಿವಾಸ್ ಯೋಜನೆಯಡಿ ಹಾಸ್ಟೇಲ್ ನಲ್ಲಿ ಯಾವ ವಯಸ್ಸಿನವರೆಗೆ ಮಕ್ಕಳು ಒಟ್ಟಿಗೆ ಬದುಕಬಹುದು? :  ಮಹಿಳೆಯು ವಿವಾಹಿತಳಾಗಿದ್ದರೆ ಸಖಿ ನಿವಾಸ್ ಯೋಜನೆಯಡಿ ಆಕೆ ಹಾಸ್ಟೇಲ್ ನಲ್ಲಿ ಇರಲು ಬಯಸಿದ್ರೆ ಆಕೆ ತನ್ನ ಜೊತೆ ಮಕ್ಕಳನ್ನು ಇಟ್ಟುಕೊಳ್ಳಬಹುದು. ಆದ್ರೆ ಮಕ್ಕಳ ವಯಸ್ಸಿಗೆ ಮಿತಿಯಿದೆ. ವೃತ್ತಿನಿರತ ಮಹಿಳೆ 18 ವರ್ಷದೊಳಗಿನ ಮಗಳನ್ನು ತನ್ನ ಜೊತೆ ಇಟ್ಟುಕೊಳ್ಳಬಹುದು. ಹಾಗೆಯೇ 12 ವರ್ಷದೊಳಗಿನ ಮಗನನ್ನು ತನ್ನ ಜೊತೆ ಹಾಸ್ಟೇಲ್ ನಲ್ಲಿ ಇಟ್ಟುಕೊಳ್ಳಬಹುದು.  ಮಕ್ಕಳಿಂದ ತಾಯಿಗೆ ದೂರವಿರುವುದು ಕಷ್ಟವಾಗುತ್ತದೆ. ಮಕ್ಕಳ ಬೆಳವಣಿಗೆಗೆ ತಾಯಿ ಪಾತ್ರ ಮಹತ್ವವಾದ ಕಾರಣ ಸರ್ಕಾರ, ಮಕ್ಕಳ ಜೊತೆ ವಾಸಕ್ಕೆ ಅವಕಾಶ ನೀಡುತ್ತದೆ.

ಸಖಿ ನಿವಾಸ್ ಹಾಸ್ಟೇಲ್ ಸೇರೋದು ಹೇಗೆ? : ಈ ಯೋಜನೆ ಲಾಭ ಪಡೆಯಲು ಆದಾಯದ ಮಿತಿಯಿದೆ. ನಗರ ಪ್ರದೇಶದಲ್ಲಿ ವಾಸಿಸುವ,  ತಿಂಗಳಿಗೆ 50,000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಮಹಿಳೆಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬಹುದು. ಈ ಸಮಯದಲ್ಲಿ ನೀವು ಹಲವಾರು ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 

ಯಾರು ಜವಾಬ್ದಾರಿ  : ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಯೋಜನೆಯು ಕೇಂದ್ರದಿಂದ ಪ್ರಾಯೋಜಿತವಾಗಿದೆ. ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಕೇಂದ್ರ ಸರ್ಕಾರ ಶೇಕಡಾ 60 ರಷ್ಟು ವೆಚ್ಚವನ್ನು ಭರಿಸುತ್ತದೆ. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಶೇಕಡಾ 15 ರಷ್ಟನ್ನು ಭರಿಸುತ್ತದೆ. ಇನ್ನುಳಿದ ಶೇಕಡಾ 25 ರಷ್ಟನ್ನು ಏಜೆನ್ಸಿಗಳು ಭರಿಸುತ್ತದೆ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?