ಮನೆಯಲ್ಲಿ ಯಾರೂದರು ಗರ್ಭಿಣಿ ಅಂತ ಕನ್ಫರ್ಮ್ ಆಗುತ್ತಿದ್ದಂತೆ, ಹುಟ್ಟುವ ಮಗು ಗಂಡೋ, ಹೆಣ್ಣೋ ಅಂತ ಚರ್ಚೆ ಶುರುವಾಗೋದು ಕಾಮನ್. ಇಲ್ಲ ಅವಳ ಚರ್ಮ ಹಾಗಾಗಿದೆ, ಹೊಟ್ಟೆ ಹೀಗಿದೆ. ಹುಟ್ಟೋದು ಇದೇ ಮಗು..ಗ್ಯಾರಂಟಿ ಅಂತ ಮನೆಯ ಹಿರಿಯರು ಷರಾ ಬರೆದು ಬಿಡುತ್ತಾರೆ. ಆದರೆ, ಅವರು ಹೇಳಿದಂತೆ ಮಗುವಾಗಿರೋಲ್ಲ. ಅಷ್ಟಕ್ಕೂ ಗರ್ಭಿಣಿ ಬಗ್ಗೆ ಇರೋ ಈ ಮಿಥ್ಸ್ ಎಷ್ಟು ಸರಿ?
ಅಯ್ಯೋ ಮನೆಯಲ್ಲಿ ಮಗುವಿನ ಗೆಜ್ಜೆ ಸಪ್ಪಳ ಕೇಳದೇ ದಶಕಗಳೇ ಉರುಳಿವೆ. ಇದೀಗ ಮಗುವಿನ ನಿರೀಕ್ಷೆಯಲ್ಲಿದೆ ಫ್ಯಾಮಿಲಿ. ಹೆಣ್ಣಾಗುತ್ತೋ, ಗಂಡಾಗುತ್ತೋ ಎಂಬುವುದೇ ಈ ಕುಟುಂಬದಲ್ಲಿರುವ ಮಿಲಿಯನ್ ಡಾಲರ್ ಪ್ರಶ್ನೆ. ಡೆಲಿವರಿ ಆಗೋ ತನಕ ಕಾಯೋದು ಅನಿವಾರ್ಯ. ಆದರೆ, ಚರ್ಚೆ ಬಿಡುವ ಮನಸ್ಸಿಲ್ಲ. ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ, ಹುಟ್ಟು ಮಗುವಿನ ಲಿಂಗ ಆಗಲೇ ನಿರ್ಧರಿತವಾಗುತ್ತದೆ. ಈ ಎಲ್ಲ ಚರ್ಚೆಗಳ ನಡುವೆ ಗರ್ಭಿಣಿ ತನಗಾಗುತ್ತಿರುವ ಅನುಭವವನ್ನು ಎಂಜಾಯ್ ಮಾಡುತ್ತಿರುತ್ತಾಳೆ. ಜೊತೆಗೆ ಒಂದಿಷ್ಟು ಆತಂಕ. ಏನಾದರೂ ಸರಿ ಆರೋಗ್ಯವಂತ ಮಗುವಾಗಲಿ ಎಂಬ ಪ್ರಾರ್ಥನೆ. ಒಂದೆಡೆ ಸೇರದ ಊಟ, ನಿಲ್ಲದ ಬಯಕೆ. ಕಷ್ಟಪಟ್ಟು ತಿಂದಿದ್ದು ಆಗುತ್ತಿದೆ ವಾಂತಿ. ತಲು ಸುತ್ತು. ಏನೂ ಬೇಡವೆನ್ನುವಷ್ಟು ಸಂಕಟ. ಮನಸ್ಸೂ ಆಗಿದೆ ವೀಕ್. ಅದಕ್ಕೂ ಮಂದಿ ಹೇಳುತ್ತಾರೆ. ಇಷ್ಟು ವಾಂತಿಯಾಗುತ್ತಿದೆ ಅಂದರೆ ಹುಟ್ಟೋದು ಹೆಣ್ಣೇ, ಮತ್ತದೇ ಮಾತು.
'ಹೆಣ್ಣು ಮಗುವಿನಲ್ಲಿ ಫೀಮೇಲ್ ಹಾರ್ಮೋನ್ಸ್ (Female Hormones) ಹೆಚ್ಚಿದ್ದಾಗ, ಹೊಟ್ಟೆಯಲ್ಲಿ ಹೆಣ್ಣು ಭ್ರೂಣವಿದ್ದರೆ ವಾಂತಿ (Vomiting), ತಲೆ ಸುತ್ತೆಲ್ಲ ಕಾಮನ್ ಅನ್ನೋ ಮಾತಿದೆ. ಮೊದಲೇ ಇದನ್ನು ಹೇಳಿದ್ದರು. ಹೇಳಿದಂತೆ ಅವಳಿಗೆ ಹೆಣ್ಣು ಮಗುವೇ ಆಯಿತು, ಅನ್ನೋದನ್ನೂ ಕೇಳಿರುತ್ತೀರಿ. ದಿನ ತುಂಬುತ್ತಿದ್ದಂತೆ ತಾಯಿಗೂ ಹೊಟ್ಟೆಯಲ್ಲಿರುವ ಭಾರ ಇಳಿಸಿಕೊಳ್ಳುವ ಆತುರ. ಜೊತೆಗೆ ಎಂಥ ಮಗುವಾಗಬಹುದೆಂಬ ಕುತೂಹಲ. ಸುತ್ತಮುತ್ತಲಿನವರು ಮಾತುಗಳಿಂದ ಮತ್ತಷ್ಟೂ ಕ್ಯೂರಿಯೋಸಿಟಿ ಹೆಚ್ಚುತ್ತದೆ. ಹೊಟ್ಟೆ ಶೇಪ್ ನೋಡಿ ಮಗು ಗಂಡು, ಹೆಣ್ಣು ಅಂತ ತೀರ್ಮಾನಿಸಿದರೆ ಮಗುವಿನ ಮೂವ್‌ಮೆಂಟ್, ಹೊಟ್ಟೆಯಲ್ಲಿ ಕಾಣೋ ಅದರ ಶೇಪ್ ಎಲ್ಲ ನೋಡಿ ಮತ್ತೊಂದು ತೀರ್ಮಾನಕ್ಕೆ ಬರುತ್ತಾರೆ. ಖುಷಿ ಕೊಡುವ ಈ ವಿಷಯಗಳು ಮತ್ತೆ ಗೊಂದಲ ಹುಟ್ಟಿಸಲು ಶುರು ಮಾಡುತ್ತವೆ.
ಅಮ್ಮ ಹಣ್ಣು - ತರಕಾರಿ ತಿಂದರೆ ಹೊಟ್ಟೆಯಲ್ಲೇ ಮಗು ಟೇಸ್ಟ್ ಮಾಡಿ ಖುಷಿಯಿಂದ ನಗತ್ತಂತೆ
ಪ್ರಸೂತಿ ತಜ್ಞರು ಹೇಳುವುದೇನು?
- ತಾಯಿಯ ದೇಹದ ಪ್ರಕೃತಿಗೆ (Nature of Body) ತಕ್ಕಂತೆ ಹೊಟ್ಟೆ ಗಾತ್ರವಿರುತ್ತದೆ. ಹುಟ್ಟೋ ಮಗುವಿಗೆ, ಗರ್ಭಿಣಿ ಹೊಟ್ಟೆ ಗಾತ್ರಕ್ಕೇನೂ ಸಂಬಂಧವಿರೋಲ್ಲ. ಗಂಡು ಮಗುವಾಗಿದ್ದರೆ ತೂಕ ಹೆಚ್ಚು ಅಂತಾರೆ. ಆದರೆ, ಹೆಣ್ಣು ಮಗುವಿರುವ ತಾಯಿಯ ತೂಕವೂ ಹೆಚ್ಚುತ್ತೆ. ಆದರೆ, ಗರ್ಭಿಣಿಗೆ ಮಧುಮೇಹ (Diabetic) ಇದ್ದರೆ ಮಾತ್ರ ಮಗುವಿನ ತೂಕ ಹಾಗೂ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತೆ ಹೊರತು, ತಾಯಿಯ ತೂಕ (Weight of Mothers) ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
-ವಾಂತಿ ಹೆಚ್ಚಾದರೆ ಹೆಣ್ಣು ಅನ್ನೋ ಮಾತಿದೆ. ಆದರೆ, ಮಾರ್ನಿಂಗ್ ಸಿಕ್‌ನೆಸ್ (Morning Sickness) ಇರುವಾಗ ಭ್ರೂಣವಿನ್ನೂ ಬೆಳೆದಿರುವುದಿಲ್ಲ. ಹಾಗಾಗಿ ಮಗುವಿನ ಹಾರ್ಮೋನ್ಸ್ ಸಹ ಇನ್ನೂ ಉತ್ಪತ್ತಿಯಾಗುತ್ತಿರುವುದಿಲ್ಲ. ಹಾಗಾಗೂ ಮಗುವಿನ ಲಿಂಗ (Sex) ಹೇಳುವುದು ಅಷ್ಟು ಸುಲಭವದ ಕೆಲಸವಲ್ಲ.
- ಮಗು ಗಂಡಾಗುವುದಾದರೆ ತಾಯಿ ಮುಖ ಕಪ್ಪಾಗುತ್ತೆ, ಹೆಣ್ಣಾದರೆ ಇದ್ದ ಹಾಗೆಯೇ ಇರುತ್ತೆ ಅಂತಾರೆ. ಆದರೆ, ಇದರ ಬಗ್ಗೆ ಆಗಲೇ ಸಂಶೋಧನೆಗಳು ನಡೆದಿವೆ. ಲಿಂಗಕ್ಕೂ ಗರ್ಭಿಣಿ (Pregnant Woman) ಚರ್ಮದ ಬಣ್ಣದಲ್ಲಾಗುವ ಬದಲಾವಣೆಗೂ ಏನೂ ವ್ಯತ್ಯಾಸ ಇರೋಲ್ಲ.
ಶಂಕರಪುರದ ಅಜ್ಜಿ ಮಾಡೋ ಸಾಂಪ್ರದಾಯಿಕ 'ಬಾಣಂತಿಮದ್ದು' ವಿದೇಶಗಳಲ್ಲೂ ಫೇಮಸ್
ಒಟ್ಟಿನಲ್ಲಿ ಹುಟ್ಟೋದು ಹೆಣ್ಣು ಅಥವಾ ಗಂಡಾದರೂ ಜನರ ಆಡೋ ಮಾತುಗಳಲ್ಲಿ ಬಹುತೇಕ ಸತ್ಯಗಳಿರೋಲ್ಲ. ಅಕಸ್ಮಾತ್ ಸತ್ಯ ಆದರೆ ಅದು ಕಾಕತಾಳೀಯ ಹೊರತು, ಈ ಬಗ್ಗೆ ಯಾವುದೇ ಸಂಶೋಧನೆಗಳು (Research) ನಡೆದಿಲ್ಲ. ಹೆಣ್ಣಿನ ದೇಹದಲ್ಲಿ ಆಗುವ ಬದಲಾವಣೆಗಳಿಗೂ, ಹುಟ್ಟುವಿನ ಮಗುವಿನ ಲಿಂಕಕ್ಕೇನೂ ಸಂಬಂಧವಿರೋಲ್ಲ. ಇವೆಲ್ಲ ಆಧಾರ ರಹಿತ ಎನ್ನುತ್ತಾರೆ ತಜ್ಞರು. ಒಟ್ಟಿನಲ್ಲಿ ಏನು ಮಗು ಹುಟ್ಟಬೇಕೋ, ಅದೇ ಹುಟ್ಟೋದು.