ಬೆಳಗ್ಗಿನವರೆಗೂ ಮುಂದುವರೆದ ಮದುವೆ ಸಂಪ್ರದಾಯ... ಮಂಟಪದಲ್ಲೇ ನಿದ್ದೆಗೆ ಜಾರಿದ ವಧು

By Suvarna News  |  First Published Dec 19, 2021, 1:12 PM IST
  • ಬೆಳಗ್ಗಿನವರೆಗೂ ಮುಂದುವರೆದ ಮದುವೆ ಸಂಪ್ರದಾಯ
  • ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ ವಧು
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
     

ಮುಂಬೈ(ಡಿ.19):  ಭಾರತೀಯ ಮದುವೆಗಳೇ ಹಾಗೆ ವಿವಿಧ ವೈವಿಧ್ಯ ಸಂಪ್ರದಾಯಗಳನ್ನು ಹೊಂದಿರುವ ಭಾರತೀಯ ಮದುವೆಗಳು ನವ ವಧುವರರನ್ನು ನಿಂತೇ ಸುಸ್ತಾಗಿಸುವಂತೆ ಮಾಡುತ್ತಿದೆ. ಕೆಲವು ಸಮುದಾಯಗಳಲ್ಲಿ ಮುಂಜಾನೆಯಿಂದ ಆರಂಭವಾಗುವ ಹಲವು ಸಂಪ್ರದಾಯಗಳು ರಾತ್ರಿ ಕಳೆದು ಮರು ದಿನ ಬೆಳಗ್ಗಿನ ಜಾವದವರೆಗೂ ಮುಂದುವರೆಯುತ್ತವೆ. ಹೀಗೆ ಮದುವೆಯಲ್ಲಿ ನಡೆಸುವ ಸಂಪ್ರದಾಯ ದಿನ ಕಳೆದು ರಾತ್ರಿ ಕಳೆದು ಬೆಳಗ್ಗಿನ ಜಾವದವರೆಗೂ ಮುಂದುವರೆದ ಪರಿಣಾಮ ವಧುವೊಬ್ಬಳು ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ ಘಟನೆ ನಡೆದಿದೆ. ತನ್ನ ಮದುವೆಯ ಮಂಟಪದಲ್ಲೇ ವಧು ನಿದ್ದೆಯಿಂದ ತೂಕಾಡಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವೀಕ್ಷಕರು ತಮಾಷೆಯಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. 

Battered Suitcase ಹೆಸರಿನ ಇನ್ಸ್ಟ್ರಾಮ್‌ ಖಾತೆಯಿಂದ ವಧು ನಿದ್ರಿಸುತ್ತಿರುವ ವಿಡಿಯೋವನ್ನು ಫೋಸ್ಟ್‌ ಮಾಡಲಾಗಿದೆ. 'ಇಲ್ಲಿ ನೋಡಿ ನಿದ್ರಿಸುತ್ತಿರುವ ವಧುವನ್ನು. ಈಗಾಗಲೇ ಸಮಯ  ಬೆಳಗ್ಗೆ 6.30 ಆಗಿದೆ ಆದರೂ ಮದುವೆಯ ಸಂಪ್ರದಾಯ ಇನ್ನು ಮುಗಿದಿಲ್ಲ' ಎಂದು ಬರೆದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಧು ಸುಂದರವಾದ ಕೆಂಪು ಹಾಗೂ ಕೇಸರಿ ಮಿಶ್ರಿತ ಬಣ್ಣದ ಲೆಹೆಂಗಾ ಧರಿಸಿ ಸೋಫಾದಲ್ಲಿ ಕುಳಿತಿದ್ದಾರೆ. ಇವರ ಪಕ್ಕದಲ್ಲೇ ವರನ್ನು ಇದ್ದಾನೆ. ಈ ವೇಳೆ ವಧು ಕುಳಿತಲ್ಲಿಂದಲೇ ಬರುವ ನಿದ್ದೆಯನ್ನು ತಡೆದುಕೊಳ್ಳಲಾಗದೇ ತೂಕಾಡಿಸುತ್ತಿದ್ದಾಳೆ. ವಧು ಲೋಕದ ಪಾರವೇ ಇಲ್ಲದೇ ನಿದ್ದೆಗೆ ಜಾರಿದ ಈ ವೇಳೆ ಆಕೆಯ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. 

Tap to resize

Latest Videos

ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು, ಬೇಷ್ ಎಂದ ನೆಟ್ಟಿಗರು!

ಇದು ವಧುವಿನ ತಪ್ಪಲ್ಲ ಬಿಡಿ ಭಾರತೀಯ ಮದುವೆ(Indian Wedding) ಸಂಪ್ರದಾಯಗಳೇ ಹಾಗಿರುತ್ತವೆ. ಮಣ ಭಾರದ ಲೆಹೆಂಗಾ ಅಥವಾ ಸೀರೆಯನ್ನು ಉಡುವುದರ ಜೊತೆ ಅದಕ್ಕೆ ತಕ್ಕಂತಹ ಸಾಕಷ್ಟು ಆಭರಣಗಳನ್ನು ಧರಿಸಿರಬೇಕು. ಅದರ ಜೊತೆಗೆ ಮೇಕಪ್‌ನ ಕಿರಿಕಿರಿಯೂ ಇದ್ದು, ಬೆಳಗ್ಗಿನಿಂದ ಮದುವೆ ಸಂಪ್ರದಾಯ ಮುಗಿಯುವವರೆಗೂ ವಧು ಸ್ಥಳವನ್ನು ಬಿಟ್ಟು ಕದಲ್ಲದೇ ಅಲ್ಲೇ ನಿಂತಿರಬೇಕು ಅಥವಾ ಕೂತಿರಬೇಕು. ಕೆಲವು ಸಮುದಾಯಗಳಲ್ಲಿ ಮದುವೆ ದಿನ ಮಧು ಮಕ್ಕಳಿಗೆ ಘನಾಹಾರವೂ ಇಲ್ಲ. ಎಳನೀರು ಅಥವಾ ಜ್ಯೂಸ್‌ ಏನಾದರೂ ನೀಡಿ ಅಲ್ಲಿಗೆ ಸರಿ ಮಾಡಿ ಬಿಡುತ್ತಾರೆ. ಹೀಗಾಗಿ ಮದುವೆಯಲ್ಲಿ ವಧು ಸುಸ್ತಾಗಿ ನಿದ್ದೆಗೆ ಜಾರಿದ್ದು ಸಾಮಾನ್ಯವೇ ಸರಿ ಆದರೆ ಆಕೆಯ ಕಿಡಿಗೇಡಿ ಸ್ನೇಹಿತರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕುವ ಮೂಲಕ ವಧು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ. 

 

ಹಿಂದೂ ವಿವಾಹ(Hindu Wedding)ಗಳಲ್ಲಿ ಅನೇಕ ಸಂಪ್ರದಾಯ ಮತ್ತು ಆಚರಣೆಗಳಿವೆ. ಹಿಂದಿನಿಂದ ಆಚರಿಸಿಕೊಂಡು ಬಂದ ಕೆಲವು ಸಂಪ್ರದಾಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಮದುವೆಯಾದ ಬಳಿಕ ವಧು, ವರನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಾಳೆ. ತಾನು ಮದುವೆಯಾಗುವ ಗಂಡನ ಆಶೀರ್ವಾದ ತನ್ನ ಮೇಲೆ ಯಾವಾಗಲೂ ಇರಲೆಂದು ಈ ಆಚರಣೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಸಮಯ ಬದಲಾಗುತ್ತಿದ್ದಂತೆ ಅನೇಕರು ತಮ್ಮದೇ ಶೈಲಿಯನ್ನು ಪಾಲಿಸುತ್ತಿದ್ದು, ಹಳೆಯ ಆಚರಣೆಗೆ ಗುಡ್ ಬೈ ಹೇಳುತ್ತಿದ್ದಾರೆ. ಮದುವೆ(Marriage)ಯಾಗುವ ನವದಂಪತಿ ಕೂಡ ಹಳೆಯ ಸಂಪ್ರದಾಯಗಳಿಗೆ ತೀಲಾಂಜಲಿ ಇಡುತ್ತಿದ್ದು, ತಮ್ಮದೇ ವಿನೂತನ ಸಂಪ್ರದಾಯಗಳನ್ನು ಹುಟ್ಟುಹಾಕುತ್ತಿದ್ದಾರೆ.

Viral video: ಲೆಹಂಗಾ ಬೇಡ... ಹರಿದ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟ ವಧು

ಇತ್ತೀಚಿನ ಒಂದು ವಿಡಿಯೋದಲ್ಲಿ ವಧು-ವರರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹದ ಬಳಿಕ ವಧು ವರನ ಪಾದಗಳನ್ನು ಮುಟ್ಟಿ ಆತನಿಂದ ಆಶೀರ್ವಾದ ಪಡೆದುಕೊಂಡಿದ್ದಾಳೆ. ನಗುನಗುತ್ತಲೇ ಪತಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಪತ್ನಿಯನ್ನು ಆತ ತಡೆಯುತ್ತಾನೆ. ಕೂಡಲೇ ಆತ ಕೂಡ ಪತ್ನಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಆದರೆ ಪತಿ ತನ್ನ ಪಾದಗಳನ್ನು ಮುಟ್ಟುವುದು ತಪ್ಪು ಎಂಬಂತೆ ಪತ್ನಿ ಹಿಂದಕ್ಕೆ ಜಿಗಿದು ನಿರಾಕರಿಸುತ್ತಾಳೆ. ಗಂಡ ತನ್ನ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಕೂಡಲೇ ಹೆಂಡತಿ ಆಶ್ಚರ್ಯದಿಂದ ಹಿಂದಕ್ಕೆ ಜಿಗಿದಿರುವ ಈ ವಿಡಿಯೋ(Viral Video)ವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದ್ದು ಸಾಕಷ್ಟು ಲೈಕ್ಸ್‌ ಬಂದಿವೆ.

click me!