ನಾನೇ ಪಾರ್ವತಿ ದೇವಿ, ಶಿವನನ್ನೇ ಮದ್ವೆಯಾಗ್ತೀನಿ, ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ರಾದ್ಧಾಂತ !

Published : Jun 04, 2022, 04:31 PM IST
ನಾನೇ ಪಾರ್ವತಿ ದೇವಿ, ಶಿವನನ್ನೇ ಮದ್ವೆಯಾಗ್ತೀನಿ, ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ರಾದ್ಧಾಂತ !

ಸಾರಾಂಶ

ಎಂಥೆಂತವರೂ ಇರ್ತಾರೆ ನೋಡಿ. ಕಾಲ ಬದಲಾಗಿದೆ. ಇದು ಪುರಾಣ ಯುಗವಂತೂ ಅಲ್ಲ. ಪೌರಾಣಿಕ ಕಥೆಯ ದೇವ-ದೇವತೆಗಳು ಭೂಲೋಕಕ್ಕೆ ಬರಲು ಸಾಧ್ಯಾನೂ ಇಲ್ಲ. ಆದ್ರೆ ಇಲ್ಲೊಬ್ಬಾಕೆ ನಾನೇ ಪಾರ್ವತಿ (Parvathi), ಶಿವ (Shiva)ನನ್ನು ಮದ್ವೆ (Marriage)ಯಾಗ್ಬೇಕು ಅಂತಿದ್ದಾಳೆ. ಅರೆ ಏನಪ್ಪಾ ಇದು ವಿಚಿತ್ರ ಅಂದ್ರಾ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ. 

ಕಾಲಘಟ್ಟಗಳು ಬದಲಾಗುತ್ತಾ ಹೋಗುತ್ತವೆ. ದ್ವಾಪರಯುಗವಿತ್ತು, ತ್ರೇತಾಯುಗವಿತ್ತು. ಕಲಿಯುಗದಲ್ಲಿ ನಾವಿದ್ದೇವೆ. ಎಲ್ಲಾ ಯುಗಗಳು ವಿಭಿನ್ನ. ಒಂದು ಯುಗದಲ್ಲಿರುವ ಜೀವನಶೈಲಿ (Lifestyle), ಜನರು ಇನ್ನೊಂದು ಯುಗದಲ್ಲಿರಲು ಸಾಧ್ಯವಿಲ್ಲ. ಪೌರಾಣಿಕ ಕಾಲದಲ್ಲಿ ದೇವಾನುದೇವತೆಗಳು, ಅಸುರರು, ರಾಕ್ಷಸರು ವಾಸಿಸುತ್ತಿದ್ದರು. ಹೆಣ್ಣು, ಹೊನ್ನಿಗಾಗಿ ಯುದ್ಧಗಳು ನಡೆಯುತ್ತಿದ್ದವು. ಆದ್ರೆ ಕಲಿಯುಗ ಅಲ್ಲ. ಇದು ಸಂಪೂರ್ಣವಾಗಿ ಬೇರೆಯದೇ ಕಾಲ. ಇಲ್ಲಿ ಮನುಷ್ಯರು (Humans) ಮಾತ್ರ ವಾಸಿಸುತ್ತಿದ್ದಾರೆ. ದೇವರು ದೇವತೆಗಳು ಇಲ್ಲಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ (Woman) ಮಾತ್ರ ನಾನೇ ಪಾರ್ವತಿ (Parvathi), ಶಿವ (Shiva)ನನ್ನೇ ಮದ್ವೆಯಾಗ್ತೀನಿ ಅಂತ ಹಠ ಹಿಡಿದು ಕೂತಿದ್ದಾಳೆ. ಯಾರಾಕೆ ? ಆಕೆಯ ಉದ್ದೇಶವೇನು ತಿಳಿದುಕೊಳ್ಳೋಣ. 

ಭಾರತ-ಚೀನಾ ಗಡಿಯ (India-china border) ಸಮೀಪ ವಾಸಿಸುತ್ತಿರುವ ಯುಪಿ ಮಹಿಳೆ ತಾನು ಪಾರ್ವತಿ ದೇವತೆ ಎಂದು ಹೇಳಿಕೊಂಡಿದ್ದಾಳೆ ಮತ್ತು ಶಿವನನ್ನು ಮದುವೆಯಾಗಲು ಬಯಸಿದ್ದಾಳೆ. ಭಾರತ-ಚೀನಾ ಗಡಿಗೆ ಸಮೀಪವಿರುವ ನಾಭಿಧಾಂಗ್‌ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವೆಂದು ಹೇಳಿಕೊಂಡು ಅದನ್ನು ತೊರೆಯಲು ನಿರಾಕರಿಸಿದ್ದಾರೆ ಮತ್ತು ಕೈಲಾಸ ಪರ್ವತದಲ್ಲಿ ವಾಸಿಸುವ ಶಿವನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.

ಮದ್ವೆಯಾಗಿ ಒಂದು ವರ್ಷ ಆದ್ರೂ ಹೆಂಡ್ತಿಯ ಅಸಲಿ ಮುಖವನ್ನೇ ನೋಡಿಲ್ವಂತೆ ಗಂಡ..!

ನಿರ್ಬಂಧಿತ ಪ್ರದೇಶದಲ್ಲಿ ಮಹಿಳೆ ಹರ್ಮಿಂದರ್ ಕೌರ್ ಅವರನ್ನು ಕರೆದುಕೊಂಡಲು ಬರಲು ಹೋಗಿದ್ದ ಪೊಲೀಸ್ ತಂಡವು ನಿರಾಶೆಯಿಂದ ಹಿಂತಿರುಗಬೇಕಾಯಿತು, ಏಕೆಂದರೆ ಮಹಿಳೆ ತಾನು ಪಾರ್ವತಿ ದೇವಿಯ ಅವತಾರವೆಂದು ಹಠ ಹಿಡಿದು ಕೂತಿದ್ದು, ಬಲವಂತವಾಗಿ  ಕರೆದೊಯ್ಯಲು ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. 

ಹೀಗೆಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ. ಆದರೆ, ಆಕೆಯನ್ನು ಬಲವಂತವಾಗಿ ಧಾರ್ಚುಲಾಗೆ ಇಳಿಸಲು ದೊಡ್ಡ ತಂಡವನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿ ಮಹಿಳೆ, ಎಸ್‌ಡಿಎಂ ಧಾರ್ಚುಲಾ ನೀಡಿದ 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಗುಂಜಿಗೆ ಹೋಗಿದ್ದರು, ಗುಂಜಿ ಎಂಬುದಯ ಕೈಲಾಸ-ಮಾನಸ ಸರೋವರ (Manasa sarovar)ದ ಹಾದಿಯಲ್ಲಿದೆ. ಆದರೆ ಮೇ 25 ರಂದು ಅವರ ಅನುಮತಿ ಅವಧಿ ಮುಗಿದ ನಂತರವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ಮಹಿಳೆ ನಿರಾಕರಿಸಿದರು ಎಂದು ಎಸ್‌ಪಿ ಹೇಳಿದರು. 

ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?

ಮಹಿಳೆಯನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರು ಸದಸ್ಯರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿದೆ ಆದರೆ ಅವರೆಲ್ಲರೂ ಬರಿಗೈಯಲ್ಲಿ ಹಿಂತಿರುಗಬೇಕಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ನಾವು ಈಗ ಮಹಿಳೆಯನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಶುಕ್ರವಾರ ಕಳುಹಿಸಲು ಯೋಜಿಸಿದ್ದೇವೆಎಂದು ಅವರು ಹೇಳಿದರು.

ಮಹಿಳೆ ತಾನು ಪಾರ್ವತಿ ದೇವಿಯ ಅವತಾರ ಎಂದು ಹೇಳಿಕೊಳ್ಳುತ್ತಿರುವುದರಿಂದ ಮತ್ತು ಶಿವನನ್ನು ಮದುವೆಯಾಗಲು ಬಂದಿರುವುದರಿಂದ ಈಕೆ ಮಾನಸಿಕ ಸ್ಥಿಮಿತ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಕಲಿಯುಗದಲ್ಲಿ ಬದುಕುತ್ತಿರುವ ಮಹಿಳೆಯ ಪಾರ್ವತಿ ದೇವಿಯ ಅವತಾರದ ಕಥೆ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿರೋದಂತೂ ನಿಜ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!