ಪ್ರಗ್ನೆನ್ಸಿ ಸಮಯದಲ್ಲೂ ಫಿಟ್ನೆಸ್ ಕಾಯ್ದುಕೊಂಡ ದೀಪಿಕಾ ಸಿಕ್ರೇಟ್‌ ರಿವೀಲ್ ಮಾಡಿದ ಟ್ರೈನರ್

Published : Sep 15, 2024, 05:01 PM ISTUpdated : Sep 16, 2024, 07:48 AM IST
ಪ್ರಗ್ನೆನ್ಸಿ ಸಮಯದಲ್ಲೂ ಫಿಟ್ನೆಸ್ ಕಾಯ್ದುಕೊಂಡ ದೀಪಿಕಾ ಸಿಕ್ರೇಟ್‌ ರಿವೀಲ್ ಮಾಡಿದ ಟ್ರೈನರ್

ಸಾರಾಂಶ

ದೀಪಿಕಾ ಪಡುಕೋಣೆ ತಮ್ಮ ಗರ್ಭಾವಸ್ಥೆಯ ಸಮಯದಲ್ಲೂ ಅಷ್ಟೊಂದು ಫಿಟ್‌ನೆಸ್ ಕಾಯ್ದುಕೊಂಡಿದ್ದು ಹೇಗೆ ಎಂಬ ವಿಚಾರವನ್ನು ಅವರ ಫಿಟ್‌ನೆಸ್ ಟ್ರೈನರ್‌ ಹಾಗೂ ಯೋಗ ಇನ್ಸ್ಟ್ರಕ್ಟರ್‌ ಆದ ಅನ್ಶುಕಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು ಅದೀಗ ಸಂಚಲನ ಸೃಷ್ಟಿಸಿದೆ. 

ದೀಪಿಕಾ ಪಡುಕೋಣೆ ತಮ್ಮ ಪ್ರಗ್ನೆನ್ಸಿ ವಿಚಾರದ ಬಗ್ಗೆಯೇ ಸಾಕಷ್ಟು ಟ್ರೋಲ್ ಆದ ನಟಿ. ತಮ್ಮ ಗರ್ಭಾಧಾರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ನಟಿಯೂ ಇಷ್ಟೊಂದು ಟ್ರೋಲ್ ಆಗಿಲ್ಲ, ಕೆಲವರಂತು ಆಕೆ ಗರ್ಭಿಣಿಯೇ ಅಲ್ಲ, ಆಕೆಯದ್ದು ಫೇಕ್ ಪ್ರಗ್ನೆಂಟ್, ನಕಲಿ ಪ್ರಗ್ನೆಂಟ್ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಗೈದಿದ್ದರು. ಪ್ರಗ್ನೆನ್ಸಿಯ ಸುಂದರ ಫೋಟೋಶೂಟ್ ಮೂಲಕ ಅದಕ್ಕೆಲ್ಲಾ ತೆರೆ ದೀಪಿಕಾ ರಣ್ವೀರ್ ತೆರೆ ಎಳೆದಿದ್ದರು. ದೀಪಿಕಾ ಅವರನ್ನು ಜನ ಹೀಗೆ ಟೀಕಿಸುವುದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು, ಪ್ರಗ್ನೆನ್ಸಿ ಸಮಯದಲ್ಲೂ ಅವರಿಗಿದ್ದ ಸುಂದರ ಫಿಟ್‌ನೆಸ್ ಹಾಗೂ ಗರ್ಭಿಣಿ ಎಂಬುದನ್ನು ತಲೆಯಲ್ಲಿಟ್ಟುಕೊಳ್ಳದೇ ಫಿಲಂ ಪ್ರಮೋಷನ್‌ಗಳಲ್ಲೆಲ್ಲಾ ಹೈ ಹೀಲ್ಡ್ ಧರಿಸಿ ಓಡಾಡಿದ್ದು, ಹೀಗಿರುವಾಗ ದೀಪಿಕಾ ಪಡುಕೋಣೆ ತಮ್ಮ ಗರ್ಭಾವಸ್ಥೆಯ ಸಮಯದಲ್ಲೂ ಅಷ್ಟೊಂದು ಫಿಟ್‌ನೆಸ್ ಕಾಯ್ದುಕೊಂಡಿದ್ದು ಹೇಗೆ ಎಂಬ ವಿಚಾರವನ್ನು ಅವರ ಫಿಟ್‌ನೆಸ್ ಟ್ರೈನರ್‌ ಹಾಗೂ ಯೋಗ ಇನ್ಸ್ಟ್ರಕ್ಟರ್‌ ಆದ ಅನ್ಶುಕಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು ಅದೀಗ ಸಂಚಲನ ಸೃಷ್ಟಿಸಿದೆ. 

ದೀಪಿಕಾ ಪ್ರಗ್ನೆನ್ಸಿ ದಿನಗಳ ಎರಡು ಫೋಟೋಗಳನ್ನು ಜೊತೆಗೆ ಪೋಸ್ಟ್ ಮಾಡಿರುವ ಅನ್ಶುಕಾ ದೀಪಿಕಾ ಅವರು ಫಾಲೋ ಮಾಡಿದ ಸುಂದರವಾದ 9 ತಿಂಗಳ ಪೇರೆಂಟಲ್ ಯೋಗದ ( prenatal yoga) ಬಗ್ಗೆ  ಮಾತನಾಡಿದ್ದಾರೆ.  ದೀಪಿಕಾ ಗರ್ಭಾವಸ್ಥೆಯಲ್ಲಿ ಎಷ್ಟು ಫಿಟ್ ಆಗಿದ್ದರೆಂದರೆ ಅನೇಕರು ಆಕೆ ಗರ್ಭಿಣಿಯಲ್ಲ ಎಂದು ಸಂಶಯಪಡುವಂತೆ ಮಾಡಿದ್ದರು. ತಮ್ಮ ಈ ಅವಧಿಯಲ್ಲಿ ದೀಪಿಕಾ ದಿನವೂ ಉಸಿರಾಟದ ವ್ಯಾಯಾಮವನ್ನು ಮಾಡುತ್ತಿದ್ದರು (breathing exercise) ಹಾಗೂ ಕೆಲವು ಆಸನಗಳನ್ನು ಮಾಡುತ್ತಿದ್ದರು ಇದು ಅವರನ್ನು ತಮ್ಮ ಜೀವನದ ವಿಶೇಷ ಅವಧಿಗೆ ಸಿದ್ಧಪಡಿಸಿತ್ತು. ಸದಾ ಪಾಸಿಟಿವ್ ಆಗಿ ಯೋಚಿಸುತ್ತಿದ್ದ ದೀಪಿಕಾ ಈ ಎಲ್ಲಾ ಪ್ರಕ್ರಿಯೆಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಗಾಢವಾಗಿ ನಂಬಿದ್ದರು. 

ಇದನ್ನೂ ಓದಿ: ಐಶ್ವರ್ಯಾ ರೈಯಂತೆ ಮಗಳಿಗಾಗಿ ದಾದಿ ನೇಮಿಸದೇ ತಾವೇ ನೋಡ್ಕೋತಾರಂತೆ ದೀಪಿಕಾ ಪಡುಕೋಣೆ

ಅವರ ಈ ಪ್ರಯಾಣ ಯಾವುದೇ ಸುಂದರ ಕ್ಷಣಗಳಿಂತ ಕಡಿಮೆ ಇರಲಿಲ್ಲ. ನಿಮಗೆ ಪ್ರತಿ ಉಸಿರು, ಸ್ಟ್ರೆಚ್‌ ಹಾಗೂ ಆಸನದ ಬಗ್ಗೆ ಗೈಡ್‌ ಮಾಡುತ್ತಾ ನಿಮ್ಮ ಜೀವನದ ಹೊಸ ಭಾಗಕ್ಕೆ ನಿಮ್ಮ ಸಿದ್ಧಪಡಿಸಲು ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ನಂಬಲಾರದ ಗೌರವವಾಗಿದೆ. ಈ ಪ್ರಕ್ರಿಯೆಯ ಬಗ್ಗೆ ನಿಮಗಿದ್ದ ಬದ್ಧತೆ, ಪಾಸಿಟಿವ್ ಯೋಚನೆ ಹಾಗೂ ನಂಬಿಕೆ  ಪರಿಣಾಮ ನಿಜವಾಗಿಯೂ ಕಂಡು ಬಂದಿದೆ.  ಮತ್ತು ನಿಮ್ಮ ಈ ಪ್ರಯಾಣದ ಭಾಗವಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಅನ್ಶುಕಾ ಬರೆದುಕೊಂಡಿದ್ದಾರೆ. 

ಅಲ್ಲದೇ ದೀಪಿಕಾ ಅವರ ಬಗ್ಗೆ ಶ್ಲಾಘಿಸಿದ ಅನ್ಶುಕಾ ಅವರಿಂದಾಗಿ ತಮಗೆ ಬಹಳ ಹೆಮ್ಮೆಯಾಗಿದೆ ಎಂದಿದ್ದಾರೆ ಅಲ್ಲದೇ ದೀಪಿಕಾ ಅವರ ತಾಯ್ತನದ ಹೊಸ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ. ಇವತ್ತು ನನ್ನ ಹೃದಯವೂ ಸಂಪೂರ್ಣವಾಗಿ ನಿಮ್ಮ ಸುಂದರ ಆರೋಗ್ಯದ ಹಾಗೂ ಖುಷಿಯಾಗಿರುವ ಮಗುವಿನ ಬಗ್ಗೆ ಸಂಭ್ರಮಿಸುತ್ತಿದೆ. ಇದು ನಿಮ್ಮ ಹೊಸ ಆರಂಭ, ಕೊನೆ ಇಲ್ಲದ ಪ್ರೀತಿ ಹಾಗೂ ತಾಯ್ತನದ ಮ್ಯಾಜಿಕ್ ಇದು. ಈ ಪರಿವರ್ತನೆಯ ಅನುಭವದ ಭಾಗವಾಗಿದ್ದಕ್ಕೆ ಪುಣ್ಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

ಗರ್ಭಿಣಿಯಾಗುವುದಕ್ಕೂ ಮೊದಲು ಫಿಟ್ನೆಸ್ ಉತ್ಸಾಹಿಯಾಗಿದ್ದ ದೀಪಿಕಾ, ಫೆಬ್ರವರಿಯಲ್ಲಿ ತಾವು ಗರ್ಭಿಣಿಯಾದ ವಿಚಾರವನ್ನು ಹೇಳಿಕೊಂಡಿದ್ದರು. ಜುಲೈನಿಂದ ಪೇರೆಂಟಲ್ ಯೋಗ ಆರಂಭಿಸಿದ ಅವರು ಈ ಬಗ್ಗೆ ಇನ್ಸ್ಟಾದಲ್ಲಿ ಪೋಸ್ಟ್ ಕೂಡ ಮಾಡಿದ್ದರು. ಗರ್ಭಿಣಿಯಾಗಿರುವ ವೇಳೆಯೂ ಅವರು ವಿಪರೀತ ಕರಣಿ ಆಸನವನ್ನು ಮಾಡಿದ್ದರು. ಈ ಆಸನವು ಮಾಂಸಖಂಡಗಳಿಗೆ, ಗಂಟುಗಳಿಗೆ ಸ್ವಲ್ಪ ರಿಲೀಫ್ ನೀಡುತ್ತದೆ ಜೊತೆಗೆ ಊದಿದ ಪಾದಗಳು, ಕಾಲುಗಳ ಊತ ಇಳಿಸುತ್ತದೆ. ತಮ್ಮ ಈ ಭಂಗಿಯು ಕೆಳ ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಭಾರ ಮತ್ತು ಆಯಾಸದ ಭಾವನೆಗಳನ್ನು ನಿವಾರಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಸೆಪ್ಟೆಂಬರ್ 8ರಂದು ಮಗಳನ್ನು ಬರಮಾಡಿಕೊಂಡಿರುವ ದೀಪಿಕಾ ಈಗ ಆಸ್ಪತ್ರೆಯಿಂದ ಮನೆಗೆ ಡಿಸ್ಚಾರ್ಜ್ ಆಗಿ ಬಂದಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ದಿನದ ವೇಳಾಪಟ್ಟಿ ಹೇಗೆ ಬದಲಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಎನ್‌ಡಿಎ ನಂತರವೂ ಮದ್ವೆ ವೀಡಿಯೋ ಲೀಕ್ ಮಾಡುವಂತೆ ಕೇಳಿದ್ರ ಬಾಲಿವುಡ್ ಜೋಡಿ: ಸೆಲೆಬ್ರಿಟಿ ವಿಡಿಯೋಗ್ರಾಫರ್ ಹೇಳಿದ್ದೇನು?


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?