ಸಾಮಾನ್ಯ ವಿಡಿಯೋವೊಂದು 3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಮಹಿಳೆಯೊಬ್ಬರು ಹಾಡು ಹೇಳದೆ, ಡ್ಯಾನ್ಸ್ ಮಾಡದೆಯೇ ವೈರಲ್ ಆಗಿದ್ದಾರೆ. ಸ್ವಿಗ್ಗಿಯಂತಹ ಕಂಪನಿಗಳು ಸಹ ತಮಾಷೆಯಾಗಿ ಕಮೆಂಟ್ ಮಾಡಿವೆ.
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ನೋಡಿದ್ರೆ ಅಚ್ಚರಿ ಎನ್ನಿಸುತ್ತದೆ. ಕಾರಣ ಈ ವಿಡಿಯೋದಲ್ಲಿ ಮನರಂಜನೆಯ ಯಾವುದೇ ಕಂಟೆಂಟ್ ಇರಲ್ಲ. ಕೆಲವು ಸಂದರ್ಭಗಳಲ್ಲಿ ವಿಡಿಯೋ ನೋಡಿ ನಕ್ಕು, ಸ್ಪೈಪ್ ಮಾಡ್ತಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಇಂತಹವುದೇ ಒಂದು ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕಾಣುವ ಮಹಿಳೆ ಯಾವುದೇ ಹಾಡನ್ನು ಸಹ ಹೇಳಿಲ್ಲ, ಡ್ಯಾನ್ಸ್ ಸಹ ಮಾಡಿಲ್ಲ. ಸಾಂಗ್ ಪ್ಲೇ ಆಗುತ್ತಿದ್ದಂತೆ ಮಹಿಳೆ ಓಡಿ ಹೋಗುತ್ತಾಳೆ. ಈ ವಿಡಿಯೋಗೆ 3 ಕೋಟಿಗೂ ಅಧಿಕ ವ್ಯೂವ್, 8 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ.
ಈ ವಿಡಿಯೋವನ್ನು khushivideos1m ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಹೇಳಿಕೊಳ್ಳುವಂತಹ ವಿಶೇಷತೆ ಇಲ್ಲ. ಆದ್ರೆ ಜನರು ಈ ವಿಡಿಯೋವನ್ನು ನೋಡುತ್ತಿರೋದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವಿಡಿಯೋಗೆ ಸ್ವಿಗ್ಗಿ ಸಹ ಕಮೆಂಟ್ ಮಾಡಿದೆ. ಆರ್ಡರ್ ಪಕ್ಕದ ಬಿಲ್ಡಿಂಗ್ ನಲ್ಲಿದು ಅಂತ ಗೊತ್ತಾದ್ರೆ ನಮ್ಮ ಡೆಲಿವರಿ ಬಾಯ್‌ಗಳು ಹೀಗೆಯೇ ಹೋಗುತ್ತಾರೆ ಎಂದು ಕಮೆಂಟ್ ಮಾಡಿದೆ.
ಈ ವಿಡಿಯೋ ನೋಡಿದರೆ ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ವೈರಲ್ ಆಗುತ್ತೆ ಅನ್ನೋದಕ್ಕೆ ಇದುವೇ ಸಾಕ್ಷಿಯಾಗಿದೆ. ಕೆಲ ಇನ್‌ಫ್ಲುಯೆನ್ಸರ್‌ಗಳು ತಮ್ಮ ವಿಡಿಯೋಗೆ ಹೆಚ್ಚು ವ್ಯೂವ್ ಬರಲಿ ಎಂದು ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಚೆಂದದ ಬಟ್ಟೆ ಹಾಕಿಕೊಂಡು ಸುಂದರವಾಗಿ ಡ್ಯಾನ್ಸ್ ಮಾಡಿದರೂ ಆ ವಿಡಿಯೋ ವೈರಲ್ ಆಗಲ್ಲ. ಆದ್ರೆ ಈ ಮಹಿಳೆಯ ವಿಡಿಯೋದಲ್ಲಿ ಇದ್ಯಾವೂದು ಇಲ್ಲ. ಆದರೂ ಮೂರು ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.
Reel ಮಾಡುತ್ತಾ Real ಆಗಿ ಸತ್ತ; ನೋಡ ನೋಡುತ್ತಿದ್ದಂತೆ ರುಂಡ-ಮುಂಡ ಬೇರೆ ಬೇರೆ ಆಯ್ತು!
ಹಳದಿ ಬಣ್ಣದ ಡ್ರೆಸ್ ಧರಿಸಿರುವ ಮಹಿಳೆ ಕ್ಯಾಮೆರಾ ಆನ್ ಮಾಡಿ, ಹಿಂದಕ್ಕೆ ಹೋಗುತ್ತಾಳೆ. ನಂತರ ನೋಡ ನೋಡುತ್ತಿದ್ದಂತೆ ಜೋರಾಗಿ ಓಡಿ ಹೋಗುತ್ತಾಳೆ. ಹಿಂದೆ 'ಥೂ ರುಟಾ, ಥೋ ರೂಟಾ, ಇತನೀ ದೂರ್ ಚಲ್ ಜಾಊಂಗಿ' ಎಂಬ ಹಾಡು ಪ್ಲೇ ಆಗಿದೆ. ಈ ಪೋಸ್ಟ್‌ನಲ್ಲಿ ಒಂದು ಪಾರಿವಾಳ ಸಹ ಕಂಡು ಬಂದಿದೆ. ಮಹಿಳೆಯ ಈ ವಿಡಿಯೋಗೆ 57 ಸಾವಿರಕ್ಕೂ ಅಧಿಕ ಕಮೆಂಟ್ ಸಹ ಬಂದಿವೆ. ಓರ್ವ ಬಳಕೆದಾರರ 'ಮುನ್ನಿ ಮತ್ತೆ ಪಾಕಿಸ್ತಾನಕ್ಕೆ ಹೋಗಿದ್ದಾಳೆ' ಎಂದು ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಆಕ್ಟಿಂಗ್ ನೋಡಿ ಪಾಪ… ಪಾರಿವಾಳ ಸಹ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸುತ್ತಿದೆ ಎಂದು ಬರೆದಿದ್ದಾರೆ.
ಹಾವುಗಳಿಗೆ ಮೊಟ್ಟೆಯೇ ಯಾಕೆ ಫೇವರಿಟ್? ನಾಗರಾಜನ 10 ಅಚ್ಚರಿ ವಿಷಯಗಳು