
ಭಾರತದಂಥ ದೇಶದಲ್ಲಿ ಮೊದಲ ಲೈಂಗಿಕ ಸಂಭೋಗದ (Sex) ಅನುಭವ ಗಂಡಿಗೂ ಹೆಣ್ಣಿಗೂ ವಿಶೇಷವೇ. ಇದರ ನಂತರ ನಿಮ್ಮ ದೇಹದಲ್ಲಿ ಆಗುವ ಅನೇಕ ಬದಲಾವಣೆಗಳನ್ನು ನೀವು ಕಾಣಬಹುದು. ಮಹಿಳೆಯ ದೇಹವು ಅವರ ಮೊದಲ ಲೈಂಗಿಕ ಅನುಭವದ ನಂತರ ಹಾದುಹೋಗುವ ಅನೇಕ ಬದಲಾವಣೆಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:
ಯೋನಿ (Vagina) ಬದಲಾವಣೆಗಳು
ನೀವು ಮೊದಲ ಸೆಕ್ಸ್ ಅನುಭವ ಪಡೆದ ಬಳಿಕವಷ್ಟೇ ನಿಮ್ಮ ಯೋನಿಯು ಹಿಗ್ಗುವಿಕೆ ಕುಗ್ಗುವಿಕೆಗಳನ್ನು (ಸ್ಥಿತಿಸ್ಥಾಪಕತ್ವ) ಕಲಿಯುತ್ತದೆ. ನಿಮ್ಮ ದೇಹಕ್ಕೆ ನೀವು ಪರಿಚಯಿಸಿದ ಈ ಹೊಸ ಚಟುವಟಿಕೆಗೆ ಯೋನಿಯು ಇನ್ನೂ ಒಗ್ಗಿಕೊಳ್ಳುತ್ತಿರುವುದರಿಂದ, ಯೋನಿಯ ಒಳಭಾಗ ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಮಯ ಹೋದಂತೆ ಇದು ಉತ್ತಮಗೊಳ್ಳುತ್ತದೆ. ನಿಮ್ಮ ಯೋನಿಯ ಒಳಭಾಗ ಕಾಠಿಣ್ಯ ಕಳೆದುಕೊಂಡು ನಯವಾಗುತ್ತದೆ.
ಚಂದ್ರನಾಡಿ (Clitoris) ಮತ್ತು ಗರ್ಭಾಶಯ (Ovary)
ಚಂದ್ರನಾಡಿ ಮತ್ತು ಗರ್ಭಾಶಯಗಳು ತಾವು ಯಾವಾಗ ಸಂಕುಚಿತಗೊಳ್ಳಬೇಕು ಮತ್ತು ವಿಸ್ತರಿಸಬೇಕು ಎಂದು ತಿಳಿಯುತ್ತವೆ. ಕಾಮೋದ್ರಿಕ್ತ ಸಂದರ್ಭದಲ್ಲಿ ನಿಮ್ಮ ಚಂದ್ರನಾಡಿ ಉಬ್ಬಿಕೊಳ್ಳುತ್ತದೆ ಮತ್ತು ಗರ್ಭಾಶಯವು ಸ್ವಲ್ಪಮಟ್ಟಿಗೆ ಅಗಲವಾಗುತ್ತದೆ. ಸ್ವಲ್ಪ ಸಮಯದ ನಂತರ, ನಿಮ್ಮ ದೇಹವು ಲೈಂಗಿಕತೆಗೆ ಒಗ್ಗಿಕೊಳ್ಳುತ್ತದೆ ಮತ್ತು ನಿಮ್ಮ ದೇಹ ಕಾಮೋದ್ರಿಕ್ತಗೊಂಡಾಗ ಚಂದ್ರನಾಡಿ ಮತ್ತು ಗರ್ಭಾಶಯವು ಈ ರೂಪಾಂತರಗಳ ಮೂಲಕ ಹಾದುಹೋಗುತ್ತದೆ ಮತ್ತು ಸಂಭೋಗದ ನಂತರ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
Foreplay: ನಿಮ್ಮ ಮುನ್ನಲಿವು ಹೆಚ್ಚು ಕಾಲ ನಡೆಯಲು ಈ ಟಿಪ್ಸ್ ಅನುಸರಿಸಿ
ಸ್ತನಗಳು (Breast) ದೃಢವಾಗುತ್ತವೆ
ಸಂಭೋಗದ ಸಮಯದಲ್ಲಿ ಮತ್ತು ನಂತರ, ನಿಮ್ಮ ಸ್ತನದಲ್ಲಿನ ಅಂಗಾಂಶಗಳು ಉಬ್ಬಿಕೊಳ್ಳುತ್ತವೆ ಮತ್ತು ರಕ್ತನಾಳಗಳು ಹಿಗ್ಗುತ್ತವೆ ಮತ್ತು ಇದು ದೃಢವಾದ ಸ್ತನಗಳಿಗೆ ಕಾರಣವಾಗುತ್ತದೆ. ಆದರೆ, ಇದು ಸೆಕ್ಸ್‌ನ ಪೂರ್ವಭಾವಿ ಸ್ಥಿತಿಯಾಗಿದೆ. ಸೆಕ್ಸ್‌ನ ಬಳಿಕ ಇದು ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತದೆ.
ರಕ್ತನಾಳಗಳ ಸಂಕೋಚನ
ವಾಸೊಕೊಂಜೆಶನ್ ಎನ್ನುವುದು ವಾಸ್ತವವಾಗಿ ದೈಹಿಕ ಅಂಗಾಂಶಗಳ ಊತ, ಇದು ರಕ್ತನಾಳಗಳಲ್ಲಿ ಹೆಚ್ಚಿದ ರಕ್ತದ ಹರಿವಿನಿಂದ ಉಂಟಾಗುತ್ತದೆ, ಇದು ಸ್ತನ, ಮೊಲೆತೊಟ್ಟುಗಳು, ಯೋನಿಯ ಮತ್ತು ಚಂದ್ರನಾಡಿ ಹಿಗ್ಗಲು ಕಾರಣವಾಗುತ್ತದೆ. ಈ ಲೈಂಗಿಕ ಪ್ರಚೋದನೆಯ ಸಮಯದಲ್ಲಿ, ನಿಮ್ಮ ಜನನಾಂಗಗಳಿಗೆ ಮತ್ತು ಸ್ತನಗಳಿಗೆ ಚೆನ್ನಾಗಿ ಆಮ್ಲಜನಕಯುಕ್ತ ರಕ್ತ ಸರಬರಾಜು ಆಗುತ್ತದೆ. ಪರಿಣಾಮವಾಗಿ, ಯೋನಿಯ ಹೊರ ತುಟಿಗಳು, ಒಳಗಿನ ತುಟಿಗಳು ಮತ್ತು ಚಂದ್ರನಾಡಿಗಳು ಉಬ್ಬಿಕೊಳ್ಳುತ್ತವೆ ಮತ್ತು ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡ ಕೂಡ ಕ್ಷಣಮಾತ್ರದಲ್ಲಿ ಹೆಚ್ಚಾಗಬಹುದು.
ಚರ್ಮವು (Skin) ಹೊಳೆಯಲು ಪ್ರಾರಂಭಿಸಬಹುದು
ಇದು ವಾಸ್ತವವಾಗಿ ನಿಮ್ಮ ಕನ್ಯತ್ವವನ್ನು ಕಳೆದುಕೊಳ್ಳುವುದರಿಂದ ಆಗುವ ಗುಪ್ತ ಆದರೆ ನಿಜವಾಗಿಯೂ ಅದ್ಭುತ ಪ್ರಯೋಜನಗಳಲ್ಲಿ ಒಂದು. ನೀವು ಮೊದಲ ಬಾರಿಗೆ ಲೈಂಗಿಕತೆಯನ್ನು ಹೊಂದಿದಾಗ, ಅದು ನಿಮ್ಮ ಮುಖದ ಹೊಳಪಿನ ಮೇಲೆ ನೇರ ಪರಿಣಾಮ ಬೀರಬಹುದು. ವಿಶೇಷವಾಗಿ ಪರಾಕಾಷ್ಠೆಯೊಂದಿಗೆ ಕ್ರಿಯೆಯು ಪೂರ್ಣಗೊಂಡರೆ. ಯಾಕೆಂದರೆ ನೀವು ಲೈಂಗಿಕತೆಯನ್ನು ಹೊಂದಿದಾಗ ಅದು ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ನಿಮ್ಮ ಚರ್ಮಕ್ಕೆ ಆಮ್ಲಜನಕವನ್ನು ಪಂಪ್ ಮಾಡಲು ಸಹಾಯ ಮಾಡುತ್ತದೆ, ಇದು ಸ್ವರ್ಗೀಯ, ತಾರುಣ್ಯದ ಹೊಳಪನ್ನು ನೀಡುತ್ತದೆ. ಅಲ್ಲದೆ, ನೀವು ಸಂಭೋಗಿಸುವಾಗ, ನಿಮ್ಮ ಮೆದುಳು ಸಿರೊಟೋನಿನ್ ಮತ್ತು ಆಕ್ಸಿಟೋಸಿನ್‌ನಂತಹ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ವಿಶ್ರಾಂತಿ ನೀಡುತ್ತದೆ. ಫಲಿತಾಂಶ ನೀವು ಹೊಳೆಯುವ ಹೊಳಪಿನ ಜೊತೆಗೆ ಸ್ಪಷ್ಟವಾದ ಚರ್ಮವನ್ನು ಪಡೆಯುತ್ತೀರಿ.
ಮೊಲೆತೊಟ್ಟುಗಳು (Nipples) ಹೆಚ್ಚು ಸಂವೇದನಾಶೀಲವಾಗುತ್ತವೆ
ಮೊಲೆತೊಟ್ಟುಗಳು ಸಾಮಾನ್ಯವಾಗಿ ಹೆಚ್ಚು ಸಂವೇದನಾಶೀಲವಾಗುತ್ತವೆ: ಒಮ್ಮೆ ನೀವು ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರೆ, ನಿಮ್ಮ ದೇಹವು ವಿವಿಧ ಹೊಸ ಅನುಭವಗಳ ಮೂಲಕ ಹೋಗುತ್ತದೆ. ನಿಮ್ಮ ಮೊಲೆತೊಟ್ಟುಗಳ ಸುತ್ತ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಸ್ನಾಯುವಿನ ಒತ್ತಡವು ಅವುಗಳನ್ನು ಸಾಮಾನ್ಯಕ್ಕಿಂತ ಕೋಮಲವಾಗಿಸುತ್ತದೆ.
ಸಂತೋಷದ ಹಾರ್ಮೋನುಗಳು (Happy harmones)
ಹ್ಯಾಪಿ ಹಾರ್ಮೋನ್‌ಗಳು ಆ ಹೊಳೆಯುವ ತ್ವಚೆಗೆ ಕಾರಣ. ಪರಿಣಾಮವಾಗಿ, ನಿಮ್ಮ ದೇಹದ ಉತ್ತಮ ಹಾರ್ಮೋನ್, ಸಿರೊಟೋನಿನ್, ಸ್ರವಿಸುತ್ತದೆ. ಇದನ್ನು ಹೊರತುಪಡಿಸಿ, ನೀವು ಪರಾಕಾಷ್ಠೆ ಪಡೆದಾಗ, ಆಕ್ಸಿಟೋಸಿನ್ ಎಂದು ಕರೆಯಲ್ಪಡುವ ಮತ್ತೊಂದು ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿಮಗೆ ಸಂತೋಷ ಮತ್ತು ವಿಶ್ರಾಂತಿಯನ್ನು ನೀಡುತ್ತದೆ.
Feelfree: ಅವಳ ಹಿಂಭಾಗ ನೋಡಿದರೆ ಕಾಮೋದ್ರೇಕ! ಇದು ತಪ್ಪಾ?
ಮುಟ್ಟು ವಿಳಂಬ (Menstruation)
ನಿಮ್ಮ ಸೆರಟೋನಿನ್, ಆಕ್ಸಿಟೋಸಿನ್ ಮುಂತಾದ ಹಾರ್ಮೋನುಗಳು ಸಕ್ರಿಯವಾಗುವುದರಿಂದ, ನಿಮ್ಮ ಮುಟ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಚಿಂತಿಸಬೇಡಿ, ಇದು ಗರ್ಭಧಾರಣೆಯ ಸೂಚನೆ ಅಲ್ಲ. ಆದರೆ ದೇಹದ ಬದಲಾವಣೆಗಳ ಸೂಚನೆ.
ಭಾವನಾತ್ಮಕ ಪಲ್ಲಟಗಳು (Emotions)
ನಿಮ್ಮ ಕನ್ಯತ್ವವನ್ನು ಕಳೆದುಕೊಂಡ ನಂತರ, ನೀವು ಸಂತೋಷ ಮತ್ತು ದುಃಖದ ಎರಡೂ ಭಾವನಾತ್ಮಕ ಪ್ರಕೋಪಗಳನ್ನು ಹೊಂದಿರಬಹುದು. ಇದು ಹಾರ್ಮೋನಿನ ಬದಲಾವಣೆಗಳಿಂದಾಗಿ ಉಂಟಾಗುವುದು.
ಮೊದಲ ಬಾರಿಗೆ ನೋವು
ನೆನಪಿಡಿ, ಪ್ರತಿಯೊಬ್ಬರ ಮೊದಲ ಸೆಕ್ಸ್ ಅನುಭವವೂ ವಿಭಿನ್ನವಾಗಿರುತ್ತದೆ. ನೀವು ಮೊದಲ ಬಾರಿಗೆ ಸಂಭೋಗಿಸಿದಾಗ, ಘರ್ಷಣೆಯ ಕಾರಣದಿಂದಾಗಿ, ಇನ್ನೂ ಲ್ಯೂಬ್ರಿಕೇಶನ್ ಅಗತ್ಯವಿರುವುದರಿಂದಾಗಿ ನೋವುಂಟಾಗಬಹುದು ಅಥವಾ ಯೋನಿಪೊರೆ (Heymen) ಹರಿಯುವುದರಿಂದ ನೋವಾಗಬಹುದು. ಲೈಂಗಿಕತೆಯು ನೋವಿನಿಂದ ಕೂಡಿದ್ದರೆ ನೀವು ಲ್ಯೂಬ್ರಿಕೆಂಟ್ಸ್ ಅಥವಾ ಬೇರೆಬೇರೆ ಕೋನಗಳನ್ನು ಪ್ರಯತ್ನಿಸಬಹುದು. ನಿಧಾನವಾಗಿ ಯತ್ನಿಸಲು ನಿಮ್ಮ ಸಂಗಾತಿಗೆ ಹೇಳಬಹುದು. ಮತ್ತೂ ನೋವಿನಿಂದ ಕೂಡಿದ್ದರೆ ತಜ್ಞರ ಸಲಹೆ ಬೇಕು.
Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.