ಮನೆಯಲ್ಲಿ ಕಿತ್ತುತಿನ್ನುವ ಬಡತನ, ಮನೆಗೆ ಆಧಾರ ಸ್ತಂಭ ಆಗಿದ್ದ ತಂದೆಯನ್ನು ಕಳೆದುಕೊಂಡು ಕಷ್ಟದಲ್ಲೇ ಬೆಳೆದ ಯುವತಿ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಇಡೀ ರಾಜ್ಯ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ.
ವರದಿ: ವರದರಾಜ್
ದಾವಣಗೆರೆ (ಮೇ 31) ಮನೆಯಲ್ಲಿ ಕಿತ್ತುತಿನ್ನುವ ಬಡತನ, ಮನೆಗೆ ಆಧಾರ ಸ್ತಂಭ ಆಗಿದ್ದ ತಂದೆಯನ್ನು ಕಳೆದುಕೊಂಡು ಕಷ್ಟದಲ್ಲೇ ಬೆಳೆದ ಯುವತಿ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಇಡೀ ರಾಜ್ಯ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ.
ತಂದೆ ಇಲ್ಲ ಎಂಬ ಕೊರಗನ್ನು ನೀಗಿಸಿದ ಅ ಯುವತಿಯ ತಾಯಿ ಅಂಗನವಾಡಿ ಆಯಾ ಕೆಲಸ ಮಾಡಿ ದುಡಿದು ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದಳು. ಇದೀಗ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಭೂಮಿಕಾ ಈ ಸಾಧಿಸಿ ಜಿಲ್ಲೆಗೆ ಹೆಮ್ಮೆ ಎನಿಸಿದ್ದಾಳೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾರವರ ಪುತ್ರಿ ಭೂಮಿಕ ಇಡೀ ರಾಜ್ಯ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ. ಭೂಮಿಕ ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ತಾಯಿಯ ಆಸರೆಯಲ್ಲೇ ಬದುಕಿ ಬೆಳೆದು ಶಿಕ್ಷಣ ಪಡೆದ ಯುವತಿ ಮುಂದೆ ಭಾರತೀಯ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ರೈತನ ಮಗಳು, ಕಂಡಕ್ಟರ್ ಪುತ್ರ ಐಎಎಸ್ ಪಾಸ್: ರಾಜ್ಯದ 35 ಮಂದಿ ತೇರ್ಗಡೆ
ಏಳು ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ತಾಯಿ ಲತಾ ಮೂರು ಮಕ್ಕಳ ಪೋಷಿಸುವ ಹೊರೆ ಬಿದ್ದಿತ್ತು. ಭೂಮಿಕರವರ ತಂದೆ ಭೀಕರ ಅಪಘಾತದಲ್ಲಿ ಇಡೀ ಕುಟುಂಬವನದನು ಅಗಲಿದ್ದರು. ಆಗಾ ದಿಕ್ಕೆಟ್ಟು ಕೂರದ ಲತಾರವರು ಮೂರು ಜನ ಮಕ್ಕಳ ಹೊರೆ ಹೊತ್ತು ಸಾಕಿ ಸಲುಹಿ ಉತ್ತಮವಾದ ಶಿಕ್ಷಣ ಕೊಡಿಸುವಲ್ಲಿ ಸಫಲರಾದರು. ಎರಡು ಹಸುಗಳನ್ನು ಸಾಕ್ತಾ ಅದರಿಂದ ಬಂದ ಹಣದಿಂದ ತನ್ನ ಮೂರು ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಿಸಿದರು. ತಾಯಿ ಲತಾರವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆದರೆ ಮಗಳು ಅಮ್ಮನ ಶ್ರಮ ವ್ಯರ್ಥಗೊಳಿಸಲಿಲ್ಲ. ದೇಶದಲ್ಲಿ ಉನ್ನತ ಹುದ್ದೆಯಾದ ಭಾರತೀಯ ನೌಕಾದಳಕ್ಕೆ ಆಯ್ಮೆಯಾಗುವಂತೆ ಮಾಡಿದ್ದಾರೆ.
ಈಗಾಗಲೇ ಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕ ಸಾಕಷ್ಟು ಕೆಲಸಗಳಿಗೆ ಅರ್ಜಿ ಹಾಕ್ತಾ ಕೆಲಸಕ್ಕಾಗಿ ಅಲೆದಿದ್ದರು, ಮನೆಯಲ್ಲಿ ಕಿತ್ತು ತಿನ್ನುವ ಬಡತನ್ನ ತಾಯಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮಾಡಿರುವ ಸಾಲದ ಹೊರೆಯನ್ನು ಇಳಿಸಲು ಭೂಮಿಕ ನಿಷ್ಠೆಯಿಂದ ಓದಿ ಭಾರತೀಯ ನೌಕಾದಳಕ್ಕೆ ಕೆಲಸಕ್ಕಾಗಿ ಅರ್ಜಿ ಹಾಕಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ಫಿಸಿಕಲ್ನಲ್ಲಿ ಉತ್ತೀರ್ಣರಾಗಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮೊದಲನೇಯ ಪಟ್ಟಿಯಲ್ಲೇ ಭೂಮಿಕರವರ ಹೆಸರು ಬಂದಿರುವುದು ಇಡೀ ಕುಟುಂಬಕ್ಕೆ ಎಲ್ಲಿಲ್ಲದ ಸಂತಸಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿಯರ ನಿಲಯಗಳಲ್ಲೆ ಇದ್ದು ವ್ಯಾಸಂಗ ಮಾಡ್ತಿದ್ದಾ ಭೂಮಿಕ ದಾವಣಗೆರೆ ಹರಿಹರದಲ್ಲೇ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಇನ್ನು ಮೈಸೂರಿನ ದೊಡ್ಡಕಾನ್ಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿನಿಯರ ಕಾಲೇಜು ಹಾಗು ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಫಾರ್ಮಸಿ ಅಭ್ಯಾಸ ಮಾಡಿದ್ದಾರೆ. ನೌಕಾದಳದಿಂದ ಕರೆದಿದ್ದ ಅರ್ಜಿಯನ್ನು ಗಮನಿಸಿದ ಭೂಮಿಮ ಅರ್ಜಿ ಹಾಕಿ ಉನ್ನತ ಹುದ್ದೆಗೆ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಡಿಸ್ಸಾದ ಚಿಲ್ಕಾದಲ್ಲಿ ಒಂದು ವರ್ಷದ ಮಟ್ಟಿಗೆ ತರಬೇತಿ ನಡೆಯಲಿದ್ದು, ಬಳಿಕ ಕೆಲಸಕ್ಕೆ ಸೇರಿಕೊಳ್ಳಲು ತರಬೇತಿ ಬಳಿಕ ತಿಳಿಸಲಾಗುತ್ತದೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ
ಕೋಚಿಂಗ್ ಹೋಗದೆ ಯೂಟ್ಯೂಬ್ ತರಗತಿಗಳು ನೋಡ್ತಾ ಸಾಧನೆ ಮಾಡಿದ ಯುವತಿ
ನೌಕದಳ ಹುದ್ದೆಗೆ ಆಯ್ಕೆಯಾಗಬೇಕಾದರೆ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆಯದೆ ಕೇವಲ ಯೂಟ್ಯೂಬ್ ತರಗತಿಗಳನ್ನು ನೋಡ್ತಾ ಕೆಲ ಪುಸ್ತಕಗಳನ್ನು ಓದುತ್ತಾ ಈ ಸಾಧನೆ ಮಾಡಿದ್ದ ಭೂಮಿಕ ಪ್ರತಿದಿನ ನಾಕ್ಲೈದು ಗಂಟೆ ಓದುತ್ತ ಸಾಧನೆ ಮಾಡಿದ್ದಾರೆ.