ದುಡಿಯೋಕೂ ಸೈ ಹೂಡಿಕೆಗೂ ರೆಡಿ; ದೇಶದಲ್ಲಿ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಏರಿಕೆ
ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯರಾಗಿದ್ದರೂ ಹೂಡಿಕೆ ವಿಚಾರಕ್ಕೆ ಬಂದಾಗ ತುಸು ಹಿಂದೆ ಉಳಿದಿರೋದು ಕಂಡುಬರುತ್ತದೆ. ಆದರೆ, ಹೂಡಿಕೆ ಸಂಸ್ಥೆ ಕುವೆರ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಮಹಿಳಾ ಹೂಡಿಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದೇಶದಲ್ಲಿ ಪ್ರತಿ ನಾಲ್ಕು ಹೂಡಿಕೆದಾರರಲ್ಲಿ ಒಬ್ಬಳು ಮಹಿಳೆಯಾಗಿದ್ದಾಳೆ.
Business Desk:ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪುರುಷರಷ್ಟೇ ದುಡಿಮೆ ಮಾಡುತ್ತಿದ್ದಾರೆ ಕೂಡ. ಆದರೆ, ಹೂಡಿಕೆ ವಿಚಾರಕ್ಕೆ ಬಂದಾಗ ಮಹಿಳೆಯರು ಪುರುಷರಿಗಿಂತ ತುಸು ಹಿಂದೆಯೇ ಇದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಮಹಿಳಾ ಹೂಡಿಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೂಡಿಕೆ ಸಂಸ್ಥೆ ಕುವೆರ ತಿಳಿಸಿದೆ. ಪ್ರತಿ ನಾಲ್ಕು ಹೂಡಿಕೆದಾರರಲ್ಲಿ ಒಬ್ಬಳು ಮಹಿಳೆಯಾಗಿದ್ದಾಳೆ ಎಂದು ಹೇಳಿದೆ. ಮಹಿಳೆಯರಲ್ಲಿ ಹಣಕಾಸಿನ ಅರಿವು ಹೆಚ್ಚಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಈ ಹೂಡಿಕೆ ಸಂಸ್ಥೆ ತಿಳಿಸಿದೆ. 16ಲಕ್ಷ ಕುವೆರ ಹೂಡಿಕೆದಾರರ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಮಹಿಳಾ ಹೂಡಿಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿರೋದು ಕಂಡುಬಂದಿದೆ. ಈ ಸಂಸ್ಥೆಯಲ್ಲಿ ಒಟ್ಟು ಹೂಡಿಕೆ ಮಾಡಿರೋರಲ್ಲಿ ಶೇ.26ರಷ್ಟು ಮಂದಿ ಮಹಿಳೆಯರಾಗಿದ್ದಾರೆ. 2022ರ ಮಾರ್ಚ್ ಗೆ ಹೋಲಿಸಿದರೆ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಶೇ.19ರಷ್ಟು ಹೆಚ್ಚಳವಾಗಿದೆ. ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮೂಡಿಸಲು ವಿವಿಧ ಸಂಸ್ಥೆಗಳು ಕೈಗೊಂಡ ಕಾರ್ಯಕ್ರಮಗಳು ಕೂಡ ಈ ಬೆಳವಣಿಗೆಗೆ ಕಾರಣವಾಗಿವೆ ಎಂದು ಕುವೆರ ತಿಳಿಸಿದೆ. ಹಾಗಾದ್ರೆ ಮಹಿಳೆಯರ ಪ್ರಮುಖ ಆರ್ಥಿಕ ಗುರಿಗಳೇನು? ಯಾವೆಲ್ಲ ವಿಚಾರಗಳಿಗಾಗಿ ಅವರು ಹೂಡಿಕೆ ಮಾಡುತ್ತಾರೆ? ಇಲ್ಲಿದೆ ಮಾಹಿತಿ.
ಈ ಮೂರು ಮಹಿಳೆಯರ ಟಾಪ್ ಆರ್ಥಿಕ ಗುರಿಗಳು
ನಿವೃತ್ತಿ, ಮನೆ ಖರೀದಿ ಹಾಗೂ ಮಗುವಿಗೆ ಶಿಕ್ಷಣ ನೀಡುವುದು ಮಹಿಳೆಯ ಟಾಪ್ ಹಣಕಾಸಿನ ಗುರಿಗಳಲ್ಲಿ ಒಂದಾಗಿದೆ. ಇನ್ನು ದೇಶದ ಒಟ್ಟು ಮಹಿಳಾ ಹೂಡಿಕೆದಾರರಲ್ಲಿ ಶೇ.30ರಷ್ಟು ಮಂದಿ ನವದೆಹಲಿ, ಬೆಂಗಳೂರು ಹಾಗೂ ಮುಂಬೈ ನಗರಗಳಲ್ಲಿ ನೆಲೆಸಿರೋರಾಗಿದ್ದಾರೆ. ಇದು ಮೆಟ್ರೋ ನಗರಗಳಲ್ಲಿ ನೆಲೆಸಿರುವ ಮಹಿಳೆಯರು ಉತ್ತಮ ಹಣಕಾಸಿನ ಅರಿವು ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. 10 ಮಹಿಳಾ ಹೂಡಿಕೆದಾರರಲ್ಲಿ 6 ಮಂದಿ ಟೈರ್ 1 ಹಾಗೂ ಟೈರ್ 2 ನಗರಗಳಿಗೆ ಸೇರಿದವರಾಗಿದ್ದಾರೆ. ಇದು ಆರ್ಥಿಕ ಸಾಕ್ಷರತೆ ಕೇವಲ ಮೆಟ್ರೋ ನಗರಗಳ ಮಹಿಳೆಯರಲ್ಲಿ ಮಾತ್ರವಲ್ಲ, ಇತರ ಸಣ್ಣಪುಟ್ಟ ನಗರಗಳ ಮಹಿಳೆಯರಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕೋಕಿಲಾಬೆನ್ ಅಂಬಾನಿ ಬಳಿಯಿದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಎಲ್ಲ ತೀರ್ಪುಗಾರರನ್ನು ಖರೀದಿಸುವಷ್ಟು ಸಂಪತ್ತು!
'ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಮಹಿಳಾ ಹೂಡಿಕೆದಾರರ ಪ್ರಮಾಣದಲ್ಲಿ ಪ್ರಗತಿ ಕಂಡುಬಂದಿದೆ. ಇದು ಮಹಿಳೆಯರಲ್ಲಿ ಹಣಕಾಸಿನ ಯೋಜನೆ ಕುರಿತ ಅರಿವು ಹೆಚ್ಚುತ್ತಿರೋದಕ್ಕೆ ಸಾಕ್ಷಿಯಾಗಿದೆ. ಇದು ಹೂಡಿಕೆಯಲ್ಲಿ ಸಮಾನತೆ ಸಾಧಿಸಲು ನಮಗೆ ಹಾದಿಯೊಂದನ್ನು ಸ್ಪಷ್ಟಪಡಿಸಿದೆ' ಎಂದು ಕುವೆರದ ಸಂಸ್ಥಾಪಕ ಹಾಗೂ ಸಿಇಒ ಗೌರವ್ ರಸ್ತೋಗಿ ತಿಳಿಸಿದ್ದಾರೆ.
ಇನ್ನು ಪುರುಷ ಹಾಗೂ ಮಹಿಳಾ ಹೂಡಿಕೆದಾರರು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಇನ್ನೂ ಎಳೆಯ ವಯಸ್ಸಿನವರಾಗಿದ್ದಾರೆ. ಮಹಿಳಾ ಹೂಡಿಕೆದಾರರ ಸರಾಸರಿ ವಯಸ್ಸು 33 ವರ್ಷ. ಕಳೆದ ವರ್ಷ ಇದು 34 ವರ್ಷವಾಗಿತ್ತು. ಇದು ಎಳೆಯ ವಯಸ್ಸಿನ ಮಹಿಳೆಯರು ತಮ್ಮ ಹಣಕಾಸಿನ ಮೇಲೆ ನಿಯಂತ್ರಣ ಸಾಧಿಸುತ್ತಿರೋದಕ್ಕೆ ಸಾಕ್ಷಿಯಾಗಿದೆ. ಇನ್ನು ಸರಾಸರಿ ಅಧಿಕ ವಯಸ್ಸಿನ ಹೂಡಿಕೆ ನೋಡಿದ್ರೆ ಪುರುಷರಿಗಿಂತ ಮಹಿಳೆಯರು ಜೀವನದಲ್ಲಿ ತಡವಾಗಿ ಹೂಡಿಕೆ ನಿರ್ಣಯ ಕೈಗೊಳ್ಳುತ್ತಿರೋದು ಕಂಡುಬಂದಿದೆ.
ನೀತಾ ಅಂಬಾನಿ ಬಗ್ಗೆ ನಿಮಗೆ ತಿಳಿಯದೇ ಇರೋ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇವು!
ಇನ್ನು ಮಹಿಳೆಯರಿಗೆ ಈ ಹಿಂದಿನಂತೆ ತೆರಿಗೆ ಉಳಿತಾಯದ ನಿಧಿಗಳು ಹೂಡಿಕೆಗೆ ಅಚ್ಚುಮೆಚ್ಚಿನ ಆಯ್ಕೆಗಳಾಗಿವೆ. ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುವ ಮಹಿಳೆಯರ ಪ್ರಮಾಣ 2020ರಲ್ಲಿ ಶೇ.23ರಷ್ಟಿದ್ದರೆ 2023ರಲ್ಲಿ ಶೇ.29ಕ್ಕೆ ಏರಿಕೆಯಾಗಿದೆ. ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಲ್ಲಿ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಶೇ.32ರಷ್ಟು ಹೂಡಿಕೆಗಳಲ್ಲಿ ಶೇ.29ರಷ್ಟು ಮಹಿಳೆಯರಿಗೆ ಸೇರಿದ್ದಾಗಿದೆ.