Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!

By Suvarna News  |  First Published Jan 15, 2022, 2:42 PM IST

ಸಣ್ಣ ಆರೋಗ್ಯ ಸಮಸ್ಯೆಯೇ ಮುಂದೆ ದೊಡ್ಡ ಖಾಯಿಲೆಯಾಗುತ್ತದೆ. ಎಷ್ಟು ಹಣ ಖರ್ಚು ಮಾಡಿದ್ರೂ ಗುಣಪಡಿಸದ ರೋಗವಾಗಬಹುದು. ಹಾಗಾಗಿ ಆರಂಭದಲ್ಲಿಯೇ ಅದನ್ನು ಬೇರು ಸಮೇತ ಕಿತ್ತೆಸೆಯುವ ಅವಶ್ಯಕತೆಯಿದೆ. ವಿಶೇಷವಾಗಿ ಆರೋಗ್ಯದ ಬಗ್ಗೆ ಅಸಡ್ಡೆ ತೋರುವ ಮಹಿಳೆಯರು ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ.
 


ಕೆಲಸದ ವಿಷ್ಯದಲ್ಲಿ ಸದಾ ಮುಂದಿರುವ ಮಹಿಳೆ (Woman)ಯರು ಆರೋಗ್ಯ(Health)ದ ವಿಷ್ಯ ಬಂದಾಗ ಒಂದು ಹೆಜ್ಜೆ ಹಿಂದಿಟ್ಟಿರುತ್ತಾರೆ. ಮಹಿಳೆಯ ದೇಹದಲ್ಲಿ ಹಾರ್ಮೋನು (Hormone)ಗಳ ಬದಲಾವಣೆಯಾಗ್ತಿರುತ್ತದೆ. ಮುಟ್ಟು ಆರಂಭವಾದಾಗಿನಿಂದ ಮುಟ್ಟು ನಿಲ್ಲುವವರೆಗೂ ಹಾರ್ಮೋನುಗಳ ಏರುಪೇರು ಸಾಮಾನ್ಯ. ಮುಟ್ಟು ನಿಂತ ನಂತ್ರವೂ ಮಹಿಳೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ.

ಸಂಭೋಗ ಬೆಳೆಸಿದಾಗ, ಗರ್ಭ ಧರಿಸಿದಾಗ, ಗರ್ಭಪಾತವಾದಾಗ, ಹೆರಿಗೆ ವೇಳೆ, ಹೆರಿಗೆ (delivery) ನಂತ್ರ ಹೀಗೆ ಅನೇಕ ಹಂತಗಳಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮನೆ, ಮಕ್ಕಳು, ಕುಟುಂಬ, ಕೆಲಸದ ಮಧ್ಯೆ ಬಹುತೇಕ ಮಹಿಳೆಯರು ತಮ್ಮ ಆರೋಗ್ಯ ಮರೆತಿರುತ್ತಾರೆ. ತಮಗಾಗಿ ಅರ್ಧ ಗಂಟೆ ಮೀಸಲಿಡುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು. ಪತಿ, ಮಕ್ಕಳು ಇಲ್ಲವೇ ಕುಟುಂಬದ ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾದಾಗ ಅವರ ಸಹಾಯಕ್ಕೆ ನಿಲ್ಲುವ ಮಹಿಳೆ ತನ್ನ ಆರೋಗ್ಯ ಹದಗೆಟ್ಟಾಗ ನಿರ್ಲಕ್ಷ್ಯ ಮಾಡ್ತಾಳೆ. ಸರಿಯಾಗುತ್ತೆ ಎಂಬ ಭ್ರಮೆಯಲ್ಲಿ ವೈದ್ಯರ ಬಳಿ ಹೋಗುವುದನ್ನು ತಡೆಯುತ್ತಾಳೆ. ಕೆಲ ಮಹಿಳೆಯರು ಯಮಯಾತನೆ ಅನುಭವಿಸಿದ್ರೂ ಅದನ್ನು ಮನೆಯವರ ಮುಂದೆ ಹೇಳುವುದಿಲ್ಲ. ವಿಶೇಷವಾಗಿ ಖಾಸಗಿ ಅಂಗಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಮಹಿಳೆ ಸಂಪೂರ್ಣ ನಿರ್ಲಕ್ಷ್ಯಿಸುತ್ತಾಳೆ. ಅನಾರೋಗ್ಯ ಹೇಳಿಕೊಳ್ಳಲು, ವೈದ್ಯರ ಬಳಿ ಹೋಗಲು ನಾಚಿಕೊಳ್ಳುವ ಮಹಿಳೆ ಅದನ್ನು ಮುಚ್ಚಿಡುತ್ತಾಳೆ.

ಆರಂಭದಲ್ಲಿ ಚಿಕ್ಕದು ಎನಿಸುವ ಸಮಸ್ಯೆ ದಿನ ಕಳೆದಂತೆ ದೊಡ್ಡದಾಗುತ್ತದೆ. ಪರಿಸ್ಥಿತಿ ಕೈ ಮೀರಿದ ಮೇಲೆ ಚಿಕಿತ್ಸೆ ಪಡೆಯುವ ಬದಲು ನಾಚಿಕೆ ಬದಿಗಿಟ್ಟು,ಆರಂಭದಲ್ಲಿಯೇ ವೈದ್ಯರ ಸಲಹೆ ಪಡೆದರೆ ಒಳ್ಳೆಯದು. ಮಹಿಳೆಯಾದವಳು ಕೆಲವು ಸಮಸ್ಯೆಗಳನ್ನು ಎಂದಿಗೂ ವೈದ್ಯರ ಬಳಿ ಮುಚ್ಚಿಡಬಾರದು. ಸ್ತ್ರೀರೋಗತಜ್ಞರೊಂದಿಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಕಾಲಕಾಲಕ್ಕೆ ಸಲಹೆಗಳನ್ನು ತೆಗೆದುಕೊಳ್ಳಬೇಕು. 

ವೈದ್ಯರ ಬಳಿ ಮುಚ್ಚಿಡಲೇಬಾರದ ಸಮಸ್ಯೆಗಳು

Tap to resize

Latest Videos

undefined

ಯೋನಿಯಲ್ಲಿ ತುರಿಕೆ ಮತ್ತು ದುರ್ವಾಸನೆ : ಯೋನಿಯಲ್ಲಿ ತುರಿಕೆ ಮತ್ತು ವಾಸನೆಯ ಸಮಸ್ಯೆ ಕಾಡ್ತಿದ್ದರೆ ನೀವು ತಕ್ಷಣ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ. ಮಹಿಳಾ ವೈದ್ಯರ ಮುಂದೆ ನಿಮಗೆ ಏನಾಗ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿ. ಯೋನಿಯಲ್ಲಿ ತುರಿಕೆ ಮತ್ತು ನೋವು ದೊಡ್ಡ ಸೋಂಕು ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಸಂಭೋಗದ ವೇಳೆ ನೋವು : ಅನೇಕ ಮಹಿಳೆಯರು ಸಂಭೋಗದ ವೇಳೆ  ಅಸ್ವಸ್ಥತೆ ಮತ್ತು ನೋವನ್ನು ಅನುಭವಿಸುತ್ತಾರೆ. ಇದು ಕೂಡ  ಗಮನ ನೀಡುವಂತಹ ವಿಷ್ಯವಾಗಿದೆ. ಸೆಕ್ಸ್ ವೇಳೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಸ್ತನ ಸಮಸ್ಯೆ : ಸ್ತನದಲ್ಲಿ ನೋವು, ಸ್ತನದಲ್ಲಿ ಗಡ್ಡೆ, ಸ್ತನದಿಂದ ಸ್ರವಿಸುವಿಕೆ, ಸ್ತನದ ಮೇಲಿನ ಚರ್ಮದಲ್ಲಿ ಬದಲಾವಣೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಮೊದಲೇ ಇದಕ್ಕೆ ಚಿಕಿತ್ಸೆ ಸಿಕ್ಕರೆ ಗುಣಮುಖರಾಗಬಹುದು. ಹಾಗಾಗಿ ಮರೆಯದೆ,ನಾಚಿಕೊಳ್ಳದೆ ವೈದ್ಯರ ಬಳಿ ಹೋಗಿ.

ಗರ್ಭಕೋಶ ಶಸ್ತ್ರಚಿಕಿತ್ಸೆ ನಂತ್ರ Sex Life ಹೇಗಿರುತ್ತೆ?

ಗರ್ಭಧಾರಣೆ ಸಂದರ್ಭ : ಮಕ್ಕಳನ್ನು ಪಡೆಯುವ ಪ್ಲಾನ್ ಮಾಡ್ತಿದ್ದರೆ ಗರ್ಭಧರಿಸುವ ಮುನ್ನ ವೈದ್ಯರನ್ನು ಭೇಟಿಯಾಗಿದೆ. ವೈದ್ಯರು ಕೆಲವೊಂದು ಪರೀಕ್ಷೆ ನಡೆಸುತ್ತಾರೆ. ಅದು ನಿಮಗೆ ಮತ್ತು ನಿಮ್ಮ ಹುಟ್ಟಲಿರುವ ಮಕ್ಕಳಿಗೆ ನೆರವಾಗಲಿದೆ. ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

ಅನಿಯಮಿತ ಮುಟ್ಟು : ಮುಟ್ಟಿನ ದಿನಗಳಲ್ಲಿ ಏರುಪೇರಾಗುವುದು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಹಾರ್ಮೋನ್ ಬದಲಾವಣೆ, ಒತ್ತಡ, ಸೋಂಕು ಕಾರಣವಾಗಿರಬಹುದು. ಆದರೆ ಇದು ನಿರಂತರವಾಗಿ ನಡೆಯುತ್ತಿದ್ದರೆ, ನೀವು ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕಾಗುತ್ತದೆ.

Long Hair Village: ಈ ಊರಿನ ತುಂಬಾ ನೀಳವೇಣಿಯರೇ!

ಮುಟ್ಟಿನ ಸಮಯದಲ್ಲಿ ವಿಪರೀತ ನೋವು,ಸೆಳೆತ : ಪಿರಿಯಡ್ಸ್ ಸಮಯದಲ್ಲಿ ನೋವು ಮತ್ತು ಕಿಬ್ಬೊಟ್ಟೆ ಸೆಳೆತ ಸಾಮಾನ್ಯ. ಕೆಲವರಿಗೆ ಇದು ವಿಪರೀತವಾಗಿರುತ್ತದೆ. ಪ್ರತಿ ಮುಟ್ಟಿನಲ್ಲೂ ಅಸಹನೀಯ ನೋವು ತಿನ್ನುತ್ತಿರುತ್ತಾರೆ. ಅಂಥ ಸಂದರ್ಭದಲ್ಲಿ ಇದು ಸಾಮಾನ್ಯವೆಂದು ನಿರ್ಲಕ್ಷ್ಯಿಸಬೇಡಿ. ಇದು ಫೈಬ್ರಾಯ್ಡ್ ,ಎಂಡೋಮಿಟೋಸಿಸ್, ಅಡೆನೊಮೈಯೋಸಿಸ್‌ನ ಲಕ್ಷಣವೂ ಆಗಿರಬಹುದು.

click me!