Kitchen Tips : ಪಾತ್ರೆ ತೊಳೆಯುವ ಸಾಬೂನಲ್ಲಿ ಇವನ್ನ ತೊಳೆಯಬೇಡಿ

Published : Apr 03, 2023, 03:01 PM IST
Kitchen Tips : ಪಾತ್ರೆ ತೊಳೆಯುವ ಸಾಬೂನಲ್ಲಿ ಇವನ್ನ ತೊಳೆಯಬೇಡಿ

ಸಾರಾಂಶ

ಪಾತ್ರೆ ಕ್ಲೀನ್ ಮಾಡೋಕೆ ಈಗ ಸಾಕಷ್ಟು ಲಿಕ್ವಿಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆಗೆ ತರುವ ಈ ಒಂದೇ ಲಿಕ್ವಿಡನ್ನು ಇನ್ನೂ ಅನೇಕ ವಸ್ತುಗಳನ್ನು ಕ್ಲೀನ್ ಮಾಡಲು ಬಳಸ್ತಾರೆ. ಆದ್ರೆ ಇದನ್ನು ಎಲ್ಲದಕ್ಕೂ ಬಳಸೋದು ಒಳ್ಳೆಯದಲ್ಲ.   

ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಬೂದಿ, ಅಂಟುವಾಳಕಾಯಿ ಅಥವಾ ಸೀಗೇಕಾಯಿಗಳನ್ನು ಬಳಸುತ್ತಿದ್ದರು. ಈಗಿನ ಸ್ಕ್ರಬರ್ ಜಾಗದಲ್ಲಿ ಅಂದು ತೆಂಗಿನ ಗುಂಜುಗಳು ಇರುತ್ತಿದ್ದವು. ಕಂಚು ಹಿತ್ತಾಳೆ ಮುಂತಾದ ಪಾತ್ರೆಗಳನ್ನು ತೊಳೆಯಲು ಹುಣಸೆಹಣ್ಣು, ನಿಂಬೆಹಣ್ಣು ಮುಂತಾದ ಹುಳಿ ಹಣ್ಣುಗಳನ್ನು ಉಪಯೋಗಿಸುತ್ತಿದ್ದರು. ಇವುಗಳಿಂದ ಪಾತ್ರೆಗಳನ್ನು ತೊಳೆಯುವುದರಿಂದ ಪಾತ್ರೆಗಳು ಸ್ವಚ್ಛವಾಗುತ್ತಿದ್ದವು ಮತ್ತು ಪಾತ್ರೆಯ ಹೊಳಪು ಕೂಡ ಮಾಸುತ್ತಿರಲಿಲ್ಲ. ಹೆಚ್ಚಿನದಾಗಿ ಇದರಿಂದ ಯಾವುದೇ ರೀತಿಯ ಸೈಡ್ ಇಫೆಕ್ಟ್ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮೊದಲಿನ ರೀತಿ ಈಗ ಯಾರೂ ಬೂದಿಯನ್ನೋ ಅಥವಾ ಸೀಗೇಕಾಯಿಯನ್ನೋ ಬಳಸುತ್ತಿಲ್ಲ. ಅವುಗಳ ಬದಲು ಅನೇಕ ರೀತಿಯ ಡಿಶ್ ವಾಶರ್ ಗಳುಬಂದಿವೆ.

ಮಾರುಕಟ್ಟೆಯಲ್ಲಿ ಸ್ನಾನ ಮಾಡಲು, ಪಾತ್ರೆ (Vessel) ತೊಳೆಯಲು, ವಾಹನ ಅಥವಾ ಗ್ಲಾಸ್ ಗಳನ್ನು ತೊಳೆಯಲು, ಪ್ರಾಣಿಗಳಿಗೆ ಸ್ನಾನ ಮಾಡಿಸಲು ಮುಂತಾದವುಗಳಿಗಾಗಿ ಅನೇಕ ರೀತಿಯ ಸೋಪು (Soap) , ಶಾಂಪೂಗಳು ಸಿಗುತ್ತವೆ. ಇಂತಹ ಲಿಕ್ವಿಡ್, ಸೋಪು ಅಥವಾ ಶಾಂಪೂಗಳನ್ನು ನಾವು ನಮಗೆ ಬೇಕಾದ ಹಾಗೆ ಎಲ್ಲೆಂದರಲ್ಲಿ ಬಳಕೆ ಮಾಡುತ್ತೇವೆ. ಹೀಗೆ ಯಾವುದೋ ಉತ್ಪನ್ನವನ್ನು ಇನ್ಯಾವುದೋ ಉಪಯೋಗಕ್ಕೆ ಬಳಸಿಕೊಳ್ಳುವುದರಿಂದ ಅನೇಕ ರೀತಿಯ ಸೈಡ್ ಇಫೆಕ್ಟ್ ಆಗುತ್ತೆ. ಯಾವುದೋ ಒಂದು ಪರಿಮಳಯುಕ್ತ ಲಿಕ್ವಿಡ್ (Liquid) ಅನ್ನು ಮನೆಯಲ್ಲಿ ಇಟ್ಟುಕೊಂಡು ಅದನ್ನೇ ಹಲವು ಕೆಲಸಗಳಿಗೆ ಬಳಸಿಕೊಳ್ಳುವ ಪದ್ಧತಿ ತಪ್ಪು. ಇದರಿಂದ ಅನೇಕ ರೀತಿಯ ನಷ್ಟಗಳು ಉಂಟಾಗುತ್ತದೆ. ಅಂತಹ ನಷ್ಟಗಳು ಯಾವುದೆಂದು ನೋಡೋಣ.

ಕರಿದ ಆಹಾರ ಎಷ್ಟ್ ಬೇಕಾದ್ರೂ ತಿನ್ತೀನಿ ಅನ್ನೋ ಪೈಕಿನಾ? ತಯಾರಿಸುವಾಗ ಈ ಟಿಪ್ಸ್ ನೆನಪಿರ್ಲಿ

•  ಕೆಲವರು ಮನೆಯಲ್ಲಿರುವ ಪಾತ್ರೆ ತೊಳೆಯುವ ಸೋಪು ಅಥವಾ ಶಾಂಪೂವನ್ನು ಬಳಸಿ ಕಾರನ್ನು ಸ್ವಚ್ಛಗೊಳಿಸುತ್ತಾರೆ. ಪಾತ್ರೆ ತೊಳೆಯುವ ಲಿಕ್ವಿಡ್ ಅಥವಾ ಸೋಪಿನಲ್ಲಿರುವ ಕೆಮಿಕಲ್ ನಿಂದ ಕಾರಿನ ಬಣ್ಣ ಹಾಳಾಗುತ್ತದೆ ಅಥವಾ ನಿಮ್ಮ ಕಾರಿನ ಬಣ್ಣ ಕೊಂಚ ತಿಳಿಯಾಗಬಹುದು. ಹಾಗಾಗಿ ಕಾರನ್ನು ತೊಳೆಯಲು ಯಾವಾಗಲೂ ಕೆಮಿಕಲ್ ಫ್ರೀ ಹೇರ್ ಶಾಂಪೂಗಳನ್ನು ಅಥವಾ ಗಾಡಿಗಳನ್ನು ತೊಳೆಯುವ ಲಿಕ್ವಿಡ್ ಗಳನ್ನೇ ಬಳಸಬೇಕು. ಇದರಿಂದ ಕಾರಿನ ಬಣ್ಣ ಮಾಸುವುದಿಲ್ಲ.

• ನೆಲ ಒರೆಸಲು ಕೂಡ ಪಾತ್ರೆ ತೊಳೆಯುವ ಸೋಪನ್ನು ಬಳಸುವುದು ಒಳ್ಳೆಯದಲ್ಲ. ಇದರಿಂದ ನೀವು ನೆಲಕ್ಕೆ ಹಾಕಿರುವ ಟೈಲ್ಸ್ ಹಾಳಾಗುತ್ತದೆ. ನಿಮ್ಮ ಮನೆಯಲ್ಲಿ ವುಡನ್ ಫ್ಲೋರಿಂಗ್ ಇರುವುದಾದರೆ ಖಂಡಿತವಾಗಿಯೂ ಪಾತ್ರೆ ತೊಳೆಯುವ ಸೋಪನ್ನು ಬಳಸಬೇಡಿ.

• ನೀವು ಅಡುಗೆ ಮನೆಯಲ್ಲಿ ಬಳಸುವ ಪಾತ್ರೆತೊಳೆಯುವ ಸೋಪು ಕೂಡ ಎಲ್ಲ ಪಾತ್ರೆಗಳಿಗೂ ಸೂಕ್ತವಾಗಿರುವುದಿಲ್ಲ. ಇದರಿಂದ ಪಾತ್ರೆಯ ಮೇಲೆ ನೇರ ಪರಿಣಾಮ ಬೀರಬಹುದು. ಉದಾಹರಣೆಗೆ ಎರಕಹೊಯ್ದ ಕಬ್ಬಿಣದಿಂದ ಮಾಡಿದ ಅಥವಾ ನಾನ್ ಸ್ಟಿಕ್ ಪಾತ್ರೆಗಳನ್ನು ನೀರಿಗೆ ಉಪ್ಪು ಹಾಕಿ ತೊಳೆಯಬೇಕು ಅದನ್ನು ನೀವು ಸಾಮಾನ್ಯ ಪಾತ್ರೆ ತೊಳೆಯುವ ಸೋಪಿನಿಂದ ತೊಳೆದರೆ ಅವು ಬಹಳ ಬೇಗ ಹಾಳಾಗುತ್ತವೆ.

ಫ್ರಿಡ್ಜ್‌ನಲ್ಲಿಟ್ಟ ಚಪಾತಿ ಹಿಟ್ಟು ಕಪ್ಪಾಗ್ತಿದ್ಯಾ? ಈ ರೀತಿ ಸ್ಟೋರ್ ಮಾಡಿದ್ರೆ ತುಂಬಾ ದಿನ ಫ್ರೆಶ್ ಆಗಿರುತ್ತೆ

• ಕೆಮಿಕಲ್ ಮಿಶ್ರಿತ ಪ್ರೊಡಕ್ಟ್ ಗಳಿಂದ ನಮ್ಮ ಚರ್ಮ ಹೇಗೆ ಹಾನಿಗೊಳಗಾಗುತ್ತದೆಯೋ ಹಾಗೆ ಚರ್ಮದಿಂದ ತಯಾರಿಸಿದ ವಸ್ತುಗಳು ಕೂಡ ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಚರ್ಮದ ಬೂಟು, ಪರ್ಸ್, ಪೀಠೋಪಕರಣಗಳು ಮತ್ತು ಕಾರಿನ ಸೀಟ್ ಗಳನ್ನು ಪಾತ್ರೆ ತೊಳೆಯುವ ಸೋಪುಗಳಿಂದ ತೊಳೆಯಲೇ ಬಾರದು. ಕೆಮಿಕಲ್ ಹೊಂದಿರುವ ಸೋಪಿನಿಂದ ಅವು ತಮ್ಮ ಮೃದುತ್ವವನ್ನು ಕಳೆದುಕೊಂಡು ಬಹಳ ಬೇಗ ಹರಿಯುವ ಸಾಧ್ಯತೆ ಇರುತ್ತದೆ.

• ಬಟ್ಟೆಗಳನ್ನು ಕೂಡ ಬಟ್ಟೆ ತೊಳೆಯುವ ಸೋಪು ಅಥವಾ ಪೌಡರ್ ಗಳಿಂದಲೇ ತೊಳೆಯಬೇಕು. ಪಾತ್ರೆ ತೊಳೆಯುವ ಸೋಪನ್ನು ಬಟ್ಟೆ ತೊಳೆಯಲು ಬಳಸಿದರೆ ಬಟ್ಟೆಯ ಬಣ್ಣ ಮಾಸುತ್ತದೆ ಮತ್ತು ಬಟ್ಟೆ ಬಹಳ ಬೇಗ ಹಾಳಾಗುತ್ತದೆ.

• ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳನ್ನು ಕೂಡ ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಬಾರದು. ಅದರಿಂದ ಪಾತ್ರೆಗಳು ಸವೆದುಹೋಗುತ್ತದೆ ಮತ್ತು ಅವುಗಳ ಮೇಲೆ ಕಲೆಗಳು ಹಾಗೆಯೇ ಉಳಿಯಬಹುದು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?