ಮಕ್ಕಳಿಗೆ ಗುಡ್ ಟಚ್‌, ಬ್ಯಾಡ್ ಟಚ್ ಬಗ್ಗೆ ಹೇಳಿಕೊಟ್ಟ ಶಿಕ್ಷಕಿ, ವಿಡಿಯೋ ವೈರಲ್

By Vinutha Perla  |  First Published Aug 11, 2023, 3:15 PM IST

ಜಗತ್ತಿನಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ತಿದೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಪುಟ್ಟ ಮಕ್ಕಳಿಗೆ ಚಿಕ್ಕಂದಿನಲ್ಲೇ 'ಗುಡ್‌ ಟಚ್‌, ಬ್ಯಾಡ್ ಟಚ್‌' ಬಗ್ಗೆ ತಿಳಿಸಿಕೊಡುವುದು ಅತೀ ಮುಖ್ಯವಾಗಿದೆ. ಇಲ್ಲೊಬ್ಬ ಶಿಕ್ಷಕಿ ಇದನ್ನು ಹೇಳಿಕೊಟ್ಟಿರೋ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಚಿಕ್ಕಂದಿನಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಆಟ-ಪಾಠ, ಸಂವಹನ, ಭಾವನೆಗಳ, ಇಷ್ಟಗಳು, ಹಾಡುವುದು, ಕುಣಿಯುವುದು ಎಲ್ಲವನ್ನೂ ಕಲಿಸಿಕೊಡಲಾಗುತ್ತದೆ. ಆದರೆ ಮಕ್ಕಳು ದೊಡ್ಡವರಾದಾಗ ಬೇಕಾಗುವ ಅತೀ ಮುಖ್ಯ ವಿಚಾರವನ್ನೇ ಕಲಿಸಿ ಕೊಡುವುದಿಲ್ಲ. ಜಗತ್ತಿನಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ತಿದೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಪುಟ್ಟ ಮಕ್ಕಳಿಗೆ ಚಿಕ್ಕಂದಿನಲ್ಲೇ 'ಗುಡ್‌ ಟಚ್‌, ಬ್ಯಾಡ್ ಟಚ್‌' ಬಗ್ಗೆ ತಿಳಿಸಿಕೊಡುವುದು ಅತೀ ಮುಖ್ಯವಾಗಿದೆ. ಇಲ್ಲೊಬ್ಬ ಶಿಕ್ಷಕಿ ಇದನ್ನು ಹೇಳಿಕೊಟ್ಟಿರೋ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮನೆ, ಸ್ಕೂಲ್‌, ಕ್ರೀಡಾಂಗಣ, ಮಾಲ್‌, ಥಿಯೇಟರ್ ಹೀಗೆ ಎಲ್ಲಿ ಹೋದರೂ ಹೆಣ್ಣು ಮಕ್ಕಳಿಗೆ ದೌರ್ಜನ್ಯವಂತೂ ತಪ್ಪಲ್ಲ. ಪುಟ್ಟ ಮಕ್ಕಳಿಗೂ ಈ ರೀತಿ ಲೈಂಗಿಕ ಕಿರುಕುಳ (Sexual harrasment) ನೀಡುತ್ತಿರುತ್ತಾರೆ. ಹೀಗೆ ಕಿರುಕುಳ ನೀಡುವುದು ಮಕ್ಕಳಿಗೆ ಗೊತ್ತಾಗದ ಕಾರಣ ಇದು ಪೋಷಕರ ಗಮನಕ್ಕೂ ಬರುವುದಿಲ್ಲ. ಮಕ್ಕಳ (Kids) ಮೇಲೆ ರೇಪ್ ಆದಾಗಲಷ್ಟೇ ಅವರಿಗೆ ಮೊದಲಿನಿಂದಲೂ ಕಿರುಕುಳ ನೀಡಲಾಗ್ತಿತ್ತು ಅನ್ನೋ ವಿಚಾರ ಬೆಳಕಿಗೆ ಬರುತ್ತದೆ.

Tap to resize

Latest Videos

ಮಕ್ಕಳಿಗೆ ಬ್ಯಾಡ್, ಗುಡ್ ಟಚ್ ಪಾಠ ಮಾಡೋದು ಪೋಷಕರ ಕರ್ತವ್ಯ!

ಶಿಕ್ಷಕಿಯಿಂದ 'ಗುಡ್‌ ಟಚ್‌, ಬ್ಯಾಡ್‌ ಟಚ್‌' ಪಾಠ, ವಿಡಿಯೋ ವೈರಲ್
ಪುಟ್ಟ ಮಕ್ಕಳಿಗೆ ಯಾರು ಬೇಕಾದರೂ ಕಿರುಕುಳ ಕೊಡುತ್ತಾರೆ. ಸಂಬಂಧಿಕರು, ನೆರೆಹೊರೆಯವರು, ಶಾಲೆಯಲ್ಲಿ ಸಿಬ್ಬಂದಿ, ಸಹಪಾಠಿಗಳು ಹೀಗೆ ಯಾರು ಸಹ ಆಗಿರಬಹುದು. ಹೀಗೆ ಆಗಬಾರದು ಅಂದರೆ ಮಕ್ಕಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಗೊತ್ತಿರಬೇಕು. ಇದಕ್ಕಾಗಿ ಮಕ್ಕಳಿಗೆ ಗುಡ್‌ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಹೇಳಿ ಕೊಡುವುದು ಮುಖ್ಯವಾಗುತ್ತದೆ. 

ಟ್ವಿಟರ್‌ನಲ್ಲಿ ಇತ್ತೀಚೆಗೆ ಇಂಥಹದ್ದೇ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಎಲ್ಲರ ಗಮನ ಸೆಳಿತಿದೆ. ವೈರಲ್ ಆಗಿರುವ ವಿಡಿಯೋವನ್ನು ರೋಶನ್ ರೈ ಎಂಬವರು ಹಂಚಿಕೊಂಡಿದ್ದಾರೆ. 'ಈ ಶಿಕ್ಷಕಿ (Teacher) ವ್ಯಾಪಕವಾದ ಮನ್ನಣೆಗೆ ಅರ್ಹರಾಗಿದ್ದಾರೆ. ಈ ವಿಧಾನವು ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಕ್ಕೆ ಅರ್ಹವಾಗಿದೆ. ದಯವಿಟ್ಟು ವ್ಯಾಪಕವಾಗಿ ಪ್ರಸಾರ ಮಾಡಿ' ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊ 'ಪಾಸಿಟಿವ್ ಟಚ್' ಮತ್ತು 'ನೆಗೆಟಿವ್ ಟಚ್'ನ ಕುರಿತು ಶಿಕ್ಷಕಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳಿ ಕೊಡುವುದನ್ನು ತೋರಿಸುತ್ತದೆ. ಶಿಕ್ಷಕಿ, ಸೌಮ್ಯ ಮತ್ತು ಸಹಾನುಭೂತಿಯ ವರ್ತನೆಯನ್ನು ಪ್ರದರ್ಶಿಸುತ್ತಾ, ಹೆಣ್ಣು ಮಕ್ಕಳಿಗೆ ಧನಾತ್ಮಕ ಮತ್ತು ಋಣಾತ್ಮಕ ದೈಹಿಕ ಸಂವಹನಗಳ ನಡುವಿನ ವ್ಯತ್ಯಾಸವನ್ನು (Difference) ವಿವರಿಸುತ್ತಾರೆ.

ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ಮಕ್ಕಳಿಗೆ ಹೇಳಿ ಕೊಡೋದು ಹೇಗೆ?

ಶಿಕ್ಷಕಿಯ ಕಾರ್ಯಕ್ಕೆ ಶಹಬ್ಬಾಸ್ ಎಂದ ನೆಟ್ಟಿಗರು
ವೈರಲ್ ಆಗಿರುವ ವಿಡಿಯೋ 1.1 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಸಂಗ್ರಹಿಸಿದೆ. ನೆಟ್ಟಿಗರು ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಎಲ್ಲಾ ಪೋಷಕರಿಗೆ ಇದನ್ನು ಹೇಳಿ ಕೊಡಲು ಬರುವುದಿಲ್ಲ, ಹೀಗಾಗಿ ಶಿಕ್ಷಕಿ ಹೇಳಿ ಕೊಟ್ಟಿರುವ ಈ ರೀತಿ ಪ್ರಶಂಸನೀಯ' ಎಂದಿದ್ದಾರೆ. ಇನ್ನು ಅನೇಕರು 'ಶಿಕ್ಷಕಿಯ ಬಗ್ಗೆ ಮೆಚ್ಚುಗೆ (Compliment) ಮತ್ತು ಗೌರವವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಆದರ್ಶಪ್ರಾಯವಾಗಿ ಕಲಿಸಬೇಕು' ಎಂದು  ತಿಳಿಸಿದ್ದಾರೆ.

ಹಿಂದೆಲ್ಲಾ ಮಕ್ಕಳಿಗೆ, ವಿಶೇಷವಾಗಿ ಹುಡುಗಿಯರಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ (Good touch and bad touch) ಬಗ್ಗೆ ಕಲಿಸಲು ಶಿಕ್ಷಕರು ಕೆಲವೊಮ್ಮೆ ಹಿಂಜರಿಯುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಶಿಕ್ಷಕರು ಶಾಲೆಗಳಲ್ಲಿಯೇ ಮಕ್ಕಳಿಗೆ ಇವೆಲ್ಲವನ್ನೂ ಕಲಿಸುತ್ತಿದ್ದಾರೆ. ಅದೇ ರೀತಿ ಈ ಶಿಕ್ಷಕಿ ಮಕ್ಕಳನ್ನು ಮುಟ್ಟಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಹೇಳಿಕೊಡ್ತಿರೋದು ಎಲ್ಲರ ಗಮನ ಸೆಳೀತಿದೆ. ದೈಹಿಕ ಸಂಪರ್ಕದ ಎರಡು ರೂಪಗಳ ನಡುವಿನ ಈ ಗಡಿರೇಖೆಯನ್ನು ಗ್ರಹಿಸುವ ಮಹತ್ವವನ್ನು ಶಿಕ್ಷಕರು ಒತ್ತಿಹೇಳಿದರು.

ಜ್ಞಾನವನ್ನು ನೀಡುವುದರ ಜೊತೆಗೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಅನಪೇಕ್ಷಿತ ದೈಹಿಕ ಸಂಪರ್ಕವನ್ನು ಎದುರಿಸಿದರೆ ಅದನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಲು ಪ್ರೇರೇಪಿಸುವ ವಾತಾವರಣವನ್ನು ಬೆಳೆಸಿದರು. ಒಂದು 'ಒಳ್ಳೆಯ ಸ್ಪರ್ಶ' ಸಹಾನುಭೂತಿ ಮತ್ತು ಒಗ್ಗಟ್ಟನ್ನು ತಿಳಿಸುವ ಕ್ರಿಯೆಗಳನ್ನು ಒಳಗೊಂಡಿದೆ, ಉದಾಹರಣೆಗೆ ಅಪ್ಪಿಕೊಳ್ಳುವುದು, ಕೈಗಳನ್ನು ಹಿಡಿಯುವುದು ಅಥವಾ ಸಾಂತ್ವನ ಮಾಡುವ ಸನ್ನೆಗಳು. ಇದಕ್ಕೆ ವಿರುದ್ಧವಾಗಿ 'ಕೆಟ್ಟ ಸ್ಪರ್ಶ'ವು ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ರೂಪಿಸುತ್ತದೆ, ಅದು ಅಸ್ವಸ್ಥತೆ, ಅಭದ್ರತೆಯ ಭಾವನೆ ಅಥವಾ ಸಂಕಟವನ್ನು ಉಂಟುಮಾಡುತ್ತದೆ. ಇದು ಖಾಸಗಿ ದೇಹದ ಪ್ರದೇಶಗಳನ್ನು ಹೊಡೆಯುವುದು, ಒದೆಯುವುದು ಅಥವಾ ಸಂಪರ್ಕಿಸುವಂತಹ ಕ್ರಿಯೆಗಳನ್ನು ಒಳಗೊಳ್ಳುತ್ತದೆ ಎಂಬುದನ್ನು ವಿವರಿಸಲಾಗಿದೆ.

This teacher deserves to get famous 👏

This should be replicated in all schools across India.

Share it as much as you can. pic.twitter.com/n5dx90aQm0

— Roshan Rai (@RoshanKrRaii)
click me!