ಗಂಡನ ಮೇಲೆ ಸುಳ್ಳು ವರದಕ್ಷಿಣೆ ಆರೋಪ ಮಾಡಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಸಸ್ಪೆಂಡ್‌

By Vinutha Perla  |  First Published Jul 6, 2023, 12:38 PM IST

ಓದಿಸಿ ಸರ್ಕಾರಿ ಅಧಿಕಾರಿ ಮಾಡಿದ ಗಂಡನ ಮೇಲೆಯೇ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ SDM ಜ್ಯೋತಿ ಮೌರ್ಯರನ್ನು ಅಮಾನತು ಮಾಡಲಾಗಿದೆ. ಜ್ಯೋತಿ ಮೌರ್ಯ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 


ಲಖನೌ​: ಕಷ್ಟಪಟ್ಟು ಓದಿಸಿದ ಗಂಡನಿಗೇ ಹೆಂಡ್ತಿ ಮೋಸ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದ್ದು, ಸದ್ಯ SDM ಜ್ಯೋತಿ ಮೌರ್ಯರನ್ನು ಸಸ್ಪೆಂಡ್ ಮಾಡಲಾಗಿದೆ ಅನ್ನೋ ವಿಚಾರ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಲೋಕ್ ಮೌರ್ಯ ಎಂಬವರು ತನ್ನ ಪತ್ನಿ ಎಸ್‌ಡಿಎಂ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್)  ಜ್ಯೋತಿ ಮೌರ್ಯ ವಿರುದ್ಧ ವಾರದ ಹಿಂದೆ ಆರೋಪ ಮಾಡಿದ್ದರು. ಅಲೋಕ್ ಹೇಳಿಕೊಂಡಂತೆ, ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಆದರೆ, ಅಲೋಕ್‌ ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ (Education) ಕೊಡಿಸಿದರು.

ಪ್ರಯಾಗ್​ರಾಜ್​ನಲ್ಲಿರುವ ಒಳ್ಳೆಯ ಕೋಚಿಂಗ್​ ಕೇಂದ್ರಕ್ಕೆ ದಾಖಲಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಪತ್ನಿ ಜ್ಯೋತಿ 2016ರಲ್ಲಿ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ (ಎಸ್​ಡಿಎಂ) ಆಗಿ ಸರ್ಕಾರಿ ಕೆಲಸ (Government Job) ಗಿಟ್ಟಿಸಿಕೊಂಡರು. ಆದರೆ ಆ ನಂತರ ಜ್ಯೋತಿ, ಗಂಡನನ್ನು (Husband) ಮರೆತು ತನ್ನ ಘನತೆಗೆ ಸರಿಯಾದ ಹಿರಿಯ ಅಧಿಕಾರಿಯೊಬ್ಬರ (Officer) ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ.

Tap to resize

Latest Videos

ತೆಳ್ಳಗೆ ಬೆಳ್ಳಗೆ ಇದ್ದಾಳೆ ಅಂತ ಮಾರು ಹೋಗದಿರಿ: 13 ಜನರ ಪ್ರೇಮಿಸಿ, 4 ಮದುವೆಯಾಗಿ ಎಸ್ಕೇಪ್ ಆದ ಚಮಕ್ ರಾಣಿ

ಅಲ್ಲದೇ ತನಗೆ ಮ್ಯೂಚುವಲ್ ಆಗಿ (ಪರಸ್ಪರ ಒಪ್ಪಿಗೆಯಿಂದ) ವಿಚ್ಛೇದನ (Divorce) ನೀಡುವಂತೆ ಗಂಡನಿಗೆ ಧಮ್ಕಿ ಹಾಕಿದ್ದು, ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗಂಡ ಅಲೋಕ್‌ ಅಳಲು ತೋಡಿಕೊಂಡಿದ್ದ. ಮಾತ್ರವಲ್ಲ ಜ್ಯೋತಿ ತನ್ನ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಲೋಕ್ ಆರೋಪಿಸಿ ಕಣ್ಣೀರಿಟ್ಟಿದ್ದರು. ಸದ್ಯ SDM ಜ್ಯೋತಿ ಮೌರ್ಯರನ್ನು ಕೆಲಸದಿಂದ ಅಮಾನತು (Suspend) ಮಾಡಲಾಗಿದೆ.

SDM ಜ್ಯೋತಿ ಮೌರ್ಯ ಅಮಾನತು
ಯುಪಿಯ ಎಸ್‌ಡಿಎಂ ಜ್ಯೋತಿ ಮೌರ್ಯ ಮತ್ತು ಅವರ ಪತಿ ಅಲೋಕ್ ಮೌರ್ಯ ನಡುವಿನ ವಿವಾದದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ವೈರಲ್ ಆಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಪ್ರಶ್ನೆಗಳು ಏಳುತ್ತಿವೆ. ಇದಲ್ಲದೇ ಅವರ ಹೆಸರಿನಲ್ಲಿ ಭೋಜ್‌ಪುರಿ ಹಾಡುಗಳೂ ತಯಾರಾಗುತ್ತಿವೆ. ಆದರೆ, ಈ ನಡುವೆ ಜ್ಯೋತಿ ಮೌರ್ಯ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಮುನ್ನೆಲೆಗೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ

ಜ್ಯೋತಿ ಮೌರ್ಯ ಅವರ ಅನೇಕ ವೀಡಿಯೊಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 'SDM ಜ್ಯೋತಿ ಮೌರ್ಯ ಲವ್ ಸ್ಟೋರಿ' ಎಂಬ ಹೆಸರಿನ ಅಡಿಯಲ್ಲಿ ಪ್ರಕಟಿಸಲಾಗಿದೆ. ಯೋಗಿ ಸರ್ಕಾರ ಅವರನ್ನು ಹುದ್ದೆಯಿಂದ ತೆಗೆದುಹಾಕಿದೆ ಎಂದು ಈ ವಿಡಿಯೋಗಳಲ್ಲಿ ಹೇಳಲಾಗುತ್ತಿದೆ. ಆದರೆ, ಈ ಸುದ್ದಿ ಕೇವಲ ವದಂತಿಯಾಗಿದೆ. ಜ್ಯೋತಿ ಮೌರ್ಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಅವರ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ ಎಂಬ ಮಾತು ಸಹ ಕೇಳಿ ಬರ್ತಿದೆ.

ಜಡ್ಜ್‌ ಆದ ಬಳಿಕ ಜ್ಯೋತಿಗೆ ಯಶಸ್ಸು ತಲೆಗೇರಿದ್ದು, ಹತ್ತಿದ ಏಣಿಯ ಮೆಟ್ಟಿ ದೂರ ತಳ್ಳಲು ಮುಂದಾಗಿದ್ದಾಳೆ. ಓದಿಸಿದ ಗಂಡನಿಗೆ ಆಕೆ ಮೋಸ ಮಾಡಲು ಶುರು ಮಾಡಿದ್ದಾಳೆ. ಆಕೆ ಮತ್ತೊಬ್ಬ ಹಿರಿಯ ಅಧಿಕಾರಿ ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ. ಈಕೆಯ ಈ ಅನೈತಿಕ ಸಂಬಂಧ ಅಲೋಕ್‌ಗೆ ತಿಳಿಯುತ್ತಿದ್ದಂತೆ ಪತ್ನಿಗೆ ಬುದ್ಧಿವಾದ ಹೇಳಿ ಸಂಬಂಧ ಬಿಡುವಂತೆ ಹೇಳಿದ್ದಲ್ಲದೇ ಮದುವೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾನೆ. ಆದರೆ ಜ್ಯೋತಿ ಗಂಡನ  ಜೊತೆ ಸಂಬಂಧ ಮುಂದುವರಿಸಲು ಇಷ್ಟವಿಲ್ಲದೇ ಆತನ ವಿರುದ್ಧ ನಕಲಿ ವರದಕ್ಷಿಣೆ ಕೇಸ್ ದಾಖಲಿಸಿದ್ದಾಳೆ ಎಂದು ಪತಿ ಅಲೋಕ್‌ ಮೌರ್ಯ ದೂರಿದ್ದಾನೆ. ಇದು ಆತನ ಬಂಧನಕ್ಕೂ ಕಾರಣವಾಗಿದ್ದು, ಪ್ರಸ್ತುತ ಆತ ಜಾಮೀನು ಮೇರೆಗೆ  ಜೈಲಿನಿಂದ ಹೊರಗಿದ್ದಾನೆ, ಜೊತೆಗೆ ತಾನು ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಅಲೋಕ್ ಕಣ್ಣೀರಾಕಿದ್ದಾನೆ.

click me!