Women Health: ಮಹಿಳೆಯರು ಪಪ್ಪಾಯ ಕಾಯಿ ತಿಂದ್ನೋಡಿ

By Suvarna NewsFirst Published Jun 23, 2022, 1:32 PM IST
Highlights

ಕೆಲ ಹಣ್ಣುಗಳು ಮಾತ್ರವಲ್ಲ ಅದ್ರ ಕಾಯಿ ಕೂಡ ಸೇವನೆಗೆ ಯೋಗ್ಯವಾಗಿರುತ್ತದೆ. ಹಾಗೆ ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಅದ್ರಲ್ಲಿರುತ್ತದೆ. ಪಪ್ಪಾಯ ಕಾಯಿ ಕೂಡ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಇದ್ರ ಸೇವನೆಯಿಂದ ಮಹಿಳೆಯರು ಅನೇಕ ಲಾಭ ಪಡೆಯಬಹುದು. 
 

ಪ್ರತಿಯೊಬ್ಬರು ಪ್ರತಿ ದಿನ ಹಣ್ಣು (Fruit) ಗಳನ್ನು ಸೇವನೆ ಮಾಡ್ಬೇಕು. ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶ (Nutrition) ಗಳಿರುತ್ತವೆ. ಹಣ್ಣು ಅಂತಾ ಸೇಬು, ಬಾಳೆ ಹಣ್ಣು, ಮಾವಿನ ಹಣ್ಣಿನ ನೆನಪು ಬರುತ್ತದೆ. ಜನರು ಈ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುತ್ತಾರೆ. ಆದ್ರೆ ಪಪ್ಪಾಯ (papaya) ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಕೆಲವರಿಗೆ ತಿಳಿದಿಲ್ಲ. ಪಪ್ಪಾಯವನ್ನು ನೀವು ಹಣ್ಣಾದ್ಮೇಲೆ ಸೇವನೆ ಮಾಡ್ಬಹುದು. ಹಾಗೆ ಪಪ್ಪಾಯ ಕಾಯಿಯಿಂದ ಸಲಾಡ್ ಮಾಡಬಹುದು. ಇಲ್ಲವೆ ಪಪ್ಪಾಯಿ ಕಾಯಿಯ ಪರಾಟ ಮಾಡಬಹುದು. ಪಪ್ಪಾಯಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಜೀವಸತ್ವಗಳು, ಕಿಣ್ವಗಳು ಮತ್ತು ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್-ಇ, ಸಿ, ಬಿ, ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಖನಿಜಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಮಹಿಳೆಯರು ಪಪ್ಪಾಯಿ ಕಾಯಿಯನ್ನು ಕಡ್ಡಾಯವಾಗಿ ತಿನ್ನಬೇಕು. ಏಕೆ ಎಂಬುದನ್ನು ನಾವಿಂದು ಹೇಳ್ತೇವೆ. 

ಪಪ್ಪಾಯಿ ಕಾಯಿ ಸೇವನೆ ಹೇಗೆ? : ಕೆಲವರು ಪಪ್ಪಾಯಿ ಹಣ್ಣಿನ ಸೇವನೆ ಮಾಡ್ತಾರೆ. ಆದ್ರೆ ಕಾಯಿ ತಿನ್ನುವ ವಿಧಾನ ಗೊತ್ತಿರುವುದಿಲ್ಲ. ನೀವು ಪಪ್ಪಾಯಿ ಕಾಯಿಯನ್ನು ಅಕ್ಕಿ ಅಥವಾ ಉದ್ದಿನ ಬೇಳೆಯಲ್ಲಿ ಕುದಿಸಿ ಸೇವಿಸಬಹುದು. ಪಪ್ಪಾಯಿಯನ್ನು ಬೇಯಿಸಿ, ಆಲೂಗಡ್ಡೆಯನ್ನು ಸೇರಿಸಿ ಅದನ್ನು ಚಾಟ್ ರೂಪದಲ್ಲಿ ಸೇವಿಸಬಹುದು. ಪಪ್ಪಾಯಿ ಕಾಯಿಯನ್ನು ಪಲ್ಯದ ರೂಪದಲ್ಲಿ ತಿನ್ನಬಹುದು.

ಪಪ್ಪಾಯಿ ಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು : 

ಮುಟ್ಟಿನ ನೋವಿಗೆ ಪರಿಹಾರ : ಪಪ್ಪಾಯಿ ಕಾಯಿಯಲ್ಲಿ ಕಿಣ್ವಗಳು ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಇದನ್ನು ಸೇವಿಸುವ ಮೂಲಕ ಮಹಿಳೆಯರು ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಬಹುದು. ಪಪ್ಪಾಯಿ ಕಾಯಿ. ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪಿರಿಯಡ್ಸ್ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 
ಮೂತ್ರದ ಸೋಂಕಿಗೆ ಪರಿಹಾರ : ಮಹಿಳೆಯರಿಗೆ ಮೂತ್ರದ ಸೋಂಕಿನ ಸಮಸ್ಯೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ಪಪ್ಪಾಯಿ ಕಾಯಿಯನ್ನು ಸೇವಿಸಬೇಕು. ಇದು ದೇಹದಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

Home Decoration Tips: ಚಿಕ್ಕ ಲಿವಿಂಗ್ ರೂಮ್ ದೊಡ್ಡದಾಗಿ ಕಾಣಬೇಕಾ?

ಎದೆ ಹಾಲು ಹೆಚ್ಚಳ : ಎದೆ ಹಾಲಿನ ಸಮಸ್ಯೆಯಿರುವ ತಾಯಂದಿರು ಪಪ್ಪಾಯಿ ಕಾಯಿಯನ್ನು ಸೇವಿಸಬೇಕು. ಹಸಿ ಪಪ್ಪಾಯಿ  ಮಹಿಳೆಯರ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ರೆ ಪಪ್ಪಾಯಿ ಕಾಯಿಯನ್ನು ಗರ್ಭಿಣಿಯರು ಸೇವನೆ ಮಾಡ್ಬಾರದು.

ಕಣ್ಣುಗಳ ಆರೋಗ್ಯ : ವಯಸ್ಸು ಹೆಚ್ಚಾದಂತೆ ದೃಷ್ಟಿ ಸಮಸ್ಯೆ ಕಾಡುತ್ತದೆ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.  ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.  

ಕೊಲೆಸ್ಟ್ರಾಲ್ ನಿಯಂತ್ರಣ : ಪಪ್ಪಾಯಿ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಕಂಡುಬರುತ್ತದೆ. ಇದಲ್ಲದೆ  ವಿಟಮಿನ್-ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತದೆ.

ತೂಕ ಇಳಿಕೆ : ಪಪ್ಪಾಯಿ ಕಾಯಿ ತಿನ್ನುವುದ್ರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ಕಿಣ್ವಗಳು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.   

ಆರೋಗ್ಯಕರ ಚರ್ಮ : ಆರೋಗ್ಯಕರ ತ್ವಚೆಗೆ ಪಪ್ಪಾಯಿ ಕಾಯಿ  ತುಂಬಾ ಪ್ರಯೋಜನಕಾರಿ. ಯಾವುದೇ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿದ್ದರೆ ಆಗ ನೀವು ಇದನ್ನು ಬಳಸಬಹುದು. 

Hair Care: ಮಳೆಗಾಲದಲ್ಲಿ ಕೂದಲ ಬಗ್ಗೆಯೂ ಇರಲಿ ನಿಗಾ!

ಕ್ಯಾನ್ಸರ್ ವಿರುದ್ಧ ರಕ್ಷಣೆ : ಪಪ್ಪಾಯಿ ಕಾಯಿಯಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್‌ಗಳು, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಫ್ಲೇವನಾಯ್ಡ್ ಗಳು  ಕ್ಯಾನ್ಸರ್ ಕೋಶಗಳು ರೂಪುಗೊಳ್ಳುವುದನ್ನು ತಡೆಯುತ್ತದೆ. ಇದರ ಸೇವನೆಯಿಂದ ಕರುಳಿನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.

click me!