ಫ್ರಿಜ್ ಹಾಳಾಗಿರ್ಬೇಕು, ಕೆಟ್ಟ ವಾಸನೆ ಬರ್ತಿದೆ ಅಂತಾ ಕೆಲವರು ಹೇಳೋದನ್ನು ನಾವು ಕೇಳಿರ್ತೇವೆ. ವಾಸನೆ ಬರೋಕೆ ಹಾಳಾಗಿರ್ಬೇಕೆಂದೇನಿಲ್ಲ. ನಮ್ಮ ಕೆಲ ತಪ್ಪು ಇದಕ್ಕೆ ಕಾರಣವಾಗಿರುತ್ತೆ. ಫ್ರಿಜ್ ಸದಾ ಫ್ರೆಶ್ ಆಗಿರ್ಬೇಕೆಂದ್ರೆ ಕೆಲವೊಂದು ಉಪಾಯ ಮಾಡ್ಬೇಕು.
ಫ್ರಿಜ (Refrigerator) ನ್ನು ತಣ್ಣನೆ ಆಹಾರಗಳನ್ನಿಡುವ ಯಂತ್ರ ಎನ್ನುತ್ತೇವೆ. ಅಲ್ಲಿ ನಿನ್ನೆ, ಮೊನ್ನೆ ಮಾಡಿದ ಆಹಾರ (Food) ಗಳನ್ನೂ ನಾವು ಇಡ್ತೇವೆ. ಫ್ರಿಜ್ ನಲ್ಲಿ ಆಹಾರವನ್ನು ಸರಿಯಾದ ರೀತಿಯಲ್ಲಿ ಇಡಬೇಕು. ಅನೇಕ ಬಾರಿ ಆಹಾರವನ್ನು ಮುಚ್ಚದೆ ಹಾಗೆ ಫ್ರಿಜ್ ನಲ್ಲಿ ಇಟ್ಟಿರುತ್ತೇವೆ. ಫ್ರಿಜ್ ವೋಲ್ಟೇಜ್ (Voltage) ಮೇಲಕ್ಕೆ ಅಥವಾ ಕೆಳಕ್ಕೆ ಹೋಗುವುದರಿಂದ ಅಥವಾ ಆಹಾರವನ್ನು ತೆರೆದಿದ್ದರೆ ದುರ್ವಾಸನೆ ಉಂಟಾಗುತ್ತದೆ. ಆಹಾರ ಪದಾರ್ಥ ವಾಸನೆ ಬರಬಾರದು ಅಂದ್ರೆ ಗಾಳಿಯಾಡದ ಡಬ್ಬದಲ್ಲಿ ಇಡಬೇಕು. ಕೆಲವೊಮ್ಮೆ ಅತಿಥಿಗಳ ಮುಂದೆ ಈ ವಾಸನೆ ನಮ್ಮನ್ನು ಮುಜುಗರಕ್ಕೆ ನೂಕುತ್ತದೆ. ಇಂದು ನಾವು ಫ್ರಿಜ್ ವಾಸನೆಯನ್ನು ಹೇಗೆ ಕಡಿಮೆ ಮಾಡೋದು ಎಂಬ ಟಿಪ್ಸ್ ಹೇಳ್ತೇವೆ.
ಫ್ರಿಜ್ ನಿಂದ ಬರುವ ವಾಸನೆಗೆ ಹೇಳಿ ಗುಡ್ ಬೈ :
ಕಾಫಿ : ಫ್ರಿಜ್ ನಿಂದ ವಾಸನೆ ಬರ್ತಿದ್ದರೆ ವಾಸನೆಯನ್ನು ಹೋಗಲಾಡಿಸಲು ನೀವು ಕಾಫಿ ಪುಡಿಯನ್ನು ಬಳಸಬಹುದು. ಮೊದಲು ಕಾಫಿ ಪುಡಿಯನ್ನು ತೆಗೆದುಕೊಳ್ಳಿ. ಅದನ್ನು ಮೂರ್ನಾಲ್ಕು ಬೇಕಿಂಗ್ ಶೀಟ್ ಮೇಳೆ ಹರಡಿ. ನಂತ್ರ ಅದನ್ನು ನೀಟಾಗಿ ಮಡಚಿ, ಫ್ರಿಜ್ ನ ಎಲ್ಲ ರ್ಯಾಕ್ ಮೇಲೆ ಒಂದೊಂದನ್ನು ಇಡಿ. ಫ್ರಿಜ್ ನಿಂದ ಬರುವ ದುರ್ವಾಸನೆ 2-3 ದಿನಗಳಲ್ಲಿ ಮಾಯವಾಗುತ್ತದೆ. ವಾಸನೆ ಹೋದ ತಕ್ಷಣ ಫ್ರಿಜ್ ನಿಂದ ಇದನ್ನು ತೆಗೆಯಿರಿ.
Home Decoration Tips: ಚಿಕ್ಕ ಲಿವಿಂಗ್ ರೂಮ್ ದೊಡ್ಡದಾಗಿ ಕಾಣಬೇಕಾ?
ಅಡಿಗೆ ಸೋಡಾ : ಫ್ರಿಜ್ ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ನಿಮಗೆ ಅಡುಗೆ ಸೋಡಾ ಕೂಡ ಸಹಾಯ ಮಾಡುತ್ತದೆ. ಒಂದು ಬೌಲ್ ನಲ್ಲಿ ಅಡುಗೆ ಸೋಡಾವನ್ನು ಹಾಕಿ. ಅಡುಗೆ ಸೋಡಾ ಹಾಕಿದ ಬೌಲನ್ನು ನೀವು ಫ್ರಿಜ್ ನಲ್ಲಿ ಇಡಬೇಕು. 30 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಈ ಬೌಲನ್ನು ಇಡಬೇಕು. ಇದ್ರಿಂದ ಫ್ರಿಜ್ ಫ್ರೆಶ್ ಆಗುತ್ತದೆ. ಅದ್ರಿಂದ ಬರುತ್ತಿರುವ ವಾಸನೆ ಕಡಿಮೆಯಾಗುತ್ತದೆ.
ಆಪಲ್ ಸೈಡ್ ವಿನೆಗರ್ : ಫ್ರಿಜ್ ನಿಂದ ಬರುವ ವಾಸನೆಯನ್ನು ಕಡಿಮೆ ಮಾಡಲು ನೀವು ಆಪಲ್ ಸೈಡರ್ ವಿನೆಗರ್ ಅನ್ನು ಬಳಸಬಹುದು. ಆಪಲ್ ಸೈಡ್ ವಿನೆಗರ್ ಅನ್ನು ನೀರಿಗೆ ಸೇರಿಸಿ ಮತ್ತು ಅದನ್ನು ಕುದಿಸಿ. ಅದು ಕುದಿಯಲು ಪ್ರಾರಂಭಿಸಿದ ತಕ್ಷಣ ಗ್ಯಾಸ್ ಆಫ್ ಮಾಡಿ. ನಂತರ ಕುದಿಸಿದ ಆಪಲ್ ಸೈಡ್ ವಿನೆಗರನ್ನು ಒಂದು ಗಾಜಿನ ಬೌಲ್ ಗೆ ಹಾಕಿ. ಅದನ್ನು ಫ್ರಿಜ್ ನಲ್ಲಿ ಇಡಿ. 5-6 ಗಂಟೆಗಳ ಕಾಲ ಫ್ರಿಜ್ ನಲ್ಲಿಯೇ ಬೌಲ್ ಇರಲಿ. ನೀರು ಮತ್ತು ಆಪಲ್ ಸೈಡ್ ವಿನೆಗರ್ ಮಿಶ್ರಣವು ವಾಸನೆಯನ್ನು ಹೀರಿಕೊಳ್ಳುತ್ತದೆ. ನಿಮ್ಮ ಫ್ರಿಜ್ ನಿಂದ ಬರುವ ವಾಸನೆಯೂ ಕಡಿಮೆಯಾಗುತ್ತದೆ.
ನಿಂಬೆ ಹಣ್ಣು : ನಿಮ್ಮ ಫ್ರಿಡ್ಜ್ ನಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ನಿಂಬೆ ಹಣ್ಣು ಕೂಡ ಸಹಾಯ ಮಾಡುತ್ತದೆ. ನಿಂಬೆ ಹೋಳುಗಳನ್ನು ಕತ್ತರಿಸಿ ಫ್ರಿಜ್‌ನ ಪ್ರತಿಯೊಂದು ರ್ಯಾಕ್‌ನಲ್ಲಿ ಇರಿಸಿ. ಈ ಸ್ಲೈಸ್‌ಗಳನ್ನು ಫ್ರಿಜ್‌ನಲ್ಲಿ 30 ನಿಮಿಷಗಳ ಕಾಲ ಬಿಡಿ. ಕೆಲವೇ ಸಮಯದಲ್ಲಿ ಫ್ರಿಜ್ ನಿಂದ ಬರ್ತಿರುವ ವಾಸನೆ ಹೋಗೋದನ್ನು ನೀವು ಗಮನಿಸಬಹುದು.
Hair Care: ಕೂದಲ ಆರೈಕೆಗೆ ದಾಸವಾಳದಂಥ ಮದ್ದು ಮತ್ತೊಂದಿಲ್ಲ!
ಕ್ಲೀನಿಂಗ್ : ಫ್ರಿಜ್ ನಲ್ಲಿ ಆಹಾರ ವಸ್ತುಗಳು ಇರುವ ಕಾರಣ ಅದನ್ನು ಪದೇ ಪದೇ ಕ್ಲೀನ್ ಮಾಡುವ ಅವಶ್ಯಕತೆಯಿದೆ. ವಾರಕ್ಕೆ ಒಮ್ಮೆಯಾದ್ರೂ ನೀವು ಫ್ರಿಜ್ ಸ್ವಚ್ಛಗೊಳಿಸಬೇಕು. ಬೇಡದ ಪದಾರ್ಥಗಳನ್ನು ಎಸೆಯಬೇಕು. ಕೊಳೆತ ಹಣ್ಣುಗಳನ್ನು ಅಲ್ಲಿಯೇ ಇಡಬಾರದು. ಹಾಗೆಯೇ ಫ್ರಿಜ್ ಸ್ವಚ್ಛಗೊಳಿಸುವಾಗ ನೀವು ನೀರಿಗೆ ವಿನೆಗರ್ ಅಥವಾ ನಿಂಬೆ ರಸವನ್ನು ಸ್ವಲ್ಪ ಬೆರೆಸಿ ಕ್ಲೀನ್ ಮಾಡಬಹುದು.