ಮುಕ್ಕಾಲ ಮುಕಾಬುಲಾ.... ಸಾರಿ ಉಟ್ಟ ನಾರಿಯ ಬಿಂದಾಸ್ ಡಾನ್ಸ್‌ಗೆ ನೆಟ್ಟಿಗರು ಫಿದಾ

Published : Oct 25, 2024, 02:51 PM ISTUpdated : Oct 25, 2024, 03:39 PM IST
ಮುಕ್ಕಾಲ ಮುಕಾಬುಲಾ.... ಸಾರಿ ಉಟ್ಟ ನಾರಿಯ ಬಿಂದಾಸ್ ಡಾನ್ಸ್‌ಗೆ ನೆಟ್ಟಿಗರು ಫಿದಾ

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಬಿಂದಾಸ್ ಡಾನ್ಸ್ ವೈರಲ್ ಆಗಿದೆ. ಹಳದಿ ಸೀರೆಯಲ್ಲಿ ಕದಲನ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವ ಈ ಮಹಿಳೆಯ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ಹಿಂದೆಲ್ಲಾ ಪ್ರತಿಭೆ ಇದ್ದರು ಪ್ರದರ್ಶಿಸಲು ಸರಿಯಾದ ವೇದಿಕೆ ಇರಲಿಲ್ಲ, ಈಗ ಹಾಗಿಲ್ಲ, ಪ್ರತಿಭೆಯೊಂದು ಇದ್ದರೆ ಸೋಶಿಯಲ್ ಮೀಡಿಯಾ ನಿಮಗೆ ಉತ್ತಮ ವೇದಿಕೆಯೊದಗಿಸುತ್ತದೆ. ನೀವು ಹೇಗೆ ಬೇಕಾದರು ಫೇಮಸ್ ಆಗಬಹುದು. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರ ಬಿಂದಾಸ್ ಡಾನ್ಸ್ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಕಾಮೆಂಟ್‌ಗಾಗಿ ಅರೆಬರೆ ತೊಟ್ಟು ವಿವಿಧ ಅವತಾರಗಳನ್ನು ತೋರುವ ರೀಲ್ಸ್‌ ರಾಣಿಯರ ನಡುವೆ ಈ ಮಹಿಳೆಯ ಡಾನ್ಸ್‌ ಕಣ್ಣಿಗೆ ಮುದ ನೀಡುತ್ತಿದೆ.  ಹಳದಿ ಬಣ್ಣದ ಸೀರೆಯುಟ್ಟಿರುವ ಮಹಿಳೆ ತಲೆಗೆ ಸೆರಗು ಹೊದ್ದುಕೊಂಡಿದ್ದು, ತಮಿಳಿನ ಕದಲನ್ ಸಿನಿಮಾದ ಮುಕ್ಕಾಲ ಮುಕಾಬುಲ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದಾರೆ. ಮಹಿಳೆಯ ಡಾನ್ಸ್‌ಗೆ ಪತಿಯೂ ಸಾಥ್ ನೀಡಿದ್ದಾರೆ. ಮಹಿಳೆಯ ಡಾನ್ಸ್‌ ನೋಡಿದರೆ ಇವಳೇನು ಪ್ರಭುದೇವ್ ತಂಗಿನ ಮೈಕಲ್ ಜಾಕ್ಸನ್ ಅಕ್ಕನಾ ಅಂತ ನೋಡುಗರಿಗೆ ಡೌಟ್ ಬರೋ ತರ ಡಾನ್ಸ್ ಮಾಡಿದ್ದಾರೆ ಈ ಮಹಿಳೆ.

ಯಾವುದೇ ವೃತ್ತಿಪರ ಡಾನ್ಸ್ ಪ್ರಾಕ್ಟಿಸ್ ಇಲ್ಲದ ಈ ಮಹಿಳೆ ತಮಗಿರುವ ಆಸಕ್ತಿ ಹಾಗೂ ಪ್ರತಿಭೆಯೊಂದರಿಂದಲೇ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು,  ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. Gitanjali khatua ಎಂಬುವವರ ಹೆಸರಿನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇವರ ಇನ್ಸ್ಟಾಗ್ರಾಮ್ ತುಂಬೆಲ್ಲಾ ಇವರು ವಿವಿಧ ಹಾಡುಗಳಿಗೆ ಸೀರೆಯುಟ್ಟು ಬಿಂದಾಸ್ ಆಗಿ ಡಾನ್ಸ್ ಮಾಡಿರುವ ವೀಡಿಯೋಗಳಿವೆ. ಇವರ ಪತಿಯೂ ಕೂಡ ಬಿಂದಾಸ್ ಆಗಿ ಇವರೊಂದಿಗೆ ಡಾನ್ಸ್ ಮಾಡುತ್ತಿದ್ದು, ಯಾವುದೇ ಅಶ್ಲೀಲತೆ ಇಲ್ಲದ ಮೈ ತುಂಬಾ ಬಟ್ಟೆ ಧರಿಸಿ ಈ ಮಹಿಳೆ ಮಾಡುವ ಡಾನ್ಸ್‌ಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಇವರ ಡಾನ್ಸ್ ನಟನೆ, ಸರಳತೆ ಎಲ್ಲವೂ ಮಾರ್ವೆಲಸ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇಂತಹವರಿಗೆ ನಿಜವಾಗಿಯೂ ಲೈಕ್ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಮಹಿಳೆಯ ಡಾನ್ಸ್ ಪ್ರತಿಭೆಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯಾಗಿದ್ದು, ಫರ್ಪೆಕ್ಟ್ ಫೆಂಟಾಸ್ಟಿಕ್ ಮಾರ್ವೆಲಸ್ ಎಂಬ ಕಾಮೆಂಟ್‌ಗಳು ತುಂಬಿ ಹೋಗಿವೆ. ನೀವು ಈ ಮಹಿಳೆಯ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ತಿಳಿಸಿ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!