
ಐಎಎಸ್ ಅಧಿಕಾರಿಯಾಗ್ಬೇಕೆಂದು ಲಕ್ಷಾಂತರ ಮಂದಿ ಕನಸು ಕಾಣ್ತಾರೆ. ಅದಕ್ಕೆ ಪ್ರತಿನಿತ್ಯ ಸಾಕಷ್ಟು ಪ್ರಯತ್ನ ಕೂಡ ನಡೆಸ್ತಾರೆ. ಆದ್ರೆ ಸತತ ಹಾಗೂ ಕಠಿಣ ಪರಿಶ್ರಮದಿಂದ ಕೆಲವೇ ಕೆಲವು ಮಂದಿ ತಮ್ಮ ಕನಸನ್ನು ಈಡೇರಿಸಿಕೊಳ್ತಾರೆ. ಐಎಎಸ್ ಹುದ್ದೆಗೆ ಏರೋದು ಮಾತ್ರ ಮುಖ್ಯವಲ್ಲ. ಈ ಹುದ್ದೆಯನ್ನು ಅಲಂಕರಿಸಿದ ಮೇಲೆ ಜನರ ನೋವಿಗೆ ಸ್ಪಂದಿಸುವ ಕೆಲಸವನ್ನೂ ಮಾಡ್ಬೇಕಾಗುತ್ತದೆ. ಸದಾ ಜನರ ಸೇವೆಗೆ ಸಿದ್ಧವಿರಬೇಕಾಗುತ್ತದೆ. ಇದಕ್ಕೆ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ಉತ್ತಮ ನಿದರ್ಶನ. ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ಅವರ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಎಎಸ್ (IAS) ಅಧಿಕಾರಿ ಸೌಮ್ಯ ಪಾಂಡೆ (Saumya Pandey), ಕಾನ್ಪುರ್ ದೇಹತ್‌ನಲ್ಲಿ ಸಿಡಿಒ ಆಗಿ ಕೆಲಸ ಮಾಡ್ತಿದ್ದಾರೆ. ಅವರು ತಮ್ಮ ಕಚೇರಿಯಿಂದ ಹೊರ ಬರ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿ ನೆಲದ ಮೇಲೆ ಕುಳಿತ ವೃದ್ಧ ವ್ಯಕ್ತಿಯೊಬ್ಬರು ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣ ಸೌಮ್ಯಾ ಕಾಲು ಆ ಕಡೆ ತಿರುಗಿದೆ. ವೃದ್ಧ ವ್ಯಕ್ತಿ ಬಳಿ ಬಂದ ಸೌಮ್ಯಾ ನೆಲದ ಮೇಲೆ ಕುಳಿತು, ವೃದ್ಧರ ಸಮಸ್ಯೆಯನ್ನು ಆಲಿಸಿದ್ದಾರೆ. ಈ ವೇಳೆ ಸೌಮ್ಯಾ ಹಾಗೂ ವೃದ್ಧರ ಮಧ್ಯೆ ನಡೆಯುತ್ತಿದ್ದ ಮಾತುಕತೆ ಫೋಟೋವನ್ನು ಯಾರೋ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವೃದ್ಧ ವ್ಯಕ್ತಿ ವಿಕಲಾಂಗರಂತೆ. ಅವರು ಎಲೆಕ್ಟ್ರಾನಿಕ್ ಬೈಸಿಕಲ್ ಖರೀದಿಗೆ ಹಣದ ಸಹಾಯ ಕೇಳಲು ಬಂದಿದ್ದರು ಎಂಬುದು ಗೊತ್ತಾಗಿದೆ.
ಹಳಿಗೆ ಅಡ್ಡಲಾಗಿ ಬಿದ್ದ ಮರ: ರೈಲು ಅವಘಡ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆಯ ಸಾಹಸ!
ಸಿಡಿಒ ಕಾನ್ಪುರ್ ದೇಹತ್ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಮುಖ್ಯ ಅಭಿವೃದ್ಧಿ ಅಧಿಕಾರಿ ಸೌಮ್ಯಾ ಪಾಂಡೆ ಅವರು ಎಲೆಕ್ಟ್ರಾನಿಕ್ ಸೈಕಲ್ ಖರೀದಿಸಲು ಬಂದ ಅಮರೌಧ ನಗರ ಪಂಚಾಯತ್ ನಿವಾಸಿ ದಿವ್ಯಾಂಗ ಮತ್ತು ವೃದ್ಧ ಧನಿರಾಮ್ ಅವರ ನೋವನ್ನು ಆಲಿಸಿದರು. ಇವರಿಗೆ ಎಲ್ಲಾ ರೀತಿಯ ಸಹಾಯ ನೀಡುವಂತೆ ಅಧಿಕಾರಿಗೆ ಸೂಚಿಸಿದರು. ಸರ್ಕಾರದ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ಜನರು ಪಡೆಯಬೇಕೆಂಬುದು ಅವರ ಉದ್ದೇಶ ಎಂದು ಶೀರ್ಷಿಕೆ ಹಾಕಲಾಗಿದೆ. ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ಮತ್ತು ಅಂಗವಿಕಲ ವೃದ್ಧೆಯ ನಡುವಿನ ಹೃದಯಸ್ಪರ್ಶಿ ಸಂಭಾಷಣೆಯ ಫೋಟೋ, ಟ್ವಿಟರ್ ಬಳಕೆದಾರರ ಮನ ಮುಟ್ಟಿದೆ. ಸೌಮ್ಯಾ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾರು ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ? : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ, 2017 ರ ಬ್ಯಾಚ್‌ನಲ್ಲಿ ಉತ್ತೀರ್ಣರಾದ ಯುವ ಐಎಎಸ್ ಅಧಿಕಾರಿ. ಅವರು ಪ್ರಯಾಗರಾಜ್ ಮೂಲದವರು. ಅತಿ ಕಡಿಮೆ ಸಮಯದಲ್ಲಿ ಯಶಸ್ವಿಯಾದ ಅಧಿಕಾರಿ ಸೌಮ್ಯ ಪಾಂಡೆ. ತಮ್ಮ 23 ನೇ ವಯಸ್ಸಿನಲ್ಲಿ ಅವರು ಯುಪಿಎಸ್ ಸಿ ( UPSC) ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದರು. ಸೌಮ್ಯ ಪಾಂಡೆ 2020 ರಲ್ಲಿ ಅತ್ಯುತ್ತಮ ಕಲೆಕ್ಟರ್ ಪ್ರಶಸ್ತಿ ಪಡೆದಿದ್ದಾರೆ.
PlayBoyಗೆ ಪೋಸ್ ನೀಡಿದ ಫ್ರೆಂಚ್ ಸಚಿವೆ ನಡೆಗೆ ಹಲವರ ಟೀಕೆ; ಸಾಫ್ಟ್ ಪೋರ್ನ್ ಅಲ್ಲ ಎಂದ ಮ್ಯಾಗಜೀನ್
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಹಾಯಕ ಕಲೆಕ್ಟರ್ ಆಗಿ ಸೌಮ್ಯ ಮೊದಲ ಬಾರಿ ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ ಸೌಮ್ಯ. ಸೌಮ್ಯ, ಐಎಎಸ್ ಅಧಿಕಾರಿಯಾಗಲು ನಡೆಸಿದ ತಯಾರಿ, ಐಎಎಸ್ ಆಗ್ಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಸ್ಪೂರ್ತಿಯಾಗಿದೆ. ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಕಾರಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪರೋಪಕಾರಕ್ಕಿಂತ ಬೇರೆ ಕೆಲಸವಿಲ್ಲ, ಇದು ಮೆಚ್ಚುಗೆಯ ಕೆಲಸ, ಅತ್ಯಂತ ಶ್ಲಾಘನೀಯ ಎಂದು ಜನರು ಕಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ, ವಂದನೆಗಳು, ನಿಮ್ಮ ಈ ಕಾರ್ಯವು ಅತ್ಯಂತ ಸಹಾನುಭೂತಿಯಿಂದ ಕೂಡಿದೆ. ನೀವು ಅಧಿಕಾರಿ ಮತ್ತು ಮೊಮ್ಮಗಳಂತೆಯೇ ನಿಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಉದಾತ್ತ ಕಾರ್ಯವನ್ನು ಮಾಡಿದ್ದೀರಿ. ಜೈ ಜವಾನ್ ಜೈ ಕಿಸಾನ್, ಜೈ ಜೈ ಶ್ರೀ ರಾಮ್ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.