ಸೀರೆ ಉಟ್ಕೊಂಡು ನಡೆಯೋದೆ ಕಷ್ಟ ಅಂತಾರೆ ಇವತ್ತಿನ ಕಾಲದ ಹೆಣ್ಮಕ್ಳು. ಇನ್ನು ಹೀಲ್ಸ್ ಹಾಕ್ಕೊಂಡ್ರಂತೂ ಕೂತಲ್ಲಿಂದ ಏಳೋ ಹಾಗಿಲ್ಲ. ಆದ್ರೆ ಇಲ್ಲೊಬ್ಬ ಯುವತಿ ಸ್ಯಾರಿ ಉಟ್ಟಿದ್ರೂ, ಹೀಲ್ಸ್ ಹಾಕಿದ್ರೂ ವೆಸ್ಟರ್ನ್ ಸಾಂಗ್‌ಗೆ ಅದೆಷ್ಟು ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾಳೆ ನೋಡಿ.
ಸೀರೆಯುಡೋದು ಅಂದ್ರೆ ಸಾಕು ಇವತ್ತಿನ ಕಾಲದ ಹೆಣ್ಣುಮಕ್ಕಳು ಮೂಗು ಮುರೀತಾರೆ. ನಮ್ಗೇನಿದ್ರೂ ಜೀನ್ಸ್, ಡೆನಿಮ್ ಮೇಲೊಂದು ಟಾಪ್ ಹಾಕ್ಕೊಂಡು ಇರೋದೆ ಕಂಫರ್ಟೆಬಲ್ ಅಂತಾರೆ. ಹಬ್ಬ-ಹರಿದಿನ, ಪೂಜೆ, ಮದುವೆ ಅಂತ ಆಗೊಮ್ಮೆ ಈಗೊಮ್ಮೆ ಸೀರೆ ಉಟ್ರೂ ಹೆಚ್ಚು ಓಡಾಡೋಕೆ ಇಷ್ಟಪಡಲ್ಲ. ಕ್ಯಾರಿ ಮಾಡೋಕೆ ಕಷ್ಟಾನಪ್ಪ ಅಂತ ಕುಳಿತಲ್ಲೇ ಕೂತಿರ್ತಾರೆ. ಇನ್ನು ಸೀರೆ ಜೊತೆಗೆ ಹೀಲ್ಸ್ ಸಹ ಹಾಕಿದ್ರೆ ಹೇಳೋದೆ ಬೇಡ. ಕುಳಿತ ಚೇರ್‌ನಿಂದ ಎದ್ದು ಓಡಾಡೋದು ಸಹ ಇಲ್ಲ. ಮೊದಲೇ ಸೀರೆ ಕೈ-ಕಾಲಿಗೆಲ್ಲಾ ಸಿಕ್ಕಿ ಹಾಕಿಕೊಳ್ಳುತ್ತೆ. ಅದರ ಮೇಲೆ ಹೀಲ್ಸ್ ಎಡವಿ ಬಿದ್ರೆ ಏನ್ ಕಥೆ ಅಂತ ಸುಮ್ನಾಗಿ ಬಿಡ್ತಾರೆ. ಆದ್ರೆ ಇಲ್ಲೊಬ್ಬ ಯುವತಿ ಸೀರೆ ಉಟ್ಟಿದ್ರೂ, ಹೀಲ್ಸ್ ಉಟ್ಟಿದ್ರೂ ಅದೆಷ್ಟು ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾಳೆ ನೋಡಿ.
ಸೀರೆಯುಟ್ಟು, ಹೀಲ್ಸ್ ಹಾಕ್ಕೊಂಡು ವೆಸ್ಟರ್ನ್ ಡ್ಯಾನ್ಸ್ ಮಾಡಿದ ಯುವತಿ
ಡ್ಯಾನ್ಸ್ ಮಾಡೋದು ಒಂದು ಕಲೆ. ಹಾಗಂತ ಡ್ಯಾನ್ಸ್ ಮಾಡಲು ಗೊತ್ತಿದ್ದರೆ ಸಾಲದು, ಡ್ಯಾನ್ಸ್ ಮಾಡುವಾಗ ಹಾಕಿರೋ ಉಡುಪು ಸಹ ಕಂಫರ್ಟೆಬಲ್ ಆಗಿರಬೇಕು. ಕೈ ಕಾಲುಗಳನ್ನು ಆರಾಮವಾಗಿ ಅತ್ತಿತ್ತ ಮೂವ್ ಮಾಡಲು ಸಾಧ್ಯವಾಗುವಂತಿರಬೇಕು. ಆಗಷ್ಟೇ ಡ್ಯಾನ್ಸ್ ನೋಡಲು ಸುಂದರವಾಗಿರುತ್ತದೆ. ಭರತನಾಟ್ಯ, ಜಾನಪದ ನೃತ್ಯಗಳಿಗಾದರೆ ಟ್ರೆಡಿಷನಲ್ ವೇರ್ ಇದ್ದರೆ ನಡೆಯುತ್ತೆ. ಆದರೆ ವೆಸ್ಟರ್ನ್ ಡ್ಯಾನ್ಸ್ ಮಾಡ್ಬೇಕು ಅಂದ್ರೆ ಪಕ್ಕಾ ಪ್ಯಾಂಟ್, ಶರ್ಟ್‌ನಂತಾ ವೆಸ್ಟರ್ನ್ ಬಟ್ಟೆಗಳನ್ನೇ ಧರಿಸಬೇಕು. ಇಲ್ಲದಿದ್ದರೆ ಕೈ ಕಾಲುಗಳನ್ನು ಫಾಸ್ಟ್ ಮೂವ್‌ಗೆ ತಕ್ಕಂತೆ ಮೂವ್ ಮಾಡುವುದು ಕಷ್ಟ. ಆದರೆ ಈ ಯುವತಿ (Girl) ಮಾತ್ರ ಸೀರೆಯುಟ್ಟುಕೊಂಡು, ಹೀಲ್ಸ್ ಹಾಕ್ಕೊಂಡು ವೆಸ್ಟರ್ನ್ ಡ್ಯಾನ್ಸ್ ಮಾಡಿದ್ದಾಳೆ.
ಕಾರು ಖರೀದಿಸಿದ ಖುಷಿ: ಶೋ ರೂಮ್‌ನಲ್ಲಿ ಕುಟುಂಬದ ಬಿಂದಾಸ್ ಡಾನ್ಸ್: ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿಡಿಯೋ ವೈರಲ್
ಹುಡುಗಿಯೊಬ್ಬಳು ಸೀರೆ (Saree) ಮತ್ತು ಹೀಲ್ಸ್ ಧರಿಸಿ ಫಂಕ್ಷನ್‌ಗೆ ಹೋಗಿದ್ದಳು. ಅಲ್ಲಿ ಎಲ್ಲರೂ ಮದುವೆ (Marriage) ಸಂಭ್ರಮದಲ್ಲಿ ಎಂಜಾಯ್ ಮಾಡುತ್ತಿದ್ದಾಗ ಯುವತಿ ಸೀರೆಯಲ್ಲೇ ಸಖತ್ತಾಗಿ ವೆಸ್ಟರ್ನ್ ಡ್ಯಾನ್ಸ್ ಮಾಡಿದ್ದಾಳೆ. ಅಷ್ಟೆತ್ತರದ ಹೀಲ್ಸ್ ಹಾಕಿದ್ದರೂ ಹಾರೋ, ನೆಗೆಯೋ ಸ್ಟೆಪ್ ಮಾಡೋಕೆ ಕಷ್ಟಪಡಲ್ಲಿಲ್ಲ. ಒಂದು ಸಾರಿ ಜಂಪ್ ಮಾಡುವಾಗ ಜಾರಿದಂತಾದರೂ ಸಂಭಾಳಿಸಿ ಡ್ಯಾನ್ಸ್ ಮುಂದುವರಿಸಿದ್ದಾಳೆ. ಫಂಕ್ಷನ್‌ನಲ್ಲಿ ಆಕೆ ಡ್ಯಾನ್ಸ್ ಮಾಡಿದ ರೀತಿಯನ್ನು ಎಷ್ಟು ಜನ ಎಂಜಾಯ್ ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂಟರ್‌ನೆಟ್‌ನಲ್ಲಿ ಈಕೆಯ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಪೇಜ್ nepalhiphopfoundationನಲ್ಲಿ ಶೇರ್ ಮಾಡಲಾಗಿದೆ. ಮಾಹಿತಿಯ ಪ್ರಕಾರ ಈ ನೃತ್ಯವನ್ನು ನೇಪಾಳದಲ್ಲಿಮಾಡಿರುವುದು ಸ್ಪಷ್ಟವಾಗಿದೆ. ವೈರಲ್ ಆಗಿರುವ ಈ ವೀಡಿಯೋ ನೋಡಿ ಹಲವರು ವಾರೆ ವ್ಹಾ ಎಂದಿದ್ದಾರೆ. 'ಇನ್ನು ಕೆಲವರು ಸ್ಟಂಟ್ ರೀತಿಯ ಈ ಡ್ಯಾನ್ಸ್ ನೋಡಲು ಭಯವಾಗುತ್ತಿದೆ' ಎಂದಿದ್ದಾರೆ.
ಇಂಟರ್‌ನೆಟ್ ಸೆನ್ಸೇಷನ್ ಬಾಬಾ ಜಾಕ್ಸನ್ ಜೊತೆ ಪೊಲೀಸ್ ಪೇದೆಯ ಬಿಂದಾಸ್ ಡಾನ್ಸ್
'ಕೆಲವರು ಅವಳು ನಿಜವಾಗಿಯೂ ಡ್ಯಾನ್ಸ್ ಮಾಡಿದ್ದಾಳಾ' ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು 'ಅವಳು ಕುಣಿದದ್ದಲ್ಲ, ಯಾರೋ ಮೈ ಮೇಲೆ ಬಂದು ಕುಣಿದಿದ್ದು' ಎಂದು ಟೀಕಿಸಿದ್ದಾರೆ.ಮತ್ತೊಬ್ಬರು, 'ನೃತ್ಯ ಮಾಡುವಾಗ ಕೆಳಗೆ ಬಿದ್ದು ಗಾಯಗೊಂಡಂತೆ ಕಾಣುತ್ತಿದೆ, ಅದನ್ನು ಮರೆಮಾಚಿದ್ದಾಳೆ' ಎಂದರು. ಅದೇನೆ ಇರ್ಲಿ ಸೀರೆ ಹಾಗೂ ಹೀಲ್ಸ್‌ನಲ್ಲಿ ಡ್ಯಾನ್ಸ್ ಮಾಡಿರೋ ಈಕೆಗೆ ಒಂದು ಶಹಬ್ಬಾಸ್ ಹೇಳ್ಲೇಬೇಕು ಬಿಡಿ.