Indian Law: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು

By Suvarna News  |  First Published Sep 27, 2022, 3:06 PM IST

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ತಂದೆ – ತಾಯಿ ಹೊಣೆಯಾಗಿದ್ದಾರೆ. ಮಕ್ಕಳಿಗೆ ತಮ್ಮೆಲ್ಲ ಆಸ್ತಿ ನೀಡುವ ಪಾಲಕರು ಕೊನೆಯಲ್ಲಿ ಬೀದಿ ಪಾಲಾಗ್ತಿದ್ದಾರೆ. ಅನೇಕ ಪಾಲಕರಿಗೆ ತಮ್ಮ ಹಕ್ಕೇನು ಎಂಬುದೇ ತಿಳಿದಿಲ್ಲ.  
 


ತಾಯಿ ಪ್ರೀತಿ, ಕಾಳಜಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತನ್ನ ಸರ್ವಸ್ವವನ್ನೇ ಮಕ್ಕಳಿಗೆ ಧಾರೆ ಎರೆಯುತ್ತಾಳೆ ತಾಯಿ. ತಾಯಿ ಸಾವನ್ನಪ್ಪಿದ್ರೆ, ಬದುಕಿದ್ದಾಗ ನೋಡಿಕೊಳ್ಳದ ಮಕ್ಕಳು ಕೂಡ ಓಡೋಡಿ ಬಂದು ಆಸ್ತಿಯಲ್ಲಿ ಪಾಲು ಕೇಳ್ತಾರೆ. ಆದ್ರೆ ಮಗ ಸಾವನ್ನಪ್ಪಿದಾಗ ತಾಯಿಗೆ ಬಿಡಿಗಾಸು ಸಿಗೋದಿಲ್ಲ. ಮಗನ ಪತ್ನಿ ಹಾಗೂ ಆತನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಲಾಗುತ್ತದೆ. 9 ತಿಂಗಳು ಹೊತ್ತು ಹೆತ್ತ ತಾಯಿ ಅನಾಥಾಶ್ರಮದಲ್ಲಿ ಕಾಲ ಕಳೆಯಬೇಕಾಗುತ್ತದೆ.

ನಮ್ಮ ದೇಶ (Country) ದಲ್ಲಿ ಮಹಿಳೆ (Woman) ಗೆ ಸಂಬಂಧಿಸಿದಂತೆ ಅನೇಕ ಕಾನೂನು (Law) ಗಳಿವೆ. ಆದ್ರೆ ಮಹಿಳೆಗೆ ತನ್ನ ಹಕ್ಕಿನ ಬಗ್ಗೆ ಸರಿಯಾಗಿ ತಿಳಿದಿಲ್ಲ. ಮಗನನ್ನು ಕಳೆದುಕೊಂಡ ಅನೇಕ ತಾಯಂದಿರಿಗೆ ಮಗನ ಆಸ್ತಿಯಲ್ಲಿ ಪಾಲು ಸಿಕ್ಕಿಲ್ಲ. ಇದ್ರಿಂದ ತಾಯಂದಿರು ಬೀದಿ ಪಾಲಾಗಿದ್ದಾರೆ. ಮಗನ ಆಸ್ತಿ (Property) ಯಲ್ಲಿ ಪಾಲು ಸಿಕ್ಕಿಲ್ಲ ಎಂದು ತಾಯಂದಿರು ದುಃಖಪಡಬೇಕಾಗಿಲ್ಲ. ತಾಯಂದಿರಿಗೂ ಅಧಿಕಾರವಿದೆ. ಅವರು ಕಾನೂನಿನ ಪ್ರಕಾರ ಹೋರಾಡಿ, ಮಗನ ಆಸ್ತಿಯಲ್ಲಿ ಪಾಲು ಪಡೆಯಬಹುದು. ನಾವಿಂದು ಸತ್ತ ಮಗನ ಆಸ್ತಿಯಲ್ಲಿ ತಾಯಿ ಪಾಲಿನ ಬಗ್ಗೆ ವಿವರ ನೀಡ್ತೇವೆ.

Tap to resize

Latest Videos

ಮಗನ ಆಸ್ತಿಯಲ್ಲಿ ತಾಯಿಗೆ ಹಕ್ಕು :ಭಾರತದಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಪಾಲಿಸಲಾಗುತ್ತದೆ. ಅದ್ರ ಪ್ರಕಾರ ಒಬ್ಬ ವ್ಯಕ್ತಿಯು ಉಯಿಲು ಬರೆಯದೆ ಸಾವನ್ನಪ್ಪಿದ್ರೆ ಅವನ ಆಸ್ತಿಯನ್ನು ಅವನ ಪತ್ನಿ, ಅವಳ ಮಕ್ಕಳು ಮತ್ತು ಅವಳ ತಾಯಿಯ ನಡುವೆ ಸಮಾನವಾಗಿ ಹಂಚಬೇಕೆಂದು ನಿಯಮವಿದೆ. ಅಂದ್ರೆ ಸತ್ತ ಮಗನ ಆಸ್ತಿಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳಿಗೆ ಸಿಗುವ ಪಾಲಿನಷ್ಟೆ ಪ್ರಮಾಣದ ಆತಿ ತಾಯಿಗೆ ಸಿಗುತ್ತದೆ. ಇಷ್ಟೇ ಅಲ್ಲ ಗಂಡನ ಆಸ್ತಿಯನ್ನು ವಿಭಜಿಸಿದರೆ ಆ ಆಸ್ತಿಯಲ್ಲಿ ಮಕ್ಕಳಿಗೆ ನೀಡುವಷ್ಟೇ ಪಾಲನ್ನು ಅವನ ಹೆಂಡತಿಗೆ ನೀಡಬೇಕು. ಸಾವನ್ನಪ್ಪಿದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದರೆ ಮಕ್ಕಳ ಜೊತೆ ಪತ್ನಿ ಹಾಗೂ ತಾಯಿಗೆ ಅಂದ್ರೆ ನಾಲ್ಕು ಮಂದಿಗೆ ಆಸ್ತಿಯನ್ನು ಸಮನಾಗಿ ಹಂಚಬೇಕು. ಅವರೆಲ್ಲರೂ ವರ್ಗ ಒಂದರ ವಾರಸುದಾರರಾಗಿರುತ್ತಾರೆ.

ಮಗನ ಆಸ್ತಿಯಲ್ಲಿ ತಂದೆಗೆ ಹಕ್ಕು : ವಾರಸುದಾರರ ಪಟ್ಟಿಯಲ್ಲಿ ತಂದೆ ಎರಡನೇ ಶ್ರೇಣಿಗೆ ಬರುತ್ತಾನೆ. ಅಂದ್ರೆ ಮಗ ಸಾವನ್ನಪ್ಪಿದ್ರೆ ತಂದೆಗೆ ವರ್ಗ ಒಂದರ ವಾರಸುದಾರರಂತೆ ಆಸ್ತಿ ಸಿಗೋದಿಲ್ಲ. ವರ್ಗ ಒಂದರ ವಾರಸುದಾರರ ಅನುಪಸ್ಥಿತಿಯಲ್ಲಿ ಮಾತ್ರ ಆತ ಮಗನ ಆಸ್ತಿಯಲ್ಲಿ ಹಕ್ಕು ಪಡೆಯುತ್ತಾನೆ. 

ಸ್ವಂತ ಆಸ್ತಿಯಲ್ಲಿ ಸಿಗುತ್ತಾ ಪಾಲು? : ಯಾವುದೋ ಕಾರಣಕ್ಕೆ ಮಗ ಬೇರೆಯಾಗಿದ್ದರೆ ಅಥವಾ ಜೊತೆಯಲ್ಲಿದ್ದಾಗ ಕೂಡ ಮಗನ ಎಲ್ಲ ಆಸ್ತಿಯಲ್ಲಿ ಪಾಲಕರು ಪಾಲು ಕೇಳಲು ಸಾಧ್ಯವಿಲ್ಲ. ಮಗನ ಸ್ವಂತ ಆಸ್ತಿ ಅಥವಾ ಸ್ವಾಧೀನಪಡಿಸಿಕೊಂಡ ಆಸ್ತಿಯಲ್ಲಿ ಹಕ್ಕು ಪಡೆಯುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು. 

ಅಮ್ಮ ಹಣ್ಣು - ತರಕಾರಿ ತಿಂದರೆ ಹೊಟ್ಟೆಯಲ್ಲೇ ಮಗು ಟೇಸ್ಟ್‌ ಮಾಡಿ ಖುಷಿಯಿಂದ ನಗತ್ತಂತೆ

ದತ್ತು ಪುತ್ರನಾಗಿದ್ರೆ ಸಿಗುತ್ತಾ ಆಸ್ತಿ ? : ಹೌದು, ಮಕ್ಕಳನ್ನು ದತ್ತು ಪಡೆದ ಮೇಲೆ ಮಗ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುತ್ತಾನೆ. ಹಾಗೆಯೇ ತಾಯಿ ಕೂಡ ದತ್ತು ಮಗನ ಆಸ್ತಿಯಲ್ಲಿ ಹಕ್ಕುದಾರಳಾಗಿರುತ್ತಾಳೆ.

ಕ್ರಿಶ್ಚಿಯನ್ ಧರ್ಮದಲ್ಲೇನಿದೆ? : ಕ್ರಿಶ್ಚಿಯನ್ ಧರ್ಮದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಆಸ್ತಿ ಕಾನೂನು ಭಿನ್ನವಾಗಿದೆ. ತಾಯಿಯನ್ನು ಮಕ್ಕಳ ಮೇಲೆ ಅವಲಂಬಿತಳು ಎಂದು ಪರಿಗಣಿಸಲಾಗುವುದಿಲ್ಲ. ಮಕ್ಕಳು ತಮ್ಮ ಆಸ್ತಿಯಲ್ಲಿ ತಾಯಿಗೆ ಹಕ್ಕನ್ನು ನೀಡುವುದಿಲ್ಲ. ತಾಯಿ ತನ್ನನ್ನು ತಾನೇ ನೋಡಿಕೊಳ್ಳಬೇಕೆಂಬ ಕಾರಣಕ್ಕೆ ಆಕೆಗೆ ಆಸ್ತಿಯಲ್ಲಿ ಪಾಲು ನೀಡುವುದಿಲ್ಲ. 

Women Health: ಋತು ಬಂಧದ ವೇಳೆ ಕಾಡುವ ಹಾಟ್ ಫ್ಲಾಶ್‌ಗೆ ಇಲ್ಲಿದೆ ಮನೆ ಮದ್ದು

ಸೊಸೆಗೆ ಅತ್ತೆಯ ಆಸ್ತಿಯಲ್ಲಿ ಪಾಲು : ಇದಲ್ಲದೆ ಸೊಸೆ ತನ್ನ ಮಾವ ಮತ್ತು ಅತ್ತೆ ಆಸ್ತಿಯಲ್ಲಿ ಸೀಮಿತ ಅಧಿಕಾರ ಹೊಂದಿರುತ್ತಾಳೆ. ಹಾಗಾಗಿ ಅತ್ತೆ  ಆಸ್ತಿಯಲ್ಲಿ ಸೊಸೆಗೆ ಅಧಿಕಾರವಿರುವುದಿಲ್ಲ. ಹೆಂಡತಿಗೆ ತನ್ನ ಗಂಡನ ಸ್ವಂತ ಆಸ್ತಿಯಲ್ಲಿ ಮಾತ್ರ ಅಧಿಕಾರವಿರುತ್ತದೆಯೇ ಹೊರತು ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರವಿರುವುದಿಲ್ಲ. 
 

click me!