ಬಿಳಿ ಮುಟ್ಟು (Vaginal Discharge) ಅಥವಾ ಬಿಳಿ ಸೆರಗು ಮಹಿಳೆ (Woman)ಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿದೆ. ಕೆಲವರಿಗೆ ಇದು ಆಗಾಗ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯ (Health)ಕ್ಕೂ ತೊಂದರೆಯಾಗಿ ಕಿರಿಕಿರಿಯುಂಟು ಮಾಡುತ್ತದೆ. ಬಿಳಿ ಮುಟ್ಟಿನ ಬಗ್ಗೆ ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಬಿಳಿ ಮುಟ್ಟು ಎಂದರೆ ಜನನಾಂಗದ ಮೂಲಕ ನಿರಂತರವಾಗಿ ಹೊರಸೂಸುವ ದ್ರವ ಮತ್ತು ದೇಹ ವಿಸರ್ಜಿಸಿದ ಜೀವಕೋಶಗಳ ಮಿಶ್ರಣವಾಗಿದೆ, ಇದು ದೇಹಕ್ಕಿರುವ ಯಾವುದೇ ರೀತಿಯ ಕಾಯಿಲೆಯಲ್ಲ. ಬದಲಾಗಿ, ದೇಹದ ಒಳಗಿನ ಕಲ್ಮಶಗಳನ್ನೆಲ್ಲಾ ಹೊರ ಹಾಕಿ ಸ್ವಚ್ಛಗೊಳಿಸುವ ಪ್ರಕ್ರಿಯೆ. ಬಿಳಿ ಮುಟ್ಟು ಯೋನಿ ಮತ್ತು ಗರ್ಭಕಂಠದ ಒಳಗಿನ ಗ್ರಂಥಿಗಳಿಂದ ಬರುತ್ತದೆ. ಈ ಗ್ರಂಥಿಗಳು ಸಣ್ಣ ಪ್ರಮಾಣದ ದ್ರವವನ್ನು ಉತ್ಪತ್ತಿ ಮಾಡುತ್ತವೆ, ಇದನ್ನು ಯೋನಿ ಸ್ರವಿಸುವಿಕೆ ಎಂದೂ ಕರೆಯುತ್ತಾರೆ. ಪ್ರತಿದಿನ ದ್ರವವು ಯೋನಿಯಿಂದ ಹೊರಬರುತ್ತದೆ, ಯೋನಿಯನ್ನು ಆವರಿಸಿರುವ ಹಳೆಯ ಕೋಶಗಳನ್ನು ಶುದ್ಧೀಕರಿಸುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಯೋನಿಯನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿಡಲು ಸಹಕರಿಸುತ್ತದೆ.
ಬಿಳಿ ಮುಟ್ಟು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವರಲ್ಲಿ ಈ ಬಿಳಿ ಸೆರಗು ಮಿತಿಯಲ್ಲಿದ್ದರೆ, ಇನ್ನೂ ಕೆಲವರಲ್ಲಿ ಅತಿ ಎನಿಸುವಷ್ಟು ಬಿಳಿಮುಟ್ಟಿನ ಸಮಸ್ಯೆಯನ್ನು ನೋಡಬಹುದು. ಸಾಮಾನ್ಯವಾಗಿ ಬಿಳಿ ಸೆರಗು ಸ್ಪಷ್ಟ ಅಥವಾ ಹಾಲಿನಂತಿರುತ್ತದೆ. ಮತ್ತು ಅಹಿತಕರ ಅಥವಾ ದುರ್ವಾಸನೆಯ ಹೊಂದಿರದೆ ಸೂಕ್ಷ್ಮ ಪರಿಮಳವನ್ನು ಹೊಂದಿರಬಹುದು.
ಇದಲ್ಲದೆ ಬೇರೆ ಬಣ್ಣಗಳಲ್ಲಿ, ವಾಸನೆಗಳಲ್ಲಿ ಬಿಳಿ ಸೆರಗು ಇದ್ದಾಗ ಇದಕ್ಕೆ ಕಾರಣವೇನು, ಇದರಿಂದಾಗುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಬಿಳಿ ಮುಟ್ಟು ವಿಸರ್ಜನೆಯ ಬಣ್ಣ, ವಾಸನೆ ಅಥವಾ ವಿನ್ಯಾಸದಲ್ಲಿನ ಬದಲಾವಣೆಯನ್ನು ಒಳಗೊಂಡಿರುತ್ತದೆ. ಯೋನಿಯಲ್ಲಿ ಅಥವಾ ಅದರ ಸುತ್ತಲೂ ಕಿರಿಕಿರಿ, ತುರಿಕೆ ಅಥವಾ ಸುಡುವಿಕೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಹೀಗಿದ್ದಾಗ ವೈದ್ಯರನ್ನು ಸಂಪರ್ಕಿಸಬೇಕು.
ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು
ಸಾಮಾನ್ಯ ಮತ್ತು ಅಸಹಜ ಬಿಳಿಮುಟ್ಟನ್ನು ಗುರುತಿಸುವುದು ಹೇಗೆ ?
ಬಿಳಿ ಬಣ್ಣ: ಆರೋಗ್ಯ (Health) ಚೆನ್ನಾಗಿದ್ದಾಗ ಜನನಾಂಗದ ಸ್ವಚ್ಛತಾ ಕಾರ್ಯದ ಬಳಿಕ ಹೊರ ಹಾಕಲ್ಪಡುವ ದ್ರವ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದು, ಅಂಟು ಅಂಟಾಗಿರುತ್ತದೆ. ಯಾವುದೇ ವಾಸನೆಯಿಲ್ಲದ ಹಾಲು ಅಥವಾ ಬಿಳಿ ಬಣ್ಣದಲ್ಲಿ ಕಂಡು ಬರುವ ಈ ಬಿಳಿ ಮುಟ್ಟು (Vaginal Discharge) ಸಾಮಾನ್ಯವಾಗಿದೆ.ಇದರಿಂದ ಆರೋಗ್ಯಕ್ಕೂ ಯಾವುದೇ ರೀತಿಯ ಸಮಸ್ಯೆಯಿಲ್ಲ.
ದಪ್ಪ ಬಿಳಿ: ಯೋನಿ ಯೀಸ್ಟ್ ಸೋಂಕಿನಿಂದ ದಪ್ಪ ಬಿಳಿಯಾಗಿರುವ ಬಿಳಿ ಮುಟ್ಟು ಕಾಣಿಸಿಕೊಳ್ಳುತದೆ. ಈ ರೀತಿಯ ಬಿಳಿ ಮುಟ್ಟನ್ನು ಹೊಂದಿರುವವರಲ್ಲಿ ಯೋನಿ ತುರಿಕೆ, ಸುಡುವಿಕೆ, ನೋವು ಮೊದಲಾದವು ಕಾಣಿಸಿಕೊಳ್ಳುತ್ತವೆ. ಈ ರೀತಿಯಿದ್ದಾಗ ಯೋನಿಯ ಸುತ್ತಲೂ ಕೆಂಪು, ಊತ ಅಥವಾ ದದ್ದು ಕಂಡು ಬರುತ್ತದೆ. ಕೆಲವು ಮಹಿಳೆಯರು ಮೂತ್ರ ವಿಸರ್ಜಿಸುವಾಗ ಅಥವಾ ಸಂಭೋಗ ಮಾಡುವಾಗಲೂ ಇದರಿಂದ ನೋವು ಅನುಭವಿಸುತ್ತಾರೆ. ದಪ್ಪ ಬಿಳಿ ಮುಟ್ಟಿನ ಸಮಸ್ಯೆ ಇರುವವರು ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಯೋನಿ ತುರಿಕೆ ಮತ್ತು ಉರಿ ಶಮನಗೊಳಿಸಲು ಐದು ಸರಳ ಮನೆಮದ್ದುಗಳಿವು!
ಬಿಳಿ, ಹಳದಿ ಅಥವಾ ಬೂದು: ಯೋನಿನೋಸಿಸ್ ಬ್ಯಾಕ್ಟೀರಿಯಾ (Bacteria)ದಿಂದ ಈ ಬಿಳಿ, ಹಳದಿ ಅಥವಾ ಬೂದು ಬಣ್ಣದ ಮುಟ್ಟು ಕಂಡು ಬರುತ್ತದೆ. ಈ ಬಿಳಿ ಮುಟ್ಟಿನಲ್ಲಿ ಮೀನಿನ ವಾಸನೆ, ತುರಿಕೆ ಮತ್ತು ಊತ ಕಂಡು ಬರುತ್ತದೆ. ಈ ರೀತಿಯ ಸಮಸ್ಯೆಯಿರುವವರು ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಿ, ಚಿಕಿತ್ಸೆ ಪಡೆಯಿರಿ.
ಹಳದಿ ಅಥವಾ ಹಸಿರು: ಹಳದಿ ಅಥವಾ ತಿಳಿ ಹಸಿರು ಬಣ್ಣದಲ್ಲಿರುವ ಈ ಸ್ರಾವ ನೀರಾಗಿರದೆ ಗಟ್ಟಿ ಗಟ್ಟಿಯಾಗಿರುತ್ತದೆ. ಕೊಳಕು ವಾಸನೆಯನ್ನು ಹೊಂದಿರುವ ಈ ಬಿಳಿ ಮುಟ್ಟು ದೇಹಕ್ಕೂ ಕಿರಿಕಿರಿಯುಂಟು ಮಾಡುತ್ತದೆ.
ಕಂದು ಅಥವಾ ರಕ್ತದ ಬಣ್ಣ: ಕಂದು ಅಥವಾ ರಕ್ತದ ಬಣ್ಣದಲ್ಲಿ ಉಂಟಾಗುವ ಸ್ರಾವವು ಅನಿಯಮಿತ ಮುಟ್ಟಿನ ಅಥವಾ ಹೆಚ್ಚು ಗಂಭೀರವಾದ ಸಮಸ್ಯೆಯ ಸೂಚನೆಯಾಗಿದೆ. ಈ ರೀತಿಯಿದ್ದಾಗ ಯೋನಿಯಲ್ಲಿ ನೋವು ಅಥವಾ ರಕ್ತಸ್ರಾವವಾಗುತ್ತದೆ,
ಮೋಡ ಅಥವಾ ಹಳದಿ ಬಣ್ಣ: ಗೊನೊರಿಯಾ ಬ್ಯಾಕ್ಟಿರೀಯಾದಿಂದ ಈ ಸ್ರಾವದ ಸಮಸ್ಯೆ ಉಂಟಾಗುತ್ತದೆ. ಈ ರೀತಿಯಿದ್ದಾಗಲೂ ಯೋನಿಯಲ್ಲಿ ನೋವು ಕಂಟು ಬರುತ್ತದೆ. ವೈದ್ಯರಲ್ಲಿ ಮಾತನಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು