ಮಹಿಳೆಯರೇ ಗರ್ಭ ನಿರೋಧಕ ಮಾತ್ರೆ ಸೇವಿಸ್ತೀರಾ , ಸ್ತನ ಹಿಗ್ಗುವಿಕೆ ಸಮಸ್ಯೆನೂ ಕಾಡ್ಬೋದು ಎಚ್ಚರ..!

By Suvarna News  |  First Published Sep 11, 2022, 6:27 PM IST

ಗರ್ಭನಿರೋಧಕ ಮಾತ್ರೆಗಳು ಮಹಿಳೆಯರ ಅನುಕೂಲಕ್ಕಾಗಿ ಮಾಡಿದ್ದರೂ, ಅದರಿಂದ ಕೆಲವೊಮ್ಮೆ ಸಮಸ್ಯೆಗಳು ಸಹ ಆಗುತ್ತವೆ. ಅಸಮರ್ಪಕ ನಿರ್ವಹಣೆಯಿಂದ ಸಾಕಷ್ಟು ಸಮಸ್ಯೆಗಳನ್ನು ಈ ಗರ್ಭನಿರೋಧಕ ಮಾತ್ರೆಗಳಿಂದ ಅನುಭವಿಸಬೇಕಾಗುತ್ತದೆ. ಆದ್ದರಿಂದ ಇದನ್ನು ತೆಗೆದುಕೊಳ್ಳುವ ಮೊದಲು ಮಹಿಳೆಯರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.


ಲೈಂಗಿಕ ಕ್ರಿಯೆಯ ಬಳಿಕ ಗರ್ಭಧರಿಸುವ ಆತಂಕ ಮಹಿಳೆಯರಿಗೆ ಸಹಜವಾಗಿಯೇ ಕಾಡುತ್ತದೆ.  ಅಂತಹ ಸಂದರ್ಭಗಳಲ್ಲಿ ಅನೇಕರು ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಹಾಗಾದರೆ ಗರ್ಭನಿರೋಧಕ ಮಾತ್ರೆಗಳನ್ನು ತೆಗದುಕೊಳ್ಳುವುದರಿಂದ ಏನೆಲ್ಲಾ ಅಡ್ಡ ಪರಿಣಾಮವಾಗುತ್ತದೆ ಎನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ

ಗರ್ಭನಿರೋಧಕ ಮಾತ್ರೆ ಪದೇ ಪದೇ ಬಳಸುವುದು ಒಳ್ಳೆಯದಲ್ಲ
ಲೈಂಗಿಕ ಸಂಪರ್ಕ (Sex) ನಡೆದಾಗ ಅದು ಅಂಡೋತ್ತಿಯ ದಿನಗಳು ಅಥವಾ ಅದರ ಹತ್ತಿರದ ದಿನಗಳಾಗಿದ್ದರೆ ಅಂತಹ ಸಂದರ್ಭದಲ್ಲಿ ಗರ್ಭನಿರೋಧಕ ಮಾತ್ರೆ (Birth control pills)ಗಳನ್ನು ತೆಗೆದುಕೊಳ್ಳಬಹುದು. ನೆನಪಿಡಿ ಲೈಂಗಿಕ ಸಂಪರ್ಕದ ನಂತರ 72 ಗಂಟೆಯೊಳಗೆ ಈ ತುರ್ತು ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಆದರೆ ಇದನ್ನು ಪದೇ ಪದೇ ಬಳಸುವುದು ಒಳ್ಳೆಯದಲ್ಲ. ಒಂದು ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳಬಹುದು ಅದಕ್ಕಿಂತ ಜಾಸ್ತಿ ತೆಗೆದುಕೊಂಡರೆ ಹಾರ್ಮೋನುಗಳಲ್ಲಿ ಏರುಪೇರಾಗಿ ಹೆಚ್ಚು ರಕ್ತಸ್ರಾವವಾಗುವ ಅಪಾಯ (Danger)ವಿರುತ್ತದೆ ಎಂದು  ವೈದ್ಯರು ಹೇಳುತ್ತಾರೆ. 

Tap to resize

Latest Videos

ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಬಂದಿದೆ Birth Control Pills

ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಾಗ ಕೆಲವರಲ್ಲಿ ವಾಂತಿ ಅಥವಾ, ವಾಕರಿಕೆಯ ಅನುಭವ ಕಾಡಬಹುದು. ಜೊತೆಗೆ ತಲೆನೋವು ಕೂಡ ಕಾಡುತ್ತದೆ. ಹೀಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ 3 ರಿಂದ 4 ದಿನಗಳ ನಂತರ ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಆದರೆ ಇದು ಮಾಸಿಕ ದಿನಗಳ ಸ್ರವಿಸುವಿಕೆ ಆಗಿರುವುದಿಲ್ಲ. ಮಾತ್ರೆಯ ಅಡ್ಡ ಪರಿಣಾಮದಿಂದ ಈ ರೀತಿ ಆಗಿರುತ್ತದೆ. ಇದನ್ನು ವಿಥ್‌ ಡ್ರಾವಲ್‌ ಬ್ಲೀಡಿಂಗ್‌ ಎನ್ನುತ್ತಾರೆ. ಹೀಗಾಗಿ ಇದು ಮುಟ್ಟಿನ ದಿನಗಳ ಮೇಲೂ ಪರಿಣಾಮ ಬೀರುತ್ತದೆ.

ಕೆಲವೊಮ್ಮೆ ಎಷ್ಟೇ ಗರ್ಭ ನಿರೋಧಕ ತೆಗೆದುಕೊಂಡರೂ ಗರ್ಭ ಧರಿಸುವ ಸಾಧ್ಯತೆ
ಗರ್ಭನಿರೊಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ದಿನಗಳಲ್ಲಿ ಬದಲಾವಣೆಯಾಗುತ್ತದೆ. ಮುಟ್ಟಿನ ದಿನ ತಡವಾಗಬಹುದು. ಅದೇ ರೀತಿ ಮುಂದಿನ ಕೆಲವು ತಿಂಗಳ ಮಾಸಿಕ ದಿನಗಳು ಕೂಡ ಸರಿಯಾಗಿ ಆಗದೇ ಇರಬಹುದು. ಕೆಲವೊಮ್ಮೆ ಎಷ್ಟೇ ಗರ್ಭ ನಿರೋಧಕ ತೆಗೆದುಕೊಂಡರೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ತುರ್ತು ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಶೇ. 10 ರಿಂದ 15 ಪ್ರತಿಶತದಷ್ಟು ಗರ್ಭಧಾರಣೆ (Pregnant)ಯಾಗುತ್ತದೆ. ಹೀಗಾಗಿ ಲೈಂಗಿಕತೆಯ ನಂತರದ ದಿನಗಳಲ್ಲಿ ಋತುಚಕ್ರ (Menstruation) ವಾಗಿಲ್ಲವೆಂದರೆ ಗರ್ಭಧಾರಣೆಯನ್ನು ತಪಾಸಣೆ ಮಾಡಿಸುವುದು ಒಳ್ಳೆಯದು.

Planned Parenthood: ಮಕ್ಕಳಾಗದಿರಲು ತೆಗೆದುಕೊಳ್ಳುವ ಮಾತ್ರೆಗಳು ಸುರಕ್ಷಿತವೇ ?

ತೂಕದಲ್ಲಿ ವ್ಯತ್ಯಾಸವಾಗಬಹುದು, ಸ್ತನ ಹಿಗ್ಗುವಿಕೆಯ ಸಮಸ್ಯೆ
ಗರ್ಭ ನಿರೋಧಕ ಮಾತ್ರೆಗಳ ಬಳಕೆ ಮತ್ತು ತೂಕ (Weight) ಏರಿಳಿತಗಳ ನಡುವೆ ಯಾವುದೇ ಸ್ಥಿರವಾದ ಸಂಬಂಧವನ್ನು ವೈದ್ಯಕೀಯ ಅಧ್ಯಯನಗಳು ಕಂಡುಕೊಂಡಿಲ್ಲ. ಆದಾಗ್ಯೂ, ಮಾತ್ರೆ ತೆಗೆದುಕೊಳ್ಳುವ ಅನೇಕ ಜನರು ತೂಕ ಹೆಚ್ಚಳದ ಸಮಸ್ಯೆ ಅನುಭವಿಸಿದ್ದಾರೆ. ವಿಶೇಷವಾಗಿ ಸ್ತನ ಮತ್ತು ಸೊಂಟದ ಪ್ರದೇಶಗಳಲ್ಲಿ. ಜನನ ನಿಯಂತ್ರಣ ಮಾತ್ರೆಗಳಲ್ಲಿನ ಈಸ್ಟ್ರೊಜೆನ್ ಸಹ ಪರಿಣಾಮ ಬೀರಬಹುದು. ಇವುಗಳನ್ನು ಹೊರತುಪಡಿಸಿ, ಖಿನ್ನತೆ, ಯೋನಿ ಡಿಸ್ಚಾರ್ಜ್ ಸೇರಿದಂತೆ ಹಲವಾರು ಅಡ್ಡಪರಿಣಾಮಗಳು ಉಂಟಾಗುತ್ತವೆ.

ಗರ್ಭ ನಿರೋಧಕ ಮಾತ್ರೆಗಳು ಸ್ತನ ಹಿಗ್ಗುವಿಕೆ ಅಥವಾ ಮೃದುತ್ವವನ್ನು ಉಂಟುಮಾಡಬಹುದು. ಮಾತ್ರೆ ಸೇವಿಸಿದ ಕೆಲವು ವಾರಗಳ ನಂತರ ಈ ಅಡ್ಡಪರಿಣಾಮವು ಸರಿಯಾಗಬಹುದು. ಆದರೆ ಎದೆಯಲ್ಲಿ ಗಡ್ಡೆ ಕಂಡುಬಂದರೆ, ನಿರಂತರ ನೋವು ಅಥವಾ ಮೃದುತ್ವ ಇದ್ದರೆ ವೈದ್ಯಕೀಯ ಸಹಾಯವನ್ನು ಪಡೆಯಬೇಕು.

click me!